ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬಸವಣ್ಣನ ಮೇಲೆ ಪುಸ್ತಕಗಳು?.

ಇವತ್ತು ನನ್ನ ಸ್ನೇಹಿತ ಬಸವಣ್ಣನ ಮೇಲೆ ಬಂದಿರುವ ಒಂದು ಒಳ್ಳೆಯ ಪುಸ್ತಕವನ್ನು ಹೇಳು ಅಂತ ಕೇಳಿದ. ನಾನು ತಡಬಡಾಯಿಸಿದೆ.

ನಾನು ಇದುವರೆಗೆ ಬಸವಣ್ಣನನ್ನು (ಮತ್ತು ಎಲ್ಲ ಶರಣರನ್ನು)   ನೋಡಿದ್ದು ಅವನ ವಚನಗಳ ಮೂಲಕ. ಮತ್ತು ಅಲ್ಲಲ್ಲಿ ಬರೆದ ತುಂಡು ತುಂಡು ಬರಹಗಳ ಮೂಲಕ.

ಯಾರಿಗೂ ಅರ್ಥವಾಗದ ಬಾಪೂ….? ನಿಜವಾದ ಕಥೆ ಏನು?

- ನವರತ್ನ ಸುಧೀರ್

ಸಂಪದದಲ್ಲಿ ಬೇರೆಡೆ ಸ್ವಾತಂತ್ರ್ಯಪೂರ್ವದಲ್ಲಿ ಭಾರತದ ಭಾವಿ ಪ್ರಧಾನಿಯ ಆಯ್ಕೆಯಲ್ಲಿ ಗಾಂಧೀಜಿಯವರು ವಹಿಸಿದ ಪಾತ್ರದ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆಯ ಆಧಾರಿತ ಲೇಖನ ಪ್ರಕಟಿಸಲಾಗಿದೆ. ಕಳೆದ ಅರವತ್ತಕ್ಕೂ ಹೆಚ್ಚು ವರ್ಷಗಳಲ್ಲಿ ಸ್ವತಂತ್ರ ಭಾರತದಲ್ಲಿ ನೆಹರೂರವರ ಭೂಮಿಕೆಯ ಬಗ್ಗೆ ಅನೇಕ ಚರ್ಚೆಗಳಾಗಿದ್ದರೂ, ಎಲ್ಲಿಯೂ ನೆಹರೂರವರ 'ದೇಶವನ್ನು ಸುಟ್ಟು ಹಾಕುವ ಮನೋಸ್ಥಿತಿಯ' ಬಗ್ಗೆ ಓದಿದ್ದಂತಿರಲಿಲ್ಲ.

೨೦೦೬ ರಲ್ಲಿ ಗಾಂಧೀಜಿಯವರ ಜೀವನ ಕುರಿತಾಗಿ ಅವರ ಮೊಮ್ಮಗ ಶ್ರೀ ರಾಜ್‍ಮೋಹನ್ ಗಾಂಧಿ ಬರೆದ Mohan Das – A True Story of a Man, his People and an Empire – Penguin Viking – (೭೪೩ ಪುಟಗಳು ) ಪ್ರಕಟವಾಯಿತು. ಈ ಪುಸ್ತಕದಲ್ಲಿ ಭಾರತದ ಭಾವಿ ನಾಯಕನ ಚುನಾವಣೆಯ ಬಗ್ಗೆ ಉಲ್ಲೇಖಿಸಲಾದ ಎರಡು ಪುಟಗಳ (೫೪೪ - ೫೪೫) ಯಥಾವತ್ ಕನ್ನಡ ಭಾವಾನುವಾದ ಈ ಕೆಳಕಂಡಂತಿದೆ. ಮೂಲ ಅರ್ಥಕ್ಕೆ ಕುಂದು ಬಾರದಂತೆ ಸಾಧ್ಯವಾದಷ್ಟು ಶ್ರಮಿಸಿದ್ದೇನೆ.

ರೈಲ್ವೆ ಇಲಾಖೆ ಲಾಭದಲ್ಲಿ ಆದರೆ ಅಲ್ಲಿಯ ಕಾರ್ಮಿಕರ ಪಾಡು???

ನೀವೆಲ್ಲ, ಲಾಲೂ ಬ‌ಜೆಟ್ ಟಿ.ವಿ ಯ‌ಲ್ಲಿ, ಪೇಪ‌ರ್ನ‌ಲ್ಲಿ ನೋಡಿರ್ತೀರ‌, ರೈಲ್ವೆ ಇಲಾಖೆ ಬಾರೀ ಲಾಭದಲ್ಲಿ ಇದೆ ಅನ್ನೋದ‌ನ್ನು ಕೇಳಿರ್ತೀರ‌, ಆದ‌ರೆ ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಕ‌ತೆ ಕೇಳಿ....

ಮದ್ದಲೆ ನುಡಿಸಿ ಕಾರ್ಯಕ್ರಮದ ಉದ್ಘಾಟನೆ!

ಈ ತಿಂಗಳ ೮ ರಂದು ಉಡುಪಿ ಜಿಲ್ಲೆಯ ಪರ್ಕಳದ ಮಂಗಳ ಕಲಾ ಸಾಹಿತ್ಯ ವೇದಿಕೆಯವರು ಹಮ್ಮಿಕೊಂಡಿದ್ದ ತಮ್ಮ ವಾರ್ಷಿಕೋತ್ಸವ ಕಾರ್ಯಕ್ರಮ "ಕನ್ನಡ ಡಿಂಡಿಮ" ದ ಉದ್ಘಾಟನೆಯನ್ನು ಮದ್ದಲೆಯ ಮಾಂತ್ರಿಕ ರಾಷ್ಟ್ರಪ್ರಶಸ್ತಿ ವಿಜೇತ ಶ್ರೀ ಹಿರಿಯಡಕ ಗೋಪಾಲ ರಾವ್ ಅವರು ಮದ್ದಲೆ ನುಡಿಸುವ ಮೂಲಕ ವಿಭಿನ್ನವಾಗಿ ನೆರವೇರಿಸಿದರು.

ಗಜಲ್

ಪುಟ್ಟ ಮಲ್ಲಿಗೆಯ ಬಳ್ಳಿ ಇನ್ನೂ ಹೂ ಬಿಟ್ಟಿಲ್ಲ ಕನಸುಗಳೇ ಹೀಗೆ
ದುಡಿವ ಕಂದನ ಕೈಗೆ ಇನ್ನೂ ಪುಸ್ತಕ ಸಿಕ್ಕಿಲ್ಲ ಕನಸುಗಳೇ ಹೀಗೆ

ಇರುಳಿನ ದೀಪದಡಿಯಲಿ ಏನೇನೋ ಹುಡುಕಿ ಏನೋ ಬರೆಯಹೋದ
ನವಸಾಕ್ಷರರ ಕೈಗೆ ಇನ್ನೂ ಲೇಖನಿ ದೊರೆತಿಲ್ಲ ಕನಸುಗಳೇ ಹೀಗೆ

ಬುವಿಯ ಎದೆ ಹೊಟ್ಟೆ ಸೀಳಿ ನೂರಾರು ಅಡಿ ಆಳ ಕೊರೆದು ಹಿಂಸಿಸಿದರೂ

ನನಗನಿಸಿದ್ದು

ಆ ಸಂಜೆ ಆ ತಳ್ಳುಗಾಡಿಯವನ ಬಳಿ ಎಂದಿನಂತೆ ತರಕಾರಿಗೆ ನೂಕು ನುಗ್ಗಲು. ತರಕಾರಿಯ ಬೆಲೆ ಬೆಟ್ಟದ ಮೇಲಿಂದ ’ಬಂಜೀ ಜಂಪಿಂಗ್’ ಮಾಡುತ್ತಿರುವ ಈ ಸಂದರ್ಭದಲ್ಲಿ ನಳನಳಿಸುತ್ತಿರುವ ದೊಣ್ಣೆ ಮೆಣಸಿನಕಾಯಿ, ಬೆಂಡೇಕಾಯಿಗಳನ್ನು ಕೇಜಿಗೆ ಹತ್ತರಂತೆ ಮಾರುತ್ತಿದ್ದ, ಎಲ್ಲಕ್ಕಿಂತ ಮನಸೆಳೆಯುತ್ತಿದ್ದುದು ಅವನು ಕೂಗುತ್ತಿದ್ದ/ಕರೆಯುತ್ತಿದ್ದ ರೀತಿ….

ಕೆಳದಿ ವೆಂಕಣ್ಣ ಕವಿಯ ಕೀತಱನೆಗಳ ಸೊಗಸು

ಕೆಳದಿ ಸಾಮ್ರಾಜ್ಯದ ಇತಿಹಾಸದಲ್ಲಿ ಕೆಳದಿ ಕವಿ ಮನೆತನದ ಪಾತ್ರ ಅತ್ಯಂತ ಅಮೂಲ್ಯವಾದುದು. ಕೆಳದಿ ಆಸ್ಥಾನ ಕವಿ ಕವಿ ಲಿಂಗಣ್ಣನು ರಚಿಸಿದ 'ಕೆಳದಿ ನ್ಋಪ ವಿಜಯ' ವೆಂಬ ಅನುಪಮ ಕ್ಋತಿ ಇಡೀ ಕೆಳದಿ ಇತಿಹಾಸಕ್ಕೆ ಹಿಡಿದ ಕ್ಐಕನ್ನಡಿ. ಈ ಕವಿ ಲಿಂಗಣ್ಣನ ಮಗನೇ ವೆಂಕ ಕವಿ ಅಥವಾ ಕವಿ ವೆಂಕಣ್ಣ.

ಮನುಷ್ಯನ ಗುಣಗಳನ್ನು ಗುರುತಿಸೋದು ಹೇಗೆ?

ಮನುಷ್ಯನ ಗುಣಗಳನ್ನು ಗುರುತಿಸೋದು ಹೇಗೆ?

ತೋರಿಕೆ ಬಹಳ ಮುಖ್ಯ , ನಮ್ಮ ನಡೆ ನುಡಿಗಳನ್ನು ಬೇರೆಯವರ ನೋಟಕ್ಕೆ ಸರಿ ಕಾಣುವಂತೆ ಮಾರ್ಪಡಿಸಿ ಕೊಳ್ಳಬೇಕಾಗುತ್ತದೆ.

ಮನುಷ್ಯನ ಉಡುಗೆಗಳಿಂದ ಅವನ ಬಾಹ್ಯ ರೂಪ ಕಂಡರು ಅವನ ಆನ್ತರಿಕ ರೂಪ ಕಾಣ ಸಿಗದು.
ಆಂತರಿಕ ರೂಪವು ಕೇವಲ ಆತನ ನಡೆ ಹಾಗು ನುಡಿಗಳಿಂದ ಗುರುತಿಸಬಹುದಾಗಿದೆ.

NatarajGowda

ಮನುಷ್ಯನ ಗುಣಗಳನ್ನು ಗುರುತಿಸೋದು ಹೇಗೆ?

ಮನುಷ್ಯನ ಗುಣಗಳನ್ನು ಗುರುತಿಸೋದು ಹೇಗೆ?

ತೋರಿಕೆ ಬಹಳ ಮುಖ್ಯ , ನಮ್ಮ ನಡೆ ನುಡಿಗಳನ್ನು ಬೇರೆಯವರ ನೋಟಕ್ಕೆ ಸರಿ ಕಾಣುವಂತೆ ಮಾರ್ಪಡಿಸಿ ಕೊಳ್ಳಬೇಕಾಗುತ್ತದೆ.

ಮನುಷ್ಯನ ಉಡುಗೆಗಳಿಂದ ಅವನ ಬಾಹ್ಯ ರೂಪ ಕಂಡರು ಅವನ ಆನ್ತರಿಕ ರೂಪ ಕಾಣ ಸಿಗದು.
ಆಂತರಿಕ ರೂಪವು ಕೇವಲ ಆಆತನ ನದೆ ಹಾಗು ನುಡಿಗಳಿಂದ ಗುರುತಿಸಬಹುದಾಗಿದೆ.

NatarajGowda

ನನ್ನೇ ನೋಡುತ್ತಿದ್ದವಳು

ದೂರದಿಂದ ನನ್ನೇ ನೋಡುತ್ತಿದ್ದವಳು
ಹತ್ತಿರ ಹೋದಾಗ ಪಕ್ಕಕ್ಕೆ ನೋಡ್ತಿದ್ಳು ;-)

ನಿನ್ನ ನೋಡುತ್ತಿದ್ದುದು ನಿಜವಲ್ಲ ಗೆಳೆಯ
ಅವಳಿಗೆ ಮಾಲ್ಗಣ್ಣು.

ದೂರದಿಂದ ನನ್ನೇ ನೋಡುತ್ತಿದ್ದವಳು
ಹತ್ತಿರ ಹೋದಾಗ ಪಕ್ಕಕ್ಕೆ ನೋಡ್ತಿದ್ಳು ;-)

ನಿನ್ನ ನೋಡುತ್ತಿದ್ದುದು ನಿಜವಲ್ಲ ಗೆಳೆಯ
ಅವಳಿಗೆ ಮಾಲ್ಗಣ್ಣು.