ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗೆಳತಿ ಇ-ಪತ್ರವಾಗಿ ಬಾ.

ದಿನಾ ಭೂಮಿ ಸುತ್ತುವ ಚಂದ್ರ
ಮಾಸಕ್ಕೊಮ್ಮೆ ಹುಣ್ಣಿಮೆಯಾಗಿ ಬರುವಂತೆ
ಸದಾ ನೆನಪಿನಲ್ಲೇ ಇರುವ ಗೆಳತಿ
ಹುಣ್ಣಿಮೆಗೆರಡು ಇ-ಪತ್ರವಾಗಿ ಬಾ. :-)
Nataraj Gowda

ದಿನಾ ಭೂಮಿ ಸುತ್ತುವ ಚಂದ್ರ
ಮಾಸಕ್ಕೊಮ್ಮೆ ಹುಣ್ಣಿಮೆಯಾಗಿ ಬರುವಂತೆ
ಸದಾ ನೆನಪಿನಲ್ಲೇ ಇರುವ ಗೆಳತಿ
ಹುಣ್ಣಿಮೆಗೆರಡು ಇ-ಪತ್ರವಾಗಿ ಬಾ. :-)
Nataraj Gowda

ಒಂದಿಷ್ಟು ಹನಿಗಳು!

ನಿನ್ನನ್ನು ಚಿಂದಿ
ಉಡಾಯಿಸಬೇಕೆಂದಿದ್ದ
ನೋವುಗಳ
ಗ್ರಹಗತಿ ನೆಟ್ಟಗಿಲ್ಲ,
ನಿನಗೆ ನಾನು
ಸಿಕ್ಕಿರುವೆನಲ್ಲ!
*****
ತುಟಿಯ
ಚಿಪ್ಪಿನಲ್ಲಿಟ್ಟಿದ್ದೆ
ಕದ್ದು ಬಿಟ್ಟ!
****
ನೀ ಹೋದ ಕ್ಷಣದಿಂದ
ಕುಂಟುವುದು
ಕಲಿತಿದೆ
ಕಾಲ!

ಸಂಪದಕ್ಕೆ ನನ್ನ ಪ್ರವೇಶ

ನಾನು ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ದಿನವೂ ನಿಮ್ಮೆಲ್ಲರ ಬರಹಗಳನ್ನು ನೋಡಿ, ಓದಿ ಆನಂದಿಸುತ್ತಿದ್ದೆ. ನನಗೂ ನಿಮ್ಮ ಜೊತೆ ಸೇರಬೇಕೆನಿಸಿತು. ಕನ್ನಡಕ್ಕಾಗಿ ನನ್ನ ಕೈಲ್ಲಾದಷ್ಟು ಸೇವೆ ಮಾಡಬೇಕೆನ್ನುವುದೇ ನನ್ನ ಗುರಿ. ನಿಮಗೆಲ್ಲಾ ಸಂತೋಷ ತಾನೇ?

ಜಿ.ಏ.ಕುಲಕರ್ಣಿ ಅವರ ಬಗ್ಗೆ ಮಾಹಿತಿ...

ಸಂಪದಿಗರಿಗೆ ಶರಣು. ಧಾರವಾಡದಲ್ಲಿ ಅಧ್ಯಾಪಕರಾಗಿ, ಮರಾಠಿಯಲ್ಲಿ ಸಾಹಿತ್ಯ ಕೃಷಿ ಮಾಡಿರುವಂಥ ಜಿ.ಏ.ಕುಲಕರ್ಣಿ ಅವರ ಒಂದು ಕಥೆಯ ಕನ್ನಡ ಅನುವಾದವನ್ನ 'ದೇಶ ಕಾಲ'ದ ೧೫ನೇ ಸಂಚಿಕೆಯಲ್ಲಿ ಓದಿದೆ. ಕಥೆ ಮನಸ್ಸಿಗೆ ಹಿಡಿಸಿತು. ಈಗ ಅವರ ಇನ್ನಷ್ಟು ಕಥೆಗಳನ್ನ ಓದೋ ಮನಸ್ಸಾಗಿದೆ. ನನಗೆ ಅಲ್ಪ ಸ್ವಲ್ಪ ಮರಾಠಿ ಮಾತಾಡೋಕ್ಕೆ ಬರತ್ತೆ ಹೊರತು ಓದೋಕ್ಕೆ ಬರೋಲ್ಲ.

ಕ‌ಕ್ಕಾಬಿಕ್ಕಿ.....

ನಿನ್ನೆ ಕೆಲಸ ಮುಗಿಸಿಕೊಂಡು ಸುಜಾತ ಟಾಕೀಸ್ ಹತ್ತಿರ ಬಸ್ಸಿನಿಂದ ಇಳಿದು ಅಕ್ಕನ ಮನೆಗೆ ನಡೆದುಕೊಂಡು ಹೋಗ್ತಿದ್ದೆ, ಅಲ್ಲೊಂದು ಬ್ಯಾಂಕ್ ಹತ್ತಿರ ಇದ್ದಕ್ಕಿದ್ದ ಹಾಗೆ ಒಬ್ಬ

ಮಕ್ಕಳ ವ್ಯಾಕ್ಸಿನ್ಗಳ(ಲಸಿಕೆಗಳ) ಪಟ್ಟಿ - ಮತ್ತು ಮಾಹಿತಿ--ಭಾಗ-೧

ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ಮಕ್ಕಳ ವ್ಯಾಕ್ಸಿನ್ ಬಗ್ಗೆ ಹೇಳಲಾಗಿದೆ. ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಕೆಳಗಿರುವ ಕೊಂಡಿಗಳಲ್ಲಿ ಪಡೆಯಬಹುದು. ೧. ಅಮೇರಿಕನ್ ಅಕ್ಯಾಡೆಮಿ ಆಫ್ ಪೀಡಿಯಾಟ್ರಿಕ್ಸ್ ತಾಣದಲ್ಲಿ ಮತ್ತು ೨. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ತಾಣದಲ್ಲಿ. ಮೇಲಿರುವ ವ್ಯಾಕ್ಸಿನ್ ಪಟ್ಟಿಯೂ(ಉಳಿದ ಪಟ್ಟಿಗಳ ಜೊತೆ) ಲಭ್ಯ.

http://www.aap.org/sections/infectdis/IZSchedule_Childhood.pdf

www.cdc.gov/vaccines/recs/acip

ಮೊದಲನೆಯದಾಗಿ ಹೆಪಟೈಟಿಸ್-ಬಿ ಯನ್ನು ನೋಡೋಣ, ಏಕೆಂದರೆ ಈ ವ್ಯಾಕ್ಸಿನ್ ಅನ್ನು ಮೊಟ್ಟ ಮೊದಲಲ್ಲಿ ಮಗುವಿಗೆ ಹಾಕಲಾಗತ್ತೆ. ಅಂದರೆ, ಮಗುವು ಹುಟ್ಟಿದ ದಿನವೇ ಕೆಲವೇ ಗಂಟೆಗಳಲ್ಲಿ ಈ ವ್ಯಾಕ್ಸಿನ್ ನ ಮೊದಲನೆಯ ಡೋಸ್ ಕೊಡಲಾಗುತ್ತೆ. ಈ ವ್ಯಾಕ್ಸಿನ್ ತಡಗಟ್ಟುವುದು -"ಹೆಪಟೈಟಿಸ್-ಬಿ" ಎನ್ನುವ ವೈರಾಣುವಿನಿಂದ ಬರುವ ಸಾಂಕ್ರಾಮಿಕ ರೋಗ. ಇದು ಲಿವರ್ ನಲ್ಲಿ ಇನ್ಫ್ಲಮೇಶನ್ ಉಂಟುಮಾಡಿ ಕ್ರಮೇಣ ಲಿವರ್ ನ ಫೈಲ್ಯುರ್ ಗೆ ಕಾರಣವಾಗಿ ಜೀವವನ್ನು ತೆಗೆಯುತ್ತದೆ. ಇದು ಸಾಮಾನ್ಯವಾಗಿ ದೇಹದ ಫ್ಲೂಇಡ್ಸ್ (ರಕ್ತ, ಎಂಜಲು ಮೂತ್ರ ಮತ್ತಿತರ ದ್ರವಗಳಿಂದ) ಒಬ್ಬರಿಂದೊಬ್ಬರಿಗೆ ಹರಡುತ್ತದೆ. ತಾಯಿಯಿಂದ-ಮಕ್ಕಳಿಗೆ ಹೆರಿಗೆಯ ಸಮಯದಲ್ಲಿ ರಕ್ತದ ಮೂಲಕ ಮತ್ತು ಪ್ಲಾಸೆಂಟಾ ಮೂಲಕವು ಬರುವ ಸಂಭವ ಉಂಟು.

ಕುರುಡು ಸಂಪ್ರದಾಯದ ಕಡಲ ಮಡಿಲಿನ ಮುತ್ತುಗಳು .... ಭಾಗ ೪

೭ ಬಣ್ಣಗಳು ಸೇರಿ ತೀಕ್ಷ್ಣವಾದ ಸೂರ್ಯನ ಬಿಳಿಯ ಕಿರಣಗಳಾಗುತ್ತದೆ. Sir Issac Newton, ೧೬ನೇ ಶತಮಾನದ ಸುವಿಖ್ಯಾತ ವಿಜ್ಝ್ನ್ಯಾನಿಯನ್ನು ಈ ಪರಿಶೋಧನೆಯ ಸರದಾರ ಎಂದು ನಿಯುಕ್ತಿಸುತ್ತೇವೆ. ಪ್ರಪಂಚವು ತೂರ್‍ಯಘೋಷಗಳಿಂದ ಇದನ್ನು ನಂಬುತ್ತದೆ.
Newtonನ್ಗೂ ಸಾವಿರಾರು ವರ್ಷಗಳ ಮೊದಲು ಪ್ರಾಚೀನ ಭಾರತದ ವೇದಗಳಲ್ಲಿ ಸೂರ್ಯನ ಬೆಳಕು ೭ ಬಣ್ಣಗಳಿಂದ ಕೂಡಿದ್ದು ಎಂದು ಹೊರಪಡಿಸುತ್ತವೆ.

ಸಪ್ತ ತ್ವಾ ಹರಿತೋ ರಥೇ ವಹನ್ತಿ ದೇವ ಸೂರ್ಯ ಶೋಚಿಖ್ಶೇಶಮ್ ವಿಚಕ್ಶಣ (ಋಗ್ ವೇದ. ೧.೫೦.೯)
ಅವ ದಿವಸ್ತಾರಯನ್ತಿ ಸಪ್ತ ಸೂರ್ಯಸ್ಯ ರಶ್ಮ್ಯಃ (ಆಥರ್ವ ವೇದ. ೧೭.೧೦.೧೭.೧)
ಸೂರ್ಯನ ೭ ಬಣ್ಣದ ಕಿರಣಗಳಿಂದ ದಿನ ನಿರ್ಮಾಣವಾಗುತ್ತದೆ.

ಹಾಗಾದರೆ ಸೂರ್ಯನು ಏಳು ಬಣ್ಣಗಳ ಕಿರಣಗಳಷ್ಟನ್ನೇ ಹೊರಸೂಸುವನೇ?
ಇಲ್ಲಾ, ಸೂರ್ಯನು ಲಕ್ಷ ಲಕ್ಷ ಕಿರಣಗಳನ್ನು ಹೊರಸೂಸುತ್ತದೆ. ಆದರೆ ಒಂದೊಂದು ಬೆಳಕಿನ ಕಿರಣಗಳು ಏಳು ಬಣ್ಣಗಳಿಂದ ಮೂಡಿದೆ. ವೇದದ ಪಾರಿಭಾಷಿಕ ಕೋಶವು "ಸಪ್ತ ಅಶ್ವಾ ರೂಡ" ಎಂದು ಉಲ್ಲೇಖಿಸುತ್ತದೆ. ಇದರರ್ಥ ಏಳು ಬಣ್ಣದ ಬಿಳಿಯ ಸೂರ್ಯನ ಕಿರಣಗಳು. ವೇದದ "ಅಶ್ವ" ಎಂಬ ಪದದ ಅರ್ಥವೂ "ಬೆಳಕಿನ ಕಿರಣ".

’ನೀ ಮಾಯೆಯೊಳಗೋ?... ನಿನ್ನೊಳು ಮಾಯೆಯೋ?’

ನಮ್ಮಲ್ಲಿ ಶ್ರೀರಂಗರನ್ನೂ, ಅವರ ನಾಟಕಗಳನ್ನೂ ಸಾರಾಸಗಟಾಗಿ ತಳ್ಳಿ ಹಾಕುವ, ತೆಗಳುವ ಹಲವಾರು ನಿರ್ದೇಶಕರಿದ್ದಾರೆ. ನಯಾ ಪೈಸೆ ಉಪಯೋಗವಿಲ್ಲದ ನಾಟಕಶಾಲೆಗಳಲ್ಲಿ ನಿರ್ದೇಶನವನ್ನು ಕಲಿತು (?) ಬಂದಿರುವ ಈ ಮಹಾಶಯರಿಗೆ ಶ್ರೀರಂಗರ ನಾಟಕಗಳೆಂದರೆ ಅದೇಕೋ ಅಲರ್ಜಿ-ಅಸಡ್ಡೆ. ನಿರ್ದೇಶಕನು ಮಾಡಬೇಕಾದ ಕ್ರಿಯೆಗಳನ್ನು, ಶ್ರೀರಂಗರು ತಾವೇ, ನಾಟಕ ರಚನೆಯ ವೇಳೆಯಲ್ಲಿ ಮಾಡಿಬಿಡುತ್ತಾರೆ, ಬ್ರಾಕೆಟ್ ನಲ್ಲಿ ನಿರ್ದೇಶನವನ್ನು ಮಾಡಿರುತ್ತಾರೆ ಎಂಬುದು ಇವರ ತಾತ್ಸಾರಕ್ಕೆ ಕಾರಣ. ಇತ್ತೀಚೆಗೆ ರಾಷ್ಟ್ರೀಯ ನಾಟಕ ಶಾಲೆಯಲ್ಲಿ (ಎನ್.ಎಸ್.ಡಿ) ಕಲಿಸುವ ಹಿರಿಯ ನಿರ್ದೇಶಕರೊಬ್ಬರು ಶ್ರೀರಂಗರನ್ನು ಸಾರಾಸಗಟಾಗಿ ಬಯ್ಯುವಾಗ ತಡೆದುಕೊಳ್ಳಲಾಗಲಿಲ್ಲ. ಒಂದು ಸಣ್ಣ ವಾಗ್ವಾದವೇ ನಡೆಯಿತು. ಅವರು ವಯಸ್ಸಿನಲ್ಲೂ, ಅನುಭವದಲ್ಲೂ ಸಾಕಷ್ಟು ಹಿರಿಯರು ಎಂಬ ಒಂದೇ ಕಾರಣದಿಂದ ವಾದವನ್ನು ಜಗಳದ ಮಟ್ಟಕ್ಕೆ ಏರಿಸಲಿಲ್ಲ ನಾನು. ಶ್ರೀರಂಗರನ್ನಷ್ಟೇ ಬಯ್ದಿದ್ದರೆ ಮುಗಿದುಹೋಗಿರುತ್ತಿತ್ತೇನೋ, ಆದರೆ ಆ ಮಹಾಶಯರು Authorial Intention ಅನ್ನುವುದೇ ಅಪ್ರಸ್ತುತ ಅನ್ನುವಂಥ ಒಂದು silly ಮಾತನ್ನು ಹೇಳಿದರು. ಅಂದರೆ ಈ ನಿರ್ದೇಶಕರ ಪ್ರಕಾರ "ನಾಟಕಕಾರನೊಬ್ಬ, ತನ್ನ ನಾಟಕದ ಮೂಲಕ ಏನು ಹೇಳಬಯಸುತ್ತಾನೋ, ಅದು ಅಪ್ರಸ್ತುತ. ನಾಟಕದ ರಚನೆ ಆದ ನಂತರ, ನಾಟಕಕಾರನಿಗೆ ಅದರ ಮೇಲೆ ಯಾವುದೇ ಹಕ್ಕಿರುವುದಿಲ್ಲ. ಆ ನಾಟಕವನ್ನು ಪ್ರದರ್ಶಿಸಲು ಕೈಗೆತ್ತಿಕೊಂಡ ನಿರ್ದೇಶಕನು, ಅದನ್ನು ತನಗೆ ಬೇಕಾದ ಹಾಗೆ interpret ಮಾಡಿಕೊಳ್ಳಬಹುದು".

ನಿಮ್ಮ ಮಗುವಿಗೆ ಲಸಿಕೆ ಹಾಕಿಸುವ ಮುಂಚೆ ದಯವಿಟ್ಟು ಯೋಚಿಸಿ. -3

ಹಳೆಯ ಲೇಖನಗಳಿಗೆ ಒಳ್ಳೆಯ ಪ್ರತಿಕ್ರಿಯೆಗಳೇ ಬಂದಿವೆ. ನನ್ನ ಹುಚ್ಚು ಸಾಹಸಕ್ಕೆ ನೈತಿಕ ಬೆಂಬಲ ಕೊಟ್ಟು ಬೆನ್ನು ತಟ್ಟುತ್ತಿರುವ ಅಭ್ಯುದಯ ಮತ್ತು ಆಜಾದಿ ಬಚಾವೊ ಆಂದೋಲನದ ಗೆಳೆಯರಿಗೆ ಧನ್ಯವಾದಗಳು.