ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನವನೀತ

ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಬಂದನು ಮುದ್ದು ಕೃಷ್ಣ
ಬೆಣ್ಣೆ ಮುದ್ದೆ ಕದ್ದು
ತಿನ್ನೋ ಕಳ್ಳ ಕೃಷ್ಣ !

ನವಿಲ ಗರಿಯ ಸೊಗಸಿಗೆ
ಮನಸೋತ ಕೃಷ್ಣ
ತೆಗೆದು ತಲೆಯೊಳಿರಿಸಿ
ಮೆರೆವ ಪುಟಾಣಿ ಕೃಷ್ಣ

ಬಾರೋ ಬಾರೋ ನನ್ನ ಬಳಿ
ಬೇಗನೆ ಕೃಷ್ಣ
ಹಾಲು ಮೊಸರು ಬೆಣ್ಣೆ ಕೊಡುವೆ
ತಿನ್ನೋ ಕೃಷ್ಣ
***

ಜ್ಞಾನಪೀಠಿ ನರೇಂದ್ರ

ಬೆಳಿಗ್ಗೆ ಎದ್ದು ಕೂತವನಿಗೆ ಏನೋ ಒಂದ್ ಥರಾ.. ಅಗ್ತಾ ಇತ್ತು.....
ಮನೆಯವಳಿಗೆ "ಲೈ ಪುಟ್ಟಾ" ಯಾಕೋ ಒಂಥರಾ ಅಗ್ತಾ ಇದೆ ಕಣೆ"
"ಈ ವಯಸ್ಸಲ್ಲಿ ಹಾಗೆ ಆಗೋದು ಸುಮ್ಮನೆ ಎದ್ದು ಬರ್ರೀ"
"ಲೈ ನೋವಲ್ಲ ಕಣೆ" ಎನ್ನುವಾಗಲೆ "ಮತ್ತೇನ್ರ್ರೀ ನಿಮ್ಮದು, ೬೦ ಆಗುತ್ತಾ ಬಂತು" ಎಂದವಳೆ ನನ್ನೆದುರಿಗೆ ನನ್ನ ಪ್ರೀತಿಯ ಹಾಲು ಸಕ್ಕರೆಗಳಿಲ್ಲದ ಕಾಫಿ ತಂದಿಟ್ಟಳು.

ಬದುಕು

ಬದುಕು ಮತ್ತು ಬಾಳು ಬೇರೆ ಬೇರೆ - ಬದುಕು ವ್ರುದ್ಧಿ , ಬಾಳು ಸಿದ್ಧಿ
ತಾ೦ತ್ರಿಕ ಶಿಕ್ಶಣ ಬದುಕಿಗಾಗಿ - ಆಧ್ಯಾತ್ಮಿಕ ಶಿಕ್ಶಣ ಬಾಳಿಗಾಗಿ

ಆಟಿಕೆಗಳು

ಮಗುವೇ, ನೀನೆಷ್ಟು ಸುಖಿ ಆ ಮಣ್ಣಿನಲ್ಲಿ
ಆಟವಾಡುತ ಈ ಮುಂಜಾವಿನಲ್ಲಿ
ಆ ಮುರಿದ ಕಡ್ಡಿಯ ಜೊತೆಯಲಿ
ಬೆರೆಯಿತೆನ್ನ ಮುಗುಳ್ನಗೆ ನಿನ್ನಾಟದಲಿ

ನಾ ಮುಳುಗಿಹೆನು ನನ್ನ ಲೆಕ್ಕಪತ್ರಗಳಲಿ
ನೀ ನನ್ನತ್ತ ನೋಡಿದರೆ ಭಾವಿಸಬಹುದು
'ಇದೆಂಥಾ ಆಟವಯ್ಯಾ ನಿನ್ನದು,
ಚೆಂದದ ಬೆಳಗೊಂದು ಹಾಳಾಗಿಹುದು'

ಮಗುವೇ, ಮರೆತಿದ್ದೇನೆ ನಾ ಮಣ್ಣು ಮರಳನ್ನು

ರೈಲ್ವೆ ಬಜೆಟ್

ಸಂಪದಿಗರೇ ಇಂದು ರೈಲ್ವೆ ಬಜೆಟ್.

ಕಳೆದ ಬಾರಿ ಕರ್ನಾಟಕಕ್ಕೇ ಶೂನ್ಯವನಿತ್ತ ಲಾಲು ಈ ಬಾರಿಯೇನಾದರು ನೀಡುವರೆ ಕಾದು ನೋಡಬೇಕು.
ಏನು ಬಜೆಟ್ ದಿನ ಬೇಡಿಕೆ ಇಟ್ಟರೆ ಪ್ರಯೋಜನವೇನು ಎನ್ನಬೇಡಿ. ಇದು ಹಲವು ವರ್ಷಗಳಿಂದ ಕೇಳಿಬರುತ್ತಿರುವ ಬೇಡಿಕೆಗಳು.

ನನ್ನ ಇಚ್ಛೆಗಳು:

ಹೀಗೆ ಸುಮ್ಮನೆ ನನ್ ಸ್ವಾದ

ನನ್ನೊಬ್ಬ ಹಿಂದುವಿನ ಬಗ್ಗೆ ಮಾತಾಡಿದರೆ ನಾನು ಬಾಜಪ ಮತ್ತು ಕೋಮುವಾದಿ....ಕಾಂಗ್ರೆಸ್ವಾದ
ಬೇರೆ ಧರ್ಮದವರ ಬಗ್ಗೆ ಮಾತಾಡಿದರೆ ನಾನು ಅಲ್ಫಸಂಖ್ಯಾತರ ಓಲೈಕೆ ವೋಟು ಬ್ಯಾಂಕ್ ಗಾಗಿ....ಬಾಜಪಸ್ವಾದ
ಕಾರ್ಮಿಕರ ಬಗ್ಗೆ ಮಾತಾಡಿದರೆ ನಾನು ಪಕ್ಕ ಕಮ್ಯೂನಿಸ್ಟ್ಸ್ವಾದ
ಸಾಮಾಜಿಕ ಕಳಕಳಿ ಇದ್ದಲ್ಲಿ ನಾನೊಬ್ಬ ಸಮಾಜವಾದೀಸ್ಟ್ಸ್ವಾದ

ದ್ವಂದ್ವ

ಇದ್ದೇನೆ ,
ನನಗೋಸ್ಕರ
ಒಮ್ಮೊಮ್ಮೆ ಅದೂ ಅಲ್ಲ.
ಏಕಾಗಿ ಹೀಗೆ
ಬರೀ ಗೊಂದಲ?
ಅಲೆಮಾರಿ,
ಗೋವೆಯ ಹಿಪ್ಪಿಯಂತೆ.
ಬಟ್ಟೆ ಒಮ್ಮೆ ಉಂಟು
ಒಮ್ಮೆ ಇಲ್ಲ.
ಇದ್ದೂ ಇಲ್ಲದಂತೆ
ಛೆ! ನಾ ಹಿಪ್ಪಿಯಲ್ಲ.
ಆಕಳಿಕೆ,ತೂಕಡಿಕೆ
ಕಣ್ಬಿಟ್ಟರೆ
ಅದೇ ಪ್ರಪಂಚ,
ನಿತ್ಯ ಜಂಜಾಟ , ಬೇಸರಿಕೆ,
ಆದರೂ ಅದೇ ಬೇಕು.
ಬೆತ್ತಲೆಯಲ್ಲೂ ಸುಖವಿದೆ.
ಕೆಲವೊಮ್ಮೆ ಅಸಹ್ಯವಿದೆ.
ಬರೀ ದ್ವಂದ್ವ
ಖಚಿತ ಅಸಾಧ್ಯ.

ಪ್ರೇಮಕ್ಕೆ ಜಿಂದಾಬಾದ್ - ಮತ್ತು, ಒಂದು (ಹಳೆಯ) ಪ್ರೇಮ ಕವನ

ಎಲ್ಲಾ ಹಾಲಿ-ಮಾಜಿ ಪ್ರೇಮಿಗಳಿಗೂ, ವಿರಹಿಗಳಿಗೂ, 2009 ರ "ಪ್ರೇಮಿಗಳ ದಿನ"ದ ಶುಭಾಶಯಗಳು.

ಎಲ್ಲ ಪ್ರೇಮಿಗಳಿಗೆ -

ಬಿಕ್ಕಿ ಬಿಕ್ಕಿ ಅಳುವುದರಿಂದ,
ಉಕ್ಕಿಬರುವುದೋ ಗೆಳೆಯ ಪ್ರೀತಿ?
ಪ್ರೀತಿಯೊಂದು ಪುಟ್ಟ ರಾಕ್ಷಸಿ,
ಕಣ್ಮಿಟುಕಿಸಿ ಮರೆಯಾಗುವ ಪ್ರೇಯಸಿ,
ಬೇಡವೆಂದರೂ ನಿನ್ನ ತುಂಟ ಕಂಗಳ ಬಿಟ್ಟುಹೋಗಲಾರದು ದೂರಿಸಿ,
ಇಳಿಸಿಬಿಡು ನಿನ್ನ ಮನದ ಹಂಬಲವನ್ನು,
ಏನಿಯೋಂದ ನಾ ಹಿಡಿಯುವೆ,
ತೆರೆದುಬಿಡಲು ಅವಳ ಮನದ ಬಾಗಿಲನ್ನು,
ಜಡಿಮಳೆಯಲ್ಲಿ,
ನಿನ್ನ ಕಣ್ಣೆದುರು ಸಿಗಲು..

ಗುರುವಿಗೆ to Jayanth Kaikini Sir....

ನಿಮಗಾಗಿ ನನ್ನ ಹುಡುಕಾಟ,
ನನ್ನ ಕನಸುಗಳಿಗೆ ರೆಕ್ಕೆ ನೀಡಲು,
ನಿಮಗಾಗೆ ನನ್ನ ಉಸಿರಾಟ,
ನನ್ನ ಮೌನವು ಬಾಯಿಬಿಡಲು.

ಪ್ರಶಾಂತತೆಯಲ್ಲಿ ಉದ್ದಕ್ಕೂ ಹರಿಯುತ್ತಿದೆ,
ನನ್ನೊಳಗಿನ ಪ್ರೀತಿ;
ನಿಮ್ಮ ಹೃದಯ ಸ್ಪರ್ಶಿ ಕವಿತೆಗಳಿಂದ.
ಇಲ್ಲಿನ ಸ್ಲಂ ಗೂಡು ಮನೆಗಳಲ್ಲಿ,
ಮರೆಯಲಾಗದ ಸಂಗತಿಗಳು,
ಒಳಗೊಳಗೆ ಉಸಿರಾಡುತ್ತಿದೆ,
ನಿಮ್ಮ ಅನಿಸುತ್ತಿದೆ ಸಾಹಿತ್ಯದಿಂದ.