ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರೇಮಿಗಳ ದಿನದಬಗ್ಗೆ ಮಿತ್ರನಿಂದ ಒಂದು ಪತ್ರ

ಮಿತ್ರ ಡ್ಯಾನಿ ಪೆರೇರಾ ವಿಜಯಕರ್ನಾಟಕಕ್ಕೆ ಬರೆದ ಪತ್ರದ ನಕಲನ್ನು ನನಗೂ ಮೇಲ್ ಮಾಡಿದ್ದರು.ಅದನ್ನು ಯಥಾವತ್ತಾಗಿ ಹಾಕಿರುವೆ.  
-There are two great men in this
world. One was Mahathma Gandhi another one is myself. He was an example, I am a
warning
ಮಧ್ಯಪಾನ ದುಷ್ಪರಿಣಾಮದ ಬಗ್ಗೆ ಟಿ.ಪಿ.ಕೈಲಾಸಂ ಅವರು ಬೆಂಗಳೂರಿನ ನ್ಯಾಶನಲ್ ಕಾಲೇಜುಆವರಣದಲ್ಲಿಮಾಡಿದಭಾಷಣದಲ್ಲಿ ಹೇಳಿದ ಮಾತಿದು.  

ಹಾವು (ಡಿ.ಎಚ್.ಲಾರೆನ್ಸ್ ನ snake ಪದ್ಯದ ರೂಪಾಂತರ)

 

ಹಾವು

ಮಳ್ಳು ಹಿಡಿದ ಹಗಲ ಝಳದಲ್ಲಿ

ಹಾವೊಂದು ನೀರಿಗೆ ಇಳಿಯಿತು

ಕೆರೆಯಲ್ಲಿ ಈಜುತ್ತಿದ್ದ ನನ್ನ ಜೊತೆಗೆ. . . .

 

ಮನೆಯ ಮುಂದೇ ಇರುವ ಈ ಕೆರೆಗೆ

ಮೆಟ್ಟಿಲಿಳಿದು ಈಜಿಗೆ ಬಿದ್ದವನಿಗಡ್ಡಿಪಡಿಸಲಿಲ್ಲ

ಸರದಿ ಬರುವವರೆಗೂ  ಕಾಯಬೇಕೆಂಬ ನಿಯಮ. . . .

 

ಸಣ್ಣಬಿರುಕಿಂದೆಲ್ಲಿಂದಲೋ ತೂರಿಬಂದು

ಉಡುಪಿ: ಮತ್ತಷ್ಟು ಚಿತ್ರಗಳು

ಉಡುಪಿಯ ಮತ್ತಷ್ಟು ಚಿತ್ರಗಳು - ಡಿಸೆಂಬರ್ ಆರ್ಕೈವಿನಿಂದ:

ಮಠಗಳ ಫೋಟೋ ಹೊಡೆಯುತ್ತ ಉತ್ತರಾದಿ ಮಠಕ್ಕೆ ಬಂದಾಗ ಅದೇನೋ ಒಳ ಹೋಗಿ ಒಂದೆರಡು ಫೋಟೋ ಹೊಡೆಯೋಣ ಅನ್ನಿಸಿತು. ಉತ್ತರಾದಿ ಮಠದಲ್ಲಿ ನಮ್ಮ ಅಜ್ಜ ಡ್ರೈವರ್ ಆಗಿದ್ದರಂತೆ. ಹೀಗಾಗಿ ಯಾವ ಮಠ ಇದು ಎನ್ನುವ ಕುತೂಹಲವಿತ್ತು.

ಅಲ್ಲಿತ್ತು ಈ ಕರು.

ಮಾರ್ಗದರ್ಶಿ

ಓಂ ಶಿವಪ್ರಕಾಶ್‍ರವರ ಚಿತ್ರ ನೋಡಿದಾಗ ನನ್ನಲ್ಲಿ ಮೂಡಿದ ಭಾವನೆ ಇದು.
ಮಾರ್ಗದರ್ಶಿ
ಚಂದಿರನೆತ್ತರಕ್ಕೇರುವಾಸೆ
ಒಮ್ಮೆಲೇ ಆಗಸಕೆ ಹಾರುವಾಸೆ
ನನ್ನ ಕಲ್ಪನೆಯ ಕುದುರೆಯೇರಿ
ಬಲವಾದ ರೆಕ್ಕೆಗಳೆರಡನಗಲಿಸಿ
ಹಾರಿ ಚಂದ್ರಮನ ಹಿಡಿಯುತ್ತಾ
ಚೆಂಡಾಗಿ ಕೈಯಲಿಟ್ಟಾಡುತ್ತಾ
ಆಗದೇ ಇದ್ದರೂ ಚಂದ್ರನೆಡೆಗೆ
ಕೈಚಾಚಿ ಹಿಡಿಯಲೆತ್ನಿಸುತ್ತಿರುವ
ಆಮರದ ಟೊಂಗೆಯನು ಕಂಡಾಗ

ಹೀಗೊಂದು ದಂತಕಥೆ

ಗೋಕರ್ಣದ ಹತ್ತಿರ ಇರೋ ಭಾವನ ಊರು ಬಂಕಿಕೊಡ್ಲಕ್ಕೆ ಹೋಗಿ ಹಿಂದಿರುಗುತ್ತಿದ್ದಾಗ ನಡೆದ ’ಸತ್ಯ ಘಟನೆ’ ಇದು!!!!
ಸಕುಟುಂಬ ಸಪರಿವಾರ ಸಮೇತ ಹೋಗಿ ಪೂಜೆ, ಹೋಮ - ಹವನ ಇವುಗಳಲ್ಲಿ ಭಾಗವಹಿಸಿ ರಾತ್ರಿ ಐರಾವತದಲ್ಲಿ ಬೆಂಗಳೂರಿಗೆ ವಾಪಸ್ ಬರ್ತಿದ್ವಿ.
ಸಕುಟುಂಬ ಅಂದ್ಮೇಲೆ ನಮ್ಮಜ್ಜಿ ಕೂಡ ಜೊತೆಗಿದ್ದರು, ಅಜ್ಜಿ ಜೀವನದಲ್ಲಿ ಬಹಳಷ್ಟು ನೊಂದು ಫೀನಿಕ್ಸ್ ಹಕ್ಕಿಯಂತೆ ಮೇಲೆದ್ದು; ಚಿಮ್ಮುವಂತಹ ಜೀವನ ಪ್ರೀತಿ ಮತ್ತು ಜೀವನೋತ್ಸಾಹ ಹೊಂದಿರೋವ್ರು. ವಯಸ್ಸಾದ ಇವ್ರಿಗೆ ಈಗ ಕಾಣೋದು ಒಂದೇ ಕಣ್ಣು ಅದೂ ಮಸುಕು-ಮಸುಕಾಗಿ, ಕೇಳೋದು ಒಂದೇ ಕಿವಿ ಅದೂ ಅಲ್ವ ಸ್ವಲ್ಪ. ಇವರ ಜೀವನೋತ್ಸಾಹ ಎಷ್ಟರಮಟ್ಟಿಗೆ ಅಂದರೆ ನಮ್ಮಂಥಾ ದೈಹಿಕವಾಗಿ, ಮಾನಸಿಕವಾಗಿ ತೊಸಕಲು ಆಗಿರುವವರಿಗೆಲ್ಲ ಮಾದರಿ ಆಗೋಷ್ಟು. ನಾವೆಲ್ಲಾ ಎಲ್ಲಿಗಾದರೂ ಊರಿಗೆ ಹೊರತರೆ ಅವರೂ ಎವರ್ ರೆಡಿ. ಕೈಲಾಗದ (ನಮ್ಮ ಪ್ರಕಾರ) ಇವರು ಯಾಕಪ್ಪ ಒಪ್ಪಿಕೋತಾರೆ ಅಂತ ಬಹಳಷ್ಟು ಬಾರಿ ಕಿರಿ ಕಿರಿ ಆದರೂ, ಕರೆದೊಯ್ಯುವುದನ್ನ ನಾವೂ ಬಿಟ್ಟಿಲ್ಲ, ಅವರೂ ಬರೋಲ್ಲ ಅಂದಿಲ್ಲ.
ಹೀಗೆ ನಮ್ಮ ಜೊತೆ ಬರೋ ಅಜ್ಜಿ, ಎಷ್ಟೇ ಒಳ್ಳೇ ಬ್ಯಾಗ್, ಸೂಟ್ ಕೇಸ್ ಇದ್ರೂ ತಮ್ಮ ಬಟ್ಟೆ ಬರೆ ತುರುಕಿಕೊಳ್ಳೋದು ಮಾತ್ರ ಒಂದು ಪ್ಲಾಸ್ಟಿಕ್ ಕವರ್ ಅಥವಾ ಕ್ಲೋಸ್ ಮಾಡಲಾಗದ ವಿಚಿತ್ರ ಚೀಲಗಳಲ್ಲೇ!!

೧೫ ವರುಷದ ತಾಯಿಗೆ ೧೩ ವರುಷದ ಗಂಡ!!??

೧೫ ವರುಷದ ತಾಯಿ ಈಕೆ
ಮಗುವಿನ ತಂದೆಗೆ ೧೩ ವರುಷ
ಛೆ...ಇದು ಕಲಿಯುಗ ಸ್ವಾಮೀ..
ಇಲ್ಲಿ ಓದಿ.

http://www.in.com/news/readnews-Lifestyle-babyfaced-boy-is-a-father-at-13-8006519-3dfac9b759a3d58aa63de445c05a876b3c7a0438-rhp.html