ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಳೇ ಪಾತ್ರೆ..... ಹಳೇ ಕಬ್ಬುಣ..... ಹಳೇ ಪೇಪರ್ .....

ಹಳೇ ಪಾತ್ರೆ..... ಹಳೇ ಕಬ್ಬುಣ..... ಹಳೇ ಪೇಪರ್ ತರ ಹೋಯಿ...
ಈ ಪ್ರೀತೀ.... ಈ ಪ್ರೇಮಾ..... ಎಲ್ಲ ಬೇಜಾರ್‍ ಕಣ ಹೋಯಿ...
ಚಂದಿರನ ತೂಕಕೆ ಇಡು... ಸಂಜೇನ ಸೇಲಿಗೆ ಬಿಡು....
ಭೂಮಿನ ಬಾಡಿಗೆ ಕೊಡು..... ಸಾಕು..../ಹಳೇ ಪಾತ್ರೆ/......

ಹೀಗೇ ಸುಮ್ಮನೆ ಒಂದು ಕವನ

ಕೇಳಿಸಿಕೋ ಗೆಳೆಯ
ನೀನಿರಬಹುದು... ನಿನ್ನಮ್ಮನ ಮಡಿಲಲ್ಲಿ
ಕಳೆದ ಮುವ್ವತ್ತು ವಸಂತ
ಇನ್ನಾಯ್ತು ಬಿಡು, ನಾನು ನಿನಗೆಂದೇ
ಬಿಟ್ಟು ಬಂದಿದ್ದೇನೆ ನನ್ನಪ್ಪ ,ನನ್ನಮ್ಮ ,
ನನ್ನ ಹೊಲ, ಮನೆ, ನನ್ನೆಲ್ಲ ಬಂಧು ಬಳಗ
ಈಗಷ್ಟೇ ಗೂಡು ಬಿಟ್ಟ ಹಕ್ಕಿಯಂತೆ
ಗೊತ್ತಿಲ್ಲ!
ಕಲಿಯುವೆನೊ ಹಾರಲು
ಬಾಳ ಶರಧಿಯಲಿ ಈಜಲು
ಬಿದ್ದೆಬಿಡುವೆನೊ ಹಾಗೆ ಹೆಜ್ಜೆಯನ್ನರಿಯದೆ?

ಅಕ್ಷರಗಳ ಸೊಗಸು ..................

ಕನ್ನಡದಲ್ಲಿ ಕೆಲವೊಂದು ಪದಗಳಿವೆ ,ಆ ಪದಗಳನ್ನು ಎಡದಿಂದ ಬಲಕ್ಕೆ ,ಬಲದಿಂದ ಎಡಕ್ಕೆ ಅಕ್ಷರಗಳನ್ನು ಬದಲಿಸಿದರೂ ಅದೆ ಆರ್ಥಕೊಡುತ್ತೆ ಮತ್ತೆ ಕೆಲವು ವಿಚಿತ್ರ ಆರ್ಥ ಕೊಡುತ್ತವೆ ,ಅದರಲ್ಲಿ ಕೆಲವೊಂದನ್ನ ನಾನು ಇಲ್ಲಿ ಬರೆದಿದ್ದೆನೆ ಹಾಗೆನೆ ನೀವೂನು ನಿಮ್ಮ ತಲೆಗೆ ಕೆಲಸ ಕೊಡಿ ಬೇಜಾನು ಸಿಗುತ್ತೆ , ಇದರಿಂದ ಏನು ಪ್ರಯೋಜನ ಅಂತ ಕೇಳಬ್ಯಾಡಿ ,ಸುಮ್ಮನೆ ದಿಡಿರನೆ ನನ್ನ

ಇಂದಿನ ಬರಹದ ಕೊಂಡಿಗೆ (ಪುಟದ ವಿಳಾಸಕ್ಕೆ) ನಿನ್ನೆಯ ದಿನಾಂಕ...ಇದು ಸರಿಯಾಗದೇ?

ಈ ದಿನ ೬ ಫೆಭ್ರುವರಿ ೨೦೦೯.
ನನ್ನ ಈ ಪುಟದ ಕೊಂಡಿಯಲ್ಲಿ ನಿನ್ನೆಯ ದಿನಾಂಕ ತೋರಿಸಲಾಗುತ್ತಿದೆ, ಅಲ್ಲವೇ?
ಬಹುಷಃ ಅಮೇರಿಕಾ ದೇಶದ ಸಮಯವನ್ನು ಅನುಸರಿಸುತ್ತಿರಬೇಕು, ನಮ್ಮ ಸಂಪದದ ಸರ್ವರ್!
ಇದನ್ನು ಸರಿಪಡಿಸಲಾಗದೇ?

ನಿನಗೇಕೆ ನನ್ನ ತೋಳ್ಬಂದಿಯಾಗಿಸುವಾಸೆ?

ಹೇಳು ನಿನಗೇಕೆ ನನ್ನ ತೋಳ್ಬಂದಿಯಾಗಿಸುವಾಸೆ
ನನಗೋ ನಿಜವಾಗಿ ನಿನ್ನ ಮನದನ್ನೆಯಾಗುವಾಸೆ

ದೇಹದಾಸೆಯ ಬಿಟ್ಟು ನೀ ನನ್ನ ಮನದಾಸೆಯನರಿ
ದೇಹಕ್ಕೆ ದೇಹ ತಗುಲಿಸಿ ಆಗಲಾರೆ ಹರಕೆಯ ಕುರಿ

ನಿನ್ನಾಸೆ ತೀರಿಸಿಕೊಂಡು ಮೈಕೊಡವಿ ಎದ್ದು ಬಿಡುವೆ
ನಡುನೀರಿನಲಿ ಕೈ ಬಿಟ್ಟು ನೀ ನನ್ನ ಮರೆತು ಬಿಡುವೆ

ಹೃದಯಕ್ಕೆ ಹೃದಯವನು ಕೊಟ್ಟು ಪ್ರೀತಿಸು ನೀ ನನ್ನ

ಸಂಭಾಷಣೆ...ಈ ಪ್ರೇಮ ಸಂಭಾಷಣೆ...

"ಇಲ್ಲ ಸಲ್ಲದ
ನೆಪವ ಹೂಡಿ
ದೂರವೇಕೆ ಸರಿವೆ?
ನಲ್ಲನಿಲ್ಲಿ
ಹಪಹಪಿಸಿಹನು,
ತೋಳ್ಬಂದಿಯಾಗು
ಬಾ ಚೆಲುವೆ!"

"ಕೊಂಚ ನಿಲ್ಲಿ, ನಲ್ಲ...
ಇದಿನ್ನು ಹೊಸತಲ್ಲ!
ಮೈ ಸೋಕದ, ತುಟಿ ತಾಗದ
ಒಲವ ತುಸು ಸವಿಯಿರಲ್ಲ...
ಅವಸರವೇಕೀಗ
ಹೂಡಲು ಕಾಮನಬಿಲ್ಲ?"

--ಶ್ರೀ
(೬-ಫೆಬ್ರವರಿ-೨೦೦೯)

ಸಮೋಸ

ಮೇಷ್ಟ್ರು : ನೀವು ಮೂರು ಜನ ಒಂದೆ ತರ ಇದ್ದೀರಾ..... ಅಂದ ಹಾಗೆ ನಿಮ್ಮಪ್ಪ ಏನ್ ಕೆಲಸ ಮಾಡ್ತಾರೆ ?

ಹುಡುಗರು : ನಮ್ಮಪ್ಪ XEROX ಅಂಗಡಿ ಇಟ್ಟಿದ್ದಾರೆ !!!

********************************************************************

ಟೀಚರ್ : ಭೂಮಿಗೂ ಚಂದ್ರನಿಗೂ ವ್ಯತ್ಯಾಸವೇನು ?

ಪುಟ್ಟಿ : ಅಣ್ಣ ತಂಗಿ ಟೀಚರ್ !

ಟೀಚರ್ : ಅದು ಹೇಗೆ ?

ಪುಟ್ಟಿ: ನಾವು ಭೂಮಿಗೆ ತಾಯಿ ಅನ್ನುತ್ತೇವೆ, ಚಂದ್ರನಿಗೆ ಮಾಮ ಅಂತೀವಲ್ಲ !!!

ಅಮಾವಾಸ್ಯೆ

ಅಂದು ಅಮಾವಾಸ್ಯೆ. ಹನ್ನೆರಡು ಘಂಟೆಯ ಸಮಯ. ಕಪ್ಪು ಬಣ್ಣದ ಡಾಂಬರು ರಸ್ತೆಯ ಮೇಲೆ ಕಪ್ಪು ಬಣ್ಣದ ಕಾರಿನಲ್ಲಿ ಕುಳಿತು ಹೋಗುತ್ತಿದ್ದೆ. ಗಾಡಿಯಲ್ಲಿ ಪೆಟ್ರೋಲ್ ಖಾಲಿಯಾಗುತ್ತಿತ್ತು. ಹೊರಡುವ ಆತುರದಲ್ಲಿ ಟ್ಯಾಂಕಿನಲ್ಲಿ ಪೆಟ್ರೋಲ್ ಇದೆಯೋ ಇಲ್ಲವೋ ನೋಡಲಿಲ್ಲ. ಹಿಂದೆ ಮುಂದೆ ಯಾವ ಗಾಡಿಗಳ ಸುಳಿವೂ ಇರಲಿಲ್ಲ. ಸುತ್ತಲೂ ಬರೀ ಮರಗಳೇ ಇದ್ದು ಸಿಗ್ನಲ್ ಸಿಗದೇ ಇದ್ದುದರಿಂದ ಮೊಬೈಲ್ ಇದ್ದೂ ಇಲ್ಲದಂತಾಗಿತ್ತು. ಯಾರೋ ಗಾಡಿಯ ಮುಂದೆ ಹಾದು ಹೋದಂತಾಗಿ ಗಕ್ಕನೆ ಬ್ರೇಕ್ ಹಾಕಿ ನಿಂತೆ. ಯಾರೂ ಕಾಣಲಿಲ್ಲ. ಭ್ರಮೆ ಇರಬೇಕು. ಹಿಂದಿನ ರಾತ್ರಿ ನಿದ್ದೆ ಬೇರೆ ಸರಿಯಾಗಿ ಆಗಲಿಲ್ಲ.
ಈ ಹಾಳಾದ ರಮೇಶ ಊರಾಚೆ ತೋಪಿನಲ್ಲಿ ಮನೆಗೇ ಬನ್ನಿ ಅಂತ ಕರೆದಿದ್ದಾನೆ ವಿದೇಶದಲ್ಲಿರುವ ರಮೇಶ ಅಪರೂಪಕ್ಕೆ ಒಮ್ಮೆ ಊರಿಗೆ ಬಂದಾಗ ಅಲ್ಲಿ ಉಳಿದುಕೊಂಡು ಎಲ್ಲ ಸ್ನೇಹಿತರನ್ನು ಅಲ್ಲಿಗೇ ಕರೆಸಿಕೊಳ್ಳುವುದು ವಾಡಿಕೆ. ಯಾವಾಗಲೂ ಗುಂಪಲ್ಲಿ ಗೋವಿಂದ ಅಂತ ಸ್ನೇಹಿತರ ಜೊತೆ ಹೋಗುತ್ತಿದ್ದೆ. ಹಾಳಾದವರು ಇವತ್ತು ಯಾರೂ ಜೊತೆಗೆ ಸಿಗಲಿಲ್ಲ. ಎಲ್ಲರೂ ಮುಂಚೇನೇ ಹೊರಟುಹೋಗಿದ್ದಾರೋ ಅಥವಾ ಆಮೇಲೆ ಬರುತ್ತಾರೋ ಗೊತ್ತಿಲ್ಲ. ನನ್ನ ಎಣಿಕೆ ಪ್ರಕಾರ ಇನ್ನು ಹತ್ತು ಕಿಲೋಮೀಟರ್ ಒಳಗೆ ಅವನ ಕಾಡಿನ ಮನೆ ಸಿಗಲಿಲ್ಲವೋ ಕಾರು ನಿಂತೇ ಹೋಗುವುದು ಗ್ಯಾರಂಟಿ.
ಅದೇನೇನು ಅಡಗಿವೆಯೋ ಈ ಮರಗಳ ಮಧ್ಯೆ ಯಾರಿಗೆ ಗೊತ್ತು. ಗಾಡಿ ನಿಂತಾಗ ಕಾರಿನಲ್ಲೇ ಕುಳಿತರೆ ಯಾವುದಾದರೂ ಬೇರೇ ಗಾಡಿ ಬಂದಲ್ಲಿ ನಿಲ್ಲಿಸಲೂ ಪುರುಸೊತ್ತಿರುವುದಿಲ್ಲ. ಹಾಗೆಂದು ಹೊರಗೆ ನಿಂತರೆ ಒಂದೆಡೆ ಚಳಿ ಇನ್ನೊಂದೆಡೆ ಭಯ. ಹಾವು ಬಂದು ’ಹಾಯ್’ ಎಂದರೆ? ಕರಡಿ ಬಂದು ಕಿಸ್ ಕೊಟ್ಟರೆ? ಅಯ್ಯಯ್ಯೋ, ಏನೇನೋ ಆಲೋಚನೆಗಳು ಬರತೊಡಗಿದವು.