ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹರ್ಷಕಲಾ - ರಾಷ್ಟ್ರೀಯ ಕೈಮಗ್ಗ ಪ್ರದರ್ಶನ ಮತ್ತು ಮಾರಾಟ

ಸ್ಥಳ : ಗವರ್ಮೆಂಟ್ ಸೈಂಸ್ ಮತ್ತು ಆರ್ಟ್ಸ್ ಕಾಲೇಜು, ಪೋಸ್ಟ್ ಆಫೀಸ್ ರೋಡ್, ಮೆಜೆಸ್ಟಿಕ್ ಹತ್ತಿರ. ಬೆಂಗಳೂರು.

ಬರವಣಿಗೆ

ನಾನೂ ಕೂಡ ಬ್ಲಾಗ್ ಬರೆಯಬೇಕೆಂಬ ಆಸೆಯನ್ನು ಹತ್ತಿಕ್ಕಲಾರದೆ, ಈ ಮೂಲಕ ನನ್ನ ಮೊದಲ ಕನ್ನಡದ ಬರವನಣಿಗೆಯನ್ನು ಶುರು ಮಾಡುತ್ತಿದ್ದೆನೆ. ಚಿಕ್ಕಂದಿನಿಂದಲೂ ಏನನ್ನಾದರೂ ಬರೆಯಬೇಕೆಂಬ ಹಂಬಲ ನನ್ನನ್ನು ಕಾಡುತ್ತಲೆ ಇತ್ತು. ಆದರೆ ಏನನ್ನು, ಹೀಗೆ ಬರೆಯಬೇಕೆಂಬ ಅರಿವು ಇಲ್ಲದೆ, ಮನಸ್ಸಿಗೆ ಬಂದಿದ್ದನ್ನೆಲ್ಲಾ ಗೀಚಿ ಗೀಚಿ ಎಸೆಯುತ್ತಿದ್ದೆ.

ವಿಕಾಸವಾದ

ಅನಿವಾಸಿಯವರು ಡಾರ್ವಿನ್ ಅವರ 200ನೇ ಹುಟ್ಟುಹಬ್ಬದ ಪ್ರಯುಕ್ತ ಆ ವಿಜ್ಞಾನಿಯನ್ನು ನೆನಪು ಮಾಡಿಕೊಟ್ಟರು. ವಿಕಾಸ ಸಿದ್ಧಾಂತವನ್ನು ಭದ್ರ ಬುನಾದಿಯ ಮೇಲೆ ಸ್ಥಾಪಿಸಿ, ಜೀವವಿಜ್ಞಾನದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಕ್ರಾಂತಿಗೆ ಕಾರಣರಾದ ಬ್ರಿಟಿಷ್ ಜೀವವಿಜ್ಞಾನಿ ಡಾರ್ವಿನ್ ಬಗ್ಗೆ ಅರಿಯದವರು ಯಾರು?
ಡಾರ್ವಿನ್ ಒಬ್ಬ ವೈದ್ಯರ ಮಗನಾಗಿ ಇಂಗ್ಲಾಂಡ್‘ನ ಶ್ರೂಸ್ಬರಿಯಲ್ಲಿ ಜನಿಸಿದರು. ವೈದ್ಯರ ಮಗ ವೈದ್ಯರೇ ಆಗಬೇಕೇನೋ ಎಂಬಂತೆ ಎಡಿನ್‍ಬರ್ಗ್‍ನಲ್ಲಿ ವೈದ್ಯಕೀಯ ಕಾಲೇಜಿಗೆ ಸೇರಿದರು. ಆದರೆ ಅವರ ಒಲವು ಅತ್ತಕಡೆ ಇರಲಿಲ್ಲವೋ ಏನೋ ಅವರು ಕೇಂಬ್ರಿಡ್ಜ್ ಯೂನಿವರ್ಸಿಟಿಗೆ ಸೇರಿ M.A. ಪದವಿ ಪಡೆದರು.ಅಲ್ಲಿ ಬಯೋಲಜಿ ಪ್ರೊಫೆಸರ್ ಜಾನ್ ಸ್ಟೀವನ್ಸ್ ಹೆನ್ಸ್ಲೊ ಅವರ ಗೆಳೆತನ ಅವರಿಗೆ ದೊರಕಿತು. ಅಲ್ಲಿ ಡಾರ್ವಿನ್ ಅವರಿಗೆ ಜೀವಶಾಸ್ತ್ರ ಹಾಗೂ ಭೂಶಾಸ್ತ್ರದ ಬಗ್ಗೆ ಆಸಕ್ತಿ ಬೆಳೆಯಿತು.
ಒಮ್ಮೆ 1835ರ ಸೆಪ್ಟೆಂಬರ್ 15ರಂದು ಬೀಗಲ್ ಎಂಬ ಹಡಗು ವೈಜ್ಞಾನಿಕ ವಿಚಾರಗಳ ಅನ್ವೇಷಣೆಗಾಗಿಯೇ ಹೊರಟಿತು. ಅದರ ಕ್ಯಾಪ್ಟನ್ 26 ವರ್ಷಯ ಯುವಕ ರಾಬರ್ಟ್ ಫಿಟ್ಸ್ ರಾಯ್ ತನ್ನ ಜೊತೆಗೆ ಒಬ್ಬ ಜೀವಶಾಸ್ತ್ರಜ್ಞನನ್ನು (Naturalist) ಸಹಚರರಾಗಿ ಬರಬೇಕೆಂದು ಬಯಸಿದ. ಅದಕ್ಕೆ ಪ್ರೊ. ಹೆನ್ಸ್ಲೊ ಅವರು ಡಾರ್ವಿನ್ನನ್ನು ಕ್ಯಾಪ್ಟನ್ ಜೊತೆ ಹೋಗುವಂತೆ ಸಲಹೆ ನೀಡಿದರು. ಅದರಂತೆ ಹೊರಟ ಡಾರ್ವಿನ್‘ಗೆ ಆದ ಲಾಭವೇ ಇಂದು ನಮ್ಮ ಮುಂದಿರುವ ಅವರ ವಿಕಾಸವಾದದ ಸಿದ್ಧಾಂತ. ಆಸ್ಟ್ರೇಲಿಯಾ ಹಾಗೂ ದಕ್ಷಿಣ ಅಮೆರಿಕದೊಂದಿಗೆ ದಕ್ಷಿಣ ಅಮೆರಿಕದ ಹತ್ತಿರ ಇರುವ ದಕ್ಷಿಣ ದ್ವೀಪಗಳಾದ ಗ್ಯಾಲ್ಪಗೋಸ್ ದ್ವೀಪಗಳತ್ತ ಪಯಣ ಬೆಳೆಸಿದರು. ಸತತ 5 ವರ್ಷಗಳ ಈ ಪಯಣದಲ್ಲಿ ಡಾರ್ವಿನ್ ಭೂಶಾಸ್ತ್ರ, ಜೀವಶಾಸ್ತ್ರ, ಸಸ್ಯಶಾಸ್ತ್ರಗಳ ಎಷ್ಟೋ ವಿಷಯ ಸಂಗ್ರಹಣೆ ಮಾಡಿದರು. ಅವುಗಳಿಗೆ ವೈಜ್ಞಾನಿಕ ನಿಯಮಗಳನ್ನು ಅಳವಡಿಸಿಕೊಂಡು ಸ್ಪೆಸಿಮನ್ನುಗಳನ್ನು ಸಂಗ್ರಹಿಸಿಕೊಂಡು ಬಂದರು. ಇದು ಅವರ ವಿಕಾಸವಾದಕ್ಕೆ ತಳಪಾಯ ಹಾಕಿತು. ಅವರು ತನ್ನ “origin of species”ನಲ್ಲಿ ಪೀಠಿಕೆಯಾಗಿ ಹೀಗೆ ಬರೆದಿದ್ದಾರೆ.

ಯಾರಿಗೂ ಅರ್ಥವಾಗದ ಬಾಪೂ ...

ಇದನ್ನು ಬೆಳಗೆರೆ ಕೃಷ್ಣಶಾಸ್ತ್ರಿಗಳು ಸ್ವತಃ ನನಗೆ ಹೇಳಿದ್ದು. ಈ ಘಟನೆ ನಡೆಯುವಾಗ ಶಾಸ್ತ್ರಿಗಳು ಖುದ್ದು ಎದುರಿಗೇ ಇದ್ದರಂತೆ.
ಸ್ವಾತಂತ್ರ್ಯದ ಸಮಯ. ಭಾರತದ ಪ್ರಧಾನಿ ಯಾರಾಗಬೇಕೆಂದು ನಿರ್ಧರಿಸಲು ನಡೆದ ಶಾಸನ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ನೆಹರೂ ಸರ್ದಾರ್ ಪಟೇಲರ ಎದುರಿಗೆ ೧೧-೧ ಮತಗಳ ಅಂತರದಿಂದ ಸೋತಿದ್ದರು. ಸ್ವಯಂ ನೆಹರೂ ಬಿಟ್ಟು ಬೇರೆ ಯಾರೂ ನೆಹರೂರವರಿಗೆ ಮತ ಹಾಕಿರಲಿಲ್ಲ!
ಇದಾದ ಮರುದಿನ ನೆಹರೂ ಗಾಂಧೀಜಿಯ ಬಳಿ ಬಂದು ನಿಮ್ಮ ಪ್ರಭಾವ ಬಳಸಿ ತಮ್ಮನ್ನು ಪ್ರಧಾನಿಯನ್ನಾಗಿ ಮಾಡಬೇಕೆಂದು ಕೇಳಿಕೊಂಡರು. ಅದಕ್ಕೆ ಗಾಂಧೀಜಿ "you are independent now. think independently. take independent decisions. why do you need my help?" ಎಂದರು. ನೆಹರೂಗೆ ನಿರಾಶೆಯಾಯಿತು. ವಾಪಸು ಹೊರಡಲು ಅನುವಾದರು. ಎರಡು ಹೆಜ್ಜೆ ಬಾಗಿಲ ದಿಕ್ಕಿನಲ್ಲಿ ನಡೆದು ಗಾಂಧೀಜಿಯ ತಿರುಗಿ "If I don't become prime minister I will burn this country"ಎಂದರು.

ಚಿಗುರಿಗೊಂದು ಹೊಸ Logo!!

ಟೆಕ್ ಸಂಪದ ತಂಡದವರು (ನಾನೂ ಸೇರಿದಂತೆ) ಇತ್ತೀಚೆಗೆ ಬಿಡುಗಡೆ ಮಾಡಿರುವ Chiguru-Custom Debian Distribution (Chiguru-CDD) ಗ್ನೂ/ಲಿನಕ್ಸ್ ತಂತ್ರಾಂಶಕ್ಕೆ ಹೊಸತೊಂದು Logo ಮಾಡಿದ್ದೀನಿ. ಅದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು http://tech.sampada.net/%E0%B2%9A%E0%B2%BF%E0%B2%97%E0%B3%81%E0%B2%B0%E0%B2%BF%E0%B2%97%E0%B3%8A%E0%B2%82%E0%B2%A6%E0%B3%81-%E0%B2%B9%E0%B3%8A%E0%B2%B8-logo/58 ಯಲ್ಲಿ ತಿಳಿಸಬಹುದು.

೨೦೦೯ ರ, " ಕಾಲಾಘೋಡಾ ಆರ್ಟ್ಸ್ ಫೆಸ್ಟಿವಲ್, ಮುಂಬೈ " !

ದಕ್ಷಿಣ ಮುಂಬೈ ನ ಕಾಲಾಘೋಡ (KGAF) ಇಲಾಖೆಯಲ್ಲಿ ಸುಮಾರು, ೧೧ ವರ್ಷಗಳಿಂದ 'ಕಾಲಾಘೋಡ ಅಸೋಸಿಯೇಷನ್' ನವರು, ನಡೆಸಿಕೊಂಡು ಬಂದಿರುವ ವಾರ್ಷಿಕ ಉತ್ಸವವಿದು. ಮುಂಬೈ ನ ಪ್ರತಿಶ್ಠಿತ ’ಟೈಮ್ಸ್ ಆಫ್ ಇಂಡಿಯ ’ ಪತ್ರಿಕೆ, ಇದನ್ನು ಪ್ರಾಯೋಜಿಸುವ ಪ್ರಮುಖ ಸಂಸ್ಥೆಗಳಲ್ಲೊಂದು ! ಉತ್ಸವದಲ್ಲಿ ಸಕ್ರಿಯವಾಗಿ ಪಾಲುಗೊಂಡಿರುವ ಸಂಘ ಸಂಸ್ಥೆಗಳು ಹಲವಾರು :

* 1. National Gallery of Modern Arts.

ಸುದ್ದಿ ಅಂದ್ರೆ ಹೀಗೇನಾ ?

ಸುದ್ದಿ ಮಾಧ್ಯಮಗಳು ಎಂದರೆ ಸದಾ ಕಣ್ಣು ಕಿವಿ ಜಾಗೃತವಾಗಿರಬೇಕು ಎಂದು ಹೇಳುತ್ತಾರೆ ಹಿರಿಯ ಪತ್ರಕರ್ತರು. ಆದರೆ ಕರ್ನಾಟಕದಲ್ಲಿ ನಡೆಯುತ್ತಿರುವುದಾದರೂ ಏನು ? ಒಮ್ಮ ಸೂಕ್ಷ್ಮವಾಗಿ ಗಮನಿಸಿದರೆ ಸಾಕು... ಪ್ರಚಾರಕ್ಕಾಗಿ ಕೆಲವು ರಾಜಕೀಯ ಪಕ್ಷಗಳು, ಸಂಘಟನೆಗಳು ನಡೆಸುವ ಕಸರತ್ತಿಗಿಂತ ಸುದ್ದಿ ಮಾಧ್ಯಮಗಳ ಸುದ್ದಿಯೇ ಬಹುಪಾಲು ಕೆಲಸ ಮಾಡುವಂತೆ ಕಾಣುತ್ತಿದೆ. ಇದೆಲ್ಲಾ ಗಮನಿಸಿದ್ರೆ ಸುದ್ದಿ ಅಂದ್ರೆ ಹೀಗೇನಾ ? ಸ್ವಲ್ಪ ಸಿಹಿ ಸ್ವಲ್ಪ ಕಹಿ ಎಂಬಂತೆ ಪರ ವಿರೋಧ ಚರ್ಚೆ ನಡೆಯಲೇ ಬೇಕಲ್ಲವೇ ?

ಕಳೆದ ಆರು ವರ್ಷಗಳಿಂದ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದರೂ ನನಗೆ ಅರ್ಥವಾಗದ ಪ್ರಶ್ನೆ ಎಂದರೆ ಇದೇ. ಯಾವುದೇ ಸುದ್ದಿ ಇರಲಿ. ಅದನ್ನು ವಸ್ತು ನಿಷ್ಠವಾಗಿ ಕೊಡಬೇಕೋ ಅಥವಾ ರಂಗು ರಂಗಾಗಿ ರಂಜಿತವಾಗಿ ಕೊಡಬೇಕೇ ?

ಓದು ಬರಹ ಬರುತ್ತಿದ್ದಿದ್ದರೆ !

ಪರದೇಶಿಯಾದ ಸ್ಪೋಷ್ ಎಲ್ಲೀಸ್ ದ್ವೀಪದಲ್ಲಿ ದೋಣಿಯೊ೦ದರಿ೦ದ ಇಳಿದು ಜೀವನೋಪಾಯಕ್ಕಾಗಿ ಕೆಲಸ ಹುಡುಕಲು ಅರ೦ಭಿಸಿದ. ಮನೆ ಮನೆಗೂ ಹೋಗಿ ಬಾಗಿಲು ಬಡಿದು ಕೆಲಸ ಕೇಳಿದರೂ ಕೆಲಸ ದೊರಕಲಿಲ್ಲ. ಹೀಗೆ ಒಮ್ಮೆ ಆತ ವೇಶ್ಯಾಗೃಹ ಒ೦ದರ ಬಾಗಿಲು ಬಡಿದ. ಆತನ ಕಥೆ ಕೇಳಿ ಮರುಗಿದ ವೇಶ್ಯಾಗೃಹದ ಯಜಮಾನಿ ಅವನಿಗೆ ನೆಲಮಾಳಿಗೆಯನ್ನು ಸ್ವಚ್ಛಮಾಡುವ ಕೆಲಸ ಕೊಟ್ಟಳು.