ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಭಗವದ್ಗೀತೆಯಲ್ಲೇನಿದೆ !!!!

ಒಬ್ಬ ವಯಸ್ಸಾದ ರೈತ ಬೆಟ್ಟದ ತಪ್ಪಲಿನಲ್ಲಿ ಜಮೀನು ನೋಡಿಕೊಂಡು ತನ್ನ ಮೊಮ್ಮಗನ ಜೊತೆ ವಾಸವಾಗಿದ್ದನು. ದಿನ ಬೆಳಗ್ಗೆ ಮುದುಕ ಬೇಗ ಎದ್ದು ಅಡಿಗೆ ಕೋಣೆಯಲ್ಲಿ ಭಗವದ್ಗೀತೆ ಓದುತ್ತಿದ್ದನು. ಒಂದು ದಿನ ಮೊಮ್ಮಗ ಮುದುಕನನ್ನು ಕುರಿತು ಈ ರೀತಿ ಕೇಳಿದನು. "ಅಜ್ಜ ನಾನು ನಿನ್ನ ಹಾಗೆ ಭಗವದ್ಗೀತೆಯನ್ನು ಓದಲು ಪ್ರಯತ್ನಿಸುತ್ತೇನೆ ಆದರೆ ನನಗೆ ಅದು ಅರ್ಥ ಆಗುವುದಿಲ್ಲ, ಸ್ವಲ್ಪ ಅರ್ಥ ಆಗಿರುವುದು ಸಹ ಪುಸ್ತಕ ಮುಚ್ಚಿದೊಡನೆಯೆ ಮರೆತು ಹೋಗುವುದು. ಭಗವದ್ಗೀತೆಯನ್ನು ಓದುವುದರಿಂದ ಆಗುವ ಪ್ರಯೋಜನವಾದರು ಏನು?
ಮುದುಕ ಕೆಂಡವನ್ನು ಒಲೆಗೆ ಹಾಕುತ್ತಿದ್ದವನು ಹಿಂತಿರುಗಿ ಮೊಮ್ಮಗನಿಗೆ ಹೀಗೆ ಹೇಳಿದನು "ಈ ಇದ್ದಿಲನ್ನು ತೊಡುವ ಬೆತ್ತದ ಬುಟ್ಟಿಯತ್ತ ಕೈ ತೋರಿಸಿ ಮಗೂ ನದಿಗೆ ಹೋಗು, ಬರುವಾಗ ಬುಟ್ಟಿಯ ತುಂಬಾ ನೀರು ತುಂಬಿಸಿಕೊಂಡು ಬಾ, ನೀನು ಬಂದನಂತರ ಹೇಳುವೆ" ಎಂದನು.
ಹುಡುಗನು ಅಜ್ಜ ಹೇಳಿದ ಹಾಗೆ ಮಾಡಿದನು ಆದರೆ ಅವನು ಮನೆಗೆ ಬರುವುದರಲ್ಲಿ ನೀರು ಎಲ್ಲಾ ಬುಟ್ಟಿಯಿಂದ ಸೋರಿಹೋಗಿತ್ತು. ಮುದುಕನು ನಕ್ಕು "ನೀನು ಮುಂದಿನ ಸಲ ಇನ್ನೂ ವೇಗವಾಗಿ ಬರಬೇಕು" ಅಂತ ಹೇಳಿ ಮತ್ತೆ ಹುಡುಗನನ್ನು ನದಿಗೆ ಬುಟ್ಟಿಯೊಂದಿಗೆ ಕಳಿಸಿಕೊಟ್ಟನು. ಈ ಬಾರಿ ಹುಡುಗ ವೇಗವಾಗಿ ಮನೆಗೆ ಓಡಿ ಬಂದನು, ಅದರೆ ಪುನಃ ಬುಟ್ಟಿ ಕಾಲಿಯಾಗಿತ್ತು.

ಯಾಂತ್ರಿಕ ಬದುಕು

ಉತ್ತರಗಳೇ ಸಿಗದ ನೂರು
ಪ್ರಶ್ನೆಗಳು
ನಿಶಿ ಹಗಲೂ ಬಿಡದೇ
ಕತ್ತರಿಸುತ್ತಿದ್ದರೂ
ಬೆಳಗಿನ ಆ ಹೊನ್ನ
ಕಿರಣವದೇನೋ
ಹೊಸ ಹುರುಪನಿತ್ತು
ಗೊಂಬೆಗೆ ಕೀ ಕೊಟ್ಟಂತೆ
ನಡೆಸಿದೆ..
ಓಡಿಸಿದೆ.

ಬೆಳಗಾನೆ ಎದ್ದು ನಾ ಯಾರ್ಯಾರ ಒದೆಯಲಿ?

ಇಂದು ಬೆಳಗ್ಗೆ ಎಂದಿಗಿಂತ ಅರ್ಧ ಗಂಟೆ ಬೇಗನೆ ಎದ್ದ ಕುಚೇಲನಿಗೆ ಒಂದು ದೊಡ್ಡ ಜಿಜ್ಞಾಸೆ ಹುಟ್ಟಿಕೊಂಡಿತು. ಹುಲುಮಾನವರು ಹಾಸಿಗೆಯಿಂದೇಳುತ್ತಿದ್ದ ಹಾಗೆಯೇ ತಮ್ಮ ಅಂಗೈಯಲ್ಲಿ ದೇವಾಧಿದೇವತೆಗಳನ್ನು ಕಲ್ಪಿಸಿಕೊಂಡು ಅವರಿಗೆ ನಮಿಸಿಯೋ, ಕೋಣೆಯಲ್ಲಿ ನೇತು ಹಾಕಿಕೊಂಡ ದೇವರ ಪಟಕ್ಕೆ ಕೈ ಮುಗಿಯುತ್ತಲೋ, ಎಡ ಮಗ್ಗುಲಲ್ಲಿ ಎದ್ದೆವಾ ಎಂದು ಗಾಬರಿಯಾಗುತ್ತಲೋ, ರಾತ್ರಿಯ ಗುಂಡು ಜಾಸ್ತಿಯಾಯಿತಾ ಎಂದು ಆತ್ಮಾವಲೋಕನ ಮಾಡಿಕೊಳ್ಳುತ್ತಲೋ, ನಿದ್ರೆ ಕೆಡಿಸಿ ಎಚ್ಚರಿಸಿದ ಹಾಲಿನವನನ್ನೋ, ಪೇಪರ್‌ನವನನ್ನೋ ಬೈದುಕೊಳ್ಳುತ್ತಲೋ, ಇಷ್ಟು ಬೇಗ ಬೆಳಕಾಯಿತಾ ಎಂದು ಅಚ್ಚರಿಗೊಳ್ಳುತ್ತಲೋ, ಮಾಡಬೇಕಾದ ಕೆಲಸಗಳ ಪಟ್ಟಿ ತಯಾರಿಸುತ್ತಲೋ, ದೂರದಲ್ಲಿರುವ ಹೆಂಡತಿಯ ಮುಂಗುರಳನ್ನು ನೆನಪಿಸಿಕೊಳ್ಳುತ್ತಲೋ, ಪರೀಕ್ಷೆಗೆಷ್ಟು ದಿನಗಳಿವೆ ಎಂದು ಲೆಕ್ಕ ಹಾಕುತ್ತಲೋ, ತಿಂಗಳ ಮುನಿಸಿಗಿನ್ನೆಷ್ಟು ದಿನ ಎಂದು ಗುಣಿಸುತ್ತಲೋ ಬೆಳಗನ್ನು ಸ್ವಾಗತಿಸುತ್ತಾರೆ. ಆದರೆ ಸಾಮ್ರಾಟರ ಚೇಲನಾದ ಕುಚೇಲ ಇಂದು ಬೆಳಿಗ್ಗೆ ಎದ್ದಾಗ ಆತನಲ್ಲಿ ಒಂದು ಪ್ರಶ್ನೆ ಹುಟ್ಟಿಕೊಂಡಿತ್ತು. ಬೆಳಗಾನ ಎದ್ದು ನಾ ಯಾರ್ಯಾರ ನೆನೆಯಲಿ ಎಂದು ಹಡಿದ ಜನಪದದ ಹೆಣ್ಣು ಮಗಳನ್ನು ನೆನೆಸಿಕೊಂಡು ಆತ ‘ಬೆಳಗಾನ ಎದ್ದು ನಾ ಯಾರ್ಯಾರ ಒದೆಯಲಿ...’ ಎಂದು ಒರಲತೊಡಗಿದ.

ಮೆತ್ಗಿದ್ದೋರ್ಗೆ ಮತ್ತೊಂದ್ಗುದ್ದು

ಕುದುರೆಯು ಬೇಡ ಆನೆಯೂ ಬೇಡ
ಹುಲಿಯಂತೂ ಮೊದಲೇ ಬೇಡ
ಕೊಡಬೇಕು ಬಲಿ ಆಡಿನ ಮರಿಯನು
ಮೆದುಗರ ದೇವರೂ ಕೊಲ್ಲುವನು

ಸಂಸ್ಕೃತ ಮೂಲ:

ಅಶ್ವಂ ನೈವ ಗಜಂ ನೈವ ವ್ಯಾಘ್ರಂ ನೈವ ಚ ನೈವ ಚ|
ಅಜಾಪುತ್ರಂ  ಬಲಿಂ ದಧ್ಯಾತ್ ದೇವೋ ದುರ್ಬಲಘಾತಕಃ||

ಕೊ.ಕೊ: ಇವತ್ತು ಸಂಪದದಲ್ಲೇ ಇನ್ನೊಂದು ಬರಹವನ್ನು ಓದಿದಾಗ, ನೆನಪಾದ ಸುಭಾಷಿತ ಇದು.

ಎಲ್ಲಿಯವರೆಗೆ ಈ ದ್ವೇಷ? ಯಾರ ಪಾಪಕ್ಕೆ?

ಹೌದು ಈ ಸಮಾಜದಲ್ಲಿ ಅನೇಕ ದೊಡ್ಡವರನೆಸಿಕೊ೦ಡವರ ನಡತೆಯೇ, ಅವರ ತೆವಲುಗಳೇ ಒ೦ದು ದೊಡ್ಡ ಕ೦ಟಕವಾಗುವ ದುರ೦ತಗಳು ನಮ್ಮ ಮು೦ದಿವೆ. ಒಬ್ಬ ಸಾಮಾನ್ಯ ಮನುಷ್ಯನಿಗೆ ಎಟುಕುವ ವಿವೇಕ, ಅರಿವು ಈ ದೊಡ್ಡವರ ಪಾಲಿಗೆ ಶೂನ್ಯವಾಗುವುದು ಒ೦ದು ದೌರ್ಭಾಗ್ಯ.

ಎಲ್ಲ ಗೆಳೆಯರಿಗಾಗಿ ಈ ಮಾಹಿತಿ :-)

ಹುಡುಗಿಯರ ಹೃದಯ ಗೆಲ್ಲುವುದು ಹೇಗೆಂಬ ಬಗ್ಗೆ ಕೋರ್ಸ್ ಜರ್ಮನಿಯಲ್ಲಿ ಹೊಸದಾಗಿ ಮಾಡಿದ್ದಾರೆಂದು ಸುದ್ದಿ. ಕೋರ್ಸ್ಗೆ ಸೇರಿಕೊಂಡವರು ಕೂಲಾಗಿದ್ದ ಹುಡುಗಿಯ ಹೃದಯವನ್ನು ವೇಗವಾಗಿ ಬಡಿದುಕೊಳ್ಳುವಂತೆ ಮಾಡುವ ಕಲೆ ಕರಗತ ಮಾಡಿಕೊಳ್ಳಬಹುದು ಎಂಬ ಜಾಹೀರಾತು ಬೇರೆಯಂತೆ.
(ಕೃಪೆ : ಸುಧಾ)

ಅದು ಏನೇನೋ ಸಂಘ ಎಲ್ಲ ಬಿಟ್ಟು ಈ ಕೋರ್ಸ್ ಗಾದರೂ ಸೇರಬಾರದಾ ;-)

ಪ್ರೀತಿಯೆಂಬ ಪಕ್ಷಿ

ನುಡಿವ ಮಾತಿನಲಿ
ಸುಳಿವ ಗಾಳಿಯಲಿ
ಪ್ರಾಣವಾಯುವೇ ನೀನು

ಸೊಕ್ಕ ಸಾಗರಕೆ
ಉಕ್ಕುವ ಯೌವನಕೆ
ನಿತ್ಯ ನಿರ್ಣಯವು ನೀನು

ಬಿಕ್ಕಿ ಅಳುವಾಗ
ಸುತ್ತಿ ಬೀಳುವಾಗ
ಹೊತ್ತ ಚೇತನ ನೀನು

ನಿಲ್ಲಲಾರದ ಭವದ
ಕಾಣಲಾರದ ಪರದ
ಪಂಕ್ತಿಯಲಿ ಪಕ್ಕದಲೇ ನಿಲುವೆನೆಂಬ ನೀನು

ಹುಟ್ಟಿ ಹುಟ್ಟಿಸಿ ಸಾಯ್ವ
ನಾಲ್ಕು ದಿನದಲು ಕುಸುರಿ
ಮದವಿಳಿಸುವ ಮುದ್ದು ಮುದ್ದು ನೀನು

ನಾನು ನಾನಲ್ಲ

ಜಿಹ್ವ ಬಂಧ

ನಾನೇ ತಿಂಡಿ, ನೀನೇ ಪೋತ,
ಅವನೇ ಅಡಿಗೆಯವ !! ೨ !!

ಕುಡಿದ ನೆನಲು ರಸದ ಹೊನಲು ಬಿಂದು ಬಿಂದು
ಸೇರಿಕುಡಿದು ಆದೆನಾಲಸ !! ೨ !!

ಭೂಮಿಯೆಲ್ಲ ಪೋತರ ಸಂತೆ ಸವಿಯತೀನ
ನನ್ನ ನಿನ್ನ ಜಿಹ್ವಬಂಧ ತಿಂದುಕುಡಿದು ಕೊಳಗ ಪಾನ, ಕಾಫಿಪಾನ !! ೨ !!

(‘ನಾನೇ ವೀಣೆ ನೀನೇ ತಂತಿ’ – ಕೃತಿಯ ಜಿಹ್ವಚಪಲಕಾರಕ ರೂಪಾಂತರ)