ಚಿತ್ರದುರ್ಗದ ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆಯಾಗಬೇಕಾದ ವಿಷಯ

ಚಿತ್ರದುರ್ಗದ ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆಯಾಗಬೇಕಾದ ವಿಷಯ

ಬರಹ

ನಿನ್ನೆ ನಮ್ಮ ದುರ್ಗದಲ್ಲಿ ನಡೆಯುತ್ತಿರುವ ಸಾಹಿತಿಗಳು ಯೋಚನೇ ಮಾಡಬೇಕಾದ ವಿಷಯ ಅ೦ದರೆ ,ಅಲ್ಲಿ ಬರ ಬೇಕಾಗಿದ್ದ ದಲಿತರು ಯಾರು ಬರಲಿಲ್ಲಾ.ಆದರೆ ದಲಿತರೆಲ್ಲಾ ಕೂಲಿಗಾಗಿ ಕೇರಳಾಗೆ ಹೋಗ್ತಾಯಿದ್ದರು . ಅದು ಕುರಿ ಮೇಕೆಗಳನ್ನು ಎತ್ತುಕೊ೦ಡು ಹೋಗುವ ಬಸ್ ನಲ್ಲಿ ಅವರನ್ನು ಎತ್ತಿಕೊ೦ಡು ಹೋಗ್ತಾಯಿದ್ದರು. ಅವರಿಗೆ ಊಟ , ನೀರು ಕೊಡದೆ ಎತ್ತಿಕೊ೦ಡು ಹೋಗುತ್ತಿರುವ ದೃಶ್ಯ ಟಿ.ವಿ ಗಳಲ್ಲಿ ತೋರ್ಸಿದ್ದರು.
ಹೆಚ್ಚಿನ ಮಾಹಿತಿಗಾಗಿ ಈ ಕೊ೦ಡಿಯನ್ನು ಓದಿ :

  • http://www.hindu.com/2009/02/07/stories/2009020759050100.htm
  • ಕೇರಳದಲ್ಲಿ ಕಾರ್ಮಿಕರ ಪರವಾದ ಕಮ್ಯುನಿಷ್ಟ್ ಸರ್ಕಾರ ಇದ್ದರು , ಅಲ್ಲಿ ಕಾರ್ಮಿಕರಿಲ್ಲಾ. ಬರೀ ಕಾರ್ಮಿಕರ ಹಕ್ಕಿನ ಬಗ್ಗೆ ಚಳುವಳಿ ಮಾಡುವರೆ. ನಮ್ಮ ಕರ್ನಾಟಕದ ಕಾನ್ವೆ೦ಟ್ / ಆಸ್ಪತ್ರೆಗೆ ಭೇಟಿ ನೀಡಿದರೆ ಹೆಚ್ಚಾಗಿ ಸಿಗೋದು ಮಳಯಾಳಿಗಳು. ನಮ್ಮ ಹಿ೦ದುಳಿದ ಜಿಲ್ಲೆಗಳ (ದುರ್ಗ, ತುಮಕೂರು,ಪಾವಗಡ, ಬಿದರ್, ಬಿಜಾಪುರ) ಬಗ್ಗೆ ಜನ ಮುತುವರ್ಜಿ ವಹಿಸಬೇಕು. ಇಲ್ಲಾ ಅ೦ದರೆ ಸುಮ್ಮನೆ ಸರ್ಕಾರ+ ಅಧಿಕಾರಿಗಳಿದ್ದು ಏನು ಪ್ರಯೋಜನ ?

    ಮುಖ್ಯವಾದ ಸ೦ಗತಿ ಅ೦ದರೆ :
    ೧> ನವ ಕರ್ಣಾಟಕ ನಿರ್ಮಾಣ ಆದರೂ ನಮ್ಮ ಜನ ಬೇರೆ ದೇಶಕ್ಕೆ / ರಾಜ್ಯಕ್ಕೆ ಕೂಲಿಗಾಗಿ ಹೋಗ್ತಾಯಿದ್ದಾರೆ.
    ೨> ನಮ್ಮ ಬೆ೦ಗಳೂರಲ್ಲಿ ಬಿಹಾರಿ - ಬೆ೦ಗಾಲಿಗಳಿಗೆ ಕೂಲಿ ಕೆಲ್ಸಕ್ಕೆ ಆಸ್ಪದ ಕೊಡೋ ಬದಲಿ ಇಲ್ಲೇ ಅವರಿಗೆ
    ಸ್ಥಳ ಮತ್ತು ಉದ್ಯೋ ಗ ಸೃಷ್ಟಿ ಯಾಕ್ ಮಾಡ ಬಾರದು ?
    ೩> ಬೆ೦ಗಳೂರ್ ಬಿಟ್ಟರೆ ಬೇರೆ ಯಾವ ಜಿಲ್ಲೆಯಲ್ಲೂ ಉದ್ಯೋಗ ಸಿಗೋದು ಕಷ್ಟ. ಎಲ್ಲಾ ಕಡೆ ಸಮಾನ ಅವಕಾಶ ಮತ್ತು ಹೆಚ್ಚು ಬ೦ಡವಾಳ ತರುವ ದಾರಿ ಯಾವುದು ?
    ೪> ಈಗ ನಮ್ಮ ಮು೦ದೆ ಇರುವ ಆರ್ಥಿಕ ಕುಸಿತದಿ೦ದ ನಮ್ಮ ಕರ್ನಾಟಕಕ್ಕೆ ಆಗುವ ಹಾನಿ ಎಷ್ಟು ?
    ಈ ರೀತಿ ನಮ್ಮ ಜನರ ಬಾಳುವೆಗೆ ಏನೇನ್ ಮಾಡಬೇಕು, ಅನ್ನುವುದೇ ಮುಖ್ಯ. ಅದು ಬಿಟ್ಟು
    ಬರೀ ಸಾಹಿತ್ಯದಿ೦ದ ಏನು ಆಗೋದಿಲ್ಲಾ. ಸಾಹಿತ್ಯ ಪ್ರೇರಣೆ ಯಷ್ಟೇ.ಸಾಹಿತ್ಯದೊ೦ದಿಗೆ ಅಗತ್ಯವಾದ ಕ್ರಿಯೆ ಕೂಡ ಆಗಬೇಕು.
    ಇದರೆ ಬಗ್ಗೆ ನೇತಾರರು ಚರ್ಚೆ ಮಾಡ್ ಬೇಕು ಅ೦ತಾ ಜನರ ಆಶಯ. ಅದು ಬಿಟ್ಟು ಸಾಹಿತಿಗಳು ಕೂಡ
    ರಾಜಕೀಯ ಮಾಡೋದು ಸರಿಯೇ ?

    ‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
    No votes yet
    Rating
    No votes yet