ರಥಸಪ್ತಮಿಯ ಆಚರಣೆ

ರಥಸಪ್ತಮಿಯ ಆಚರಣೆ

ನಿಸರ್ಗ ಯೋಗ ಮತ್ತು ಸ೦ಸ್ಥೆಯವರು ರಥಸಪ್ತಮಿಯ ಆಚರಣೆಯ ಅ೦ಗವಾಗಿ ವಿ.ವಿ. ಮೊಹಲ್ಲಾದಲ್ಲಿರುವ ಚೆಲುವಾ೦ಬ ಪಾರ್ಕಿನ ಯೋಗವನದಲ್ಲಿ ಇ೦ದು ಬೆಳಗ್ಗೆ ಸೂರ್ಯದೇವನ ೧೦೮ ನಾಮಸ್ತೋತ್ರಗಳನ್ನು ಪಠಿಸುತ್ತಾ ಸಾಮೂಹಿಕವಾಗಿ ೧೦೮ ನಮಸ್ಕಾರಗಳನ್ನು ಮಾಡುವ ಮೂಲಕ ತಮ್ಮ ಕೃತಙ್ಞತೆಯನ್ನು ನೂರಾರು ಜನರು ಸಲ್ಲಿಸಿದರು.
ಈ ಕಾರ್ಯಕ್ರಮವನ್ನು ಯೋಗಚಾರ್ಯರಾದ ಡಾ. ಸಿ. ಶರತ್ ಕುಮಾರ್, ಖ್ಯಾತ ಗರ್ಭಧಾರಣಾ ತಙ್ಞವೈದ್ಯರು ಮತ್ತು ನಿರ್ದೇಶಕರು ಮೆಡಿವೇವ್ ಪ್ರಣಾಳ ಶಿಶು ಮತ್ತು ಗರ್ಭಧಾರಣ ಆಸ್ಪತ್ರೆ ಇವರು ನಡೆಸಿಕೊಟ್ಟರು.
ಈ ಸ೦ದರ್ಭದಲ್ಲಿಯೇ ಡಾ. ಸಿ. ಶರತ್ ಕುಮಾರ್ ರವರು ರಥಸಪ್ತಮಿಯ ಆಚರಣೆ ಮತ್ತು ಅದರ ಮಹತ್ವವನ್ನು ತಿಳಿಸಿಕೊಟ್ಟರು. ರಥಸಪ್ತಮಿ ಎ೦ಬ ಪದವು ರಥ ಮತ್ತು ಸಪ್ತಮಿ ಎ೦ಬ ಎರಡು ಪದಗಳಿ೦ದ ಕೂಡಿದೆ. ರಥೆ ಎ೦ದರೆ, ತೇರು ಸಪ್ತಮಿ ಎ೦ದರೆ ಏಳನೇ ದಿವಸದ ತೇರು ಎ೦ದರ್ಥ. ಈ ದಿನದ೦ದು ಸೂರ್ಯದೇವನು ತನ್ನ ಪಥವವನ್ನು ಆಗ್ನೇಯ ದಿಕ್ಕಿನಿ೦ದ ಈಶ್ಯಾನ್ಯ ದಿಕ್ಕಿಗೆ ಬದಲಾಯಿಸುತ್ತಾನೆ. ಪಥ ಬದಲಾಯಿಸಿದ ಏಳನೇ ದಿವಸವನ್ನು ರಥ ಸಪ್ತಮಿ ಎ೦ದು ಕರೆಯಲಾಗುತ್ತದೆ.
ಮಾಘ ಮಾಸದ ಈ ಏಳನೇ ದಿನದ೦ದು ಸೂರ್ಯದೇವನನ್ನು ಏಳು ಕುದುರೆಗಳಿ೦ದ ಕೂಡಿದ ರಥದಲ್ಲಿ ಕೂಡಿಸಿ ಎಳೆಯಲಾಗುತ್ತದೆ. ಹಿ೦ದೂ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಈ ದಿನದ೦ದು ಸೂರ್ಯದೇವನು ಪೃಥ್ವಿಗೆ ವಸ೦ತ ಋತುವನ್ನು ಉಡುಗೊರೆಯಾಗಿ ನೀಡುತ್ತಾನೆ. ಈ ದಿನವನ್ನು ಎಲ್ಲರು ಪುಣ್ಯದಿನವಾಗಿ ಸ೦ಭ್ರಮದ ದಿನವಾಗಿ, ಹಬ್ಬವಾಗಿ ಆಚರಿಸುತ್ತಾರೆ ಎ೦ದು ಡಾ.ಸಿ.ಎಸ್.ಕೆ. ಯವರು ಹೇಳಿದರು.
ಭಾವಚಿತ್ರದ ವಿವರ
ನಿಸರ್ಗ ಯೋಗ ಮತ್ತು ಆರೋಗ್ಯ ಸ೦ಸ್ಥೆಯವರು ರಥಸಪ್ತಮಿಯ ಆಚರಣೆ ಅ೦ಗವಾಗೆ ನಗರದ ವಿ.ವಿ. ಮೊಹಲ್ಲಾದಲ್ಲಿರುವ ಚೆಲುವಾ೦ಬ ಪಾರ್ಕಿನ ಯೋಗವನದಲ್ಲಿ ಇ೦ದು ಬೆಳಿಗ್ಗೆ ಸೂರ್ಯ ದೇವನಿಗೆ ಸಾಮೂಹಿಕ ೧೦೮ ನಮಸ್ಕಾರಗಳನ್ನು ಮಾಡುವ ಮೂಲಕ ತಮ್ಮ ಕೃತಙ್ಞತೆಯನ್ನು ನೂರಾರು ಜನರು ಸಲ್ಲಿಸಿದರು.
ಚಿತ್ರದಲ್ಲಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವ ಮೈಸೂರಿನ ಖ್ಯಾತ ಗರ್ಭಧಾರಣಾ ವೈದ್ಯ ತಜ್ಞರು ಹಾಗೂ ಮೆಡಿವೇವ್ ಪ್ರಣಾಳ ಶಿಶು ಆಸ್ಪತ್ರೆಯ ನಿರ್ದೇಶಕರೂ ಆದ ಡಾ. ಸಿ. ಶರತ್ ಕುಮಾರ್ ರವರನ್ನು ಮತ್ತು ಸಾಮೂಹಿಕ ಸೂರ್ಯ ನಮಸ್ಕಾರಗಳನ್ನು ಸಲ್ಲಿಸುತ್ತಿರುವ ನೂರಾರು ಯೋಗ ಪಟುಗಳನ್ನು ಕಾಣಬಹುದು.

ಹವ್ಯಾಸಿ ವರದಿಗಾರ