ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಒಂದು ’ಚರಕ’ದ ಕಥೆ!

ಒಂದು ’ಚರಕ’ದ ಕಥೆ!

ಈ ಬರಹವನ್ನು ಈಗ್ಗೆ ಎರಡು ವಾರಗಳ ಹಿಂದೆಯೇ ಬರೆಯಬೇಕಿತ್ತು. ಆದರೆ ಅದೇ ಸಮಯದಲ್ಲಿ ಅಕಸ್ಮಾತ್ತಾಗಿ ’ಸಮಾಜ ವಿಜ್ಞಾನಿ’ ಬಾಲಗಂಗಾಧರರೊಂದಿಗೆ ಮುಖಾಮುಖಿಯಾಗಬೇಕಾಗಿ ಬಂದು, ಅದನ್ನು ದಾಖಲಿಸುವ ತುರ್ತಿನಲ್ಲಿ ಆಗಲಿಲ್ಲ. ಈಗ ನಾನು ಬರೆಯ ಹೊರಟಿರುವುದು ಹೆಗ್ಗೋಡಿನ ’ಚರಕ’ದ ಬಗ್ಗೆ. ಎರಡು ವಾರಗಳ ಹಿಂದೆ, ಅಂದರೆ ಇದೇ ಜನವರಿ ೧೬, ೧೭ ಹಾಗೂ ೧೮ರಂದು ಅಲ್ಲಿ ನಡೆದ ’ಚರಕ ಉತ್ಸವ-೨೦೦೯’ರಲ್ಲಿ ಸಕ್ರಿಯವಾಗಿ ಪಾಲ್ಗೊಂಡ ನಾನು ಅದರ ಅರ್ಥಪೂರ್ಣತೆಯನ್ನೂ, ಸಂಭ್ರಮೋಲ್ಲಾಸಗಳನ್ನೂ ಆ ಸಂದರ್ಭದಲ್ಲೇ ದಾಖಲಿಸಬೇಕಿತ್ತು. ಅದನ್ನೀಗ ಮಾಡುತ್ತಿದ್ದೇನೆ.

ಹೆಗ್ಗೋಡು ಎಂದಾಕ್ಷಣ ನಮಗೆ ನೆನಪಾಗುವುದು ನೀನಾಸಂ. ಅದು ಸಹಜ ಕೂಡ. ಅದಕ್ಕೆ ಮೂರ್ನಾಲ್ಕು ದಶಕಗಳಲ್ಲಿ ಕಟ್ಟಿಕೊಂಡ ಖ್ಯಾತಿಯ ಹಿನ್ನೆಲೆಯಿದೆ. ಅದರ ಹಿಂದೆ ಕೆ.ವಿ.ಸುಬ್ಬಣ್ಣ ಎಂಬ ಧೀಮಂತರ ದಟ್ಟ ನೆನಪಿದೆ. ಮಲೆನಾಡಿನ ಮೂಲೆಯ ಕುಗ್ರಾಮವೊಂದನ್ನು ಕೇಂದ್ರವಾಗಿಸಿಕೊಂಡು ರಂಗಭೂಮಿ ಮತ್ತು ಚಲನಚಿತ್ರ ಸಂಸ್ಕೃತಿಗಳಿಗೆ ಸಂಬಂಧಿಸಿದಂತೆ ಅವರು ಮಾಡಿದ ಅಪೂರ್ವ ಕೆಲಸಗಳ ದಾಖಲೆಯಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಪ್ರತಿ ವರ್ಷ ಅದು ನಡೆಸುವ ’ಸಂಸ್ಕೃತಿ ಶಿಬಿರ’ದ ಅಡಿಯಲ್ಲಿ ದೇಶಾದ್ಯಂತ ವಿದ್ವಾಂಸರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಆಹ್ವಾನಿಸಿ, ಕರ್ನಾಟಕದಾದ್ಯಂತ ವಿವಿಧ ಹಿನ್ನೆಲೆ ಹಾಗೂ ವಯೋಮಾನಗಳ ಶಿಬಿರಾರ್ಥಿಗಳನ್ನು ಆಕರ್ಷಿಸಿ ನಡೆಸುವ ಚರ್ಚೆಗಳು, ನಾಟಕ-ಸಿನೆಮಾ ಪ್ರದರ್ಶನಗಳು ಒಂದು ಅಪೂರ್ವ ಸಾಂಸ್ಕೃತಿಕ ಘಟನೆಯೇ ಸರಿ. ಆದರೆ ಇಲ್ಲಿ ನಡೆಯುವ ಚರ್ಚೆಗಳ ವಿಷಯ, ಅವನ್ನು ಸಂಘಟಿಸುವ ರೀತಿ, ಅವುಗಳ ಹಿಂದಿನ ಅತಿ ಬೌದ್ಧಿಕತೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅದರ ಚಟುವಟಿಕೆಗಳ ಹಿಂದಿನ ಖಾಸಗಿತನ ಕೆಲವರ ಟೀಕೆಗೆ ಗುರಿಯಾಗಿರುವುದೂ ಉಂಟು.

ನೀವು ಮದುವೆ ಆಗಬಯಸುವ ಹುಡುಗಿ ಹೇಗಿರಬೇಕು?

ನೀಳ ಕೇಶದ,
ನೀಲಿ ಕಣ್ಣಿನ,
ಹಾಲು ಬಣ್ಣದ,
ಸುಂದರ, ಓದಿದ,
ಗುಣ ಸಂಪನ್ನ,

ಹೀಗೆ ಇನ್ನು ಏನೇನೋ ತರಹದ ಆಶೆಗಳು ನಾವು ಮದುವೆಯಾಗಬಯಸುವ ಹುಡುಗಿಯಲ್ಲಿರಬೇಕು ಅನ್ನುವುದು ಪ್ರತಿಯೊಬ್ಬರ ಆಶೆ ಅಲ್ಲವೇ?..

ಸರಿ ಈಗ ಹೇಳಿ ನಿಮ್ಮ ಹುಡುಗಿ ಹೇಗಿರಬೇಕು?..

ನನ್ನ ಹುಡುಗಿ ಹೀಗಿರಬೇಕು...
... ಹೇಗೆ?.....
ಅದನ್ನ ನಾನು ಈಗ ಹೇಳಲ್ಲ...

ನೀವು ಹೇಳಿ
ಆಮೇಲೆ ಹೇಳುತ್ತೇನೆ....

ಆಗಬಹುದೇ?...

ಚಿತ್ರದುರ್ಗ ಸಾಹಿತ್ಯ ಸಮ್ಮೇಳನ -ಒಂದು ನೋಟ

ಮತ್ತೊಂದು ಅಖಿಲ ಭಾರತ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದಿದೆ. ಸಮ್ಮೇಳನದ ಅಧ್ಯಾಯದಲ್ಲಿ ಅಮೃತೋತ್ಸವದ ಸಂಭ್ರಮವನ್ನು ತುಂಬಬೇಕಿದ್ದ ಈ ಸಮ್ಮೇಳನ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಾಗಲೀ, ಸಮ್ಮೇಳನದ ಚರಿತ್ರೆಯ ಪುಟದಲ್ಲಾಗಲೀ ಅಥವಾ ವಿಶೇಷವಾಗಿ ಕನ್ನಡಾಸಕ್ತರ ಮನದಲ್ಲಾಗಲೀ ಹೊಸದನ್ನೇನನ್ನೂ ಸ್ಪುಟಗೊಳಿಸಲಿಲ್ಲ. ಆದರೆ ಸುಮ್ಮನೆ ಒಂದು ಸಮ್ಮೇಳನ ಜರುಗಿತೇ ಎಂದು ಕೇಳಿದರೆ ಹಾಗೂ ಇಲ್ಲ. ಒಂದಷ್ಟು ಮಂದಿಗೆ ಪಾಠ ಕಲಿಸಿತು.

ಮುಖ್ಯವಾಗಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನವರಿಗೆ ಹಾಗೂ ಸಮ್ಮೇಳನದ ಸಂಭ್ರಮವನ್ನು ಕಲ್ಪಿಸಿಕೊಂಡು ಹೋಗುವ ಆಸಕ್ತರಿಗೆ. ನಾನು ಋಣಾತ್ಮಕ ನೆಲೆಯಿಂದೇನೂ ಚರ್ಚಿಸುತ್ತಿಲ್ಲ. ಬಹಳ ಸೂಕ್ಷ್ಮವಾಗಿ ಗ್ರಹಿಸಿಯೇ ಈ ಅನಿಸಿಕೆಯನ್ನು ವ್ಯಕ್ತಪಡಿಸುತ್ತಿದ್ದೇನೆ. ಇನ್ನು ಮುಂದೆ ಸಮ್ಮೇಳನಕ್ಕೆ ಹೊರಡುವ ಮುನ್ನ ‘ಒಂದಷ್ಟು ಅವ್ಯವಸ್ಥೆ ಇದ್ದೇ ಇರುತ್ತದೆ, ಅದಕ್ಕೆ ಹೊಂದಿಕೊಂಡೇ ಹೋಗಬೇಕು. ಯಾವುದನ್ನೂ ಪ್ರಶ್ನಿಸಬಾರದು, ಇದ್ದದ್ದನ್ನು ಅನುಭವಿಸಿ ಬರಬೇಕು. ಎಷ್ಟಿದ್ದರೂ ನಾವು ಕನ್ನಡಿಗರಲ್ವೇ? ನಮ್ಮ ಭಾಷೆಯ ಹಬ್ಬ ಅಲ್ವೇ?’ ಎನ್ನುವ ಮನಸ್ಥಿತಿಗೆ ಬಂದಾಗಿದೆ.
ಚಿತ್ರದುರ್ಗದ ಊರಿನವರ ಸಂಭ್ರಮವನ್ನು ನಿಜಕ್ಕೂ ನಾವು ಮೆಚ್ಚಲೇಬೇಕು. ತಮ್ಮೂರಿಗೆ ಬಂದ ಅತಿಥಿಗಳನ್ನು ಕಾಣಬೇಕೆಂಬ ಸಂಭ್ರಮವೇ ಸಮ್ಮೇಳನದ ತುಂಬಾ ಜನರಿರುವಂತೆ ಮಾಡಿತು. ಅಷ್ಟು ಬಿಟ್ಟರೆ, ವ್ಯವಸ್ಥೆಯ ನೆಲೆಯಲ್ಲೂ ಸಮ್ಮೇಳನ ಯಶಸ್ವಿಯಾಗಲಿಲ್ಲ ; ಗೋಷ್ಠಿಯ ಚರ್ಚೆಯ ವಿಷಯದಲ್ಲೂ ಸಹ. ಗೋಷ್ಠಿಗಳಿಗೆ ಜನ ಹರಿದು ಬರುವುದು ಇದೇನೂ ಹೊಸತಲ್ಲ. ಬಾಗಲಕೋಟೆಯ ಸಮ್ಮೇಳನದಲ್ಲಿ ಇದಕ್ಕಿಂತಲೂ ಹೆಚ್ಚು ಜನ ಭಾಗವಹಿಸಿದ್ದರು. ಜತೆಗೆ ಅದು ಪುಸ್ತಕ ಮಾರಾಟಕ್ಕೆ ಪೂರಕವಾಗಿತ್ತು.

ಪ.ಪೂ. ಶ್ರೀ ಶ್ರೀ ವಿರಜಾನಂದಜೀ ಮಹಾರಾಜ್

ಬೆಂಗಳೂರು ಬಳಿಯ ವರ್ತೂರಿನಲ್ಲಿ ಜನಿಸಿದ ಪೂಜ್ಯರ ಪೂರ್ವಾಶ್ರಮದ ಹೆಸರು  ಶ್ರೀ ಕೃಷ್ಣಮೂರ್ತಿ,ಬಿ.ಎಸ್. ಆಂಗ್ಲಭಾಷೆಯಲ್ಲಿ ಎಂ.ಎ. ಪದವಿ ಗಳಿಸಿದರೂ ಲೌಕಿಕ ನೌಕರಿಗಳ ಬಗೆಗೆ ಅವರಿಗೆ ಒಲವು ಮೂಡಲೇ ಇಲ್ಲ. ಹೊಳೆನರಸೀಪುರದಲ್ಲಿರುವ ಪ.ಪೂ.ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮೀಜಿಯವರು ಸಂಸ್ಥಾಪಿಸಿದ ಅಧ್ಯಾತ್ಮಪ್ರಕಾಶ ಕಾರ್ಯಾಲಯಕ್ಕೆ ತೆರಳಿ ಅಲ್ಲಿ ಸಂಸ್ಥಾಪಕರ ನೇರಶಿಷ್ಯರಾಗಿದ್ದ ಪೂಜ್ಯ ವೇ||ಬ್ರ||ಶ್ರೀ|| ಲಕ್ಷ್ಮೀನರಸಿಂಹಮೂರ್ತಿಗಳವರಿಂದ ಪ್ರಸ್ಥಾನತ್ರಯ ಭಾಷ್ಯಾಭ್ಯಾಸ ಮಾಡಿದರು. ಭಗವಾನ್ ರಮಣಮಹರ್ಷಿಗಳ ಉಪದೇಶಾಮೃತದ ಅಧ್ಯಯನವನ್ನು ಕೈಗೊಂಡರು. ದಿವ್ಯತ್ರಯರ ಜೀವನ ಮತ್ತು ಉಪದೇಶಗಳ ಅಧ್ಯಯನವನ್ನೂ ಮಾಡಿದರು.

ಬಿಳಿಕಾಗೆ (ಕಥೆ)

ಮಧ್ಯಾಹ್ನದ ಊಟ ಮುಗಿಸಿ, ಚೇರ್‍‍ನಲ್ಲಿ ಹಿಂದಕ್ಕೊರಗಿ ಕುಳಿತಿದ್ದ ಸೊನಾಲಿ ಅಂತರ್ಜಾಲದ ಪುಟಗಳ ಮೇಲೆ ಕಣ್ಣಾಡಿಸಿದಳು. ಕಂಪ್ಯೂಟರ್‍‍ನ ಪರದೆಯ ಮೇಲೆ ಮೂಡಿದ ಅಕ್ಷರಗಳನ್ನು ಕಂಡು ಸೋಜಿಗದಿಂದ ಮತ್ತೊಮ್ಮೆ ಓದಿಕೊಂಡಳು. ಅವಳ ನಿರೀಕ್ಷೆಗೂ ಮೀರಿದ ವಾಕ್ಯ ಅದು. ಕೂಡಲೆ ಪರದೆಯನ್ನು ಮುಚ್ಚಿ, ಅತ್ತಿತ್ತ ದೃಷ್ಟಿ ಹಾಯಿಸಿದಳು. ತನ್ನನ್ನು ಯಾರೂ ಗಮನಿಸುತ್ತಿಲ್ಲವೆಂದು ತಿಳಿದ ಮೇಲೆ ಸಮಾಧಾನವೆನಿಸಿತು. ಯಾರೋ ಕುಚೋದ್ಯಕ್ಕೆ ಕಳುಹಿಸಿದ ಇ-ಮೇಲ್ ಅದು! ಆದರೆ ಸ್ಪಷ್ಟವಾಗಿ ಬರೆದಿತ್ತು. `ಸೊನಾಲಿ, ಸಂಜೆ ಆಫೀಸು ಮುಗಿಸಿ ನೇರವಾಗಿ ಟಾರಸಿಗೆ ಬಾ. ಹೇಳಿದಷ್ಟು ಮಾಡದಿದ್ದರೆ ಪರಿಣಾಮ ನೆಟ್ಟಗಾಗಿರೋದಿಲ್ಲ' ಅದನ್ನು ನೆನೆಯುತ್ತಲೇ ಅಂಗೈ ಕೂಡ ಬೆವರಿತು.
ಈ ಹೊತ್ತಿನಲ್ಲಿ ತಾನು ಇ-ಮೇಲ್ ತೆರೆದು ನೋಡುವ ವಿಷಯ ಗೊತ್ತಿರುವುದು ಕೆಲವರಿಗೆ ಮಾತ್ರ. ಅದರಲ್ಲೂ ಮೀಸೆ ಬೋಳಿಸಿ, ಹೆಣ್ಣಿನ ವೇಷ ತೊಡಿಸಿದ ಹಾಗಿರುವ ಕಂಪ್ಯೂಟರ್‍‍ನ ಬಗ್ಗೆ ಅಲ್ಪ ಸ್ವಲ್ಪ ತಿಳಿದಿರುವ ಹೆಣ್ಣು ವಾಸಂತಿಗೆ! ಆ ವಿಷಯದಲ್ಲಿ ತನಗಿಂತ ಬೇರೆಯವರಿಗೆ ಹೆಚ್ಚು ತಿಳಿಯಬಾರದು ಅನ್ನುವ ಸಣ್ಣ ಬುದ್ಧಿಯ ಹೆಣ್ಣು ಅವಳು. ಅಂತರ್ಜಾಲ ನೋಡುವುದೇ ದೊಡ್ಡ ಅಪರಾಧವೆಂದು, ಆ ವಿಷಯವನ್ನು ಮೇಲಧಿಕಾರಿಗೂ ತಿಳಿಸಿದ್ದಳು. ಸ್ವಂತ ಬುದ್ಧಿ ಇಲ್ಲದ ಮೇಲಧಿಕಾರಿ ವಾಸಂತಿಯ ಮಾತನ್ನು ಕೇಳಿ, ಸೋನಾಲಿಯನ್ನು ಕರೆದು ಚೆನ್ನಾಗಿ ಬೈದಿದ್ದ. ಹೆಣ್ಣು ವೇಷದ ಹೆಣ್ಣಿನಂತೆ ಹಲ್ಲು ಪ್ರದರ್ಶಿಸಿ ಅಧಿಕಾರಿಯ ಮನಸ್ಸು ಗೆಲ್ಲುತ್ತಿದ್ದರೆ ಸುಮ್ಮನಿರುತ್ತಿದ್ದನೇನೋ?
ಅವಳೇ ಏಕೆ ಈ ಪತ್ರವನ್ನು ಕಳುಹಿಸಿರಬಾರದು. ಸೊನಾಲಿ ಎದ್ದು ಒಮ್ಮೆ ಅತ್ತ ನೋಡಿದಳು. ಹೊಟ್ಟೆಕಿಚ್ಚಿನ ಹೆಣ್ಣು ಅಲ್ಲಿರಲಿಲ್ಲ. ಮೇಲ್ ಕಳುಹಿಸಿದವರು ಯಾರು? ಇಷ್ಟಕ್ಕೂ ಟಾರಸಿಯ ಮೇಲೆ ಬರುವಂತೆ ತನ್ನನ್ನು ಕರೆದಿರುವುದು ಏಕೆ? ಟಾರಸಿಯ ಮೇಲೆ ಬರುವಂತೆ ಕರೆದಿರುವುದರಿಂದ ಇಲ್ಲಿಯೇ ಯಾರದೋ ಕೈವಾಡ! ಅನುಮಾನ ಬಲವಾಯಿತು. ಪ್ರತಿಯೊಂದು ಮೇಜಿನ ಮುಂದೆ ಕುಳಿತಿರುವ ವ್ಯಕ್ತಿಯ ಮೇಲೆ ಸಂಶಯದ ನೋಟ ಹರಿಸಿದಳು. ಯಾರ ಮೇಲೂ ಗಾಢವಾದ ಅನುಮಾನ ಸುಳಿಯಲಿಲ್ಲ.

ಮುಗಿಲ ಆಟ

                                   ಮುಗಿಲ ಆಟ

 

 

 

 

 

 

 

 

 

ವಸಂತಕಾಲದ ಒಂದು ಸಂಜೆಯಲಿ

ದೃಷ್ಠಿ ಹೊರಳಿಸಿ ನಿಂತೆ ಆಕಾಶದಲಿ

ಬೆಳ್ಳಿಮೋಡಗಳ ಮೆರವಣಿಗೆ ನೀಲಿ ಆಗಸದಲ್ಲಿ

ಭಾಸ್ಕರನೆಡೆಗೆ ವೈಯಾರದ ನೋಟವ ತಾ ಬೀರುತಲಿ

ದಿನದ ಪಯಣ ಮುಗಿಸುವ ಆತುರ ರವಿಗೆ

ಸರಣಿ ೯ - ಡಾ!! ಎಚ್. ನರಸಿಂಹಯ್ಯ - ಪ್ರಾರ್ಥನೆ ಪೂಜೆ ಮತ್ತು ಸಮಾಜ ಕಲ್ಯಾಣ

ಈ ವಿಶ್ವದ ಆಸ್ತಿತ್ವಕ್ಕೆ ಕಾರಣೀಭೂತವಾದ ಒಬ್ಬ ಸೃಷ್ಟಿಕರ್ತನಿದ್ದಾನೆಂಬ ನಂಬಿಕೆ
ಪ್ರಾಚೀನವಾದದ್ದು. ಇದರ ಆಗುಹೋಗುಗಳಿಗೆಲ್ಲಾ ಅವನೇ ಹೊಣೆ. ದೇವರ ಕಲ್ಪನೆಯಲ್ಲಿ
ವೈವಿಧ್ಯ ಇದೆ. ಕೆಲವರಿಗೆ ದೇವರು ಸಾಕಾರ ಮತ್ತೆ ಕೆಲವರಿಗೆ ನಿರಾಕಾರ;
ಪೂಜ್ಞಾಪೂರ್ಣವಾದ ನಿಯಮ 'ದೇವರು ಸರ್ವಾಂತರ್ಯಾಮಿ, ಸರ್ವಜ್ಞ, ಸರ್ವಶಕ್ತ.' 'ತೇನವಿನಾ