ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

Orkut ನಲ್ಲಿ ನನ್ನ ಭವಿಷ್ಯ

ಹಾಯ್ ಸಂಪದಿಗರೆ,
ಇಂದು ನಾನು ಓರ್ಕುಟ್ ಗೆ ಭೇಟಿ ನೀಡಿದಾಗ ನನ್ನ ಭವಿಷ್ಯ ಹೀಗಿತ್ತು.

ಇಂದಿನ ಭವಿಷ್ಯ: ನಿಮ್ಮ ಭವಿಷ್ಯವನ್ನು ಓದುವ ಹುಡುಗನು ಇಂದು ಕೆಲಸಕ್ಕೆ ಬರಲಿಲ್ಲ, ಹೇಗಿದ್ದರೂ, ಒಳ್ಳೆಯದಾಗಲಿ.

ಓದಿ ನಗು ಬಂತು, ಹಂಚೋಣ ಅನ್ನಿಸ್ತು, ನಿಮಗೆ ಹೇಗನ್ನಿಸಿತು?

 

 

 ಬಶೀರ್ ಕೊಡಗು, ದುಬೈ

ಜಗತ್ತಿನ ಅತ್ಯಂತ ಚಿಕ್ಕ ಕಾರು - ದ ಪೀಲ್ 50

1962 ರಲ್ಲಿ ಪ್ರಸ್ತುತಪಡಿಸಿದ್ದ ಇಂಗ್ಲೆಂಡಿನ ಕಾರೊಂದು ಇಂದಿಗೂ ಜಗತ್ತಿನ ಅತ್ಯಂತ ಕಿರಿಯ ಕಾರೆಂದು ಗಿನ್ನೆಸ್ ದಾಖಲೆಯಲ್ಲಿ ರಾರಾಜಿಸುತ್ತಿದೆ.

 

ಕನ್ನಡದ ನುಡಿಮುತ್ತುಗಳು

ಸಾಲ ಕೊಳ್ಳುವಾಗ ಒಂದುರಾಗ, ಸಾಲ ಹೊಳ್ಳಿ ಕೊಡುವಾಗ ನಾನಾರಾಗ

ಬಾಳಿಬದುಕಿದವ ಕಲಿ(=ವಿದ್ಯೆ)ಕಲಿತ, ಬಾಳಲಾರದವ ಪಾಠ ಕಲಿತ

ಮೋಕ್ಷಮಂತ್ರ ತಿಳಿದವನಿಗೆ ವೇದಮಂತ್ರದ ಗೊಡವೆಯೆ?

ಒಪ್ಪದಾ ಮಾತಾಡಿ ಕೋಪಕ್ಕೆ ತುತ್ತಾದ

ಎತ್ತ ಹೋದರೂ ಬಿಡದು ಒತ್ತಿ ಕಾಡುವ ವಿಧಿ

ಬರೋಳನ್ನು ನೆಚ್ಚಿ ಇರೋಳನ್ನು ಬಿಟ್ಟ

ಬೆನ್ನಹಿಂದೆ ಬಿದ್ದು ಬನ್ನ ಪಟ್ಟ

ದಮ್ಮ-ಪದ (ಬೌದ್ಧ ಧರ್ಮ ಗ್ರಂಥ)

"ದಮ್ಮ ಪದ" ಅನ್ನೋದು ಖ್ಯಾತ ಬೌದ್ಧ ಧರ್ಮ ಗ್ರಂಥ ಸುಮಾರು 50 B.C.E ರಿಂದ 5 C.E ಅವಧಿಯಲ್ಲಿ ಇದನ್ನು ಪಾಳಿ ನುಡಿಯಲ್ಲಿ ಬರೆಯಲಾಗಿದೆ. ಇದರಲ್ಲಿ 422 ಉಕ್ತಿಗಳಿವೆ, ಇವನ್ನು ಬುದ್ದನ ನುಡಿಗಳು ಅಂತ ನಂಬಲಾಗಿದೆ.
___________________________________________________________________

All that we are is the result of what we have thought, it is founded on our thoughts, it is made up of our thoughts, if one speaks or acts with a corrupt/evil thought, suffering follows one, as the wheel follows the foot of the ox that draws the wagon.

ಮುಗಿಯಿತು ಬಿಸಿಲುಮಳೆ ಅಕ್ಷರಜಾತ್ರೆಯಲ್ಲಿ ಧೂಳಹೊಳೆ

ಕೊನೆಯ ದಿನದ ಸಮ್ಮೇಳನ ವಾದ್ಯಗೋಷ್ಠಿಯೊಂದಿಗೆ ಆರಂಭ. ಬೆಳಗ್ಗೆ ತಿಂಡಿಗೆ ಉಪ್ಪಿಟ್ಟು ಮಾಡಿದ್ದರು. ಆದರೆ ಬೇಗ ಮುಗಿದು ಹೋಗಿ ಮತ್ತೆ ಇನ್ನಷ್ಟು ಜನರ ಸರತಿ ಹೆಚ್ಚುತ್ತಿದ್ದಂತೆ ಮತ್ತೆ ತಿಂಡಿಯ ಭರವಸೆ. ಆದರೆ ಹತ್ತು ರು.

ವಾಯ್! ಶ್ರೀರಾಮಸೇನೆ ಯಾಕೆ "ಕಪಿಚೇಷ್ಟೆ" ಮಾಡ್ತಾ ಉಂಟು ಮಾರಾಯ?

ಶ್ರೀರಾಮಸೇನೆಯೆಂದರೆ ಕಪಿಸೈನ್ಯ ತಾನೆ. ಕಪಿಗಳು ತಾನೆ ಹೀಗೆ ಇಲ್ಲದ ಅವಾಂತರಗಳನ್ನು ಸೃಷ್ಟಿಸುವುದು! ಇದನ್ನು ಇಲ್ಲಿ ಯಾಕೆ ಹೇಳುತ್ತಿದ್ದೇನೆಂದರೆ, ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಪಬ್ ದಾಳಿ ಪ್ರಕರಣ ರಾಷ್ಟ್ರಮಟ್ಟದ ಸುದ್ದಿಯಾದದ್ದು.

ಚಾರಿತ್ರ್ಯ-ವಧೆ ನಿಲ್ಲಲಿ.

ಸಂಪದ ದಂತ "ಸಾರ್ವಜನಿಕ ವೇದಿಕೆ " ಅಂತ ಕರೆಯಬಹುದಾದ ?! ತಾಣದಲ್ಲಿ ನಮ್ಮ ನಾಡಿನ ಹಿರಿಯ, ಸಹೃದಯ, ನಿಜವಾದ ಅರ್ಥದಲ್ಲಿ ಜಾತ್ಯಾತೀತ, ದಲಿತ (ಮತ್ತು ಇಡೀ ಸಮಾಜದ ) ಕಾಳಜಿಯ ವಿದ್ವಾಂಸರ ಬಗ್ಗೆ ತಪ್ಪು ತಿಳುವಳಿಕೆ ಬರುವಂತ ಲೇಖನ ಬಂತು.
ಓದುಗರೂ ಸಹಾ ಲೇಖನದ ಅಂಶಗಳ authenticity ಚೆಕ್ ಮಾಡದೆ ಲೇಖನವನ್ನೇ ಆಧಾರವಾಗಿಟ್ಟು ಕೊಂಡು ಮನಸಿಗೆ ಬಂದಂತೆ ಬಸವರಾಜು ಅವ್ರ ಬಗ್ಗೆ ಸಿಟ್ಟು ತೋಡಿ ಕೊಂಡರು.
ಬಸವರಾಜು ಅವ್ರ ಮೂಲ ಭಾಷಣವನ್ನು ಒಮ್ಮೆಯೂ ಓದದೆ, ಅವರ ಭಾಷಣವನ್ನು ನೇರವಾಗಿ ಕೇಳದೆ , ಒಂದು ಪತ್ರಿಕೆಯ "interpretation" ಅನ್ನು ಆಧಾರವಾಗಿ ಇಟ್ಟುಕೊಂಡು ಬರೆದ ಲೇಖನ ದ ಅಭಿರುಚಿ ನನಗಂತೂ ಹಿಡಿಸಲಿಲ್ಲ.
ಈ ಬಗ್ಗೆ ನನ್ನ ಎರಡು ಮಾತು.
ಲೇಖನದ ಶೀರ್ಷಿಕೆ " ಎಲ್ಲಿಯವರೆಗೆ ಈ ದ್ವೇಷ? ಯಾರ ಪಾಪಕ್ಕೆ?" .
http://sampada.net/article/16520
ಇಲ್ಲಿ ಲೇಖಕರ ಮನಸ್ತಿತಿ ಅರ್ಥ ಆಗುತ್ತೆ. ಅವರ ಬ್ರಾಹ್ಮಣ ಭಕ್ತಿ ತಿಳಿಯುತ್ತೆ. ಅಲ್ಲ ಬ್ರಾಹ್ಮಣ ವರ್ಗವನ್ನು ದ್ವೇಷಿಸುವುದು ತಪ್ಪು , ಕೀಳು ಅಂತ ಹೇಳಲಿ ನಾನು ಒಪ್ಪಿಕೋತೀನಿ. ಆದರೆ "ಪಾಪ" ಅಂತಾರಲ್ಲ.. ಅವ್ರ ವೈಚಾರಿಕತೆಗೆ ಏನು ಹೇಳಬೇಕು. (ದಲಿತರ ಬಗ್ಗೆ ಯಾರಾದರೂ ದ್ವೇಷ ಕಾರಿಕೊಂಡಿದ್ದರೆ ಇವರು ಪಾಪ ಅಂತ ಬಳಸುತ್ತಿದ್ದರೋ ಅತ್ವ ಬೇರೆ ಪದ ಬಳಸುತ್ತಿದ್ದರೋ ಅವರೇ ಹೇಳಬೇಕು.) ಇನ್ನು ಮುಂದಾದರೂ ಎಲ್ಲರೂ ಮನುಷ್ಯರೇ., ಯಾರೂ "ಮೇಲಲ್ಲ, ಕೀಳಲ್ಲ" ಅಂತ ನಮ್ಮ ಅಮೋಘ ಲೇಖಕರ sub conscious ಗೆ ಹೊಳೆದರೆ ಇನ್ನೂ ಆರೋಗ್ಯಕರವಾದ ಬರಹಗಳು ಹೊರ ಬರಲು ಸಾಧ್ಯ.

1200 ಕೋಟಿ ರೂಪಾಯಿ ಕೊಟ್ಟರೂ ಕನ್ನಡ ಸಿಗದು !

1200 ಕೋಟಿ ರೂಪಾಯಿ ಕೊಟ್ಟರೂ ಕನ್ನಡ ಸಿಗುವುದಿಲ್ಲ

ಬೆಂಗಳೂರಿನಲ್ಲಿ ಮಧ್ಯಮ-ವರ್ಗದ ಜೀವನ ನಡೆಸಲು ಪ್ರತಿ ತಿಂಗಳು ಕನಿಷ್ಟ ಎಂದರೂ 10 ಸಾವಿರ ರೂಪಾಯಿಗಳನ್ನು ವ್ಯಯ ಮಾಡಬೇಕಾಗುತ್ತದೆ. ಕನಿಷ್ಟವೆಂದರೆ 10 ಲಕ್ಷ ಜನರಾದರೂ ಮಧ್ಯಮ-ವರ್ಗದ ಪಟ್ಟಿಯಲ್ಲಿದ್ದಾರೆ.

ಅಂದರೆ ಬೆಂಗಳೂರಿನಲ್ಲಿ ಪ್ರತಿ ವರ್ಷ ಮಧ್ಯಮ-ವರ್ಗದ ಜನರು ಖರ್ಚು ಮಾಡುವ ಹಣ ಕನಿಷ್ಟವೆಂದರೆ 12 * 10ಲಕ್ಷ *10ಸಾವಿರ = 1,200 ಕೋಟಿ ರೂಪಾಯಿಗಳು (ಕನಿಷ್ಟ) !!!!!!

ಈ ನಮ್ಮ 1,200 ಕೋಟಿ ರೂ ಎಲ್ಲಿಗೆ ಹೋಗುತ್ತಿದೆ ?  ಬನ್ನಿ ಪಟ್ಟಿ ಮಾಡೋಣ:

ಅ) ದಿನಸಿಗಾಗಿ -  ದಿನಸಿ ಅಂಗಡಿ, ಸೂಪರ್ ಮಾರ್ಕಟ್, ಸಣ್ಣ ದೊಡ್ಡ ಬಜಾರುಗಳು...

ಆ) ಮನರಂಜನೆಗಾಗಿ - ಸಿನಿಮಾ ಮಾಲ್, ಶಾಪಿಂಗ್ ಮಾಲ್ ಗಳು...

ಇ) ಶಿಕ್ಷಣಕ್ಕಾಗಿ - ಶಾಲೆ, ಕಾಲೇಜು, ಖಾಸಗೀ ಶಿಕ್ಷಣ ಸಂಸ್ಥೆಗಳು..

ಈ) ಆರೋಗ್ಯಕ್ಕಾಗಿ - ಆಸ್ಪತ್ರೆ, ಕ್ಲೀನಿಕ್, ಲ್ಯಾಬ್, ಔಷಧಾಲಯಗಳು..

ಉ) ಇತರೆ ಸೌಲಭ್ಯಗಳಾದ - ಇಂಟರ್ನೆಟ್, ಮೊಬೈಲ್ ಫೋನ್ 

ಊ) ಚಿನ್ನ, ಬೆಳ್ಳಿ, ವಜ್ರ ಖರೀದಿ

ಋ) ಕಾರು, ಪಟ್ರೋಲು, ಡೀಸಲ್ಲು..

ಸಾಹಸಿ ಪಯಣಿಗರ ನೂರೆಂಟು ಗಂಟುಗಳು

ಮನುಷ್ಯನ ಬದುಕೇ ಒಂದು ಪಯಣ. ಇದು ನಿರಂತರವೂ ಹೌದು. ಅವನು ತನ್ನ ಪಯಣದಲ್ಲಿ ಎದುರಿಸ ಬೇಕಾದ ಮತ್ತು ಎದುರಾಗಬಹುದಾದ ಸಂಗತಿಗಳನ್ನು ತಿಳಿದುಕೊಂಡು ತನ್ನ ಪಯಣದ ದಾರಿಯನ್ನು ಸುಗಮಗೊಳಿಸಲು ಪ್ರಯತ್ನಿಸುತ್ತಾನೆ. ಆದರೆ ಈ ಪಯಣ ಅವನ ಅನುಭವದ ಮೂಟೆಯಾಗಬಹುದು ಅಥವಾ ಮುಂದಿನ ಪೀಳಿಗೆಯ ಊಹನೆಯೂ ಆಗಿರಬಹುದು. ಇಂತಹ ಅದೆಷ್ಟೋ ಕಥನಕಗಳು ನಮಗೆ ದೊರೆಯುತ್ತವೆ. ಅದರಲ್ಲೂ ಪಾಶ್ಚಾತ್ಯರು ಸಾಹಸಿಗಳು ಮತ್ತು ಧೈರ್ಯಶಾಲಿಗಳು. ಅವರ ಒಂದೊಂದು ಸಾಹಸಗಳೂ ಹೊಸ ಹೊಸ ಆವಿಷ್ಕಾರಗಳಿಗೆ ನಾಂದಿಯೂ ಹೌದು. ಅಂತಹ ಅನುಭವ ಕಥನಗಳು ಓದುಗನಲ್ಲಿಯೂ ಕುತೂಹಲ ಮೂಡಿಸಿ, ಹೊಸದೊಂದು ಅನುಭವವನ್ನು ಬಿಚ್ಚಿಡುತ್ತವೆ. ಅಂತಹ ಪಯಣದ, ಅದರಲ್ಲೂ ಸಮುದ್ರಯಾನದ ಪ್ರಯಾಣವನ್ನು `ಪಶ್ಚಿಮದ ಪಯಣಿಗರು' ಅನ್ನುವ ಪುಸ್ತಕದ ಮೂಲಕ ಕನ್ನಡಿಗರಿಗಾಗಿ ಅನುವಾದಿಸಿರುವವರು ಬಿ. ಎಸ್.