ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

೭೫ನೇ ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡಿಗರೇ

ನಮ್ಮ ಹೆಮ್ಮೆಯ ಕರ್ನಾಟಕದಲ್ಲಿ ಕೋಟೆ ಕೊತ್ತಲುಗಳಿಂದ ಕೂಡಿರುವ ಮದಕರಿನಾಯಕ ಹಾಗೂ ವೀರವನಿತೆ ಒನಕೆ ಓಬವ್ವನ ಹೆಸರುಗಳ ಹೇಳಿದಂತೆ ನೆನಪಾಗುವ ಚಿತ್ರದುರ್ಗದಲ್ಲಿ ೭೫ನೇ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ ೨೯ರಂದೇ ಪ್ರಾರಂಭವಾಗಬೇಕಿತ್ತು, ಆದರೆ ರಾಷ್ಟ್ರಪತಿ ವೆಂಕಟರಾಮನರ ನಿಧನದಿಂದಾಗಿ ಪೆಬ್ರವರಿ ೪ ರಿಂದ ಪ್ರಾರಂಭವಾಗಲಿದೆ.

ಪಬ್ಬು - ಗಬ್ಬು - ತಬ್ಬು!!!

ನಗರದ ಬೀದಿಗಳಲಿ ಈಗ ಎಲ್ಲೆಂದರಲ್ಲಿ ಪಬ್ಬು ಪಬ್ಬು
ನಗರದ ಬೀದಿಗಳಲಿ ಈಗ ಎಲ್ಲೆಂದರಲ್ಲಿ ಪಬ್ಬು ಪಬ್ಬು
ಪಬ್ಬುಗಳ ಒಳಗೆಲ್ಲಾ ಸದಾಕಾಲ ಏನೋ ಗಬ್ಬು ಗಬ್ಬು

ಪಬ್ಬಿನ ಒಳಗೆ ಹೋದರೆ ಬೆಳಕು ಬರೇ ಮಬ್ಬು ಮಬ್ಬು
ಪಬ್ಬಿನ ಒಳಗೆ ಹೋದರೆ ಬೆಳಕು ಬರೇ ಮಬ್ಬು ಮಬ್ಬು
ಅಮಲೇರಿದ ನಂತರ ಹೇಳುತ್ತಾರೆ ಬಾ ನೀ ನನ್ನ ತಬ್ಬು

ಮಬ್ಬಿನಲ್ಲಿ ತಬ್ಬಿಕೊಂಡು ಕುಣಿದವರು ಯಾರಾದರೇನು

ಬೀರು ಹೇಳಿದ ಪಬ್ಬಿನ ಕಥೆ!

ಇದ್ದ ಐವರಲ್ಲಿ ಉತ್ತಮನು ಯಾರು?
ನಾನೇ ಎಂದಿತು ಪಬ್ಬಿನ ಬೀರು!
ಪಬ್ಬಿನ ಹೈಕಳಿಗೆ ಮ(ಮು)ತ್ತನು ಕೊಟ್ಟೆ!
ಧೀರ-ಶೂರ ಸೇನೆಯನ್ನು ಜೈಲಿಗೆ ಅಟ್ಟೆ!
ಮಾಧ್ಯಮಕ್ಕೆ ಬಿಸಿ ಬಿಸಿ ಸುದ್ದಿಯ ಹಾರಿಸಿ ಬಿಟ್ಟೆ!
ರೇಣುಕಾ ಅಮ್ಮನಿಗೆ ಯಾಕೊ ಕಾಣೆ, ಬರೀ ಸಿಟ್ಟೆ!

ಬೀರು ಉವಾಚ,

ತೋರುವರು ತಮ್ಮ ಬೆಟ್ಟುಗಳನ್ನು ನನ್ನೆಡೆಗೆ (ಇನ್ನೊಬ್ಬನೆಡೆಗೆ), ನರರು

ಕ್ಷಮಯಾ ಧರಿತ್ರಿ

ಜಗದೆಲ್ಲ ಜಂಜಡದ
ಬಹುಭಾರ ತಾಳದಲೆ
ಬಾಯ್ಬಿಡಲು ಭೂದೇವಿ ಕಾಯುತಿಹಳು|
ಹಸಿರು ಪೈರನು ಹೊತ್ತ
ಹಸಿಯಾದ ಕನಸುಗಳ
ಚೆಲುವ ಬದುಕನು ಮತ್ತೆ ಕರೆಯುತಿಹಳು|
ಬಾನ್ ಬೆಟ್ಟ ಕಡಲೊಳಗೆ
ಭೂದೇವಿ ಮಡಿಲೊಳಗೆ
ಸೃಷ್ಟಿ ವಿಪರೀತಗಳು ತೋರುತಿಹವು|
ತಾನ್ ಹೊತ್ತ ಕಂದಗಳೇ
ತನ್ನೆದೆಯ ಬಗೆದಿರಲು
ಭೂರಮೆಯ ಕಣ್ಣುಗಳು ತೋಯುತಿಹವು|
ಹಲವು ಕಷ್ಟಗಳೆದುರು
ತಾಳ್ಮೆ ಸಹನೆಗಳಿಂದ

ತಿಳಿಸದೆ ಬಂದು ಹಾಗೆ ಹೋದವಳು !!..........

ಕಣ್ಣಿಗೆ ರೆಪ್ಪೆಯಾಗಿ
ಉಸಿರಿಗೆ ಉಸಿರಾಗಿ
ಕಲ್ಪನೆಗೆ ಜೀವವಾಗಿ
ಪದಗಳಿಗೆ ಸ್ಪೂತಿಯಾಗಿ
ಕವನಕ್ಕೆ ಭಾವನೆಯಾಗಿ
ಮನಸ್ಸಿಗೆ ನೆಮ್ಮದಿ
ತಂದವಳು ನೀನು
ಬರುವಾಗ ಬರುತೀನಿ ಅಂತ ಕೇಳಲಿಲ್ಲ
ಹೋಗುವಾಗ ಹೋಗುತೀನಿ ಅಂತ ತಿಳಿಸಲಿಲ್ಲ
ಬರೀದಾದ ಜೀವನಕ್ಕೆ
ಆಶಾಗೋಪುರ ಕಟ್ಟಿ
ಹೃದಯ ಸಾಮ್ರಾಜ್ಯಕ್ಕೆ ರಾಣಿಯಾಗದೆ
ದೇಹದಿಂದ ಆತ್ಮ ದೂರವಾಗುವಾಗೆ
ನನ್ನಿಂದ ನೀ ದೂರವಾದೆ

ತಬ್ಬಲಿಯು ನೀನಾದೆ ಮಗುವೆ!

'ತಬ್ಬಲಿಯು ನೀನಾದೆ ಮಗುವೆ,
ಹೆಬ್ಬುಲಿಯ ಬಾಯನ್ನು ಹೊಗುವೆ,
ಇಬ್ಬರಾ ಋಣ ತೀರಿತೆಂದು... '

ಕರ್ನಾಟಕದ ಎಲ್ಲ ಮನ ಮನೆಗಳಲ್ಲೂ ಮನೆ ಮಾಡಿರುವ 'ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ' ಕಥೆಯಿದು! ಗೋವಿನ ಹಾಡಿನ ಈ ಪುಣ್ಯಕೋಟಿಯ ಕಥೆಯನ್ನು ಕನ್ನಡನಾಡಿನಲ್ಲಿ ಕೇಳದವರಿಲ್ಲ ( ಕಡೇ ಪಕ್ಷ ಒಂದು ಸಾರಿಯಾದರೋ).

ಚೋಕರೀ ಫ್ರಂ ಉಸ..ಡಿಫರೆಂಟ್ ಸಿನೆಮಾ!!

ಹೌದು. ಇದೂ ಡಿಫರೆಂಟ್ ಸಿನಿಮಾಗಳ ಸಾಲಲ್ಲಿ ಒಂದು ಸಿನಿಮಾ. ನಾಯಕಿ, ಕೋಟ್ಯಾಧೀಶ...(ಇಂತಹ ಕತೆಗಳು ಸಾವಿರಾರು ಬಂದಿದೆ ಎಂದಿರಾ?.. ಪೂರ್ತಿ ಕೇಳಿ..)


ಅಮೆರಿಕಾ(USA-ಉಸಾ)ಅಧ್ಯಕ್ಷನ ಒಬ್ಬಳೇ ಮಗಳು!! ಹೇಗಿದೆ :) ? -ನಮ್ಮದು ಡಿಫರೆಂಟೂ.. ನಾಯಕಿ,ಟು ಪೀಸ್ ಡ್ರೆಸ್‌ನಲ್ಲಿ.. ‘ಸೂರ್ಯಗ್ರಹಣ’ದ ಬಗ್ಗೆ (ಡಿಫರೆಂಟೂ) ಹಾಡು ಹೇಳುತ್ತಾ.., ಪೆಂಗ್ವಿನ್ ಜತೆ (ಅಪ್ಪ ಅಂಟಾರ್ಟಿಕಾದಿಂದ ತಂದು, ಮಗಳಿಗೆ ೧೮ನೇ ವರ್ಷಕ್ಕೆ ಉಡುಗೊರೆ ಕೊಟ್ಟ ಪೆಟ್ ಪ್ರಾಣಿ).. ಎಮ್.ಜಿ.ರೋಡಲ್ಲಿ ಬರುತ್ತಾಳೆ.. ಬೆವರಿಂದ ಪೂರ್ತಿ ಒದ್ದೆ.. ಕ್ಯಾಮರ ಗ್ರಹಣದಿಂದ ಹಿಡಿದು ಎಲ್ಲೆಲ್ಲಾ ಏಂಗ್‌ಲ್‌ಗಳು ಇಲ್ಲವೋ ಅಲ್ಲೆಲ್ಲಾ ಓಡಾಡುತ್ತದೆ.


ಈಗ ನಾಯಕನ ಎಂಟ್ರಿ.. ನಾಯಕ ಡಾಕ್ಟ್ರು?..ಊಹೂಂ

ಪಟ್ಟಾಭಿರಾಮ ಸೋಮಯಾಜಿ, ಯೂನಿವರ್ಸಿಟಿ ಪ್ರೊಫೆಸರ್‌ಗಳು, ಮತ್ತು ಸ್ವಾತಂತ್ರ್ಯ...

ಇವತ್ತು ಕರ್ನಾಟಕದ ಕರಾವಳಿಯಿಂದ ಕೇಳಿಸುವ ಕೆಲವೆ ಕೆಲವು ಜನಪರ, ಪ್ರಜಾಪ್ರಭುತ್ವವಾದಿ, ಜಾತ್ಯತೀತ ಧ್ವನಿಗಳಲ್ಲಿ ಪಟ್ಟಾಭಿರಾಮ ಸೋಮಯಾಜಿಯವರದೂ ಒಂದು.

ಮರೆಯಾದ ಯಕ್ಷಗಾನದ ಅನರ್ಘ್ಯ ರತ್ನ ಕೆರೆಮನೆ ಶಂಭು ಹೆಗ್ಡೆ

ಅನನ್ಯ ಕಲಾವಿದ ಶಂಭು ಹೆಗ್ಡೆಯವರ ನಿರ್ಯಾಣ

ಸಂಜೆ ಕಾಲೇಜಿನಿಂದ ಬಸವಳಿದು ಬಂದಿದ್ದೆ ನಾನು. ಎಂದಿನಂತೆ ಟಿವಿಯೊಳಗೆ ಹೊಸ ಸುದ್ದಿ ಏನಿದೆ ಎಂದು ನೋಡಲು ಇಣುಕಿದೆ ಅದರೊಳಗೆ. ಆ ಸುದ್ದಿ ಮತ್ತಷ್ಟು ಬಸವಳಿಯುವಂತೆ ಮಾಡಿತು - ಕುಣಿಯುತ್ತ ಕುಣಿಯುತ್ತಲೇ ಕೆರೆಮನೆ ಶಂಭು ಹೆಗ್ಡೆ ಈ ಭವದ ಆಟ ಮುಗಿಸಿ ಮತ್ತೆ ಬರದ ಲೋಕದತ್ತ ನಡೆದಿದ್ದಾರೆಂದು ತಿಳಿದಾಗ ಮನ ಕಲಕಿತು. ಸಾಗರದಲ್ಲಿ ತೆರೆಗಳು ಎದ್ದೆದ್ದು ಬರುವಂತೆ ನೆನಪುಗಳು ಒತ್ತೊತ್ತಿ ಬರತೊಡಗಿದುವು. ಅದನ್ನಿಲ್ಲಿ ಮೂಡಿಸುತ್ತಿದ್ದೇನೆ.

1975ರ ಸುಮಾರಿಗೆ ಪುತ್ತೂರಿಗೆ "ಮಹಾಗಣಪತಿ ಯಕ್ಷಗಾನ ಮಂಡಳಿ, ಇಡಗುಂಜಿ" ಎಂಬ ಬಡಗು ತಿಟ್ಟಿನ ಮೇಳ ಬರುತ್ತದೆಂಬ ಸುದ್ದಿ ಕೇಳಿದಾಗ ಅದಾಗಲೇ ಯಕ್ಷಗಾನದ ಹುಚ್ಚು ಹಿಡಿಸಿಕೊಂಡಿದ್ದ ಹುಡುಗ ಪ್ರಾಯದ ನಮಗೆಲ್ಲ ಕುತೂಹಲ. ಆ ಮೇಳದಲ್ಲಿ ಕೆರೆಮನೆ ಕುಟುಂಬದ ಘಟಾನುಘಟಿ ಕಲಾವಿದರಿದ್ದಾರಂತೆ, ಪಾತ್ರಧಾರಿಗಳು ಕೇದಗೆ ಮುಂಡಾಸು ತೊಡುತ್ತಾರಂತೆ, ನೆಲದಲ್ಲಿ ಮಂಡಿಯೂರಿ ಗರಗರನೆ ಸುತ್ತುತ್ತಾರಂತೆ. ನಮ್ಮ ಕುತೂಹಲಕ್ಕೆ ಗರಿಗಳು, ರೆಕ್ಕೆ ಪುಕ್ಕಗಳು ಮೂಡತೊಡಗಿದುವು.