ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಾವು ಹುಡುಗಿಯರೇ ಹೀಗೆ

ನಾವಿರುವುದೇ ಹೀಗೆ ಹುಡುಗರಾ
ನಮ್ಮಂತರಾಳವನು ತುಸು ಕಾಣಿರಾ?

ಬಾಲ್ಯದ ನೆನಪಿನ ಬುತ್ತಿ ಮನದಲ್ಲಿ
ಹರೆಯದ ಕನಸು ಕಣ್ಣಲ್ಲಿ
ಹೊತ್ತುಕೊಂಡೆ ಇಳಿಯುತೇವೆ ಈ ಹುಚ್ಚು ಹೊಳೆಯಲ್ಲಿ

ನಿಮ್ಮ ಮಾತು ತರುವುದಾದರೂ ಕುಶಿ
ತೋರುತ್ತೇವೆ ಮುನಿಸು ಅದು ಬರೀ ಹುಸಿ
ನಿಮ್ಮ ನೋಟ ಆಗುವುದಾದರೂ ಇಷ್ಟ
ಆಡುತ್ತೇವೆ ಆದಂತೆ ಕಷ್ಟ

ನೀವೆದುರು ಬಂದಾಗ ಬಗ್ಗಿಸಿ ತಲೆ

ಜಯಂತ್ ಕಾಯ್ಕಿಣಿ ಕಣ್ಣಲ್ಲಿ ತೇಜಸ್ವಿ

ತೇಜಸ್ವಿ ಮೌನದ ಬಗ್ಗೆ ನಮ್ಮ ಪೊಸೆಸಿವ್ ಚಳವಳಿಗಾರರ ಮನಸ್ಸಿನಲ್ಲಿ ಒಂದು ರೀತಿಯ ಸಿಟ್ಟಿದೆ. ತೇಜಸ್ವಿಯವರು ಮಾತಾಡಬೇಕಾದ ಸಮಯದಲ್ಲಿ ಮಾತಾಡ್ತಾ ಇರಲಿಲ್ಲ. ಯಾವುದೋ ಒಂದು ಚಳುವಳಿ ಸಂದರ್ಭದಲ್ಲಿ ಇವರು ಯಾವುದೋ ಮೀನಿಗೆ ಗಾಳ ಹಾಕ್ತಾ ಇದಾರೆ, ಯಾವುದೋ ಹಕ್ಕಿಯ ಚಿತ್ರಕ್ಕಾಗಿ ಕಾಯ್ತಾ ಕೂತಿದ್ದಾರೆ ಅಂತ. ಇದನ್ನು ನಾನು ಅವರ ಸಂದರ್ಶನ ಮಾಡುವಾಗ ಕೇಳಿದೆ. ‘ಇದೇನಪ್ಪ ಇದು ಈ ಮೌನ’ ಅಂತ. ಅವರಂದ್ರು ‘ಮೌನವೇ ಒಂದು ಭಾಷೆ. ಮೌನವೇ ಒಂದು ಉತ್ತರ.’
ನಾನು ಅವರಿಗೆ ಆಪ್ತನಾಗಿ ಅವರನ್ನ ಅರ್ಥ ಮಾಡಿಕೊಳ್ಳುವ ಒಂದು ಪ್ರಯತ್ನ ಏನಂದ್ರೆ; ಅವರಿಗೆ ಕಳೆದ ೧೫ ವರ್ಷಗಳಲ್ಲಿ ಎಲ್ಲಾ ಚಳುವಳಿಗಳಲ್ಲೂ, ಸಿದ್ಧಾಂತಗಳಲ್ಲೂ ಆವೇಶ ಇತ್ತು, ಆದ್ರೆ ಸಿದ್ಧಾಂತಿಗಳಲ್ಲಿ, ಚಳವಳಿಗಾರರಲ್ಲಿ ನಂಬಿಕೆ ಹೊರಟೋಗ್ಬಿಟ್ಟಿತ್ತು. ಈಗ ಭ್ರಷ್ಟರಾದಂತ, ಪ್ರಚಾರಕ್ಕೆ ಹಾತೊರೆಯುವಂತ, ಮಾಧ್ಯಮಗಳಲ್ಲಿ ಮಿಂಚಬೇಕೂ ಅಂತ ನೋಡುವವರನ್ನ ಅಥವಾ ಜಾತಿ, ಹಣ ಅಂತ ರಾಜಕಾರಣ ಮಾಡುವ ಮುಂದಾಳುಗಳ ಬಗ್ಗೆ ಅವರಿಗೆ ಮುಜುಗರ ಉಂಟಾಗಿಬಿಟ್ಟಿತ್ತು. ನಾನು ಆ ಸಿದ್ಧಾಂತವನ್ನ ಸಪೋರ್ಟ್ ಮಾಡಿದ್ರೆ ಆ ವ್ಯಕ್ತಿಗಳನ್ನ ಸಪೋರ್ಟ್ ಮಾಡಿದ ಹಾಗಾಗುತ್ತೆ, ಒದು ವೇಳೆ ಮಾಡ್ದೇ ಇದ್ರೆ ಇವುಗಳಿಂದ ದೂರವಾಗೋ ಹಾಗಾಗುತ್ತೆ ಅಂತ ಭಾಳಾ ಪಜೀತಿನಲ್ಲಿ ಅವರಿದ್ರು.

ಬ್ರಹ್ಮಾನಂದ

ಪ್ರ:ಹೇ! ಗುರುವೇ
ತಿಳಿವೆನಗೆ ತಿಳಿಸಿರಿ
ಸುಳಿಯಾಯ್ತು ಮನವು
ಒಳಿತೆನಗೆ ಕರುಣಿಸಿ

ಉ:ಮಥಿಸು ನೀನು
ನಿನ್ನೊಳಗನು
ಕಾಣುವುದನು ತಿಳಿ
ತಿಳಿವುದನು ಕಾಣು

ಪ್ರ: ನಾನು,ನೀನು
ಅದು, ಇದು
ಬದುಕಿಹೆವು ಹೇಗೆ?
ಉದರದೊಳಗನ್ನವೇ
ಶಕ್ತಿ , ಮತ್ತೆನ್ನರಿವೆಂಬೆ
ಅನ್ನವು ದೇಹಕೆ ಶಕ್ತಿ ಮಾತ್ರ,
ಇದು ಅರಿವಲ್ಲವೈ
ಸುಳಿಯಾಯ್ತು ಮನವು
ಒಳಿತೆನಗೆ ಕರುಣಿಸಿ

ಪಕ್ಕದ್ ಮನೆ ಹುಡುಗಿ ಬಾರಮ್ಮ...

ಸಂಪದಿಗರೆ ಈ ಹಾಡನ್ನು ಭೀಮ್ಸೇನ್ ಜೋಶಿ ಯವರ ಭಾಗ್ಯದ ಲಕ್ಶ್ಮಿ ಬಾರಮ್ಮಾ ಧಾಟಿಯಲ್ಲಿ ಹಾಡಿಕೊಳ್ಳಿ..................

ಪಕ್ಕದ್ ಮನೆ ಹುಡುಗಿ ಬಾರಮ್ಮ...
ನಮ್ಮಮ್ಮಾ ಇಲ್ಲಾ..
ಪಕ್ಕದ್ ಮನೆ ಹುಡುಗಿ ಬಾರಮ್ಮ...  [ಪ]

ಗ್ರಹಚಲನೆಯ ಸಾಪೇಕ್ಷತೆ

ಚಲನೆಯೇ ಸಾಪೇಕ್ಷ. ಅದಱಲ್ಲಂತೂ ಗ್ರಹಚಲನೆ ಇನ್ನೂ ಸಾಪೇಕ್ಷ. ಒಂದು ಬಿಂದು (ಮೂರ್ತವೋ ಕಾಲ್ಪನಿಕವೋ) ಚಲನೆಯಾಗಿದೆಯೆಂದು ತಿಳಿಸಲು ಅತ್ಯವಶ್ಯ. ಇಲ್ಲವಾದರೆ ಒಂದು ವಸ್ತು ಸ್ಥಾನಪಲ್ಲಟ ಮಾಡಿರುವುದನ್ನು ಅರ್ಥೈಸಲಸಾಧ್ಯ. ಹಾಗಾಗಿ ಗ್ರಹಗಳ ಚಲನೆಯನ್ನು ಅರ್ಥೈಸಲು ಅವುಗಳ ಹಿಂದಿರುವ ನಕ್ಷತ್ರಗಳೇ ಆಧಾರ. ಸೌರಮಂಡಲದ ಗ್ರಹಗಳಿಗೆ ಹೋಲಿಸಿದರೆ ನಕ್ಷತ್ರಗಳು ಸ್ಥಿರ.

ಪುಣ್ಯಕೋಟಿ ಎಂಬ ಗೋವಿನ ಹಾಡು

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುವುದೈವತ್ತಾರು ದೇಶದಿ
ಇರುವ ಕಾಳಿಂಗನೆಂಬ ಗೊಲ್ಲನು
ಪರಿಯ ನಾನೆಂತು ಪೇಳ್ವೆನು.

ಗಿರಿಗಳೆಡೆಯಲಿ ಅಡವಿ ನಡುವೆ
ತುರುವ ದೊಡ್ಡಿಯ ಮಾಡಿಕೋಂಡು
ಮೆರೆವ ಕಾಳಿಂಗನೆಂಬ ಗೊಲ್ಲನ
ಸಿರಿಯ ನಾನೆಂತು ಪೇಳ್ವೆನು.

ಗೊಲ್ಲದೊಡ್ಡಿಯೊಳಿರುವ ಹಸುಗಳು
ಎಲ್ಲ ಬೆಟ್ಟದ ಮೇಲೆ ಮೇಯುತ
ಹುಲ್ಲನೊಳ್ಳೆಯ ನೀರ ಕುಡಿಯುತ
ಅಲ್ಲಿ ಮೆರೆದುವರಣ್ಯದಿ.

ಸರಣಿ ೬ - ಡಾ!! ಎಚ್. ನರಸಿಂಹಯ್ಯ - ಪ್ರಾರ್ಥನೆಯಿಂದ ಮಳೆ ಬರುವುದಂತೆ ? ಮಳೆಗಾಗಿ ಯೋಗಿಯೊಬ್ಬನ ವ್ಯರ್ಥ ಪ್ರಾರ್ಥನೆ

ಬೆಂಗಳೂರು, ಸುಮಾರು ಮೂವತ್ತು ಲಕ್ಷ ಜನರು ವಾಸಿಸುವ ನಗರ. ಈ ನಗರಕ್ಕೆ ನೀರನ್ನು ಒದಗಿಸುವ ಮುಖ್ಯ ಆಕರಗಳಲ್ಲಿ, ಇಲ್ಲಿಂದ ಇಪ್ಪತ್ತು ಮೈಲಿಗಳ ದೂರದಲ್ಲಿರುವ ತಿಪ್ಪಗೊಂಡನಹಳ್ಳಿ ಜಲಾಶಯವೂ ಒಂದು.

ಶಿ'ರಾಡಿ' ಮೇಳ - ೨೦೦೯

ರಾಷ್ಟ್ರೀಯ ಹೆ(ಹೊಂಡ)ದ್ದಾರಿ-೪೮ಯಲ್ಲಿ ಅತ್ಯಂತ ಕ್ಲಿಷ್ಟವಾದ ಪ್ರಯಾಣ ಎಂದರೆ ಶಿರಾಡಿ ಘಾಟಿಯ ೪೦ ಕಿ.ಮೀಗಳು. ಇತ್ತೀಚಿಗೆ ಘಾಟಿ ಪ್ರಯಾಣಕ್ಕೆ ಸಂಪೂರ್ಣ ಅಯೋಗ್ಯವಾಗಿದೆ. ಬೇಡದ್ದಕ್ಕೆ ಖರ್ಚು ಮಾಡುವ ಸರ್ಕಾರಗಳಿಗೆ, ಈ ರಸ್ತೆಯನ್ನು ಸಂಪೂರ್ಣ ಕಾಂಕ್ರೀಟ್ ಮಾಡಲಿಕ್ಕೆ ಹಣವಿಲ್ಲ. ಆದ್ದರಿಂದ ಈ ರಸ್ತೆ ಕಾಂಕ್ರಿಟೀಕರಣಕ್ಕೆ ದೇಣಿಗೆ ಸಂಗ್ರಹಿಸಲು ಹಾಗೂ ಈ ರಸ್ತೆಯನ್ನು ಸದಾ ಸುದ್ದಿಯಲ್ಲಿಡಲು ಹೆದ್ದಾರಿ ಇಲಾಖೆ ತೀರ್ಮಾನಿಸಿದೆ. ಅದರಂತೆ ರಾಜ್ಯ ಮತ್ತು ಕೇಂದ್ರ ಸರಕಾರದ ಸಹಯೋಗದೊಂದಿಗೆ ಶಿ'ರಾಡಿ' ಮೇಳ - ೨೦೦೯ ಹಮ್ಮಿಕೊಳ್ಳಲು ತೀರ್ಮಾನಿಸಿದೆ. ಈ ಮೇಳದಲ್ಲಿ ಅನೇಕ ವಿಧದ ಸ್ಪರ್ಧೆಗಳು ಮತ್ತು ಕಾರ್ಯಕ್ರಮಗಳು ನಡೆಯಲಿದೆ ಅಂತ ಇಲಾಖೆ ಘೋಷಿಸಿದೆ. ಹಾಗೆ ವ್ಯಾಪಾರ ಮಳಿಗೆಗಳು ತಲೆ ಎತ್ತಲಿವೆ ಎಂದು ಅದು ಹೇಳಿದೆ. ಬಂದ ದೇಣಿಗೆಯಲ್ಲಿ ಶಿರಾಡಿಯನ್ನು ಸಂಪೂರ್ಣ ದುರಸ್ತಿಗೊಳಿಸಲಾಗುವುದು ಎಂಬ ಭರವಸೆ(??) ಕೂಡ ನೀಡಿದೆ.

ಮಾನವೀಯತೆಯ ಮಾನಹರಣ

ನಾನು ಒಂದು ಸಣ್ಣ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಮಧ್ಯಾಹ್ನದ ಊಟದ ಸಮಯ ೧ ಗಂಟೆಯಿಂದ ೨ ಗಂಟೆಯವರೆಗೆ. ಊಟ ಮುಗಿಸಿ ಒಂದು ಸಣ್ಣ ವಾಕ್ ಮಾಡುವ ಅಭ್ಯಾಸ. ವೈಯಕ್ತಿಕ ಕೆಲಸ ಏನಾದರೂ ಇತ್ತೆಂದರೆ ಅದನ್ನು ಬೇಗ ಮುಗಿಸಿ ಕೆಲಸಕ್ಕೆ ಹಾಜರ್. ನಿನ್ನೆ ಹೀಗೆ ವೈಯಕ್ತಿಕ ಕೆಲಸ ಇತ್ತೆಂದು ಹೋಗಿ ಕೆಲಸ ಮುಗಿಸಿ ವಾಪಸ್ ಕಚೇರಿಗೆ ತೆರಳುತ್ತಿದ್ದೆ.