ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬದುಕು!!!

ಬದುಕು!!!

ಸಾಗುತಿದೆ ಬದುಕು ಅನಾದಿಯಿಂದ
ಕಾಲನ ಸೂಕ್ತ ಸೂತ್ರದಿಂದ
ಇರುಳು ಹಗಲುಗಳ ಹಿಂದೂಡಿ
ಜನುಮ ಜನುಮಗಳ ಜರಡಿಯಾಡಿ
ನೋವು ನಲಿವುಗಳ ಜಾಲಾಡಿ
ಜನ ಮನ ದನ ಧನಗಳ ಜೊತೆಗೂಡಿ
ಸಾಗುತಿದೆ ಬದುಕು ನಿರಂತರ!!!

ಸಮೋಸ

ಒಬ್ಬ ಹುಡುಗ ಎಸ್ ಎಸ್ ಎಲ್ ಸಿ ಯಲ್ಲಿ ಪ್ರಥಮ ದರ್ಜೆಯಲ್ಲಿ ಬಂದ,

ಕಾರಣ ಅವನು 'ಪ್ರತಿಭಾವಂತ',

ಅದೇ ಹುಡುಗ ಮುಂದೆ ಬಿ ಕಾಂ ನಲ್ಲಿ ಫೇಲ್ ಆದ ಕಾರಣ ?

ಅವಳ್ಯಾರೋ 'ಪ್ರತಿಭಾ' ಅಂತೆ !!!

***********************************************************************

ಹುಡ್ಗ: ವಾಟ್ ಇಸ್ 143?
ಹುಡ್ಗಿ: ಐ ಲವ್ ಯು
ಹುಡ್ಗ: ಅಲ್ಲ
ಹುಡ್ಗಿ: ಐ ಹೇಟ್ ಯು
ಹುಡ್ಗ: ಅಲ್ಲ
ಹುಡ್ಗಿ: ಐ ಮಿಸ್ ಯು

ಬೆಲಾರಸ್ಸಿನ ವಿಶಿಷ್ಟ ಸೌತೆ ಕೊಯ್ಲು

ಈ ಚಿತ್ರ ನೋಡಿದರೆ ಏನೆನ್ನಿಸುತ್ತದೆ?

 

ಯಾವುದೋ ಒಂದು ಟ್ರಾಲಿಯನ್ನು ಒಂದು ಟ್ರಾಕ್ಟರ್ ಎಳೆದುಕೊಂಡು ಹೋಗುತ್ತಿದೆ ಎನ್ನಿಸುತ್ತಿಲ್ಲವೇ? ಸೂಕ್ಷ್ಮವಾಗಿ ಗಮನಿಸಿದರೆ ಹಲವು ಗಾಲಿಗಳ ಒಂಡು ಅಡ್ಡಟ್ರಾಲಿಯಲ್ಲಿ ಹಲವಾರು ಹಲಗೆಗಳನ್ನು ಒಂದರ ಪಕ್ಕದಲ್ಲಿ ಒಂದನ್ನು ಜೋಡಿಸಿರುವುದನ್ನು ಗಮನಿಸಬಹುದು.

ಜೀವಸೆಲೆ

ಚಿಗುರೆಲೆಗಳ ನಡುವೆ
ಹೂವೊಂದು ನಕ್ಕು
ಬಿಸಿಲಿಗೆ ಎದೆ ಚಾಚಿ
ಮಳೆಗೆ ನಸು ನಾಚಿ
ಚಳಿಯೊಡನೆ ಚರಮಗೀತೆ
ಯ ಹಾಡಿ...
ಬಲಿತ ಎಲೆಗಳೂ
ನೆಲವನ್ನಪ್ಪಿ
ಬೆತ್ತಲಾಗಿ ನಿಂತ
ಮರ
ಮತ್ತೆಲ್ಲಿಯ ಜೀವ ಸೆಲೆ ?

ಮತ್ತೊಂದು ಕಾಲಚಕ್ರಕೆ
ಸಜ್ಜಾದ ಮರಕ್ಕೆ ತನ್ನದೇ ನೆಲೆ.

ನಗುತ್ತಿರಲಿ ಮನಸು

ನಗುತಿರಲಿ ಮನಸು
ಬಾರದಿರಲಿ ಮುನಿಸು
ನಗುತಿರುವುದೇ ಸೊಗಸು
ಕನಸ ಕಾಣಲಿ ಮನಸು
ನನಸಾಗಲಿ ಕನಸು
ಸಿಹಿ ಕನಸು......

ಪ್ರೀತಿಯಿಂದ ನಿಮ್ಮ ಗೆಳತಿ
ಕಾವ್ಯಾ.......... ;)

ಪಬ್ಬು ಹಬ್ಬಿಸಿದ ಗಬ್ಬು

ಇತ್ತೀಚೆಗೆ ಮಂಗಳೂರಿನ ಪಬ್ ಒಂದರ ಮೇಲೆ ಸ್ವಯಂಘೋಷಿತ ದೇಶ-ಸಂಸ್ಕೃತಿ ರಕ್ಷಕರು ದಾಳಿಯಿಟ್ಟದ್ದು ಈಗ ವಿಶ್ವವೇದ್ಯ. ಅನಂತರ ಈ ಕುರಿತು ನಡೆದ ಅಸಂಖ್ಯ ಚರ್ಚೆಗಳಲ್ಲಿ ‘ಇದು ನಮ್ಮ ಸಂಸ್ಕೃತಿಗೆ ವಿರುದ್ಧವಾದದ್ದು’ ಮತ್ತು ‘ಇದು ನಮ್ಮ ವೈಯಕ್ತಿಕ ಸ್ವಾತಂತ್ರ್ಯ; ಇದನ್ನು ಯಾರೂ ಪ್ರಶ್ನಿಸತಕ್ಕದ್ದಲ್ಲ’ ಎಂಬ ಎರಡು ಸಮಾನಾಂತರ ನಿಲುವುಗಳ ನಡುವೆ ಹಲವಾರು ತರ್ಕಗಳು ಮತ್ತು ಅಭಿಪ್ರಾಯಗಳು ಮಂಡನೆಯಾದವು.

ಪಬ್ ದಾಳಿಯ ಅನಂತರ ಕರ್ನಾಟಕದ ಒಂದು ಸುದ್ದಿವಾಹಿನಿಯಲ್ಲಿ ನಡೆದ ಚರ್ಚೆ ಮತ್ತು ಜನವರಿ ದಿನಾಂಕ 31ರಂದು ಮಂಗಳೂರಿನ ಕದ್ರಿ ಉದ್ಯಾನದಲ್ಲಿ ರಾಷ್ಟ್ರಮಟ್ಟದ ಸುದ್ದಿವಾಹಿನಿಯೊಂದರ ಬೆಳಕಿನಡಿಯಲ್ಲಿ ನಡೆದ ಸಮಾವೇಶಗಳಿಗೆ ನನ್ನ ಪ್ರತಿಕ್ರಿಯೆಗಳನ್ನು ಸೀಮಿತಗೊಳಿಸುತ್ತೇನೆ.

ಕನ್ನಡ ಸುದ್ದಿವಾಹಿನಿಯ ಚರ್ಚೆಯಲ್ಲಿ ಪಾಲ್ಗೊಂಡ ಜನವಾದಿ ಮಹಿಳಾ ಸಂಘಟನೆಯ ಪದಾಧಿಕಾರಿಯವರು ಕೇಳುವ ಒಂದು ಪ್ರಶ್ನೆ `ಕಾನೂನನ್ನು ಕೈಗೆತ್ತಿಕೊಳ್ಳಲು ಇವರ್ಯಾರು?' ಹೌದಲ್ಲಾ? ಯಾಕೆ ಇವರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ?! ಏಕೆಂದರೆ ಕಾನೂನು ತನ್ನ ಕೈಗಳನ್ನು ಉಪಯೋಗಿಸದಿದ್ದರೆ ಯಾರ್ಯಾರೋ ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ. ಇಡೀ ಚುನಾವಣಾ ಯಂತ್ರವನ್ನು ಶರಾಬು ಯಾಕೆ ನಿಯಂತ್ರಿಸುತ್ತದೆ ಎಂದು ಯಾವ ಕೋರ್ಟು ಕೂಡಾ ಕೇಳುವುದಿಲ್ಲ.

ಮಂಗ್ಯಾ ಆಗುವುದೆಂದರೆ ಹೀಗೆ...

ಒಂದಾನೊಂದು ಕಾಲದಲ್ಲಿ ಒಂದು ಹಳ್ಳಿಯಿತ್ತು. ಅಲ್ಲಿಗೆ ಬಂದ ವ್ಯಕ್ತಿಯೊಬ್ಬ, ಒಂದು ಮಂಗ ಹಿಡಿದುಕೊಟ್ಟರೆ ಹತ್ತು ರೂಪಾಯಿ ಕೊಡುವುದಾಗಿ ಘೋಷಿಸಿದ.

ತಗೊಳ್ಳಿ, ಜನ ನಾ ಮುಂದು ತಾ ಮುಂದು ಎಂದು ಮಂಗಗಳನ್ನು ಹಿಡಿಯಲು ಹೊರಟರು. ಹಳ್ಳಿಯಲ್ಲಲ್ಲದೇ ಸುತ್ತಮುತ್ತಲ ಪ್ರದೇಶದಲ್ಲಿ ಹೇರಳವಾಗಿದ್ದ ಮಂಗಗಳನ್ನು ಹಿಡಿದೊಪ್ಪಿಸಿ ದುಡ್ಡೆಣಿಸಿಕೊಂಡರು.