ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನನ್ನ ಹಿಂದೂ ದ್ವಂದ್ವ

ನಾನೊಬ್ಬ ಹಿಂದೂ.
ವೇದ ,ಶಾಸ್ತ್ರ ಓದಿಕೊಂಡಂಥ ಸಂಪ್ರದಾಯಸ್ಥ ಕರ್ಮಠ ಹಿಂದೂ ಅಲ್ಲ. ಏನೋ ಅಲ್ಪ ಸ್ವಲ್ಪ ತಿಳಿದುಕೊಂಡು, ಆದಷ್ಟು ಆಗಾಗ ಆಚಾರ ಮಾಡಿಕೊಂಡು ಬದುಕಿರುವವನು.
ನನಗೆ ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿಯ ಜಾಗದಲ್ಲಿ ಮಸೀದಿಯ ಬದಲು ದೇವಸ್ಥಾನ ಇದ್ದರೆ ಚೆನ್ನಾಗಿರುತ್ತದೆ ಅನ್ನಿಸುತ್ತದೆ. ಆದರೆ, ಅದಕ್ಕಾಗಿ ಅಲ್ಲಿರುವ ಮಸೀದಿ ಬಲವಂತವಾಗಿ ಒಡೆಯಬೇಕಾಗಿತ್ತೆ ಎಂಬ ಬಗ್ಯೆ ಅನುಮಾನ ಇದೆ.
ಗೋಧ್ರಾದಲ್ಲಿ ೫೦-೬೦ ಹಿಂದೂಗಳನ್ನು ಕೊಂದದ್ದು ಕೇಳಿ ಬಹಳ ಬೇಜಾರಾಗುತ್ತದೆ. ಆದರೆ ಅದರನಂತರದ ಮತೀಯ ಗಲಭೆ ಬಗ್ಯೆ ಓದಿ ಇನ್ನೂ ಹೆಚ್ಚು ಬೇಜಾರಾಗುತ್ತದೆ. ಅದರ ಬಗ್ಯೆ ಪತ್ರಿಕೆಗಳಲ್ಲಿ ಟಿ.ವಿಯಲ್ಲಿ , ಅದರಲ್ಲೂ ಇಂಗ್ಲೀಷ್ ಭಾಷೆಯವುಗಳಲ್ಲಿ ನೋಡಿ ಹೀಗಾಗಬಾರದಿತ್ತು ಅನ್ನಿಸುತ್ತದೆ. ಆದರೆ, ಅದನ್ನೇ ಮತ್ತೆ ಮತ್ತೆ ಹೇಳುವುದು, ಬರೆಯುವುದು, ತೌಡು ಕುಟ್ಟುವುದು ನೋಡಿ ರಗಳೆಯೂ ಆಗುತ್ತದೆ. ಅದರೊಂದಿಗೇ, ಗೋಧ್ರಾದಲ್ಲಿ ಸತ್ತವರ ಬಗ್ಯೆ ಸುದ್ದಿಯೇ ಬರುವುದಿಲ್ಲವಲ್ಲ ಎಂದು ಸೋಜಿಗವೂ ಆಗುತ್ತದೆ.
ಮಿಷನರಿಗಳ ಮತಾಂತರದ ಬಗ್ಯೆ ಅಸಮಾಧಾನವಾಗುತ್ತದೆ. ಇದರ ಬಗ್ಯೆ ಯಾಕೆ ನಮ್ಮ ಪತ್ರಿಕೆಗಳಲ್ಲಿ ಬರುವುದೇ ಇಲ್ಲವಲ್ಲ ಅಂತ ಮತ್ತೆ ಅಚ್ಚರಿಯಾಗುತ್ತದೆ. ಆದರೆ , ಮಿಷನರಿ ಸಂಸಾರವನ್ನು ಜೀವಂತ ಸುಟ್ಟಾಗ ಛೇ , ಎಂಥಾ ಹೇಯ ಕೆಲಸ ಅಂತ
ಮನಸ್ಸು ಹಳಹಳಿಸುತ್ತದೆ.
ಮಂಗಳೂರಿನಲ್ಲಿ ಪಬ್ಬಿನ ಗಲಭೆ ಓದಿ ಎಂಥಾ ಗೂಂಡಾಗಳು ಈ ಶ್ರೀರಾಮ ಸೇನೆಯವರು ಎಂದು ಸಿಟ್ಟು ಬರುತ್ತದೆ. ಹಿಂದೂ ಸಂಸ್ಕೃತಿಗೆ ಮಸಿ ಬಳಿಯುತ್ತಿದ್ದಾರಲ್ಲಾ ಎಂದು ವ್ಯಥೆಯಾಗುತ್ತದೆ. ಆದರೆ ಟಿವಿ ಛಾನಲ್ಲುಗಳಲ್ಲಿ , ಪತ್ರಿಕೆಗಳಲ್ಲಿ ಅದರ ಬಗ್ಯೆ ಪ್ರತಿಕ್ರಿಯೆ , ಆಕ್ರೋಶ , ಪಬ್ ಭರೋ, ಪಿಂಕ್‌ ಚಡ್ಡಿ ಅಂದೋಲನ ಇತ್ಯಾದಿ ಇತ್ಯಾದಿ ನೋಡಿ , ಇಷ್ಟೆಲ್ಲಾ ದೇಶಾದ್ಯಂತ ಪ್ರತಿಕ್ರಿಯೆ ಮಾಡುವಷ್ಟು ಇದರಲ್ಲಿ ಏನಿತ್ತು ಎಂದು ಅರ್ಥವಾಗುವುದಿಲ್ಲ.

ಇತಿಹಾಸದಲ್ಲಿ ನಡೆದ ತಪ್ಪುಗಳು

ಹಿಂದೊಮ್ಮೆ ತರಂಗ ವಾರಪತ್ರಿಕೆಯಲ್ಲಿ "ಇತಿಹಾಸದಲ್ಲಿ ನಡೆದ ತಪ್ಪುಗಳು" ಎಂಬ ಲೇಖನ ಮಾಲಿಕೆ ಪ್ರಕಟಗೊಂಡಿತ್ತು. ಲೇಖಕರು ಬಹುಶಃ ಎಂ.ವಿ ಕಾಮತ್. ಇದು ಪುಸ್ತಕ ರೂಪದಲ್ಲಿ ಅಥವ ಅಂತರ್ಜಾಲದಲ್ಲಿ ಲಭ್ಯವಿದೆಯೆ? ನಿಮ್ಮಲ್ಲಿ ಮಾಹಿತಿಯಿದ್ದರೆ ಕೊಡಿ.

ನಾ "ಅವಳ್" ಆದಾಗ...!!!

ಈ ಕಥೆ ನಮ್ಮ ಗುಂಡಣ್ಣನಿಂದ ಪ್ರಾರಂಭವಾಗುತ್ತದೆ. ಅವನಿಗೊ ತನ್ನ ಹೆಂಡತಿ ಗುಂಡಮ್ಮ ಸದಾ ಕಾಲ ಮನೆಯಲ್ಲಿದ್ದು ತಾನು ಮಾತ್ರ ಕತ್ತೆಯ ಹಾಗೆ ದುಡಿಯುವ ಪ್ರಾರಬ್ಧತೆಯ ಮನಗೊಂಡು,
ಬಳಲಿ.., ಬೆಂಡಾಗಿ ( ಮನಸ್ಸಿನಲ್ಲಿ ದುಖಿಯಾಗಿಯೂ ಸಹಾ...! :) )
ತನ್ನ ಕಷ್ಟವೆನೆಂದು ತನ್ನ ಹೆಂಡತಿಗೆ ತಿಳಿಯಲಿ ಅಂತ ಒಂದು ದಿನ ದೇವರ ಸಾಕ್ಷಾತ್ಕಾರಕಾಗಿ "ಬೇವಿನ ಮರದ" ಕೆಳಗೆ ತಪಸ್ಸನ್ನು ಅಚರಿಸುತ್ತಾನೆ ( ಬೇವಿನ ಮರ ಏಕಂದರೆ ಆದು ಅವನ ಪತ್ನಿ ನೆಟ್ಟಿದು, ಅದನ್ನು ನೋಡಿಯಾದರೂ ದೇವರು ಬೇಗ ವರ ಕೊಡಲಿ ಅಂತಾ...!)
............................
ದೇವರು ತನ್ನ ಭಕ್ತನ ಮನೋಭಿಲಾಶೆಯ ಪೂರೈಸಲೆಂದು ಧರೆಗೆ ಓಡೋಡಿ ಬಂದಿರಲು, ಗುಂಡನ ಎದುರು ಪ್ರತ್ಯಕ್ಷನಾದನು...
ಗುಂಡ: " ಓ ದೇವಾ, ಸದಾ ಕಾಲ ನಾನೇ ಕತ್ತೆಯ ಹಾಗೆ ದುಡಿಯುತ್ತಾ ನನ್ನ ಹೆಂಡತಿ ಮನೆಯಲ್ಲಿ ಸುಮ್ಮನೆ ಕುಳಿತಿರುವುದನ್ನು ನೋಡಲು ನನಗೆ ಸಾಧ್ಯವಿಲ್ಲ , ಅದಕೆ ನಮ್ಮ ಇಬ್ಬರ ದೇಹವನ್ನು ಒಂದು ದಿನಕೋಸ್ಕರ ಅದಲು-ಬದಲು ಮಾಡಿಬಿಡು...!"
ದೇವನು ಗುಂಡನ ಈ ವಿಚಿತ್ರ ಕೋರಿಕೆಗೆ ನಕ್ಕು...
"ಹುಂ ... ತತಾಸ್ತು" ಎಂದು ಅಂತರ್ಧಾನನಾದನು....!
ಮರುದಿನ....
........................
ಗುಂಡ ಗುಂಡಮ್ಮನಾಗಿದ್ದಳು....!

ರಥವನೆಳೆಯುವ ಬಾ!

ಕ್ಯಾಮರಾ ಕೈಗೆ ಬಂದಾಗಲಿಂದ ಅದನ್ನ ಕ್ಲಿಕ್ಕಿಸಲಿಕ್ಕೆ ಬಿಟ್ರೆ ಬೇರೆ ಕಲಿತದ್ದು ಕಮ್ಮಿ. ಆದ್ರೂ ಆಗಾಗ ಅದರಲ್ಲಿ ತಗೆದ ಚಿತ್ರಗಳಲ್ಲಿ ಕೆಲವನ್ನ ಹೆಕ್ಕಿತೆಗೆದುನೋಡಿದಾಗ, ಚೆನ್ನಾಗಿದೆ ಅನ್ನಿಸಿದಾಗ ಇನ್ನೂ ಚೆನ್ನಾಗಿ ತಗೀಬಹುದಿತ್ತು ಅನ್ನಿಸ್ಲಿಕ್ಕೆ ಶುರುವಾಯ್ತು. ಇರಲಿ.

ಆದೀತು ಇದು ಬರೇ ನಾಯಿಗಳ ಜಗಳ!!

ಒಳ ಚಡ್ಡಿಗೆ ಬದಲಾಗಿ ಸೀರೆಯ ಕೊಡುವೆ ಎಂಬರು
ಚಡ್ಡಿಯನೇ ಬಿಚ್ಚಿ ಕೊಟ್ಟವರು ಸೀರೆ ಏಕೆ ಕೊಂಬರು?

ದೇಶದ ಮಾನ ಮರ್ಯಾದೆಯನೆಲ್ಲ ಹಾಕಿ ಹರಾಜು
ಇವರೇಕೆ ಮಾಡಲು ಹೊರಟಿದ್ದಾರೆ ಹೀಗೆ ಮೋಜು?

ನಿರುದ್ಯೋಗಿಗಳು ಈ ನಾಡಿನಲಿ ದಿನದಿನವೂ ಹೆಚ್ಚಲು
ಈ ದೊಂಬರಾಟ ನಡೆಸುತ್ತಾರೆ ನಾಲ್ಕು ಜನ ಮೆಚ್ಚಲು

ಹೊರ ಆತಂಕವಾದಿಗಳಿದಿರು ಯಾರೂ ಕಾದಾಡಲಾರರು

ಬರಾಕ್ ಓಬಾಮ ಅಂದ್ರೆ ಈಗ ಹೇಂಗಿದಾರೆ ಗೊತ್ತಾ ?

ಸಂಪದೀಗರೇ

 

 

ಅಮೇರಿಕಾ ಅಧ್ಯಕ್ಷಪಟ್ಟವನ್ನಲಂಕರಿಸಿದ ಬರಾಕ್ ಓಬಾಮ ಹೇಗಿದ್ದಾರೆಂದು ಈಗ ಗೊತ್ತೇ ?

..........

 

 

 

 

..............................

 

 

 

 

...........................................................

ಬರಾಕ್ ಓಬಾಮ

:)

 

ಶಬ್ಧ ಮಾಲಿನ್ಯ ಹೋಗಲಾಡಿಸಿ

ಬೆಂಗಳೂರು ನಗರ ನಿವಾಸಿಗಳಿಗೆ ನಿದ್ದೆಗೆಡಿಸುವುದು ವಾಹನದ ಗಲಾಟೆಯಿಂದ. ಅದರಲ್ಲೂ ಮುಖ್ಯವಾಗಿ ರಿಕ್ಷಾಗಳಿಂದ. ಸಾಲುಗಟ್ಟಿ ಬರುವ ರಿಕ್ಷಾಗಳು, ಅವುಗಳಿಂದ ಬರುವ ಶಬ್ಧ ಎಂಥವರಿಗೂ ಬೇಸರವನ್ನುಂಟು ಮಾಡುತ್ತವೆ. ಈ ಎಲ್ಲಾ ರಿಕ್ಷಾಗಳನ್ನು ವಿದ್ಯುತ್ ಚಾಲಿತ ರಿಕ್ಷಾಗಳನ್ನಾಗಿ ಪರಿವರ್ತಿಸಬೇಕು.

ಶಬ್ಧ ಮಾಲಿನ್ಯ ಹೋಗಲಾಡಿಸಿ

ಬೆಂಗಳೂರು ನಗರ ನಿವಾಸಿಗಳಿಗೆ ನಿದ್ದೆಗೆಡಿಸುವುದು ವಾಹನದ ಗಲಾಟೆಯಿಂದ. ಅದರಲ್ಲೂ ಮುಖ್ಯವಾಗಿ ರಿಕ್ಷಾಗಳಿಂದ. ಸಾಲುಗಟ್ಟಿ ಬರುವ ರಿಕ್ಷಾಗಳು, ಅವುಗಳಿಂದ ಬರುವ ಶಬ್ಧ ಎಂಥವರಿಗೂ ಬೇಸರವನ್ನುಂಟು ಮಾಡುತ್ತವೆ. ಈ ಎಲ್ಲಾ ರಿಕ್ಷಾಗಳನ್ನು ವಿದ್ಯುತ್ ಚಾಲಿತ ರಿಕ್ಷಾಗಳನ್ನಾಗಿ ಪರಿವರ್ತಿಸಬೇಕು.

ಏರ್ ಇಂಡಿಯಾ ಶೋ ಟಿಕೆಟ್

ಏರ್ ಇಂಡಿಯಾ ಶೋ ಗೆ ಹೋಗಬೇಕೆಂಬುದು ನನ್ನ ಹಳೆಯ ಆಸೆ. ಟಿಕೆಟ್ ಎಲ್ಲಿ ದೊರೆಯುತ್ತವೆ. ಹೇಗೆ ಪಡೆಯಬೇಕು ? ಹಾಗೂ ಟಿಕೆಟ್ ನ ದರ ಎಷ್ಟು ಎಂದು ಯಾರಾದರೂ ದಯವಿಟ್ಟು ನನಗೆ ಮಾಹಿತಿ ನೀಡಿ...