ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಪರೂಪದ ಮದ್ದು

ಅರಿಗರು ದೊರೆತರೂ ಹದುಳಿಗರು ದೊರೆಯರು
ದೊರೆವ ಹದುಳಿಗರೋ ಅರಿಯದವರಿರಬಹುದು 
ದೊರೆವುದತಿ ಅಪರೂಪ ರುಚಿಯಾದೌಷಧಿಯಂತೆ 
ಅರಿತವನೂ ಹದುಳಿಗನೂ ಆಗಿರುವ ಮಾನಿಸನು!

ಅರಿಗ = ವಿದ್ವಾಂಸ 
ಹದುಳಿಗ= ಹಿತಕರ, ಹಿತೈಷಿ
ಮಾನಿಸ = ಮನುಷ್ಯ, ಮಾನವ 

ಸಂಸ್ಕೃತ ಮೂಲ (ಸುಭಾಷಿತರತ್ನಭಾಂಡಾಗಾರದಿಂದ):

ಸ್ಲಂಡಾಗ್ ಬಗ್ಗೆ ನನ್ನ ಅನಿಸಿಕೆ ತಪ್ಪಾಯಿತು..

ಕೆಲವು ದಿನಗಳ ಹಿಂದೆ ಸಂಪದದಲ್ಲಿ slum dog ಬಗ್ಗೆ ಪ್ರಸಾದ್ ವಿಮರ್ಶೆ ಬರೆದಿದ್ದರು http://www.sampada.net/blog/rennie606/02/02/2009/16364

ಅದಕ್ಕೆ ನಾನೂ ಪ್ರತಿಕ್ರಿಯೆ ಸೇರಿಸಿ ನಮ್ಮ ಭಾರತವನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂಬುದಕ್ಕೆ ಸಹಮತವನ್ನೂ ವ್ಯಕ್ತಪಡಿಸಿದ್ದೆ...

ಆದರೆ ಆಗ ನಾನು ಈ ಸಿನಿಮಾ ನೋಡಿರಲಿಲ್ಲಾ..

ಪಬ್‌ಗೆ ಹೊರಟ ಚಲುವಿಯರೆ,

ಪ್ರೇಮಿಗಳ ದಿನಕ್ಕೆ ಇನ್ನೆರಡೇ ದಿನ ಬಾಕಿ ಇದೆ. ಫೆ.೧೪ ಈ ವರ್ಷದಿಂದ ಪ್ರೇಮಿಗಳ ದಿನದ ಬದಲು ಪಬ್ ದಿನವಾಗಿ ಆಚರಿಸಲ್ಪಡುವುದು.
ಪಬ್ (ನಮಗೆ) + ವರಿ (ರಾಮಸೈನ್ಯಕ್ಕೆ)= ಪಬ್ರವರಿ.

ಹುಡುಗೀರೆ,
‘ಪಬ್‌ಗೆ ಹೋಗೋಣ ಬನ್ನಿರೇ
ರೇಣುಕಮ್ಮ ಹೇಳಿದಂತೆ ಮಾಡಿರೆ’
ಎಂದು ಹೊರಟ್ಟಿದ್ದೀರಿ ಸರಿ-
ಅಲ್ಲಿ ಹೋದಾಗ ಏನು ಕುಡಿಯುವುದು?
ಎಷ್ಟು ಕುಡಿಯುವುದು?
ಯಾವ ರೀತಿ ಕುಡಿಯುವುದು?

ನಂಮನೆ

ಜೆ.ಕೆ.ಪ್ರೇರಿತ ಧ್ಯಾನ ಗೀತೆಗಳು-೧

ಧ್ಯಾನ ಮಾಡಬೇಕೆ?
ಹೇಳು ಗುರುವಿಗೆ ಶರಣು,
ನಡೀ ಈ ಲೋಕದ ಆ ಮೂಲೆಗೆ
ನೋಡು, ಕಲಿ
ಮತ್ತು
ಕರಗು

ಕಾಶ್ಮೀರದ [ಭಾರತದ] ಸ್ಥಿತಿ

ಇಂದು ಭಾರತದ ಭೂಪಟದ ನೆತ್ತಿಯಲ್ಲಿ ಕಾಶ್ಮೀರ ಭಾರತ ಮಾತೆಯ ಶಿರಸ್ಸಿನಂತೆ ಕಂಗೊಳಿಸುತ್ತಿದೆ...
ಆದರೆ ಬಹಳಜನಕ್ಕೆ ಇದು ಗೊತ್ತಿರಲಿಕ್ಕಿಲ್ಲ.. ನಾವಂದುಕೊಂಡಂತೆ ಕಾಶ್ಮೀರ ಇವತ್ತು ಭಾರತದ ಸಂಪೂರ್ಣ ಹಿಡಿತದಲ್ಲಿ ಇಲ್ಲ...
ಈ ಚಿತ್ರವನ್ನು ನೋಡಿ ಯಾಕೋ ಮನಸ್ಸಿಗೆ ತುಂಬ ನೋವಾಯಿತು...

ಆಧುನಿಕ ವಿಕ್ರಮನೂ ಬೇತಾಳನೂ ಭಾಗ-೨

ಹೆಗಲಲ್ಲಿದ್ದ ಬೇತಾಳವು ಹಾರಿ ಮರ ಸೇರಿದಾಗ ವಿಕ್ರಮನು ಪರೀಕ್ಷೆ ಸಮಯಕ್ಕೆ ನೋಟ್ಸ್ ನ ಝೆರಾಕ್ಸ್ ಗಾಗಿ ಪರದಾಡುವ ವಿದ್ಯಾರ್ಥಿಗಳಂತೆ ಮತ್ತೆ ಬೇತಾಳವನ್ನು ಹಿಡಿದು ತರಲು ಹೊರಟನು. ಸಂಪದವನ್ನು ಒಮ್ಮೆ ಓದಿದ ವ್ಯಕ್ತಿಯು ಮತ್ತೆ ಮತ್ತೆ ಸಂಪದವನ್ನು ಓದಲು ಹವಣಿಸುವಂತೆ ವಿಕ್ರಮನ ಈ ಕಾರ್ಯವು ಬೇತಾಳನಿಗೆ ಸೋಜಿಗವನ್ನುಂಟು ಮಾಡಿತು.

ಲೇಖನಮಾಲೆ: "ಬೆಂಗಳೂರಿನ ಕೆರೆಗಳು"

ವಿಜಯಕರ್ನಾಟಕದಲ್ಲಿ ಬೆಂಗಳೂರಿನ ಕೆರೆಗಳ ಕುರಿತು ಬರೆಯುತ್ತಿದ್ದ ಮಂಜುನಾಥ್ ಈಗ ಅಂತರ್ಜಾಲ ಪ್ರವೇಶಿಸಿದ್ದಾರೆ. ಇಂಡಿಯವಾಟರ್ ಪೋರ್ಟಲ್ ಕನ್ನಡ ಆವೃತ್ತಿಯಲ್ಲಿ ಇವರ ಲೇಖನಗಳ ಸರಣಿ ಮೂಡಿಬರಲಿದೆ. ಮಂಜುನಾಥ್ ಸರಣಿಗೆ ಮುನ್ನುಡಿ ಹೀಗೆ ಬರೆದಿದ್ದಾರೆ:

ಬೆಂಗಳೂರು ಮಹಾನಗರಕ್ಕೆ ಗಾರ್ಡನ್‌ ಸಿಟಿ, ಹೈಟೆಕ್‌ ಸಿಟಿ, ಸಿಲಿಕಾನ್‌ ನಗರಿ ಎಂದೆಲ್ಲಾ ಬಿರುದುಗಳು ಬರುವ ಮುನ್ನ ‘ಕೆರೆಗಳ ನಗರಿ’ ಎಂಬ ಬಿರುದಿತ್ತು. ಅದಕ್ಕೇ ಉದ್ಯಾನನಗರಿ, ಹವಾನಿಯಂತ್ರಿತ ನಗರಿಯೂ ಆಗಿತ್ತು. ಕೆರೆಗಳು ತುಂಬಿದ್ದರಿಂದ ಮರಗಳು ಹಸಿರಿನಿಂದ ಕಂಗೊಳಿಸುತ್ತಿದ್ದವು. ಅಂತರ್ಜಲ ಸಮೃದ್ಧವಾಗಿದ್ದು ಈ ಕೆರೆಗಳಿಂದಲೇ. ಬೆಂದಕಾಳೂರು ಆಗಿದ್ದಾಗ ಕುಡಿಯುವ ನೀರಿನ ಮೂಲವೂ ಇದೇ ಕೆರೆಗಳಾಗಿದ್ದವು. ಬೆಂಗಳೂರಿನ ಶಿಲ್ಪಿ ಕೆಂಪೇಗೌಡ ತನ್ನ ಪೂರ್ವಜರ ಕೆರೆ-ಕುಂಟೆ ಕಟ್ಟುವ ಕಾಯಕ್ಕೆ ಬೃಹತ್ ಕೊಡುಗೆ ನೀಡಿದರು. ಕೆಂಪೇಗೌಡರು ಬೆಂಗಳೂರು ನಗರದಲ್ಲಿ ನೂರಾರು ಕೆರೆಗಳನ್ನು ಕಟ್ಟಿದರು. ಅದಕ್ಕೇ ಬೆಂಗಳೂರಿನಲ್ಲಿದ್ದ ಕೆರೆಗಳ ಸಂಖ್ಯೆ ಒಂದು ಸಾವಿರವನ್ನೂ ದಾಟಿತ್ತು. ಐಟಿ-ಬಿಟಿ ದಾಳಿಯಿಡುವ ಮುನ್ನ ಕೆರೆಗಳು ಸಮೃದ್ಧವಾಗಿದ್ದವು. ನಗರೀಕರಣದ ಪ್ರಭಾವ ಹೆಚ್ಚಾಗುತ್ತಿದ್ದಂತೆಯೇ ಕೆರೆಗಳು ಆಹುತಿಯಾದವು. ಆನಂತರ ಕೆರೆಗಳು ಅವನತಿಯತ್ತ ಸಾಗಿದವು. ಇಂದು ಕೆರೆಗಳಲ್ಲಿ ನೀರಿಲ್ಲ. ಬರೀ ಕಲ್ಮಶವೇ ತುಂಬಿದೆ. ಅಷ್ಟೇ ಅಲ್ಲ, ಬೆಂಗಳೂರಿನ ವಾತಾವರಣ ಕಲ್ಮಶವಾಗುವುದಕ್ಕೆ ಈ ಕೆರೆಗಳೇ ಸಾಕಷ್ಟು ಕೊಡುಗೆ ನೀಡುತ್ತಿವೆ. ಇದಕ್ಕೆ ಕಾರಣ ಯಾರು? ಕೆರೆಯ ವ್ಯಾಪ್ತಿಯನ್ನ್ನೂ ನುಂಗುವ ಕಾರ್ಯಕ್ಕೆ ಭೂದಾಹಿಗಳು ಮುಂದಾದರು. ಒತ್ತುವರಿಯಿಂದ ಕೆರೆಗಳು ಹೊಂಡಗಳಾಗಿವೆ. ಕೆರೆಗಳನ್ನು ಉಳಿಸುವ ಪ್ರಯತ್ನ ಯಾರಾದರೂ ಮಾಡುತ್ತಿದ್ದಾರಾ? ಪರಿಸರ ಉಳಿಸಿ ಎಂದು ಹೋರಾಡಲು ಸಂಸ್ಥೆಗಳಿವೆ. ಅದೇ ಪರಿಸರ-ಹಸಿರು ಉಳಿಯಲು ಕೆರೆಗಳೇ ಕಾರಣ ಎಂಬುದು ತಿಳಿದಿಲ್ಲವೇ?