ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಂಜುತ್ತಾ ಬಾಳಿದರೆ ಬಾಳಲ್ಲೇನುಂಟು ಬರೇ ಮಣ್ಣಾಂಗಟ್ಟಿ!!!

ಮನಸಿನ ಆಸೆಗಳ ವ್ಯಕ್ತಪಡಿಸಲಾಗದ ಚಡಪಡಿಕೆಯೇ?
ನನಸಲ್ಲಿ ಆಗದ್ದನ್ನು ಕನಸಲ್ಲಿ ಪೂರೈಸಿಕೊಂಬಾಸೆಯೇ?

ಕನಸುಗಳ ನನಸಾಗಿಸುವ ಛಲವಿರಲಿ ಸದಾ ಮನದಲ್ಲಿ
ಆಸೆಗಳ ಕೊಲ್ಲುವ ಅಸಹಾಯಕತೆ ಇರದಿರಲಿ ಬಾಳಿನಲ್ಲಿ

ಅಂಜುತ್ತಾ ಬಾಳಿದರೆ ಬಾಳಲ್ಲೇನುಂಟು ಬರೇ ಮಣ್ಣಾಂಗಟ್ಟಿ
ಮುನ್ನುಗ್ಗೋ ಜೀವನಕೆ ನಮ್ಮೆದೆಯ ಮಾಡಿಕೊಳ್ಳಬೇಕು ಗಟ್ಟಿ

ಹುಚ್ಚ್ಚು ಹರೆಯದ ಕಿಚ್ಚು ಮಾತುಗಳು

ಗೊತ್ತಿಲ್ಲದೆ ಬಂದೇ ಬಿಟ್ಟಿದೆ ಹರೆಯ
ಕೇಳುತ್ತಿದ್ದಂತೆ ಪ್ರಕೃತಿಯ ಕರೆಯ
ಉಕ್ಕಿಸಿದೆ ಆಸೆಯ ಸೆಲೆಯ
ಬೀಸಿದೆ ಬಯಕೆಯ ಬಲೆಯ

ಬಾಯಿಲ್ಲದವರು

ಬಾಯಿಲ್ಲದವರು ನಾವು
ನಮ್ಮೆದುರಿಗೆ ಏನು ನಡೆಯುತ್ತಿದ್ದರೂ
ನೋಡದಂತೆ ಸುಮ್ಮನಿರುವೆವು
ನಮ್ಮ ಮೇಲೇ ದೌರ್ಜನ್ಯನಡೆಯುತ್ತಿದ್ದರೂ
ತಾಳ್ಮೆ ಗೆಡುವುದಿಲ್ಲ

ನಮಗೂ ಭಾವನೆಗಳಿವೆ
ಎಲ್ಲವನ್ನೂ ನಮ್ಮೋಳಗೇ ಹೇಳಿಕೊಳ್ಳುವೆವು
ಗಟ್ಟಿಯಾಗಿ ಮಾತನಾಡಲಾರೆವು
ಇದಕ್ಕೇ ದುರ್ಬಲರೆಂಬ ಹಣೆ ಪಟ್ಟಿ ನಮಗೆ
ಏಕೆಂದರೆ ಬಾಯಿಲ್ಲದವರುನಾವು

ಯಾರಾದರೂ ನಮ್ಮ ಭಾವನೆಗಳಿಗೆ

ಬಾಗಿಲನು ತೆರೆದು ಸ್ವಾಗತವ ಕೋರುವಿರಾ?

ನನ್ನ ಗೆಳತಿಯೊಬ್ಬಳಿಂದ ಸಂಪದದ ಪರಿಚಯವಾಯ್ತು
ಮೂರು ದಿನ ಸುಮ್ಮನೆ ನೋಡ್ತಿದ್ದೆ
ಇವತ್ತು ಮೆಂಬರ್ ಆಗ್ತಾ ಇದೀನಿ. \
ನನ್ನನ್ನು ನಿಮ್ಮ್ಮೊಲ್ಲೊಬ್ಬಳಾಗಿ ಮಾಡಿಕೊಳ್ಳಿ

ಬಾಳಬುತ್ತಿ

ನೆನ್ನೆ ಕಳೆದಿದೆ ನಾಳೆ ಬರಲಿದೆ
ಇಂದು ನಿನ್ನದಾಗಿದೆ ಎಂಬ ಮಾತುಗಳು
ಆಗಿವೆಯೇ ಅರ್ಥಹೀನ ತತ್ವಗಳು
ಹಿಡಿತಕೂ ಸಿಗದೆ ಓಡುತಿರಲು ದಿನಗಳು

ಏನನು ಹಿಡಿಯಲು ಹಾರುತಿಹೆವು
ಯಾರ ಕಾಣಲು ಓಡುತಿಹೆವು
ಕೂಡಿ ಕಳೆದು ಗುಣಿಸಿ ಭಾಗಿಸಿ
ಯಾವ ಲೆಖ್ಖದುತ್ತರ ಹುಡುಕುತಿಹೆವು

ಸುಂದರ ನಾಳೆಗಳ ಕನಸಿನಲಿ
ಇಂದೆಂಬ ನೆನ್ನೆಯ ಕನಸು ಕಮರಿತೇ
ನಾಳೆಯಡುಗೆಯ ಚಿಂತೆಯಲಿ

ಬಾಳಬುತ್ತಿ

ನೆನ್ನೆ ಕಳೆದಿದೆ ನಾಳೆ ಬರಲಿದೆ
ಇಂದು ನಿನ್ನದಾಗಿದೆ ಎಂಬ ಮಾತುಗಳು
ಆಗಿವೆಯೇ ಅರ್ಥಹೀನ ತತ್ವಗಳು
ಹಿಡಿತಕೂ ಸಿಗದೆ ಓಡುತಿರಲು ದಿನಗಳು

ಏನನು ಹಿಡಿಯಲು ಹಾರುತಿಹೆವು
ಯಾರ ಕಾಣಲು ಓಡುತಿಹೆವು
ಕೂಡಿ ಕಳೆದು ಗುಣಿಸಿ ಭಾಗಿಸಿ
ಯಾವ ಲೆಖ್ಖದುತ್ತರ ಹುಡುಕುತಿಹೆವು

ಸುಂದರ ನಾಳೆಗಳ ಕನಸಿನಲಿ
ಇಂದೆಂಬ ನೆನ್ನೆಯ ಕನಸು ಕಮರಿತೇ
ನಾಳೆಯಡುಗೆಯ ಚಿಂತೆಯಲಿ

"ಸೌತ್ ಇಂಡಿಯನ್ಸ್ ಆರ್ ರಫ್ ಇನ್ ಸ್ಪೀಕಿಂಗ್ " ನಾರ್ತಿ ತಾತನ ಉವಾಚ

ನೆನ್ನೆ ಒಬ್ಬರು ಫೋನ್ ಮಾಡಿದ್ದರು. ಫೋನ್ ನಲ್ಲಿ ಮಾತಾಡುತ್ತಲೆ ಅದು ಯಾವುದೋ ನಾರ್ತ್ ಇಂಡಿಯಾದಿರಬಹುದೆಂದಕೊಂಡೆ.
ತಮ್ಮ ಹೆಂಡತಿಗೆ ಇಂಗ್ಲೀಷ್ ಕಲಿಸಬೇಕೆಂದು ಕೋರಿದರು.
ದ್ವನಿಯಲ್ಲಿಯೇ ಸಾಕಷ್ಟು ದರ್ಪವಿರುವುದು ತಿಳಿಯಿತು.ಕೆಲವರ ಮಾತೆ ಈ ರೀತಿ ಇರುತ್ತದೆ. ನಾನೇನು ಬೇಸರಿಸಿಕೊಳ್ಳಲಿಲ್ಲ.
ನೆನ್ನೆ ಸಾಯಂಕಾಲ ಬಂದರು
ವಯಸ್ಸಾದವರು.

ವೇದದಲ್ಲಿ ಬೆಳಕಿನ ವೇಗ ೨

ಸವಿತೃ ರವರೆ ನಿಮ್ಮ ಲೇಖನವನ್ನು ಮುಂದುವರಿಸುವ ಯತ್ನ ಮಾಡಿದ್ದೇನೆ.

ಕಾಲದ ಅಳತೆ: ನಿಮಿಷ
ಮಹಾಭಾರತದಲ್ಲಿರುವ ಶಾಂತಿಪರ್ವದ ಎರಡನೆ ಭಾಗದ ಮೋಕ್ಷಧರ್ಮ ಪರ್ವದಲ್ಲಿ ನಿಮಿಷ ಎಂದರೆ ಕೆಳಕಂಡಂತೆ ಹೇಳಿದೆ.

೧೫ ನಿಮಿಷ = ೧ ಕಸ್ಥ
೩೦ ಕಶ್ತ = ೧ ಕಾಲ
೩೦.೩ ಕಾಲ = ೧ ಮಹೂರ್ಥ
೩೦ ಮಹೂರ್ಥ = ೧ ದಿನ-ರಾತ್ರಿ
ಒಂದು ದಿನದಲ್ಲಿ ೨೪ ಘಂಟೆಗಳು