ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಮೋಸ

ಪ್ರೇಯಸಿ: ಪ್ರಿಯಾ, ನೀನು ಬಿಜೆಪಿ ಪಕ್ಷಕ್ಕೆ ಸೇರಿ ನನಗೆ ಕಮಲದ ಹೂವು ಕೊಡದಿದ್ದರೂ ಪರವಾಗಿಲ್ಲ,

ಕಾಂಗ್ರೆಸ್‍ಗೆ ಸೇರಿ ಕೈ ಮಾತ್ರ ಕೊಡಬೇಡ ..... :D

**********************************************************************

ನಮ್ಮ ರೈಲ್ವೆ ಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು ಮೈಸೂರಿನಿಂದ ಪಾಕಿಸ್ತಾನಕ್ಕೆ ಹೊಸ ರೈಲನ್ನು ಶುರು ಮಾಡ್ತಾರಂತೆ.

ಹೆಸರೇನು ಗೊತ್ತಾ ?

ಮೈಸೂರು - ಪಾಕ್ !! :D

ತಾಳ -ಸೂಳಾದಿ (ಸುಳಾದಿ) ಸಪ್ತತಾಳಗಳು

ತಾಳ - ಸೂಳಾದಿ (ಸುಳಾದಿ) ಸಪ್ತ ತಾಳಗಳು.

ಸಂಗೀತಕ್ಕೆ ರಾಗವು ಸೌಂದರ್ಯವನ್ನು ಕೊಡಬಲ್ಲದಾದರೆ ತಾಳವು ಅಚ್ಚುಕಟ್ಟುತನವನ್ನು ಕಲಿಸುತ್ತದೆ. ಯಾವ ವಸ್ತುವಿಗಾದರೂ ಒಂದು ನಿರ್ದಿಷ್ಟ ಆಕಾರವಿಲ್ಲದಿದ್ದರೆ ಅದು ಚೆನ್ನಾಗಿ ಕಾಣಿಸಲಾರದು. ಅಂತೆಯೇ ಕವಿತೆ ಎಷ್ಟು ಸುಂದರವಾಗಿದ್ದರೂ ಲಯರಹಿತ ಕವಿತೆಯು ತಾಳದ ಚೌಕಟ್ಟಿನೊಳಗಿನ ಕವಿತೆಗೆ ಸಾಟಿಯಾಗಲಾರದು. ಅಡಿಗೋಲಿನಲ್ಲಿರುವ ಹನ್ನೆರಡು ಭಾಗಗಳಲ್ಲಿ ಹೇಗೆ ಸ್ವಲ್ಪವಾದರೂ ವ್ಯತ್ಯಾಸವಿಲ್ಲವೋ ಹಾಗೆಯೇ ತಾಳದ ಭಾಗಗಳಲ್ಲಿ ವ್ಯತ್ಯಾಸವಿರಬಾರದು. ಹೀಗೆ ವ್ಯತ್ಯಾಸವಿರದ ಏಕರೂಪದ ಸಮಯಾವಕಾಶಕ್ಕೆ "ಲಯ" ಎಂದು ಹೆಸರು.  ಸಂಗೀತದ ಸಮಯವನ್ನು ಕೆಲವು ನಿರ್ದಿಷ್ಟವಾದ ನಿಯಮಗಳಿಗನುಸರಿಸಿ ಒಂದು ಕ್ರಮಬದ್ಧ ರೀತಿಯಲ್ಲಿ ಅಳವಡಿಸಿಕೊಳ್ಳುವ ವಿಧಾನವೇ "ತಾಳ". ತಾಳದ ಮುಖ್ಯ ಜೀವಾಳ ಲಯ.

ಹಾಡಿನಲ್ಲಿ ಸಾಹಿತ್ಯ ಭಾವಪೋಷಕವಾಗಿರುತ್ತದೆ. ಅದಕ್ಕೆ ಅನುಸಾರವಾಗಿ ರಾಗವು ಹೆಣೆಯಲ್ಪಟ್ಟಿರುತ್ತದೆ. ಅವುಗಳಿಗೆ ಸರಿಯಾಗಬಹುದಾದ "ವೇಗ" ಇರಬೇಕಾದುದು ಅವಶ್ಯ. ನಾವು ಸಂತೋಷದಿಂದಿರುವಾಗ ನಮ್ಮ ಮಾತಿನ ವೇಗ ಸಾಮಾನ್ಯವಾಗಿರುತ್ತದೆ. ಅವಸರದ ಸಮಯದಲ್ಲಿ ಅಥವಾ ಸಿಟ್ಟುಬಂದಾಗ ಮಾತಿನ ವೇಗ ಹೆಚ್ಚುತ್ತದೆ. ದುಃಖ ಬಂದಾಗ ತೀರ ನಿಧಾನವಾಗಿರುತ್ತದೆ. ಇದೇ ತತ್ವವನ್ನು ಸಂಗೀತದಲ್ಲಿ ಕೂಡ ನಾವು ಕಾಣಬಹುದು. ಭಾವಕ್ಕೆ ತಕ್ಕಂತೆ ಹಾಡುಗಳು ನಿಧಾನ, ಮಧ್ಯಮ ಹಾಗೂ ವೇಗ ಗತಿಗಳಲ್ಲಿರುತ್ತದೆ. ನಿಧಾನಗತಿಯಲ್ಲಿ ಹಾಡುವುದಕ್ಕೆ "ವಿಳಂಬಗತಿ" ಎಂದು ಹೆಸರು. ಸಂತೋಷದಿಂದ ಹಾಡುವಾಗ ವೇಗವು ತುಂಬಾ ಹೆಚ್ಚಾಗಿರುತ್ತದೆ. ಇಂತಹ ವೇಗವನ್ನು "ದ್ರುತಗತಿ" ಎನ್ನುವರು. ಇವೆರಡಕ್ಕೂ ಮಧ್ಯದಲ್ಲಿ ಬರುವುದಕ್ಕೆ "ಮಧ್ಯಮಗತಿ" ಎಂದು ಹೆಸರು. ಹಾಡುವ ವೇಗವು ಸಾಹಿತ್ಯ, ಭಾವ, ರಾಗಗಳಿಗೆ ಅನುಗುಣವಾಗಿ ಇರಬೇಕಾದುದು ತೀರಾ ಅವಶ್ಯ. ವೇಗದಲ್ಲಿ ವ್ಯತ್ಯಾಸವಾದರೆ ಹಾಡಿನ ಸೌಂದರ್ಯಕ್ಕೆ ಚ್ಯುತಿಯುಂಟಾಗುವುದು.

ಪ್ರತಿಕ್ರಿಯೆಯ ಸುತ್ತ

ಸಂಪದದ ಪ್ರತಿಯೊಂದು ಲೇಖನ, ಬ್ಲಾಗಿನ, ಚಿತ್ರದ ಇನ್ನಿತರ ಯಾವುದೇ ಬರಹದ ಕೆಳಗೆ "ಹೊಸ ಪ್ರತಿಕ್ರಿಯೆ ಸೇರಿಸಿ" ಎಂಬ ಕೊಂಡಿ ಇದ್ದು, ಅದು ಕೇವಲ ನಿಮ್ಮ ಬರಹ ಚೆನ್ನಾಗಿದೆ, ನನ್ನಿ, ವಂದನೆಗಳು, ಇನ್ನಿತರ ವಿಷಯವನ್ನು ಚರ್ಚಿಸುವುದನ್ನು ಕಂಡು ಅದರ ಬಳಕೆ ಸಮರ್ಪಕವಾಗಿ ಆಗುತ್ತಿಲ್ಲ ಅನಿಸುತ್ತಿದೆ.

ಗಾಂಧಿ ತಾತನಿಗೆ

ಭಾರತದ ಇತಿಹಾಸದಲ್ಲಿ ಅನೇಕ ದಾಳಿಗಳು ನಡೆದಿವೆ. ಹಾಗೆ ಇತಿಹಾಸದಿಂದ ಭಾರತಿಯರು ಇನ್ನು ಪಾಠ ಕಲೆತಿಲ್ಲವೆ?
ಇಂದು ಮತ್ತೆ ಭಾರತದಲ್ಲಿ ಭಯೋತ್ಪದಕರ ಭೀತಿಯಿದೆ. ಆದರೆ ರಾಜ್ಯ ರಾಜ್ಯಗಳು ಗಡಿ ಹೆಸರಲ್ಲಿ ,ಭಾಷೆ ಹೆಸರಲ್ಲಿ ರಾಜಕೀಯಕ್ಕೆ ಇಳಿದಿವೆ.
ಭಾರತದ ಈ ಅಂತರೀಕ ಜಗಳಗಳು ಹೊರಗಿನವರು ಬರಲು ದಾರಿ ಮಾಡಿಕೊಡುವುದಿಲ್ಲವೆ?

ಮೈಲಾರಯ್ಯನವರ ಮಾಣಿಕ್ಯಗಳು

ನಮ್ಮ ಮನೆಯ ಗೋಡೆ ಮೇಲೆ ಗೆರೆ ಗೆರೆ ಕೋಟು, ಜರಿಯ೦ಚಿನ ಮೈಸೂರು ಪೇಟ ಹಾಕಿಕೊ೦ಡು ದಪ್ಪ ಮೀಸೆ ಇಟ್ಟುಕೊ೦ಡು, ಜರ್ಬಾಗಿ ಫೋಟೋದಲ್ಲಿ ಕೂತು ಗುಬ್ಬಿ ಗೂಡುಗಳಿಗೆ ಆಶ್ರಯ ನೀಡುತ್ತಿರುವವರೇ ಶ್ರೀಯುತ ಮೈಲಾರಯ್ಯನವರು. ನನಗೆ ತಾತ. ನಮ್ಮಪ್ಪನಿಗೇ ಅಪ್ಪ! ಆದರೆ ಇವರನ್ನು ನಮ್ಮಪ್ಪನೇ ನೋಡಿಲ್ಲ. ನಮ್ಮಪ್ಪ ೭ ತಿ೦ಗಳ ಕೈಕೂಸಾಗಿದ್ದಾಗಲೇ ಇವರು ಪರ೦ಧಾಮವನ್ನು ಗೈದಿದರ೦ತೆ. ಹಾಗಾಗಿ ಪಾಪ ನಮ್ಮಜ್ಜಿಗೆ ಹದಿನೇಳೇ ಮಕ್ಕಳು. ಅದೆಲ್ಲಾ ಹಳೆಯ ಕಥೆ ಬಿಡಿ ಮೇಲೆ ಹೇಳಿದ ಏಳು ತಿ೦ಗಳ ಕೈಕೂಸಿಗೆ ಈಗ ಅರವತ್ತು! ಎರಡು ಮಕ್ಕಳು ಹಾಗೂ ಎರಡು ಮೊಮ್ಮಕ್ಕಳು. ಇಷ್ಟೆಲ್ಲಾ ಆದಮೇಲೆ ಮತ್ತೆ ಮೈಲಾರಯ್ಯನವರೇಕೆ ಬ೦ದ್ರು ಅ೦ತ ಯೋಚಿಸ್ತಿದ್ದೀರ? ಹೇಳ್ತೀನಿ ಮರಿಮಕ್ಕಳು ಬ೦ದು ಪ್ರಶಾ೦ತವಾಗಿದ್ದ ಮೈಲಾರಯ್ಯನವರ ಫೋಟೋ ಜೀವನವನ್ನ ಹೇಗೆ ಕದಡಿದರು ಅನ್ನೋ ದುರ೦ತ ಕಥೆಯನ್ನ..

ನಾನು ಸಂಪದಕ್ಕೆ ಬಂದಿದ್ದಾಗಿದೆ

ನಾನು ಸಂಪದಕ್ಕೆ ಬಂದಿದ್ದಾಗಿದೆ ಯಾರಿಗೂ ಹೇಳದೆ
ನಾನು ಸಂಪದದಲ್ಲಿ ನೆಲೆಸಿದ್ದಾಗಿದೆ ಯಾರನ್ನೂ ಕೇಳದೆ.

ನಿಮ್ಮೆಲ್ಲರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾಗಿದೆ ಯಾರಿಗೂ ತಿಳಿಯದೆ
ನಿಮ್ಮೆಲ್ಲರ ಮನಸ್ಸಿನಲ್ಲೆ ನೆಲೆಸಿದ್ದಾಗಿದೆ ಯಾರಿಗೂ ಅರಿವಾಗದೆ

ತಿಳಿಸಿ ಅರಿತುಕೊಳ್ಳುವೆ ನನ್ನೆಲ್ಲಾ ತಪ್ಪುಗಳನ್ನು
ಹರಸಿ, ಆಶೀರ್ವದಿಸಿ ಹೀಗೆ ನನ್ನನ್ನು

ಹನ್ನೆರಡು ಜ್ಯೋತಿರ್ಲಿಂಗಗಳು - ೫ [ಪರ್ಲಿಯ ವೈದ್ಯನಾಥ].

ಪರ್ಲಿಯ ವೈದ್ಯನಾಥ.

ಎಲ್ಲಿದೆ?
ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿರುವ ಚಿಕ್ಕಗ್ರಾಮ ಪರ್ಲಿ.
ಮಹಾಭಾರತದ ಪ್ರಸಿದ್ಧ ಕುಂತೀಪುರವೇ ಇದು ಎಂದು ನಂಬಿಕೆ.
ಅಮೃತ ಮಥನದ ಸಂದರ್ಭದಲ್ಲಿ ಸೃಷ್ಟಿಯಾದ ಹದಿನಾಲ್ಕು ರತ್ನಗಳಲ್ಲಿ ಈ ಲಿಂಗವೂ ಒಂದು ಎಂಬುದು ಪ್ರತೀತಿ.
ರಾವಣಾಸುರನು ಪರಮಶಿವನನ್ನು ಒಲಿಸಿಕೊಳ್ಳಲುಇಲ್ಲಿ ತಪಸ್ಸು ಮಾಡಿ ತನ್ನ ಶಿರವನ್ನೇ ಅರ್ಪಿಸಿದನಂತೆ.
ಕ್ರಿ. ಶ. ೧೭೦೬ರಲ್ಲಿ ಅಹಲ್ಯಾದೇವಿ ಹೋಳ್ಕರ್ ಈ ಅಪೂರ್ವ ಲಿಂಗವನ್ನು ಪತ್ತೆ ಮಾಡಿದಳು.
ನಂತರ ಪೇಶ್ವೆ ನಾನಾರಾವ್ ದೇಶಪಾಂಡೆ ಇಲ್ಲಿ ಭವ್ಯವಾದ ದೇವಸ್ಥಾನವನ್ನು ಕಟ್ಟಿಸಿದನು.

ನಿಮ್ಮ ಮಗುವಿಗೊಂದು ಪುಟಾಣಿ ಪದ್ಯ

ಬಾನ ತುಂಬ ಚುಕ್ಕೆ ತಾರೆ
ಚಂದ್ರ ಬಿಂಬ ನಗುತಿದೆ
ಕಣ್ಣು ಸೋಲುವಷ್ಟೂ ದೂರ
ಅನಂತ ಗಗನ ಹರಡಿದೆ |

ನಿದ್ರೆ ಬರಲೇ ಇಲ್ಲ ಎಂದು
ನೋಡುತಿದ್ದೆ ಬಾನಲಿ
ಕಂಡ ಚಂದ್ರ ಕಿಂಡಿಯಲ್ಲಿ
ಕರೆದೆ ಅವನ ಒಲವಲಿ |

ಅಳುತಲಿದ್ದ ಹಾಗೇ ಕಂಡ
ಅರ್ಧ ಚಂದ್ರ ಹಸಿವಲಿ
ನಾನೇ ಕರೆದೆ ಚಂದ್ರ ಬಾರೋ
ತಿಂಡಿ ಇಹುದು ಮನೆಯಲಿ |

ಅಗೋ! ಅಲ್ಲಿ ಅರ್ಧ ಚಂದ್ರ
ನನ್ನ ಮನೆಗೆ ಬರುತಿಹ
ಹಾಲಿನಂಥ ಬೆಳಕ ತಂದು