ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಾರ್ಕಳ

ಕಳೆದ ವಾರ ಚಂದ್ರನ ಸುತ್ತ ಸಂಪದದಲ್ಲಿ ಕವಿಹೃದಯ ಭರಪೂರ ಆಗಿತ್ತು. ಕಲ್ಪನೆಗಳು ರೂಪ ಪಡೆದುಕೊಂಡಿದ್ದವು. ಈ ಚಿತ್ರ ಮತ್ತಷ್ಟು ಕವಿತೆಗಳಿಗೆ, ಸಾಲುಗಳಿಗೆ ಇಂಬು ಕೊಡಬಲ್ಲುದೆ? :-)
ಕಾರ್ಕಳ
ಚಿತ್ರ: ಕಾರ್ಕಳದ ಗೊಮ್ಮಟನ ಬಳಿ. ಸೂರ್ಯ ಬೈ ಬೈ ಹೇಳಿ ಚಂದಿರನಿಗೆ ಕಂಟ್ರೋಲ್ ವಹಿಸಿಕೊಟ್ಟು ಹೋಗಿದ್ದ.
ಫೋಟೋಗ್ರಫಿ: ನನ್ನದು.

ಹುಂಡಿಯನು ದಾನ ಮಾಡುತ್ತಾನೆ ಆಗಲೆಂದು ಪುಣ್ಯವಂತ!

ಹುಂಡಿಯನು ತುಂಬುತ್ತಾರೆ ಜನ ಖುಷಿಯಾಗಲೆಂದು ಭಗವಂತ
ಅದನ್ನೇ ದಾನ ಮಾಡುತ್ತಾನೆ ಸಜ್ಜನ ತಾ ಆಗಲೆಂದು ಪುಣ್ಯವಂತ

ಬೆವರೇ ಸುರಿಸದೇ ತಾ ತುಂಬಿಕೊಳ್ಳುತಿರುವ ತನ್ನ ತಿಜೋರಿಯನು
ಅದರಲ್ಲತ್ಯಲ್ಪಂಶ ದಾನ ಮಾಡಿ ಪಡೆಯುತ್ತಾನೆ ಜನಮೆಚ್ಚುಗೆಯನು

ದೇವರ ಹೆಸರಿನಲ್ಲಿ ಪಡೆದು ಬಡ ಜನರಿಂದ ದಾನ ದೇಣಿಗೆಗಳನು
ತನ್ನ ಹೆಸರಿನಲಿ ಅದ ದಾನ ಮಾಡಿ ಪಡೆಯುತ್ತಾನೆ ಪ್ರಶಸ್ತಿಗಳನು

ಹಿಮಪಾತ

ಸುರಿದಿರಲು ಮಂಜಿನ ಹೂಮಳೆ
ಇಳೆಯಾಗಿದೆ ಬಿಳಿಹತ್ತಿಯ ಹಾಳೆ
ಕಾಣದಾಗಿದೆ ನಡೆದಾಡುವ ಹಾದಿ
ಆದ್ಯಂತವಾಗಿದೆ ಹಿಮದ ವಾರಿಧಿ

ನಾಕಂಡ ಮೊದಲ ಹಿಮಪಾತ
ಆದ ಸಂತೋಷ ಅಪರಿಮಿತ
ಹಿಡಿಯ ಹೊರಟೆ ಸೌಂದರ್ಯದ ಸೆರೆ
ಕಳಚಿ ಕ್ಯಾಮೆರ ಕಣ್ಣಿನ ಪೊರೆ

ಹಿಮರಾಜ ಸರಿಯಲು ನೇಪಥ್ಯಕ್ಕೆ
ಧುತ್ತೆಂದು ಧಾಳಿ ಹಿಮದಾಟಕೆ
ಅದೆಂತು ಚೆಲ್ಲಾಟ, ಹಿಮದೆರಚಾಟ
ಮರುಕಳಿಸಿತ್ತು ಬಾಲ್ಯದ ಹುಡುಗಾಟ

ಮು೦ಜಾನೆ ಮಿರ್ಚಿ ಕೇಳಿಸಿದ ಗಾರ್ದಭ ಗಾನ

ಎರಡು ದಿನಗಳ ರಜೆಯ ನ೦ತರ ವಾರಚಕ್ರದ ನಿಮಿತ್ತ ಸೋಮವಾರ ಮು೦ಜಾನೆ ಕ್ಯಾಬ(ಆಫೀಸಿನ ವಾಹನ)ನ್ನೇರಿ ಬೆ೦ಗಳೂರಿನ ಟ್ರಾಫಿಕ ಎ೦ಬ ಸಮುದ್ರದಲ್ಲಿ ಧುಮುಕುವುದು ನಮ್ಮ ಕರ್ಮ. ಕ್ಯಾಬಿನಲ್ಲಿ ನಮ್ಮ ಡ್ರೈವರ್ ಮಹಾಶಯರು ಎಫ್ ಎಮ್ ಎ೦ಬ ಹಿಮ್ಮೇಳವಿಲ್ಲದೆ ವಾಹನ ಚಾಲನೆ ಅಸಾಧ್ಯ, ಎ೦ಬಷ್ಟರಮಟ್ಟಿಗೆ ಅದಕ್ಕೆ ಅಡಿಕ್ಟ ಆಗಿಬಿಟ್ಟಿದ್ದಾರೆ.

ತಿರುಚುವಿಕೆಯೇ ವರದಿಗಾರಿಕೆ

ರೋಚಕವಾಗಿ ವರದಿ ಮಾಡಲು ಹೋಗಿ ಬೇಸ್ತು ಬೀಳುವುದಕ್ಕೆ ಉತ್ತಮ ಉದಾಹರಣೆ ಇವತ್ತಿನ ಕನ್ನಡಪ್ರಭ ದಿನಪತ್ರಿಕೆಯ ಮುಖಪುಟದ ಮುಖ್ಯ ಸುದ್ದಿ.

ನೀರ ನಿಶ್ಚಿಂತೆಗೆ ಟ್ವಿಟರ್‌ಗಳ ಸಮ್ಮೇಳನ

ಟ್ವಿಟರ್ ಎನ್ನುವುದು ಮೈಕ್ರೋಬ್ಲಾಗಿಂಗ್ ಸೇವೆ. ಬ್ಲಾಗ್ ಬರವಣಿಗೆಯನ್ನು ನೂರ ನಲುವತ್ತು ಅಕ್ಷರಗಳಲ್ಲಿ ಸೀಮಿತಗೊಳಿಸಿ,ಅದನ್ನು ಟೆಲಿಗ್ರಾಫಿಕ್ಸ್ ಭಾಷೆಯಲ್ಲಿ ಬರೆಯಲು ಉತ್ತೇಜಿಸುವುದೇ ಟ್ವಿಟರ್ ವೈಷಿಷ್ಟ್ಯ. ಪುಟಗಟ್ಟಲೆ ಬರೆಯಲು ಪುರುಸೊತ್ತು ಇಲ್ಲದವರಿಗೆ ಮತ್ತು ಹಾಗೆ ಬರೆದುದ್ದನ್ನು ಓದುವ ಉತ್ಸಾಹ ಇಲ್ಲದವರನ್ನು ಒಟ್ಟಿಗೆ ತರುವುದು ಟ್ವಿಟರ್ ಪ್ರಯತ್ನಿಸುತ್ತದೆ.ನೀವೇನೀಗ ಮಾಡುತ್ತಿದ್ದೀರಿ ಎನ್ನುವುದನ್ನು ಇತರರ ಜತೆ ಹಂಚಿಕೊಳ್ಳಿ ಎನ್ನುವುದು ಈ ಸೇವೆಯ ಧ್ಯೇಯ ವಾಕ್ಯ.ಕಾರ್ಯಕ್ರಮದ ವರದಿಯನ್ನು ಅದು ನಡೆದಿರುವ ಹಾಗೆಯೇ ವರದಿ ಮಾಡಲು ಟ್ವಿಟರ್ ಸೇವೆಯನ್ನು ಬಳಸುವ ಉತ್ಸಾಹಿಗಳು ಇದೀಗ ಎಲ್ಲೆಡೆ ಕಾಣಸಿಗುತ್ತಾರೆ.ಟ್ವಿಟರ್ ಸೇವೆಯನ್ನು ಪಡೆಯಲು ಕಂಪ್ಯೂಟರ್ ಮೂಲಕ ಅಂತರ್ಜಾಲ ಪ್ರವೇಶ ಬೇಕಿಲ್ಲ-ಮೊಬೈಲ್ ಅಂತಹ ಸಾಧನದ ಮೂಲಕವೂ ಟ್ವಿಟರ್‌ಗೆ ಬ್ಲಾಗಿಸಬಹುದು.

ಬೆಂಗಳೂರು ಆಸ್ಟ್ರೋನಾಮಿಕಲ್ ಸೊಸೈಟಿಯ ಆಕಾಶ ವೀಕ್ಷ್ಹಣೆ ಕಾರ್ಯಕ್ರಮ - ಚಿಕ್ಕಮಗಳೂರು

ಬೆಂಗಳೂರು ಆಸ್ಟ್ರೋನಾಮಿಕಲ್ ಸೊಸೈಟಿ ಈ ವಾರಾಂತ್ಯ ಚಿಕ್ಕಮಗಳೂರಿನ ಕಾರ್ಗತ್ತಲಿನ ಘಟ್ಟಗಳಲ್ಲಿ (:P) ಆಕಾಶ ವೀಕ್ಷಣಾ ಕಾರ್ಯಕ್ರಮವೊಂದನ್ನು ಏರ್ಪಡಿಸುತ್ತಿದೆ. ಇದು ನಾವು ಅಂತರರಾಷ್ತ್ರೀಯ ಖಗೋಳ ವಿಜ್ನಾನ ವರ್ಷದ ಪ್ರಯುಕ್ತವಾಗಿ ನಡೆಯುಸುತ್ತಿರುವ ಎರಡನೇ ಸ್ಟಾರ್ ಪಾರ್ಟಿ.

ಕಾರ್ಯಕ್ರಮದ ಅಜೆಂಡಾ ಇಂತಿದೆ

ನಂಬಿಕೆ-ಪ್ರೀತಿ

ನಂಬಿಕೆ ಜೀವನದ ಆಧಾರ. ನಂಬಿಕೆಯ ಮೇಲೆಯೇ ಜೀವನ ನಿಂತಿರುವುದು. ನಂಬಿಕೆ ವಿಶ್ವಾಸ ಮೂಡಿಸುತ್ತದೆ. ನಂಬಿಕೆಯೇ ಇಲ್ಲವೆಂದಾದರೆ,
ಪ್ರೀತಿಯೆಲ್ಲಿಂದ ಮೂಡೀತು? 'ಅನುಮಾನಂ ಪೆದ್ದರೋಗಂ' ಅದಕ್ಕೇ ಹೆಳುವುದು. ಜೀವನದಲ್ಲಿ ಏನಿಲ್ಲದಿದ್ದರೂ ಈ ಅನುಮಾನವಿರಲೇಕೂಡದು.
ಸದಾ ಅಶಾಂತಿ ತಂದೊಡ್ದುತ್ತಿರುತ್ತದೆ, ಮನಸ್ಸಿನ ಕಳವಳಕ್ಕೆ ಕಾರಣವಾಗುತ್ತದೆ.