ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕರ್ನಾಟಕ ಶಾಸ್ತ್ರೀಯ ಸಂಗೀತ: ನನ್ನ ಅನುಭವಗಳು

ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸರುನಾನು ಹುಟ್ಟಿದ್ದು ಬೆಳೆದಿದ್ದು ಹಳ್ಳಿಯಲ್ಲಿ. ನಮ್ಮ ಮನೆತನದವರೆಲ್ಲರೂ ಸಂಗೀತ ಕಲಿತವರು. ಹಾಗೆ ನಮ್ಮ ಹಳ್ಳಿಯಲ್ಲೂ ಅನೇಕ ಮಂದಿ ಸಂಗೀತ ಕಲಿಯುತ್ತಿದ್ದರು. ಸಂಗೀತ ಕಲಿಯದಿದ್ದರೆ ಆಗ ಒಂತರ ಅವಮಾನ. ಹಾಗೆ ನನ್ನ ತಂದೆಯೂ ಸಂಗೀತ ಕಲಿಯಲು ಜೋರು ಮಾಡಿದರು. ಆ ದಿನಗಳಲ್ಲಿ ಹಿರಿಯರ ಮಾತು ಕೇಳದಿದ್ದರೆ ಬೀಳುತ್ತಿದ್ದವು ಪೆಟ್ಟುಗಳು ಅಡಿಕೊಲಿನಲ್ಲಿ ಅದು ಬೆನ್ನಿಗೆ. ಅಂತೆಯೇ ೫ ವರ್ಷವಿದ್ದಾಗ ಶುರುವಾಯಿತು ನನ್ನ ಸಂಗೀತ ಪಾಠ. ಗುರುಗಳು ನಮ್ಮ ಊರಿನವರಾದ್ದರಿಂದ ಮನೆಗೆ ಬಂದೆ ಪಾಠ ಹೇಳಿಕೊಡುತ್ತಿದ್ದರು.

ಸರಿ ಶುರುವಾಯಿತು ಸಂಗೀತದ ಪಾಠ 'ಮಾಯಾಮಾಳವಗೌಳದ' ಆರೋಹಣ ಅವರೋಹಣದಿಂದ. ನಂತರ ಸರಳವರಸೆಗಳು, ತಾರಾಸ್ತಾಯಿವರಸೆಗಳು ಮತ್ತೆ ಜಂಟಿವರಸೆಗಳು. ತಾರಾಸ್ತಾಯಿವರಸೆಗಳ ಪಾಠ ಸ್ವಲ್ಪ ಜಾಸ್ತಿ ದಿನವೇ ನಡೆಯಿತು ಯಾಕೆಂದರೆ ಸ್ವರಗಳು ತುಂಬಾ ಮೇಲೆ ಹೋಗಬೇಕಲ್ಲವೇ.

ಇಂದು: ಮಾದನೂರು ವಿಷ್ಣು ತೀರ್ಥರ ಆರಾಧನೆ

ಇಂದು ಮಾದನೂರು ವಿಷ್ಣು ತೀರ್ಥರ ಆರಾಧನೆ. ಇವರ ಕಾಲ ಕ್ರಿ.ಶ. ೧೭೫೬-೧೮೦೬. ಇವರ ಜನ್ಮ ಸ್ಥಳ ಧಾರವಾಡ ಜಿಲ್ಲೆಯ ಸಿದ್ಧಾಪುರ.
ಇವರ ಜನ್ಮ ನಾಮ ಜಯತೀರ್ಥ, ಇವರಿಗಿದ್ದ ಇತರ ಹೆಸರುಗಳು: ಅರಣ್ಯಕಾಚಾರ್ಯರು, ಅಡವಿ ಸ್ವಾಮಿಗಳು. ಇವರು ಸನ್ಯಾಸ ಸ್ವೀಕಾರ ಮಾಡಿದ್ದು ೪೦ ನೆಯ ವಯಸ್ಸಿನಲ್ಲಿ ಅಂದರೆ ಕ್ರಿ.ಶ. ೧೭೯೪ ರಲ್ಲಿ.
ಆಶ್ರಮಗುರುಗಳು - ಶ್ರೀ ಸತ್ಯವ್ರತ ತೀರ್ಥರು.

ಅಮ್ಮ ಉರುಳಿಸಿ ಬಿಡುವ ಗೋಡೆಯ

ಅಮ್ಮಾ ನೆನಪಿದೆ ನಾ ನೋವೆಂದು
ಕೂಗಿದಾಗಲೆಲ್ಲಾ ಅತ್ತದ್ದು
ನಿನ್ನ್ ಕಣ್ಣು, ನರಳಿದ್ದು ನಿನ್ನ
ಹೃದಯ

ಅಮ್ಮಾ ನೆನಪಿದೆ ದೀವಳಿಗೆಯ
ದೀಪಗಳ ಸಾಲಿನಲ್ಲೂ
ನಿನಗೆ ನಾ ದೀಪವಾಗಿ ಕಂಡು
ಬಿಗಿದಪ್ಪಿ ಸುರಿಸಿದ ಕಣ್ಣೀರು

ಅಮ್ಮ ನೆನಪಿದೆ , ನಿನ್ನ ಬಾಳ
ಇರುಳಿನಲ್ಲೂ ,ನನ್ನ ಜೀವಕೆ
ಜ್ಯೋತಿಯಾಗಿ ತೋರಿದ ಮಮತೆ

ಅಮ್ಮ ನೆನಪಿದೆ ವೈಫಲ್ಯಗಳ
ಸರಮಾಲೆಯಲ್ಲಿಯೂ ನಾ ನಿನಗೆ

ನಿಮ್ಮಲ್ಲಿ ಸೇನಾಧಿಕಾರಿಯಾಗುವ ಕ್ಷಮತೆ ಎಷ್ಟು ಇದೆ?

ಭಾರತಿಯ ಸೈನ್ಯದಲ್ಲಿ ಸೇರಲು ನೀವೆಷ್ಟು ಅರ್ಹರು ಅಂದು ನಿಮ್ಮನ್ನೇ ಪರೀಕ್ಷಿಸಿ ಕೊಳ್ಳಬೇಕೆ ? ಕೆಳಗಿನ ಲಿಂಕ್ ಗೆ ಕ್ಲಿಕ್ಕಿಸಿ. ನಿಮ್ಮಲ್ಲಿ ಸೇನಾಧಿಕಾರಿಯಾಗುವ ಕ್ಷಮತೆ ಎಷ್ಟು ಇದೆ ತಿಳಿದುಕೊಳ್ಳಿ. ಇದು ಡಿ.ಆರ್.ಡಿ. ಓ ದ ಕೊಡುಗೆ.

http://www.drdo.org/cgibin/dipr/index.php

ಶ್ರೀಮಂತ ಮನಸ್ಸುಳ್ಳವರು!!

ಒಂದು ದಿನ ನಾನು ವಿಮಾನ ನಿಲ್ದಾಣಕ್ಕೆ ಹೋಗಲು taxiಯಲ್ಲಿ ಕುಳಿತುಕೊಂಡೆ. ೧೦ ನಿಮಿಷದ ನಂತರ ನಾವು ಬಲ ಲೇನ್ನಲ್ಲಿ ಹೊಗುತ್ತಿದ್ದೆವು, ಒಂದು ಕಪ್ಪು ಬಣ್ಣದ ಕಾರು ಹಟಾತ್ತಾಗಿ parking lot ಇಂದ ನಮ್ಮ ಮುಂದಕ್ಕೆ ಬಂದಿತು, ನಾನಿದ್ದ Taxi ಚಾಲಕ brakeಅನ್ನು ಗಟ್ಟಿಯಾಗಿ ತುಳಿದ. ಗಾಡಿ ಸ್ವಲ್ಪ ಮಿಸುಕಾಡಿ, ಪಕ್ಕದ ಕಾರ್‍ನಿಂದ ೨ ಇಂಚು ದೂರದಲ್ಲಿ ನಿಂತಿತು.

ಅಪ್ಪನೆಂದರೆ ಹೀಗೇ ಇರಬಹುದು .......

ಅಪ್ಪನೆಂದರೆ ಹೀಗೇ ಇರಬಹುದು .......
ವರ್ಷಕ್ಕೊಮ್ಮೆ ನಡೆವ ಜಾತ್ರೆಗೆ
ಹೆಗಲ ಮೇಲೆ ಹೊತ್ತೊಯ್ದು
ಬಿಳಿಯ ಬತ್ತಾಸು ಕಲ್ಯಾಣ ಸೇವೆ,
ಮಿಠಾಯಿಗಳ ತಿನಿಸುವವನು...

ಅಪ್ಪನೆಂದರೆ ಹೀಗೇ ಇರಬಹುದು .......
ಜಾತ್ರೆಯಲ್ಲಿ ಹರವಿದ್ದ ಬಣ್ಣ ಬಣ್ಣದ
ಲಂಗ , ಅಗಲ ಹೂವಿನ ಚಿತ್ತಾರ
ಹೊಂದಿರುವ ಬಟ್ಟೆಯನ್ನಾಯ್ದು
ತೆಗೆದುಕೊಟ್ಟವನು....

ಅಪ್ಪನೆಂದರೆ ಹೀಗೇ ಇರಬಹುದು .......

ಅವ್ರು ಹಂಗೆ ನಾವ್ಯೆಲ್ಲ ಯಾಕೆ ಹಿಂಗೆ ???

ನಾನು ದಿನ ನಮ್ಮ ಆಫೀಸಿಗೆ ರಾಜಾಜಿನಗರದಿಂದ ಬಿ.ಎಂ.ಟಿ.ಸಿ ಬಸ್ಸಿನಲ್ಲಿ ಕೋರಮಂಗಲಕ್ಕೆ ಹೋಗ್ತೀನಿ. ಆ ಬಸ್ಸು ಮಹಾಲಕ್ಷ್ಮಿ ಲೇ ಔಟ್ನಿಂದ ಕೇಂದ್ರೀಯ ಸದನಕ್ಕೆ ಹೋಗುತ್ತೆ, ತುಂಬಾ ಜನ ಸರಕಾರಿ ನೌಕರರು ಅದರಲ್ಲಿ ಪ್ರಯಾಣ ಮಾಡ್ತರೆ.

ನಾಯಿ ಇದೆ ಎಚ್ಚರಿಕೆ.....!!!!

ನಾಯಿಯನ್ನು (ನಾಯಿ ಇದೆ ಎಚ್ಚರಿಕೆ ಅಂತ ಬೋರ್ಡ್ ಹಾಕಿರುವ) ಸಾಕಿರುವ ಬೆಂಗಳೂರಿನ ಬಾಂಧವರೆಲ್ಲರಿಗೂ ನನ್ನ ನಮಸ್ಕಾರಗಳು.

ಏನ್ರಣ್ಣ ಚೆನ್ನಾಗಿದ್ದೀರಾ?.

ನಿಮ್ಮ ನಾಯಿ ಚೆನ್ನಾಗಿದೆಯಾ?.

ನಿಮ್ಮ ನಾಯಿಗೆ ನೀವು ತಿನ್ನೋ ತಿಂಡಿ/ಊಟನೆ ಕೊಡ್ತೀರಲ್ಲ.... ಇಲ್ಲಂದ್ರೆ ಅದಕ್ಕೆ ವಿಶೇಷವಾಗಿರೋ ಸ್ನ್ಯಾಕ್ಸ್ ಕೊಡ್ತೀರಾ...

ಕೆಲಸಕ್ಕೆ ಹೋಗುತ್ತಿದ್ಡಾಗ ಓಕಳಿಪುರಂ ಹತ್ತಿರ....

ನಾನು ಬಸ್ಸಿನಲ್ಲಿ ಕಂಪನಿಗೆ ಹೋಗುವಾಗ ಹಾಗೆ ಸುಮ್ಮನೆ ಗೋಡೆಗಳಲ್ಲಿ ಬರೆದಿರುವ ಚಲನಚಿತ್ರಗಳ ಮೇಲೆ ಕಣ್ನು ಹಾಯಿಸುತ್ತಿರುತ್ತೇನೆ....ಹಾಗೆ ಒಂದು ದಿನ ಕೆಳಗಿನ ಚಲನಚಿತ್ರಗಳ ಹೆಸರುಗಳನ್ನು ನೋಡಿ....

1) ಸುನಾಮಿ.
2) ಒಂಟಿಮನೆ.
3) ನಿನಗಾಗಿ ಕಾದಿರುವೆ.
4) ಜೋಶ್.

ಹೀಗೆ ಬರೆಯುವ ಮನಸ್ಸಾಯ್ತು...

ಒಂಟಿಮನೆಯಲ್ಲಿ ನಿನಗಾಗಿ ಕಾದಿರುವ ಸುನಾಮಿ ಎಂಬ ಜೋಶ್....