ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಾಹಸಿ ಪಯಣಿಗರ ನೂರೆಂಟು ಗಂಟುಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಬಿ. ಎಸ್. ವಿದ್ಯಾರಣ್ಯರವರು
ಪ್ರಕಾಶಕರು
ಚಾರುಮತಿ ಪ್ರಕಾಶನ, 12, 10ನೇ ಮುಖ್ಯ ರಸ್ತೆ, ಶ್ರೀನಗರ, ಬೆಂಗಳೂರು - 560 050; ಫೋ.ಸಂ. 94428 35553
ಪುಸ್ತಕದ ಬೆಲೆ
೨೮೦ ರೂ.

ಮನುಷ್ಯನ ಬದುಕೇ ಒಂದು ಪಯಣ. ಇದು ನಿರಂತರವೂ ಹೌದು. ಅವನು ತನ್ನ ಪಯಣದಲ್ಲಿ ಎದುರಿಸ ಬೇಕಾದ ಮತ್ತು ಎದುರಾಗಬಹುದಾದ ಸಂಗತಿಗಳನ್ನು ತಿಳಿದುಕೊಂಡು ತನ್ನ ಪಯಣದ ದಾರಿಯನ್ನು ಸುಗಮಗೊಳಿಸಲು ಪ್ರಯತ್ನಿಸುತ್ತಾನೆ. ಆದರೆ ಈ ಪಯಣ ಅವನ ಅನುಭವದ ಮೂಟೆಯಾಗಬಹುದು ಅಥವಾ ಮುಂದಿನ ಪೀಳಿಗೆಯ ಊಹನೆಯೂ ಆಗಿರಬಹುದು. ಇಂತಹ ಅದೆಷ್ಟೋ ಕಥನಕಗಳು ನಮಗೆ ದೊರೆಯುತ್ತವೆ. ಅದರಲ್ಲೂ ಪಾಶ್ಚಾತ್ಯರು ಸಾಹಸಿಗಳು ಮತ್ತು ಧೈರ್ಯಶಾಲಿಗಳು. ಅವರ ಒಂದೊಂದು ಸಾಹಸಗಳೂ ಹೊಸ ಹೊಸ ಆವಿಷ್ಕಾರಗಳಿಗೆ ನಾಂದಿಯೂ ಹೌದು. ಅಂತಹ ಅನುಭವ ಕಥನಗಳು ಓದುಗನಲ್ಲಿಯೂ ಕುತೂಹಲ ಮೂಡಿಸಿ, ಹೊಸದೊಂದು ಅನುಭವವನ್ನು ಬಿಚ್ಚಿಡುತ್ತವೆ. ಅಂತಹ ಪಯಣದ, ಅದರಲ್ಲೂ ಸಮುದ್ರಯಾನದ ಪ್ರಯಾಣವನ್ನು `ಪಶ್ಚಿಮದ ಪಯಣಿಗರು' ಅನ್ನುವ ಪುಸ್ತಕದ ಮೂಲಕ ಕನ್ನಡಿಗರಿಗಾಗಿ ಅನುವಾದಿಸಿರುವವರು ಬಿ. ಎಸ್.

ಯಾವುದು ಸತ್ಯ?

ಕಣ್ಣಿಗೆ ಕಂಡದ್ದೇ ಸತ್ಯವೇ
ಕಿವಿ ಆಲಿಸಿದ್ದೇ ಸತ್ಯವೇ
ಬುದ್ಧಿಗೆ ತೋಚಿದ್ದೇ ಸತ್ಯವೇ
ಹೃದಯ ಭಾವಿಸಿದ್ದೇ ಸತ್ಯವೇ
ಯಾವುದು ಸತ್ಯ?

ಕುರುಡನ ಕನಸು ಸತ್ಯವೇ
ಮೂಕನ ಗಾಯನ ಸತ್ಯವೇ
ಹೆಳವನ ನರ್ತನ ಸತ್ಯವೇ
ಕಟುಕನ ಕರುಣೆ ಸತ್ಯವೇ
ಯಾವುದು ಸತ್ಯ?

ಸಾಕ್ಷ್ಯಗಳೇ ಸತ್ಯವೇ
ಸತ್ಯಕ್ಕೆ ಸಾಕ್ಷ್ಯಗಳೇ
ಸಾಕ್ಷ್ಯವು ಸಿಗದಿರುವುದೇ
ಸಾಕ್ಷ್ಯವಿಲ್ಲವೆನ್ನಲು ಸಾಕ್ಷಿಯೇ

ಕೇಳಿಸಿಕೋ ಗೆಳತಿ

ಕೇಳಿಸಿಕೋ ಗೆಳತಿ,
ನೀನಿದ್ದಿರಬಹುದು ಇಷ್ಟು ದಿನ
ನಿನ್ನ ತವರು ಮನೆಯಲ್ಲಿ ,
ಮುದ್ದಿನ ಮೊಲದ ಹಾಗೆ
ಸೊಕ್ಕಿನ ಬೆಕ್ಕಿನ ಹಾಗೆ
ನಿನ್ನಮ್ಮ ಮಾಡಿಟ್ಟ ಮೃಷ್ಟಾನ್ನವನುಂಡು
ಪುಸ್ತಕ , ಪರೀಕ್ಷೆ ಗೆಳತಿಯರ ಹಿಂಡು,
ಎಲ್ಲದರ ಜೊತೆಗೆ ಆಡಿ ಬೆಳೆದವಳು
ಉಳಿದ ಸಮಯಗಳಲ್ಲಿ ಮೂರ್ಖ ಪೆಟ್ಟಿಗೆಯನ್ನು
ನೋಡಿ ಕಳೆದವಳು,
ಒಬ್ಬಳೇ ಮಗಳೆಂದು ಮುದ್ದಿನಿಂದಾಡುತ್ತ,

ಹುಡುಗಿ ಪ್ರೀತಿಸುತ್ತಾಳೆ.....

ಹುಡುಗಿ ಪ್ರೀತಿಸುತ್ತಾಳೆ.....

ಶ್ರೀಮಂತನ ಸೊಕ್ಕಿನಿಂದ ಉಬ್ಬಿ ನಿಂತ ಪರ್ಸ್ ಅನ್ನು
ನಮ್ಮೂರ ಕರಿಯನ ಬತ್ತಲೆದೆಯಲ್ಲಿ ಅವನ ಮಕ್ಕಳು
ಸುರಿಸಿದ ಕಣ್ಣೀರು ರಕ್ತವಾಗಿ ಹೆಪ್ಪುಗಟ್ಟಿದುದರ
ಅರಿವಿಲ್ಲ ಅವಳಿಗೆ.....

ಹುಡುಗಿ ಪ್ರೀತಿಸುತ್ತಾಳೆ.....

ಹೊಂಡಾ ಸುಜುಕಿಗಳ ಸರದಾರರನ್ನು ,ತಮ್ಮದೇ

ರಥಸಪ್ತಮಿಯ ಆಚರಣೆ

ನಿಸರ್ಗ ಯೋಗ ಮತ್ತು ಸ೦ಸ್ಥೆಯವರು ರಥಸಪ್ತಮಿಯ ಆಚರಣೆಯ ಅ೦ಗವಾಗಿ ವಿ.ವಿ. ಮೊಹಲ್ಲಾದಲ್ಲಿರುವ ಚೆಲುವಾ೦ಬ ಪಾರ್ಕಿನ ಯೋಗವನದಲ್ಲಿ ಇ೦ದು ಬೆಳಗ್ಗೆ ಸೂರ್ಯದೇವನ ೧೦೮ ನಾಮಸ್ತೋತ್ರಗಳನ್ನು ಪಠಿಸುತ್ತಾ ಸಾಮೂಹಿಕವಾಗಿ ೧೦೮ ನಮಸ್ಕಾರಗಳನ್ನು ಮಾಡುವ ಮೂಲಕ ತಮ್ಮ ಕೃತಙ್ಞತೆಯನ್ನು ನೂರಾರು ಜನರು ಸಲ್ಲಿಸಿದರು.

ಸರಣಿ ೭- ಡಾ!! ಎಚ್. ನರಸಿಂಹಯ್ಯ -ಬದುಕು ನನಗೇನು ಕಲಿಸಿದೆ

ಭ್ರೂಣದಿಂದ ಸಮಾಧಿಯವರೆಗೆ ಕಲಿಕೆ ಒಂದು ನಿರಂತರ ಪ್ರಕ್ರಿಯೆ ಆಗಬೇಕು. ಕೇವಲ ತರಗತಿಯ ನಾಲ್ಕು ಗೋಡೆಗಳಿಗಷ್ಟೇ ಸೀಮಿತ ಎಂಬ ತಪ್ಪು ಕಲ್ಪನೆಯಿದೆ. ಚುರುಕಾದ ಪರಿಶೀಲನ ಪ್ರಜ್ಞೆಯುಳ್ಳ ವ್ಯಕ್ತಿಯ ಸೂಕ್ಷ್ಮ ಸಂವೇದಿ ಮನಸ್ಸು ಬದುಕಿನ ಪ್ರತಿಯೊಂದು ಘಟನೆಯಿಂದಲೂ ಕಲಿಯಬಹುದು.

ಸಿದ್ಧಾರ್ಥನ ಸಂದರ್ಭದಲ್ಲಿ ಆದದ್ದು ಹೀಗೆಯೇ. ಒಬ್ಬ ಮುದುಕ, ರೋಗಿ ಮತ್ತು ಒಂದು ಹೆಣ ಆತನಿಗೆ ಅರ್ಥಪೂರ್ಣ ಸಂದೇಶ ನೀಡಿತು. ಅಂತಿಮವಾಗಿ ಆತ ಬುದ್ಧನಾದ. ನಾವಾದರೋ ಮುದುಕರು, ರೋಗಿಗಳ ನಡುವೆಯೇ ಸಾವಿನಿಂದ ಆವೃತ್ತರಾಗಿದ್ದರೂ, ಪ್ರಭಾವಿತರಾಗದೆ ಬದುಕುತ್ತಿದ್ದೇವೆ.

ಮೂವತ್ತೈದು ವರ್ಷಗಳಿಗೂ ಮಿಕ್ಕಿ, ವಿದ್ಯಾರ್ಥಿಗಳ ಜೊತೆ ಕಾರ್ಯ ನಿರ್ವಹಿಸಿ, ಹಲವಾರು ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳ ಅನುಷ್ಠಾನದಲ್ಲಿ ಪಾಲ್ಗೊಂಡಿರುವ ನನ್ನ ಅನುಭವದಂತೆ ಮುಕ್ತ ಮನಸ್ಸಿದ್ದು, ವಿದ್ಯಾರ್ಥಿಗಳನ್ನು ಅಪ್ರಬುದ್ಧರು ಹಾಗೂ ಬೇಜವಾಬ್ದಾರರೆಂದು ಪರಿಗಣಿಸದೆ ಇದ್ದರೆ, ಮಲಿನವಾಗದ, ತಾಜಾ ಯುವ ಮನಸ್ಸುಗಳಿಂದ ಹೊಸ ಸಲಹೆಗಳನ್ನು ಸ್ವೀಕರಿಸಲು ಸಾಧ್ಯ.

ಪ್ರಣಯ ಗೀತೆಗಳು!!!!! (ಮಸ್ಟ್ ರೀಡಿಂಗ್)

ಪ್ರಣಯ ಗೀತೆಗಳು!!!!!

(ರಸಪ್ರಶ್ನೆಗಳು!)

(ವ್ಯಾಲಂಟೈನ್ಸ್ ದಿನಕ್ಕೆ, ಈ ಹಾಡುಗಳನ್ನು ಹಾಡಿಕೊಂಡು ಪ್ರಶ್ನೆಗಳಿಗೆ ಉತ್ತರ ಕೊಡಿ)

ಕೆಳಗೆ, ಹಾಡಿನ ಮಧ್ಯದ ಸಾಲುಗಳು ಇವೆ. ನೀವು ಇವುಗಳ ಮೊದಲ ಒಂದು ಅಥವಾ ಎರಡು ಸಾಲುಗಳನ್ನು ತಿಳಿಸಿ:............

೧. ನಾ ಪ್ರೇಮದರಮನೆಯಲ್ಲಿ ವೈಭೋಗ ಸಿರಿಯನು ಕಂಡೆ
ನಿನ್ನೆದೆಯ ಸಿಂಹಾಸನದಿ ನಾ ರಾಜ್ಯ ವಾಳಿದೆ.

ಹೂ ಬಾಣ ಹಿಡಿದವಗೆ ಇನ್ನೊಂದು ನಮನ

ಕರ್ಪೂರದೊಲು ಉರಿದರೂ ಅಳವೇ*ರುತಲೆ ಇರುವ
ವೀರನಿಗೆ ನಾ ಮಣಿವೆ ಹೂ ಬಾಣ ಹಿಡಿದವಗೆ

(ಅಳವು = ಶಕ್ತಿ )

ಸಂಸ್ಕೃತ ಮೂಲ:

ಕರ್ಪೂರ ಇವ ದಗ್ಧೋಪಿ ಶಕ್ತಿಮಾನ್ ಯೋ ದಿನೇ ದಿನೇ
ನಮೋಸ್ತ್ವವಾರ್ಯ ವೀರ್ಯಾಯ ತಸ್ಮೈ ಕುಸುಮ ಧನ್ವನೇ

-ಹಂಸಾನಂದಿ