ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕುರುಡು ಸಂಪ್ರದಾಯದ ಕಡಲ ಮಡಿಲಿನ ಮುತ್ತುಗಳು .... ಭಾಗ ೩

ಭೂಮಿ ಗುಂಡಾಗಿದೆ ಎಂದು ಹೇಳಿದವರು ಯಾರು?

ಈಗಿನ ನಮ್ಮ ಪಠ್ಯ-ಪುಸ್ತಕಗಳಲ್ಲಿ Kepler, Copernicus, Galileo ಎಂದು ಹೇಳಿರುತ್ತಾರೆ. ಅವರೆಲ್ಲ ೧೬ ಅಥವ ೧೫ ಶತಮಾನಕ್ಕೆ ಸೇರಿದವರು. ನಮ್ಮ ಪ್ರತಿಭಾವಂತ ಭಾರತೀಯರಿಗೆ ಇದರ ಬಗ್ಗೆ ತಿಳಿದಿರಲಿಲ್ಲವೇ? ಅವರ ಅರಿವನ್ನು ಅರಸುತ ಅಲೆದರೆ ನಮಗೆ ಏನು ಕಾಣುತ್ತದೆ?

ಭೂ-ಗೋಳ (ಭೂಮಿ-ಗೋಳವಾಗಿದೆ) ಶಾಸ್ತ್ರ ಎಂದಲ್ಲವೆ ನಾವಿದನ್ನು ಓದಿದ್ದು!!!

ಮುತಾಲಿಕ್‌ಜೀ,ಹೀಗಾ ನೀವು ಕೈಕೊಡೋದು?

ಪ್ರೇಮಿಗಳ ದಿನ ಸಾರ್ವಜನಿಕವಾಗಿ "ಪ್ರೇಮಿಸುವ" ಪ್ರ್ಪ್ರೇಮಿಗಳಿಗೆ ಮದುವೆ ಮಾಡಿಸುವುದಾಗಿ ಘೋಷಿಸಿ,ನಮ್ಮಂತಹ ಯುವಪ್ರೇಮಿಗಳಿಗೆ ಆಸೆ ಹುಟ್ಟಿಸಿದ ಮುತಾಲಿಕರೇ ನೀವು ಹೀಗೂ ಕೈಕೊಡಬಹುದಾ?...ಮುಂದೆ ಓದಿ

ನಮ್ಮಜ್ಜಿ!!! (ಹಾಸ್ಯ - ಲೇಖನ)

ನಮ್ಮಜ್ಜಿ!!! (ಹಾಸ್ಯ - ಲೇಖನ)

ಡಾ: ಮೀನಾ ಸುಬ್ಬರಾವ್.

"ರಾಮಾಯಣ, ಮಹಾಭಾರತ, ಪುರಾಣ ಪುಣ್ಯಕಥೆಗಳ ಓದಿಕೊಂಡು, ರಾಮಾ ಕೃಷ್ಣಾ ಅಂತ ಹಾಯಾಗಿ ಮನೇಲಿರದೆ ಊರೆಲ್ಲಾ

ತಿರುಕ್ಕೊಂಡು, ಬೆಂದ್ ಮನೆ ಯಾವುದು?, ಬೇಯದ್ ಮನೆ ಯಾವುದು?, ಯಾರಿಗೆ ನೀರು?, ಯಾರಿಗೆ ಮದುವೆ ನಿಶ್ಚಯ ಆಗಿದೆ?,

ನಿಮ್ಮ ಮಗುವಿಗೆ ಖಂಡಿತವಾಗಿಯೂ ಲಸಿಕೆ ಹಾಕಿಸಬೇಡಿ - 2

ನನ್ನ ಹಿಂದಿನ ಲೇಖನಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ದೊರಕಿದೆ. ಧನ್ಯವಾದಗಳು. ಡಾ. ಮೀನಾ ಸುಬ್ಬರಾವ್ ಹಾಗೂ ಡಾ. ಸೋಮೇಶ್ವರ್ ಕಳಕಳಿಯಿಂದ ಇಂತಹ ಲೇಖನಗಳನ್ನು ಹಾಕಬೇಡಿ ಎಂದು ಸಲಹೆ ನೀಡಿದ್ದಾರೆ. ಇವರು ನಿಜಕ್ಕೂ ಸಭ್ಯರು. ಹಿಂದೊಬ್ಬ ಡಾಕ್ಟರು ನನ್ನ ಮೇಲೆ ಕೇಸ್ ಹಾಕುವುದಾಗಿ ಬೆದರಿಸಿದ್ದರು. "ಸರ್ ದಯವಿಟ್ಟು ಹಾಕಿ" ಎಂದು ಕೇಳಿಕೊಂಡಿದ್ದೆ. ಯಾಕೋ ಅವರು ಮನಸ್ಸು ಮಾಡಲಿಲ್ಲ. ಆ ವೈದ್ಯರು ಕೆಟ್ಟವರೇನಲ್ಲ. ನನ್ನಷ್ಟೇ ಸಾಮಾಜಿಕ ಕಳಕಳಿ ಅವರಲ್ಲೂ ಇತ್ತು. ಡಾ. ಮೀನಾ ಸುಬ್ಬರಾವ್ ಹಾಗೂ ಡಾ. ಸೋಮೇಶ್ವರ್ ಅವರೂ ಅಷ್ಟೆ!
ಇರಲಿ!
ವೈದ್ಯರುಗಳಿಬ್ಬರೂ ನನ್ನ ಥಿಯರಿ ಸುಳ್ಳು ಎಂದಿದ್ದಾರೆಯೇ ಹೊರತು ಲಸಿಕೆಗಳು ಕಲುಷಿತವಾಗಿರುವುದನ್ನು ಇಬ್ಬರೂ ಒಪ್ಪಿಕೊಂಡಿದ್ದಾರೆ. ಇದಕ್ಕೆ ರಾಜಕೀಯ ಹಾಗೂ ಅಂತರ್ರಾಷ್ಟ್ರೀಯ ಹುನ್ನಾರಗಳು ಇವೆ ಎಂದಿದ್ದಾರೆ. ಕಲುಷಿತವಾಗಿದ್ದರೂ ಮಗುವಿಗೆ ಲಸಿಕೆ ಹಾಕಿಸಿ ಎಂದು ಸಲಹೆ ಏಕೆ ಕೊಡುತ್ತಿದ್ದಾರೆ ಎಂದು ಅರ್ಥವಾಗಲಿಲ್ಲ.
ಮೊದಲನೆಯ ಭಾಗವಾಗಿ ಲಸಿಕೆಯನ್ನು ಹೇಗೆ ತಯಾರಿಸಲಾಗುತ್ತದೆ ಎಂದು ನೋಡೋಣ.
ಲಸಿಕೆಯನ್ನು ತಯಾರಿಸಲು ಬೇಕಾಗುವ ಮೂಲ ಪದಾರ್ಥಗಳು ವೈರಾಣುಗಳು. ಒಂದು ಡೋಸ್ ಲಸಿಕೆ ತಯಾರಿಸಲು ಏಳು ಲಕ್ಷ ವೈರಾಣುಗಳು ಬೇಕಾಗುತ್ತವೆ! ಕೋಟಿಗಟ್ಟಲೇ ವೈರಾಣುಗಳನ್ನು ತಯಾರಿಸಲು ನರ್ಸರಿಗಳಲ್ಲಿ ಪ್ರಾಣಿಗಳ ಪಕ್ಷಿಗಳ ಜೀವಂತ ಜೀವಕೋಶಗಳನ್ನು ಹಾಗೂ ಅಂಗಾಂಶಗಳನ್ನು ಬಳಸಲಾಗುತ್ತದೆ. ಕೆಲವೊಮ್ಮೆ ಗರ್ಭಪಾತಕ್ಕೊಳಗಾದ ಮಾನವ ಭ್ರೂಣವನ್ನು ಬಳಸಲಾಗುತ್ತದೆ!! (ಕ್ರೌರ್ಯ ನಂ.೧).

Facebookನ ಕನ್ನಡ ಅನುವಾದ

ಗೆಳೆಯರೇ,

Facebook (http://www.facebook.com/) ಅನ್ನುವ ತಾಣವನ್ನು ಕನ್ನಡದಲ್ಲಿ ತರುವ ಪ್ರಯತ್ನ ನಡೆಯುತ್ತಿದೆ. Facebook ಕೂಡ Orkut (http://www.orkut.com/) ನಂತೆ ಸಾಮಾಜಿಕ ಜೀವನವನ್ನು ಹಂಚಿಕೊಳ್ಳಲು ಇರುವ ಒಂದು ಸಮುದಾಯ. ನಿಮಲ್ಲಿ ಯಾರಾದರು ಇದನ್ನು ಕನ್ನಡದಲ್ಲಿ ಅನುವಾದಿಸಲು ಆಸಕ್ತಿ ಇದ್ದಲ್ಲಿ, ಈ ಕೊಂಡಿಯನ್ನು - http://www.facebook.com/translations/ - ವಿಕ್ಷೀಸಿ ಸಹಕರಿಸಿ.

ಫೆಬ್ರವರಿ ಹದಿನಾಕರ ದಿನಕ್ಕೆ ನೆನೆಯಲು ಐದು ನಲ್ನುಡಿಗಳು

ಊರಲ್ಲೆಲ್ಲ ಒಂದೇ ಗಲಾಟೆ ಅಂತೆ. ಅದ್ಯಾವ್ದೋ ದಿನ ಆಚರಿಸಬೇಕೋ ಬೇಡವೋ, ಅದು ನಮ್ಮ ಸಂಸ್ಕೃತಿಗೆ ತಕ್ಕದ್ದೋ ಅಲ್ವೋ ಅಂತ. ಅದೆಲ್ಲ ಬಿಡಿ, ಅದಕ್ಕೆ ಉತ್ತರ ಕೊಡೋಷ್ಟು ಬುದ್ಧಿಯಾಗಲಿ, ವ್ಯವಧಾನವಾಗಲೀ, ಅಗತ್ಯವಾಗಲೀ ಒಂದೂ ನನಗಿಲ್ಲ. 

ನಿಮಗಿದು ತಿಳಿದಿರಲಿ: ಆರ್ಥಿಕ ಮಾಹಿತಿ

ಹಾಗೇ ಸುಮ್ಮನೆ RBI ಮಧ್ಯಂತರ ಬಜೆಟ್ ನೊಡೋಣ ಎಂದು ಹೋದಾಗ ಸಿಕ್ಕಿದ್ದು ...

ಹಣಕಾಸಿನ ಬಗ್ಗೆ ನಾ ಓದಿದ ಉತ್ತಮ ಲೇಖನ ...
ಹಣದುಬ್ಬರ ಎಂದರೇನು? Liquidity ಎಂದರೇನು? ಆರ್ಥಿಕ ಸಮತೋಲನ ಎಂದರೇನು... ?
http://www.rbi.org.in/commonman/Upload/Kannada/Content/PDFs/KannadaMoneyKumarComic.pdf

ಇನ್ನೂ ಬೇಕಾದಲ್ಲಿ ಈ ಕೊಂಡಿಗೆ ಹೋಗಿ Financial Education ಅಲ್ಲಿಂದ For school Kids ಬಲತುದಿಯಲ್ಲಿ Select Language ಕನ್ನಡ ...
http://www.rbi.org.in/commonman/English/Scripts/RajuAndSkyladder.aspx

ನಿನ್ನ ಹಾದಿಯ ಕಾದು

ನಲ್ಮೆಯ ಗೆಳತಿ ನಿನಗೆ ಪ್ರೇಮಿಗಳ ದಿನದ ಶುಭಾಶಯಗಳು..ಹಾಗೆ ನಿನ್ನ ಬರುವಿಕೆಗಾಗಿ ಈ ನನ್ನ ಪುಟ್ಟ ಬರವಣಿಗೆಗಳು:

ಕಾದಿರುವೆ ನೊಂದು,ಸೇರು ಬಾ,ಬೇಗ ಬಂದು
ನಾನಿರುವೆ ನಿನಗಾಗಿ ಎಂದೂ

ನೆತ್ತರಲಿ ಬರೆದ ಪ್ರೇಮದ ಪತ್ರ,ತಲುಪಲಿಲ್ಲ ನಿನ್ನ ಹತ್ರ
ಸಿಗದಿರುವ ಪ್ರೀತಿಯ ಹುಡುಕಿ,ಜಾರುತಿದೆ ಕಂಬನಿ
ಕಬಿನಿ ಜಲಾಶಯದಂತೆ ಉಕ್ಕಿ,
ಜೋಗದ ಜಲಪಾತ ದುಮ್ಮಿಕುವ ರೀತಿಯಲ್ಲಿ

ಕನಸು ನನಸುಗಳ ನಡುವೆ

"What is your dream for future?" "What do you dream to become in the future?" - ಮುಂತಾದ ಪ್ರಶ್ನೆಗಳು ಸ್ಕೂಲು ಕಾಲೇಜುಗಳಲ್ಲಿ ಉತ್ತರ ಹುಡುಕಿಸುವಂತೆ ಮಾಡಿದ್ದು ಕಡಿಮೆ, ಬದಲಿಗೆ ಉತ್ತರ 'ಕಟ್ಟುವಂತೆ' ಮಾಡಿರುತ್ತಿತ್ತು.   ಭಾಷಣ ಸ್ಪರ್ಧೆಗೆ ಉತ್ತಮ ಮಾತುಗಾರನನ್ನು ಅಣಿ ಮಾಡುವ ಮೂಲಗಳಾಗುತ್ತಿದ್ದವು ಅವು. ಭಾಷೆ ಅರಿತ ಹುಡುಗರಿಗೆ, ಸರಾಗವಾಗಿ ಮಾತಾಡಬಲ್ಲ ಹುಡುಗಿಯರಿಗೆ - ಬರಿಯ ಭಾಷೆಯ ಕಸರತ್ತು ಆಗಿಬಿಡುತ್ತಿತ್ತು. ಕೇಳುಗರಿಗೆ ತಾವು ಕೇಳಬೇಕೆನಿಸಿದ್ದು ಕೇಳಿಬರುವ ಸಮಯ, ಕೇಳಿಬರುವುದು, ಕೇಳಿದವರಿಂದ ಹೊರಬರುವ ಪ್ರತಿಕ್ರಿಯೆ - ಅದಕ್ಕೆ ಸಿಗುವ ಮನ್ನಣೆ, ಅವಾರ್ಡುಗಳು - ಎಲ್ಲ ತೀರ cliche!

ನನಗೆ "ಕಟ್ಟಿದ" ಉತ್ತರಗಳ ಕುರಿತು, ಉತ್ತರಗಳಿಗಾಗಿ ಕಟ್ಟಿದ ಕನಸುಗಳ ಕುರಿತು ಅಸಮಾಧಾನ ಹುಟ್ಟಿದ್ದು ಇವುಗಳಿಂದ.

ಹೀಗಾಗಿ ಉತ್ತರ ಹುಡುಕಲು ಎಂದೋ ನಾನು ಮುಂದೇನಾಗಬೇಕು ಎಂಬುದರ ಕುರಿತು ಆಲೋಚಿಸಿದ್ದಿದೆ. ಕನಸು ಕಾಣುವಷ್ಟು ಸೀರಿಯಸ್ ಆಗಿದ್ದಿದ್ದರೆ ನಮ್ಮಲ್ಲಿ ಹಲವರು ಕ್ರಿಕೆಟ್ಟಿಗರಾಗುವ ಕನಸು ಕಾಣುತ್ತಿದ್ದೆವು ಬಹುಶಃ, ಅಷ್ಟೊಂದು ಕ್ರಿಕೆಟ್ ಸವಾರಿ, ಸ್ಕೂಲು, ಕಾಲೇಜು, ಟಿ ವಿ - ಎಲ್ಲೆಲ್ಲೂ. ಅಪ್ಪ ಅಮ್ಮಂದಿರಿಗೂ ಇದರಲ್ಲಿ "ಸಖತ್ ದುಡ್ಡು" ಎಂದು ಯಾವಾಗ ಅನಿಸಿತೋ ಮಧ್ಯಮ ವರ್ಗದ ಹಲವರು ಸಾಯಂಕಾಲ "forcibly" ಮಕ್ಕಳನ್ನು ಕ್ರಿಕೆಟ್ 'ಟ್ಯೂಶನ್ನಿ'ಗೆ ಅಟ್ಟಲು ಪ್ರಾರಂಭಿಸಿದ್ದರಲ್ಲ ಆಗ! ಕಂಪ್ಯೂಟರ್ ಬಂದ ಹೊಸತರಲ್ಲಿ "ಎಷ್ಟು ಖರ್ಚಾದರೂ ಪರವಾಗಿಲ್ಲ" ಎಂದು 386, 486 ಇಟ್ಟುಕೊಂಡು ಅರ್ಧಂಬರ್ಧ ಹೇಳಿಕೊಡುತ್ತಿದ್ದ instituteಗಳಿಗೆ ಕಳುಹಿಸುತ್ತಿದ್ದರಲ್ಲ!