ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅನಿಸಿದ್ದು........ಓದಿದ್ದು........

ಅನಿಸಿದ್ದು-----

ನನ್ನೊಳಗಿರುವ ಶಕ್ತಿಯೆ
ಎಲ್ಲಡಗಿರುವೆ
ಹುಡುಕುವುದರಲ್ಲೇ ನಾ
ವೀಕಾಗುತಿರುವೆ......

ಓದಿದ್ದು-----

ಹತ್ತಾರು ವರುಷ ನೆರಳಾಗಿ ನಿಂತ ಮರ
ತೊಲೆಯಾಗಿ ಉಳಿಯಿತು ನೂರಾರು ವರುಷ
ಹಲವಾರು ವರುಷ ಆಳಿದ ಅರಸ
ಹೆಣವಾಗಿ ಉಳಿಯಲಿಲ್ಲ ಮೂರು ದಿವಸ

ನಿಮ್ಮ ಮಗುವಿಗೆ ಲಸಿಕೆ ಹಾಕಿಸಬೇಡಿ

ಈ ಲೇಖನದ ಮೂಲಕ ಇಡೀ ಜಗತ್ತನ್ನೇ ಎದುರು ಹಾಕಿಕೊಳ್ಳುವ ಅಪಾಯವಿದೆ ಎಂದು ನನಗೆ ಗೊತ್ತು. ಪ್ರಗತಿ ವಿರೋಧಿ ಎಂದೂ ಕೆಲವರು ಅನ್ನಬಹುದು. ಸತ್ಯ ತಿಳಿಸುವ ಉದ್ದೇಶದಿಂದ ಲೇಖನ ಪ್ರಕಟಿಸುತ್ತಿದ್ದೇನೆ. ಲಸಿಕೆಗಳ ಬಗೆಗೆ ಸಾಧ್ಯಂತ ಮಾಹಿತಿ ಇದೆ. ಆದರೆ ಒಂದು ಸ್ಯಾಂಪಲ್ ನಿಮ್ಮೆದುರು ಇಡಬಯಸುತ್ತೇನೆ.

ಪ್ರೀತಿಯ ಕನಸಿನಲ್ಲಿ

ನೋಡಲಿಲ್ಲನೆಂದೆನ್ನಬೇಡ ಗೆಳೆಯ
ನನ್ನ ನೀ ನೋಡಿರುವೆ
ನಿನ್ನ ಮನದ ಕನ್ನಡಿಯಲ್ಲಿ

ಕೇಳಲಿಲ್ಲನೆಂದೆನ್ನಬೇಡ ಗೆಳೆಯ
ನನ್ನ ನೀ ಕೇಳಿರುವೆ
ನಿನ್ನ ಮನದ ಇನಿದನಿಯಲ್ಲಿ

ಪ್ರೀತಿಗೆ ಎಲ್ಲೆ ಬೇಡ
ನಾ ಮೊದಲು ನೀ ಮೊದಲೆಂಬ
ಗೋಜಲು ಬೇಡ

ಕನಸು ಕದ್ದಿರಲು ನಾನು
ಇತ್ತಿರುವೆ ಮನಸ ನಾನು
ನಿನಗೆ ನಾನು ನನಗೆ ನೀನು

ನಮ್ಮ ಮನೆಯಲೊಂದು ಗುಬ್ಬಚ್ಚಿ ಗೂಡು

ನಮ್ಮ ಮನೆಯ ಬಾತ್‌ರೂಮ್ ಚಿಕ್ಕದಾದರೂ ಅದಕ್ಕೊಂದು ವೆಂಟಿಲೇಶನ್ ಇದೆ. ವೆಂಟಿಲೇಶನ್ ಹೇಗಿದೆಯೆಂದರೆ, ಅದರ ಕಟ್ಟಿಗೆಯ ಮುಚ್ಚಳವನ್ನು ಕೊಂಡಿ ಹಾಕಿ ಯಾವಾಗಲೂ ತೆರೆದಿರುವಂತೆ ಮಾಡಿದ್ದೇವೆ. ಬಾತ್‌ರೂಮ್‌ನಲ್ಲಿ ಗಾಳಿಯಾಡಲೆಂದು. ಕಿಟಕಿಯ ಮೇಲ್ಭಾಗದಲ್ಲಿ ಮೇಲ್ಛಾವಣಿ ಇದೆ. ಹೀಗಾಗಿ ಅಲ್ಲಿ ಯಾವುದೆ ಪಕ್ಷಿಗಳು ಗೂಡು ಕಟ್ಟಲು ಅನುಕೂಲಕರವಾಗಿದೆ.
ಒಂದು ದಿನ ಗುಬ್ಬಿಗಳ ಗಲಾಟೆ ಬಹಳ ಕೇಳಿಸಿತು. ಎಲ್ಲಿಂದ ಈ ಗಲಾಟೆ ಎಂದು ಕುತೂಹಲದಿಂದ ಹುಡುಕಾಡಿದೆ. ಗಂಡು, ಹೆಣ್ಣು ಗುಬ್ಬಿಗಳೆರಡು ಸರದಿಯ ಪ್ರಕಾರ ಬಾಯಲ್ಲಿ ಒಣ ಹುಲ್ಲನ್ನು ಕಚ್ಚಿಕೊಂಡು ನಮ್ಮ ಬಾತ್‌ರೂಮ್‌ನ ವೆಂಟಿಲೇಟರ್‌ನ ಮೇಲ್ಭಾಗದಲ್ಲಿ ಹತ್ತಿ ಇಳಿಯುವುದು ಕಾಣಿಸಿತು. ನಮ್ಮ ಮನೆಯ ಯಾರಾದರೂ ಬಾತ್‌ರೂಮ್‌ಗೆ ಹೋದಾಕ್ಷಣ ಅವು ಪುರ್‌ನೆ ಹಾರಿ ಹೊರಗೆ ಹೋಗುತಿದ್ದವು. ನಾವು ಮನೆಯ ಬೇರೆ ಕೋಣೆಗೆ ಹೋದತಕ್ಷಣ ಅವುಗಳ ಗಲಾಟೆಯೋ ಗಲಾಟೆ. ಒಮ್ಮೆ ಕುತೂಹಲದಿಂದ ನನ್ನ ಮಗ ಆಕಾಶ್ ಅಪ್ಪ ಅವು ಅಲ್ಲಿ ಏನ್ ಮಾಡ್ಯಾವು ನೋಡೋಣೇನು? ಎಂದು ಕೇಳಿದ. ನನಗೂ ಕುತೂಹಲ ಉಂಟಾಗಿ, ಸ್ಟೂಲ್ ಇಟ್ಟುಕೊಂಡು ಹತ್ತಿ ವೆಂಟಿಲೇಟರ್‌ನ ಮೇಲ್ಭಾಗದಲ್ಲಿ ಇಣುಕಿದೆ. ಮೇಲೆ ಒಣಹುಲ್ಲಿನ ಒತ್ತಾದ ಗೂಡಿನಲ್ಲಿ ಪುಕ್ಕಗಳ ಮೆತ್ತನ ಹಾಸಿಗೆಯನ್ನೇ ಗುಬ್ಬಚ್ಚಿಗಳು ರೆಡಿ ಮಾಡಿದ್ದವು! ಮೆಲ್ಲನೆ ಅವುಗಳಿಗೆ ಅನುಮಾನವಾಗದಂತೆ ಫೋಟೊ ಕ್ಲಿಕ್ಕಿಸಿದೆ.

ಅನುಭವಿಯ ಕಿವಿಮಾತು.....!

ಇನ್ನೇನು ಹದಿನಾಲ್ಕು ಬಂತು ಯಾರು ಏನೇನೋ ಪ್ಲಾನ್ ಮಾಡುತ್ತಿರಬಹುದು. ಯಾರ ಉತ್ಸಾಹಕ್ಕೆ ಭಂಗ
ಗೊಳಿಸಲು ನಾ ಹೋಗುತ್ತಿಲ್ಲ.....ಆದರೂ ಈ ಕವನ ಅವರಿಗಾಗಿ...

ಅದೆಶ್ಟೋ ಪತಂಗಗಳು ರೆಕ್ಕೆ

ಸುಟ್ಟುಕೊಂಡರೂ ಭೇದಿಸಲಾಗಲಿಲ್ಲ

ರಹಸ್ಯವ..... ದೀಪ ಬೆಳಕುಕೊಡಲು

ಇದೆಯೋ ......ರೆಕ್ಕೆ ಸುಡಲೋ.....?

ಇಳೆಯ ವ್ಯಾಮೋಹ

ಜೀವನವೇ ಇಷ್ಟು, ಇರುವವರೆಗೆ ಹೊನ್ನು ಹಣ ಮಣ್ಣು
ಎಂದು ಕಿತ್ತಾಟ ಕಾದಾಟ
ಸತ್ತಮೇಲೆನಿದೆ ಬರೀ ಮಣ್ಣು

ಸಾಯುವವರೆಗೂ ದೊಡ್ಡ ಮನುಷ್ಯ
ಸತ್ತ ಮೇಲೆ ಬರಿಯ ಕಳೆ ಬರ

ಹೀಗೆ ಆಲೋಚನೆಗಳು ಮೂಡಿ
ವೈರಾಗ್ಯ ತುಂಬಿ , ಜೀವನ ನಶ್ವರ
ಆತ್ಮ ಶಾಶ್ವತ, ಇನ್ನೇಕೆ ಆಸ್ತಿ ಹಣ ವ್ಯಾಮೋಹ
ಮನುಷ್ಯ ಎಂದಿದ್ದರೂ ಹೊತ್ತಿಕೊಂಡು
ಹೋಗೋದಿಲ್ಲ ಸತ್ತಾಗ ಏನನ್ನೂ
ಒರೆಸಿಕೊಂಡು ಕಣ್ಣಾ

ಶ್ರೀ ಹರಿವರಾಸನಾಷ್ಟಕಂ

ನಾನು ಮಾಲೆ ಹಾಕಿಕೊಂಡು ಅಯ್ಯಪ್ಪನ ವ್ರತ ಆಚರಿಸಿ ಶಬರಿಮಲೆಗೆ ಹೋಗುತ್ತಿರುವ ವಿಷಯ ನಿಮಗೆ ಗೊತ್ತಿರಬಹುದು.
ಇಂದು ದೈನಂದಿನ ಪೂಜೆ ಮುಗಿಸಿ ಅಯ್ಯಪ್ಪನ ಹಾಡುಗಳನ್ನು ಕೇಳುತ್ತಿದ್ದೆ. ಅಂತರ್ಜಾಲದಲ್ಲಿ ಹೀಗೇ ಯೂಟ್ಯೂಬ್.ಕಾಂ ಅಲ್ಲಿ ಅಯ್ಯಪ್ಪನ ಕೀರ್ತನೆಗಳನ್ನು ಹುಡುಕುತ್ತಿದ್ದಾಗ ಸಿಕ್ಕ ದೇವರನಾಮ ಇದು. ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ ಆಯ್ತು.
ಹಾಗಾಗಿ ಇಲ್ಲಿ ದೇವರನಾಮ ಮತ್ತು ಅದರ ವೀಡಿಯೋ ಮತ್ತು ಈ ದೇವರನಾಮದ .mp3 Format ಕೊಂಡಿ ಇಲ್ಲಿ ಸೇರಿಸಿದ್ದೇನೆ.

ಈ ಹಾಡು ಅಯ್ಯಪ್ಪನಿಗೆ ಲಾಲಿ ಹಾಡಿನ ತರಹ. ಹಾಗಾಗಿ ಈ ದೇವರನಾಮವನ್ನು ರಾತ್ರಿಹೊತ್ತು ಹೇಳಿಕೊಂಡರೆ ಒಳ್ಳೆಯದು.

ಹಾಡಿನ ವೀಡಿಯೋ ಇಲ್ಲಿದೆ.

ನನ್ನವಳು ಮತ್ತು ನಾನು

ದಿನವೂ ನೋಡುತ್ತಿದ್ದೇನೆ
ಹೊಳೆವ ತಾರೆಯೆಡೆಗೆ
ಕೈಗೆ ಸಿಕ್ಕೀತೆಂಬ ಭ್ರಮೆಯಿಂದ
(ನಿಜ ಅದು ಭ್ರಮೆ)

ದೂರ ತೀರಕೆ ಸಾಗಿಬಿಡು
ಮರೆತು ಬಿಡು, ನಡೆದು ಬಿಡು
(ಸಾಧ್ಯವೇ ಇದು?)

ಅನುಭವಿಸಿದ್ದು ನೆನಪು,
ಕನವರಿಸಿದ್ದು ಒನಪು,
ಬೇಸರಿಸಿದ್ದು ಬಿಸುಪು,
ಜೀವದ ತುಂಬಾ ಇದೇ ಅಂಕ

ದೂರತೀರಕೆ ಸಾಗಿಬಿಡು
ಅಲೆಯಾಗಿ, ಕಲೆಯಾಗಿ ಬಿಡು

ಒಲವದೊಂದು ಕಂಪನ
ಹಣೆಗೊಂದು ಚುಂಬನ