ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜೀವನಕ್ಕೊಂದರ್ಥವಿಲ್ಲ

ಜೀವನದಲ್ಲಿ ಸುಖಕ್ಕಿಂತ ದುಃಖವೇ ಹೆಚ್ಚು. ಮಣ್ಜುಗೆಡ್ಡೆ ನೀರಿನ ಮೇಲೆ ಎಷ್ಟು ಕಾಣುತ್ತದೆಯೋ ಅಷ್ಟು ಮಾತ್ರವೇ ಸುಖ. ನೀರಿನಲ್ಲಿ ಮುೞುಗಿದ ಮಂಜುಗೆಡ್ಡೆಯಷ್ಟು ದುಃಖವೇ ಹೆಚ್ಚು. ಈ ಸಾರವಿಲ್ಲದ ಸಂಸಾರವಿದು. ಬೆರಳೆಣಿಕೆಯಷ್ಟೇ ಜನರು ತಮ್ಮ ಜೀವಮಾನದಲ್ಲಿ ಸುಲಭವಾಗಿ ಸುಖವಾಗಿ ಜೀವಿಸುತ್ತಾರೆ. ಬಹಳಷ್ಟು ಜನಗಳಿಗೆ ಸಾವು ನೋವು ರೋಗರುಜಿನಗಳು ಬಾಧಿಸುತ್ತವೆ.

ನಾ ಹೀಗೆ ಮಾಡಬಾರದಿತ್ತೇನೋ

ಇವತ್ತು ಆಫೀಸಿನಿಂದ ಬರುವಾಗ ರಾತ್ರಿ ೧೧ ಗಂಟೆ ಆಗಿತ್ತು, ಬೈಕ್ ನಲ್ಲಿ ಬರುತ್ತಿರುವಾಗ ಯಾರೋ ಕೈ ಅಡ್ಡ ಮಾಡಿ ಡ್ರಾಪ್ ಕೇಳಿದ್ರು. ನಾನು ಯಾರೋ ಏನೋ ಅಂದ್ಕೊಂಡು (ನಿಲ್ಸೊದಕ್ಕೆ  ಧೈರ್ಯವಾಗದೆ) ಹಾಗೇ ಬಂದೆ. ಈಗ ಅನ್ನಿಸ್ತಿದೆ, ಪಾಪ ಯಾರೋ ಏನೋ ನಿಲ್ಸಿ  ಕರ್ಕೊಂಡು ಬರ್ಬೋದಿತ್ತ್ತು ! ಅಂತ. 

 

ಕಾವ್ಯ - 'ಮರೆತ ಸಾಲು'ಗಳಿಂದ ಆಯ್ದ ಸಾಲುಗಳು

ಎಚ್. ಎಸ್. ವೆಂಕಟೇಶಮೂರ್ತಿ ಯವರು ಅನೇಕ ಒಳ್ಳೆಯ ಕವನಗಳನ್ನು ಭಾವಗೀತಗಳನ್ನು ಕೊಟ್ಟಿದ್ದಾರೆ . 'ತೂಗುಮಂಚ' ಸೀಡೀ ಅಥವಾ ಕ್ಯಾಸೆಟ್ ಕೇಳಿದ್ದೀರ ತಾನೇ ? ಇಲ್ವೇ , ನಿಮ್ಮ ಜನ್ಮ ವ್ಯರ್ಥ ಅಂತ ಯಾರೋ ರವಿಬೆಳಗೆರೆಗೆ ಹೇಳಿದ್ರಂತೆ ! ಅವರ ' ಮರೆತ ಸಾಲುಗಳು' ಕವನ ಸಂಕಲನ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಸಿಕ್ತು .

ಚಂದ್ರಮಂಗಳಬುಧಗುರುಯುತಿಯ ಮುನ್ನ ದಿನಗಳಲ್ಲಿ ಮಂಗಳ ಬುಧ ಗುರುಗ್ರಹಗಳ ಚಲನೆ ಕುಱಿತು

೨೨/೨೩ ಫೆಬ್ರುವರಿ ೨೦೦೯ಱಂದು ಕಾಣುವ ಚಂದ್ರಮಂಗಳಬುಧಗುರುಯುತಿಯನ್ನು ನೋಡುವ ಮುನ್ನ ದಿನಗಳಲ್ಲಿ ೧೬ ಫೆಬ್ರುವರಿಯಿಂದ ೨೨ ಫೆಬ್ರುವರಿವರೆಗೆ ಬೆಳಿಗ್ಗೆ ೫.೫೫ಱಿಂದ ೬.೨೦ಱೊಳಗೆ ಪೂರ್ವ ದಿಕ್ಕಿನಲ್ಲಿ ಬುಧಗ್ರಹ ಗುರುವನ್ನು ಕ್ರಮೇಣ ದಿನದಿಂದ ದಿನಕ್ಕೆ ಸಮೀಪಿಸುವುದನ್ನು ನೋಡಿರಿ. ೧೯ ಫೆಬ್ರುವರಿಯಂದು ಗುರುವಿನ ಸಮೀಪವಿರುವ ಕುಜ (ಮಂಗಳ)ಗ್ರಹವನ್ನು ವೀಕ್ಷಿಸಿ.

ಸೂರ್ಯನೂ ಸುಂದರವಾಗಿದ್ದಾನೆಯೇ

ನನ್ನ ಹಳೇ ಚಿತ್ರಗಳನ್ನು ನೊಡುತ್ತಾ ಹೋದಾಗ ಸಿಕ್ಕ ಒಂದು ಸುಂದರ ಚಿತ್ರ.

 

 

 

 

 

 

 

ಸಂಪದದಲ್ಲಿರುವ ಕವಿಗಳಿಗೆ ಏನ್ನನಿಸುತ್ತದೊ ಎಂದು ನೋಡಬೇಕು?

ಸಜೀವ ಹೊದಿಕೆಯ ಮಹತ್ವ (ರೈತರೇ ಬದುಕಲು ಕಲಿಯಿರಿ-೧೫)

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)

ಈಗಾಗಲೇ ಓದಿರುವಂತೆ ಹೊಲದಲ್ಲಿಯ ಮೇಲು ಹೊದಿಕೆಯಿಂದ ಭೂಮಿಯ ತೇವದ ರಕ್ಷಣೆಯಾಗುತ್ತದೆ ಎಂಬುದನ್ನು ನೀವು ಬಲ್ಲಿರಿ. ಹೊದಿಕೆಯಲ್ಲಿ ಜಡ ಮತ್ತು ಸಜೀವ ಎಂಬ ಎರಡು ವಿಭಾಗಗಳನ್ನು ಮಾಡಬಹುದು. ಜಡ ಹೊದಿಕೆ ಎಂದರೆ ಒಣಗಿದ ಎಲೆ, ಕಡ್ಡಿ, ದಂಟು, ಬೇರಿನ ಉಳಿದ ಭಾಗ, ಒಣ ಹುಲ್ಲು ಇತ್ಯಾದಿ. ಸಣ್ಣ ಮಳೆ ಬಿದ್ದರೂ ಇವು ನೀರನ್ನು ಹೀರಿಕೊಂಡು ಹೊದಿಕೆ ಕೆಳಗಿನ ಮಣ್ಣಿನಲ್ಲಿರುವ ಕೋಟ್ಯಾನುಕೋಟಿ ಸೂಕ್ಷ್ಮಜೀವಿಗಳ ಚಟುವಟಿಕೆಗೆ ಅವಕಾಶ ಮಾಡಿಕೊಡುತ್ತವೆ. ಹೀರಿದ ನೀರನ್ನು ಮಣ್ಣಿಗೆ ಸೇರಿಸುವುದರಿಂದ ಅಂತರ್ಜಲ ಅಭಿವೃದ್ಧಿಯಾಗಲು ಸಹಾಯವಾಗುತ್ತದೆ.

ಲಿನಕ್ಸ್ ಸ್ಥಾಪನೆ , ವಿಸ್ಟಾ ಜೊತೆ ?!

ಸಂಪದಿಗರ ಲಿನಕ್ಸ್ ಹುರುಪು ನೋಡಿ ನಾನೂ ಒಮ್ಮೆ ಲಿನಕ್ಸ್ ಬಳಸೋಣ ಅಂದ್ಕೋತಿದ್ದೆ.  ತುಂಬ ಹಿಂದೆ ಉಬುಂಟು CD ಅನ್ನು ಆರ್ಡರ್ ಮಾಡಿದ್ದೆ. ಇವತ್ತು ಅದು ಬಂತು.

ನನ್ನ ಬಳಿ ಇರುವ ಲ್ಯಾಪ್ಟಾಪ್ ನಲ್ಲಿ ವಿಸ್ಟಾ OS ಇದೆ. ೮೦ GB ಹಾರ್ಡ್ ಡಿಸ್ಕ್ ನಲ್ಲಿ ೩೦ GB C-ಡ್ರೈವ್  ಇದೆ . ಇದರಲ್ಲಿ  ಸುಮಾರು ೧೦ GB backup OS ತಿಂದು ಹಾಕಿದೆ. ಉಳಿದಂತೆ ೪೦ GB ಅನ್ನು D ಡ್ರೈವ್ ಇದೆ.