ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮೌನ ಎಂಬ ಸಮೃದ್ಧ ಭಾಷೆ

ಚಿಕ್ಕವನಿದ್ದಾಗ ತುಂಬ ಮಾತನಾಡುತ್ತಿದ್ದೆ. ಎಷ್ಟು ಮಾತನಾಡುತ್ತಿದ್ದೆನೆಂದರೆ, ಒಮ್ಮೊಮ್ಮೆ ಏದುಸಿರು ಬರುತ್ತಿತ್ತು. ತುಂಬ ಮಾತನಾಡುತ್ತೀ ಎಂದು ಏಟು ಕೂಡ ತಿಂದಿದ್ದೇನೆ. ಆದರೂ ಮಾತು ನಿಲ್ಲುತ್ತಿರಲಿಲ್ಲ.

ಬಹುಶಃ ಹತ್ತನೇ ತರಗತಿಯ ಪರೀಕ್ಷೆಗಳ ನಂತರ ಇರಬೇಕು, ನನ್ನ ಮಾತು ಇದ್ದಕ್ಕಿದ್ದಂತೆ ಕಡಿಮೆಯಾಗತೊಡಗಿತು. ಪಿಯುಸಿ ಮುಗಿಯುವ ಹೊತ್ತಿಗೆ ಅದು ಎಷ್ಟು ಕಡಿಮೆಯಾಯಿತೆಂದರೆ, ಮಾತನಾಡಿದರೆ ನನ್ನ ಧ್ವನಿ ನನಗೇ ಅಪರಿಚಿತ ಅನಿಸುವಷ್ಟು.

ಈ ಸಮಯದಲ್ಲಿಯೇ ನನಗೆ ಓದುವ ಹುಚ್ಚು ಅಂಟಿಕೊಂಡಿದ್ದು. ಮೊದಲಿನಿಂದಲೂ ಸಿಕ್ಕಿದ್ದನ್ನು ಓದುವ ಹವ್ಯಾಸವಿತ್ತಾದರೂ, ಓದಲು ಪುಸ್ತಕಗಳೇ ಸಿಗುತ್ತಿರಲಿಲ್ಲ. ಹಳ್ಳಿಯಲ್ಲಿ ಪುಸ್ತಕಗಳನ್ನು ತರುವವರೂ ಕಡಿಮೆ. ಅಪ್ಪ ಮೊದಲಿನಿಂದಲೂ ಹಿಂದಿ ಕಾದಂಬರಿಪ್ರಿಯ. ನಮಗೋ ಹಿಂದಿ ತೀರಾ ದುಬಾರಿ. ಆದರೆ, ಡಿಗ್ರಿಗೆಂದು ಗದಗ್‌ ಸೇರಿದಾಗ ಕಾಲೇಜ್‌ ಹಾಗೂ ಸಾರ್ವಜನಿಕ ಗ್ರಂಥಾಲಯಗಳು ಮನಸ್ಸು ಸೆಳೆದವು. ಕ್ಲಾಸ್‌ ತಪ್ಪಿಸಿ ಕತೆ-ಕಾದಂಬರಿ ಓದುತ್ತ ಕೂತುಬಿಡುತ್ತಿದ್ದೆ.

ಹೀಗಾಗಿ ಮಾತು ಇನ್ನಷ್ಟು ಕಡಿಮೆಯಾಯಿತು. ಮಾತಿನ ಜಾಗವನ್ನು ಓದು ತುಂಬಿತು.

ಬುಡಾಪೆಸ್ಟ್: 83 ವರ್ಷದ ’ಹಾರುವ ಕಳ್ಳಿ’ ಮತ್ತೊಮ್ಮೆ ಬಂಧನದಲ್ಲಿ

ಬುಡಾಪೆಸ್ಟ್: ಹಂಗೆರಿ ದೇಶದ ರಾಜಧಾನಿಯಾದ ಬುಡಾಪೆಸ್ಟ್ ನಗರದ ನಿವಾಸಿಯಾಗಿರುವ ಕೋಸ್ಟೋರ್ ಸಾಂಡ್ರೋನ್ ಎಂಬ 83 ವರ್ಷದ ಅಜ್ಜಮ್ಮರಿಗೆ ಕದಿಯುವುದು ಒಂದು ಚಾಳಿ.

ನಾನು ಸಂಪದಕ್ಕೆ ಬಂದ ಮೇಲೆ - ಪ್ರತಿಕ್ರಿಯೆಗಳ ಸುತ್ತ

ಸಂಪದಕ್ಕೆ ನಾನು ಬಂದು ೨೦ ದಿನಗಳಾದವು. ಈಗೆರಡು ದಿನಗಳಿಂದ ನಾನು ಹೇಳಬೇಕೋ ಬೇಡವೋ ಎಂಬ ಗೊಂದಲವಿದ್ದರೂ, ಸಂಪದದ ಸದಸ್ಯೆಯಾಗಿ ಪ್ರತಿಕ್ರಿಯೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ನಾನು, ನನ್ನ ಪಾತ್ರವೂ ಇದರಲ್ಲಿ ಇದೆಯೆಂದು ಮಾತಾಡುತ್ತಿದ್ದೇನೆ. ನನಗೆ ಯಾರನ್ನೂ ಅವಮಾನಿಸುವ ಯೋಚನೆಯಾಗಲೀ, ನೋಯಿಸುವ ಇರಾದೆಯಾಗಲೀಇಲ್ಲ.

ಸುಧಿ ಕೈಯಲ್ಲಿ ಹಾವು

ನಿಟ್ಟೆಯಲ್ಲಿ ದಿನವೆಲ್ಲ ಮೈಕ್ ತೆಗೆದುಕೊಂಡು ಮಾತನಾಡಲು ನಾಚಿಕೊಳ್ಳುತ್ತಿದ್ದ [:user/sudhimail|ಸುಧೀಂದ್ರ], ರವೀಂದ್ರನಾಥ ಐತಾಳರ ಕೈಲಿದ್ದ ಹಾವನ್ನು ತೆಗೆದುಕೊಳ್ಳಲು ಹಿಂಜರೆಯದಿದ್ದದ್ದು ನೋಡಿ ನಮಗೆಲ್ಲ ಸಿಕ್ಕಾಪಟ್ಟೆ ಆಶ್ಚರ್ಯ:

ಎದುರಿಗೆ ಹಾವಿದ್ದರೂ ಕಾಮತ್ ಬಹುಶಃ  ಕ್ಯಾಮೆರಾದಲ್ಲಿರುವ ಸಾಫ್ಟ್ವೇರ್ ಚೆಕ್ ಮಾಡ್ತಿದ್ದ!

ಲಿನಕ್ಸಿನಲ್ಲಿ (kn-itrans) ನಲ್ಲಿ ಕೆಲವು ಕಠಿಣ ಅಕ್ಷರ ಟೈಪು ಮಾಡೋದು ಹೇಗೆ?

ಅಂತೂ ನನಗೆ ಬೇಕಾದ್ದು ಸಿಕ್ತು
ಬೇಕಾದ ಅಕ್ಷರ - ಅದಕ್ಕೆ ಟೈಪು ಮಾಡಬೇಕಾದ್ದು
ಋ - Ru ಅಥವಾ R^i
ಕೃ - kR^i ಅಥವಾ kRRi
ಕ್ಷ - xa
ಜ್ಞ - GYa ಅಥವಾ dnya

ಅಂದ ಹಾಗೆ ನಾವು ಸಾಮಾನ್ಯವಾಗಿ ಬಳಸೋ ಈ 'ಅಥವಾ' ಸಂಸ್ಕೃತದ್ದು ; ಅದಕ್ಕ್ಕೆ ಕನ್ನಡದಲ್ಲಿ 'ಇಲ್ಲವೆ' ಬಳಸಬಹುದು . ಅಂತ ಗಮನಿಸಿದ್ದೀರಾ ?

ಬೆಳಗಾವಿ ನಮ್ಮದಾ?

ಈ ಪ್ರಶ್ನೆ ನಾನು ನಿನ್ನೆಯಿಂದ ಕೇಳಿಕೊಳ್ಳುತ್ತಿರುವೆ.....ಶನಿವಾರ ಮುಂಜಾನೆ ೯-೦೦ ಗಂಟೆಗೆ ಆ ಊರಲ್ಲಿ ಕಾಲಿಟ್ಟ ನಿಮಿಶ ದಿಂದ ಈ ಪ್ರಶ್ನೆ ಸುತ್ತಿಕೊಂಡಿತು.
ನಮ್ಮ ಸರ್ಕಾರ ಅಲ್ಲಿ ಅಧಿವೇಶನ ಮಾಡಿತು ಕೆಲವು ರಸ್ತೆಗಳು ಟಾರ್ ಕಂಡವು
ಆದರೆ ಬೆಳಗಾವಿಯ ಸಾಮಾನ್ಯ ಮನಿಶ್ಯಾನ ಅಭಿಪ್ರಾಯ ಕೇಳಿದರೆ ಇದೆಲ್ಲ

ಹೀಗೊಂದು ಅಳಲು...(ಹರಿ ಪ್ರಸಾದ್ ತೆಗೆದ ಕಾರ್ಕಳ ಚಿತ್ರಕ್ಕಾಗಿ ಬರೆದದ್ದು)


ಇಲ್ಲದಿದ್ದರೂ ಪಟದಲಿ
ಎಲ್ಲರಾ ಕವನದಲಿ
ಬೆತ್ತಲ ಮೂರುತಿಗೇ ಮನ್ನಣೆ...
ಅನಂತಾನಂತ ದೂರ
ಬಾನಲಿ ಬತ್ತಿಯಂತುರಿವ
ಕತ್ತಲ ಮೂರುತಿಗೇ ಮನ್ನಣೆ...

ಸನಿಹದಲ್ಲೇ ಇರುವೆ ನಾನು,
ಅನತಿ ದೂರದಲ್ಲೇ...
ಎತ್ತರ ತೆಂಗಿನ ಮರದಷ್ಟಾದರೂ...
ಕವಿಗಳ ನೋಟಕೆ ಬಾರದೇನು ನನ್ನ ಇರವು?

ಲಿನಕ್ಸಾಯಣ - ೩೮ - ಡೆಬಿಯನ್ ಗ್ನು/ಲಿನಕ್ಸ್ ೫.೦ ಈಗ ಲಭ್ಯ

ಇತ್ತೀಚೆಗೆ ಸಂಪದದಲ್ಲಿ "ಡೆಬಿಯನ್" ಸುದ್ದಿ ನಮ್ಮ ಟೆಕ್ನಿಕಲ್ ತಂಡದ ಗ್ನು/ಲಿನಕ್ಸ್ ಹಬ್ಬದಲ್ಲಿ "ಚಿಗುರು" ಆಗಿ ಚಿಗುರೊಡೆಯಿತು. ತಂಡದ ತಂತ್ರಜ್ಞಾನದಲ್ಲಿ ಕನ್ನಡ ಸಂಬಂದೀ ವಿಷಯಗಳಿಗೆ ಸುದೃಡ ತಂತ್ರಾಂಶವಾಗಬಲ್ಲದು ಎಂಬ ಆಯಶದೊಂದಿಗೆ, ಗ್ನು/ಲಿನಕ್ಸ್ ನಲ್ಲಿ ನಮ್ಮೆಲ್ಲರ ಅನುಭವದ ಆಧಾರದ ಮೇಲೆ, ಡೆಬಿಯನ್ ಡಿಸ್ಟ್ರಿಬ್ಯೂಷನ್ ಅನ್ನು ತಂಡ ಇನ್ಮುಂದೆ ಉಪಯೋಗಿಸೋದು ಅಂತ ತೀರ್ಮಾನಿಸಿದ್ದು.