ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜೀವಾಮೃತ ಸಿದ್ಧಪಡಿಸುವ ವಿಧಾನ (ರೈತರೇ ಬದುಕಲು ಕಲಿಯಿರಿ-೧೨)

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)

ಜೀವಾಮೃತ ತಯಾರಿಕೆ ತುಂಬಾ ಸುಲಭ

ಇದಕ್ಕೆ ಬೇಕಾದ ವಸ್ತುಗಳು

  • ೧೦ ಕೆ.ಜಿ. ಸಗಣಿ
  • ೫ರಿಂದ ೧೦ ಲೀಟರ್ ಗಂಜಲ (ಗೋಮೂತ್ರ)
  • ೨ ಕೆ.ಜಿ. ಕಪ್ಪು ಬೆಲ್ಲ ಅಥವಾ ೫ ಲೀಟರ್ ಕಬ್ಬಿನ ಹಾಲು
  • ೨ ಕೆ.ಜಿ. ಕಡಲೆ ಹಿಟ್ಟು ಅಥವಾ ಯಾವುದೇ ದ್ವಿದಳ ಧಾನ್ಯಗಳ ಹಿಟ್ಟು
  • ಯಾವ ಹೊಲದಲ್ಲಿ ಜೀವಾಮೃತ ಹಾಕಬೇಕಿದೆಯೋ ಆ ಹೊಲದ ಬದುವಿನ ಒಂದು ಹಿಡಿ ಮಣ್ಣು.
  • ೨೦೦ ಲೀಟರ್ ನೀರು.

ಅರವತ್ತು ವರ್ಷಗಳ ಕಾಲ ಸತ್ತ ಭ್ರೂಣವನ್ನು ಹೊಟ್ಟೆಯಲ್ಲಿಟ್ಟುಕೊಂಡಿದ್ದ 92 ರ ವೃದ್ಧೆ

1948 ರಲ್ಲಿ ಗರ್ಭದಲ್ಲಿಯೇ ಸತ್ತ ಭ್ರೂಣವೊಂದನ್ನು ಹೊಟ್ಟೆಯಲ್ಲಿಟ್ಟುಕೊಂಡಿದ್ದ 92 ವರ್ಷದ ಚೀನೀ ವೃದ್ಧೆಯೊಬ್ಬರ ಕಥೆ ಬೆಳಕಿಗೆ ಬಂದಿದೆ.

ಹೆಸರುವಾಸಿ ಆಗೋದು ಹೇಗೆ?

ಮಡಿಕೆ ಒಡೀತೀಯಾ?
ಪರ್ವಾಗಿಲ್ಲ.
ಬಟ್ಟೆ ಹರ್ರ್ಕೊಳ್ತೀಯಾ?
ಚಿಂತೇ ಇಲ್ಲ!
ಕತ್ತೆ ಸವಾರಿ ಮಾಡುವೆಯಾ?
ಅದಿನ್ನೂ ಒಳ್ಳೇದೇ.
ಹೆಸರುವಾಸಿ ಆಗ್ಬೇಕಿದ್ರೆ
ಮಾಡ್ತಿರ್ಬೇಕು ಸದ್ದು ಗದ್ಲ! 

ಸಂಸ್ಕೃತ ಮೂಲ:

ಘಟಮ್ ಭಿಂದ್ಯಾತ್ ಪಟಮ್ ಛಿಂದ್ಯಾತ್ ಕುರ್ಯಾತ್ ರಾಸಭಾರೋಹಣಮ್|
ಯೇನಕೇನ ಪ್ರಕಾರೇಣ  ಪ್ರಸಿದ್ಧ ಪುರುಷೋ ಭವೇತ್ ||

ಮರೆಯದ ಮುಸ್ಸಂಜೆ

ಪ್ರಿಯೆ ಏಕೆ ನನ್ನ ಕಾಡುವೆ ಪ್ರತಿದಿನ
ನಿನಗಾಗಿ ಕಾದಿರುವೆನು ಪ್ರತಿದಿನ
ಬಂದು ಹೋಗುವೆಯಾ ಒಂದು ದಿನ
ನಿನ್ನ ನೋಡಿ ಕಳೆದವು ಹಲವು ದಿನ

ಎಲ್ಲಿ ಹೋದರು ನಿನ್ನ ನೆನೆಪುಗಳೇ ಕಾಡುತ್ತಿದೆ ಚಿನ್ನಾ....

ನನ್ನ ರಮ್ಯಳ ಕಥೆ.

ಸುಮಾರು ದಿನಗಳಿಂದ ಯಾರ ಹತ್ತಿರವಾದರೂ ಹೇಳಿಕೊಳ್ಳಬೇಕೆಂದುಕೊಳ್ಳುತ್ತಿದ್ದೆ. ಇವತ್ತ್ಯಾಕೋ ರಮ್ಯ ಬಹಳ ಕಾಡಿಸುತ್ತಿದ್ದಾಳೆ. ನನ್ನ ಕಥೆ ಹೇಳಿ ಅಕ್ಕ ಎನ್ನುತ್ತಿದ್ದಾಳೆ. ಹಾಗಾಗಿ ಇದನ್ನು ನಿಮ್ಮ ಮುಂದಿಡುತ್ತಿದ್ದೇನೆ.

ಚಿಂತೆ ಏತಕೆ ಗೆಳತಿ

ಚಿಂತೆ ಏತಕೆ ಗೆಳತಿ
-----------------

ಚಿಂತೆ ಏತಕೆ ಗೆಳತಿ
ಚೆಲುವೆ ನೀನಲ್ಲವೆಂದು.

ಚೆಲುವೆ ಅಲ್ಲದಿರೇನು,
ಸೌಜನ್ಯರೂಪಿಣಿ ನೀನು.
ಬಂಗಾರ ನಿನಗೇಕೆ,
ಅಪರಂಜಿ ಗುಣವತಿ ನೀನು.
ಕಪ್ಪಾದರೇನು ನೀ,
ದೂರ ಹೋಗೆನು ನಾನು -
ರಾತ್ರಿದೇವಿಗೆ ಒಲಿಯಲಿಲ್ಲವೇ ಚಂದ್ರಮನು.

ಚೆಲುವನ್ನು ಕಂಡಾಗ
ನಯನ ಹಿಗ್ಗಲುಬಹುದು.
ಮನುಜನ ಮನಸಿನ
ಕಷ್ಟ ಕುಗ್ಗೀತೆ ?
ಚೆಲುವು ಮಾಯದ ಗಿಣಿಯು,

ಚಿತ್ರಗಳನ್ನು Stitch ಮಾಡಿದಾಗ...

ಜನವರೀ ೨೪/೨೫ರಂದು ಮಡಿಕೇರಿಗೆ ಪ್ರವಾಸ ಕೈಗೊಂಡಿದ್ದೆವು.
ಜನವರೀ ೨೪ರ ಶನಿವಾರದಂದು ಬೆಂಗಳೂರಿನಿಂದ ಹೊರಟು ಸಂಜೆ ೫.೩೦ರ ಹೊತ್ತಿಗೆ ಮಡಿಕೇರಿಯ ರಾಜಾಸೀಟ್ ತಲುಪಿದೆವು.
ಅಲ್ಲಿ ಸೂರ್ಯಾಸ್ತಕ್ಕೆ ಮುಂಚೆ ತೆಗೆದ ಚಿತ್ರ ಇಲ್ಲಿದೆ.
ಚಿತ್ರವನ್ನು ಹೊಲಿದಿರುವೆ (Stitch ಮಾಡಿರುವೆ).

ಜ್ಞಾನ ಮತ್ತು ವಿವೇಕ

ಇ೦ಗ್ಲೆ೦ಡಿನ ಓರ್ವ ಬೇಟೆಗಾರ ಆಫ್ರಿಕಾಕ್ಕೆ ಹೋಗಿದ್ದ. ಅಲ್ಲಿ ಅವನನ್ನು ಅಲ್ಲಿಯ ನರಭಕ್ಷಕ ಮೂಲನಿವಾಸಿಗಳು ಸೆರೆಹಿಡಿದರು. ಅವರ ನಾಯಕ ಶುದ್ಧ ಇ೦ಗ್ಲೀಶ್ ನಲ್ಲಿ ಮಾತನಾಡುತ್ತಿದ್ದ.
'ಇದು ಹೇಗೆ ನಿನಗೆ ಸಾಧ್ಯವಾಯಿತು?' ಬೇಟೆಗಾರ ಕೇಳಿದ.
'ನಾನು ಆಕ್ಸ್ ಫರ್ಡಿನಲ್ಲಿ ಓದಿದ್ದೇನೆ.' ನರಭಕ್ಷಕ ಹೇಳಿದ.

ಜಡಭರತ

ಒಮ್ಮೆ ನಾನು ಸಪ್ನಾ ಬುಕ್ಸ್ ಅಂಅಗಡಿಗೆ ಭೈರಪ್ಪ ನವರ ಆವರಣ ತರ್ಲಿಕ್ಕಂತಾ ಹೋಗಿದ್ದೆ, ಅಲ್ಲಿ ನನ್ನ ಕಣ್ಣಿಗೆ ಒಂದು ಪುಸ್ತಕ ಬಿತ್ತು. ಅದರ ಹೆಸರು "ನಾನೆ ಬಿಜ್ಜಳ" ಅಂತ ಹಂಗ ಇರ್ಲಿ ಓದೋಣ ಅನ್ಕೋಂದು ತಗೋಡು ಮನೀಗೆ ಹೋದ್ ಮ್ಯಾಲೆ ಅ ಪುಸ್ತಕ ಓದಿದೆ. ಅದು ಒಂದು ನಾಟಕ. ಅದನ್ನು ಬರದವರ್ಯಾರು ಅಂತ ನೋಡಿದಾಗ ಗೊತ್ತಾತು ಅವ್ರೆ ಜಡಭರತ ಅಂತ.

ಅಶ್ವಥಾಮ ಇನ್ನೂ ಬದುಕಿದ್ದಾನೆಯೇ

ಇವತ್ತು ಮದ್ಯಾಹ್ನ ಬೇಗ ಹೋಗಿದ್ದರಿಂದ ಅಮ್ಮನ ಜೊತೆ ಸ್ವಲ್ಪ ಮಾತಾಡಲು ಸಮಯ ಸಿಕ್ಕಿತು\
ಆವಾಗ ಹೆಚ್ಚು ಚರ್ಚಿತವಾಗದ ಮಹಾಭಾರತದ ಕೆಲವು ಬಿಡಿ ಕಥೆಗಳ ಬಗ್ಗೆ ಮಾತು ನಡೆಯಿತು
ಅದರಲ್ಲಿ ಅಶ್ವತ್ತಾಮನ ಕತೆಯೂ ಒಂದು
ಪಾಂಡವ ಪುತ್ರರನ್ನು ಕೊಂದದಕ್ಕಾಗಿ ದ್ರೌಪದಿಯಿಂದ ಶಾಪಗ್ರಸ್ತನಾಗಿ ಅಶ್ವತ್ತಾಮ ಇನ್ನೂ ಅಲೆಯುತ್ತಿದ್ದಾನೆ ಎಂಬುದನ್ನು ಅಮ್ಮ ಹೇಳಿದರು