ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮೌನ ನದಿ

ಮೌನ ನದಿ

ನದಿಯ ಮೌನ
ಇರುಳ ನೀರವತೆಗೂ
ದೃತಿಗೆಡದ ಮೌನ!
ಹೊಳೆವ ಅಪರಿಮಿತ
ನಕ್ಷತ್ರಗಳ ಬಿಂಬಗಳಲಿ
ಮಿರುಗುವ ನದಿಯಲೆಗಳು.
ಬೀಗುವ ಚಂಚಲ ಮೋಡದೊಡಲ
ಕಂಡು ಮೋಹಕ ಮರುಗುವ,
ಚದುರಿ ಉದುರುವ ಹನಿಗೆ
ಮಡಿಲೊಡುವ ನದಿ ಮೌನ!

ಹನಿನೀರು ಜಲವಾಗಿ
ನದಿಯಾಗಿ ಹೊರಳಿ,
ಮಿರುಗಿ,ನಲುಗಿ,
ನೆಲೆಗೊಳ್ಳದೆ ಹರಿವನೆ
ಹರಸುವ ನದಿ ಮೌನ!
ಎಚ್.ಎನ್.ಈಶಕುಮಾರ್

ನೆನಪ ಶವಯಾತ್ರೆ

ನೆನಪ ಶವಯಾತ್ರೆ

ಮನದ ಮರುಭೂಮಿಯಲಿ
ಹುದುಗಿಸಿದ್ದ ನೆನಪಿನ ಸಮಾಧಿ
ಬೀಸಿದ ವಿಲಕ್ಷಣಗಾಳಿಗೆ
ಬೆತ್ತಲಾದ ಕಳೇಬರ
ಕಂಗೆಡಿಸಿ ಜೀವವನೆ
ಮತ್ತೆ ಮತ್ತೆ ಕರೆದೊಯ್ಯುವುದು
ಸಮಾಧಿಯಂಥ ನೆನಪಿನಂಗಳಕೆ.

ಸುಕೋಮಲ ಸುಮಧುರ
ಸುಪ್ತ ನೆನಪುಗಳವು
ಇಂದು ಮನವ ಕಾಡುತಿರಲು
ಅಧೀರ ಚೇತನವು
ಎಳೆದೊಯ್ಯುವುದು ಒಡನೆ
ನೆನಪ ಶವಯಾತ್ರೆಗೆ
ಮತ್ತೆ ಮತ್ತೆ ನಡೆದಿಹುದು

ಮನುಜನಿಲ್ಲ!!

ಮನುಜನಿಲ್ಲ!!

ಕಳೆದು ಹೋಗಿದ್ದಾನೆ
ಮನುಜ ಜಗದಲಿಂದು!
ಸಿಗುವರು ಹಿಂದೂ,ಕ್ರೈಸ್ತ,
ಮುಸಲ್ಮಾನರಸ್ತೆ
ನಮ್ಮೊಳಗಿಂದು.

ಪ್ರೀತಿ,ಪ್ರೇಮ, ಸಹಕಾರದ
ಸಹಬಾಳ್ವೆ ಇಲ್ಲ!
ಇಹುದು ಕೇವಲ
ಗುಡಿ, ಚರ್ಚು,ಮಸಿದಿಗಳು
ನಮ್ಮೊಡನೆ ಇಂದು.

ಗಂಟೆ, ಗೋಪುರ, ಗುಂಬಜ,
ಶಿಲುಬೆಗಳ ನಾಡಿನಲಿ
ಉಸಿರುಗಟ್ಟಿ ಪರಿತಪಿಸಿ
ಸತ್ಹಿದೆ ಮಾನವತೆಯು!
ಗುಡಿ,ಚರ್ಚು, ಮಸಿದಿಗಳಲಿ
ಮನಃ ಶಾಂತಿಗೆ

ಯುವ ಸ್ವಾತಂತ್ರ್ಯ , ನನ್ತಲೆಗ್ ಬಂದ್ ಪ್ರಶ್ನೆಗಳು. [ಮಂಗ್ಳೂರ್ ಪಬ್ ಗಲಾಟೆ ಮತ್ತೆ ನಮ್ ಮೀಡಿಯಾ]

/*‌ಸ್ವಲ್ಪ ದೊಡ್ಡ ಬ್ಲಾಗೆಂಟ್ರಿ. ಈಗ್ಲೇ warn ಮಾಡ್ತಿದೀನಿ. */

ಪಬ್ನಲ್ಲಿ ಹೆಣ್ಮಣಿಗಳಿದ್ರು. ಅವ್ರಿಗ್ ಕಲ್ಚರ್-contract ತಗೊಂಡಿರೋ ಕೆಲ್ವ್ ಜನ ಹೋಗಿ ಬಡ್ದ್ರು. ಬಾರ್ಗ್ ಹೋಗಿದ್ದಕ್ ಬಾರ್ಸ್ದ್ರು ಅಂತ ನಮ್ (ಕು)ಖ್ಯಾತ ಮೀಡಿಯ ಗಂಟ್ಲ್ಹರ್ಕೊಳ್ತು.ಯಾವ್ ನ್ಯೂಸ್ ಚಾನಲ್ ಹಾಕ್ದ್ರೂ ಅದೇ.
ಆದ್ರೆ ಬರೀತಿರೋದು ಇದ್ರ ಬಗ್ಗೆ ಅಲ್ಲ. ನಮ್ ಮೀಡಿಯಾ ಬಡ್ಕೋತಲ್ಲ, 'ಯುವ ಸ್ವಾತಂತ್ರ್ಯ, ಅಯ್ಯೋ , ಯುವ ಜನಾಂಗದ ಸ್ವಾತಂತ್ರ್ಯ ಹರಣ, ಹಕ್ಕಿನ ಕಗ್ಗೊಲೆ' ಅಂತ. ಇದಕ್ಕೆ ಸಂಬಂಧಿಸಿದಂತೆ ಕೆಲ್ವು ಪ್ರಶ್ನೆಗಳು ತಲೆಗ್ ಬಂದ್ವು. ಇದನ್ ನೋಡಿ ಬರ್ಯೋಣ ಅನ್ಸಿತ್ತು, ಟೈಮ್ ಸಿಕ್ಕಿರ್ಲಿಲ್ಲ; ಈಗ್ಸಿಕ್ತು. ಅದ್ರ ಪರಿಣಾಮ ಈ ಬ್ಲಾಗೆಂಟ್ರಿ. /*‌ ಲೇಖನ ಅಂತ consider ಮಾಡೋಕ್ಕೆ  ರಗಳೆ. ನಾನು 'ಕೈಲಾಸಂ ಕನ್ನಡ' ಸ್ಟೈಲಲ್ಲಿ ಗೀಚೋದು,ಅದ್ಕೆ. */

ಪೀಠ್ಕೆ ಸಾಕು. ವಿಷ್ಯಕ್ ಬರ್ತೀನಿ.

ಬಂದಿದೆ ಬಂದಿದೆ ಬಂದಿದೆ│ಪ್ರಬಲ ಆರ್ಥಿಕ ಹಿಂಜರಿತ│

ಬಂದಿದೆ ಬಂದಿದೆ ಬಂದಿದೆ
ಪ್ರಬಲ ಆರ್ಥಿಕ ಹಿಂಜರಿತ│
Americaದಲ್ಲಿ Europeನಲ್ಲಿ
Indiaದಲ್ಲಿ, ಎಲ್ಲೆಡೆಯಲ್ಲಿ
ಆಗುತ್ತಿದೆ ಆಗುತ್ತಿದೆ ಆಗುತ್ತಿದೆ
ಷೇರು ಸೂಚ್ಯಂಕದಲ್ಲಿ ಇಳಿತ
ಕೆಲಸಗಳ ಹಿಗ್ಗ ಮುಗ್ಗಾ ಕಡಿತ!

ಬಂದಿದೆ ಬಂದಿದೆ ಬಂದಿದೆ
ಪ್ರಬಲ ಆರ್ಥಿಕ ಹಿಂಜರಿತ│
ಈಗೀಗ ಆಗಿದೆ ಆಗಿದೆ ತಣ್ಣಗಾಗಿದೆ
Party, Outingಗಳ ಮೊರೆತ
Bar-Pubಗಳಲ್ಲಿ ಅಬ್ಬರದ ಕುಣಿತ!

ಮಸಾಲೆ ದೋಸೆ ಪುರಾಣ..!

ಹೊಟ್ಟೆ ಚುರುಗುಟ್ಟುತ್ತಿದೆ. ಆರ್ಡರ್ ಮಾಡಿ ಬಹಳ ಹೊತ್ತಾಗಿದೆ. ತಡವಾದಷ್ಟು ಬರಲಿರುವ
ಮಸಾಲೆ ದೋಸೆಯ ರುಚಿ ಹೆಚ್ಚಾಗಲಿದೆ. ಒಳಗೆ ಕಾವಲಿಗೆ ನೀರು ಹಾಕಿ ಪೊರಕೆಯಲ್ಲಿ ಗುಡಿಸಿ
ವೇದಿಕೆ ಸಜ್ಜುಗೊಂಡಿದೆ. ಪಾರ್ಸೆಲ್ ತೆಗೆದುಕೊಳ್ಳಲು ಬಂದು ತನ್ನ ದೋಸೆ ಹುಯ್ಯುವ
ಶೈಲಿ ನೋಡುತ್ತಿರುವ ಹುಡುಗನನ್ನು ಓರೆಗಣ್ಣಿನಲ್ಲಿ ನೋಡಿದವ ಅದನ್ನು ಗಮನಿಸದವನಂತೆ
ಬಿಸಿ ಕಾವಲಿಯ ಮೇಲೆ ಬೇಕಂತಲೇ ಒಂದೆರೆಡು ಹನಿ ನೀರು ಹಾಕಿ ಚಟಪಟವೆನಿಸಿ ಸ್ಟೈಲ್
ತೋರಿದ್ದಾನೆ.
ತನ್ನನ್ನು ಗಮನಿಸುತ್ತಿರುವ ಸೂಪರ್ವೈಸರನ್ನು ಮೆಚ್ಚಿಸಲು ಈ ಸಲ ಮುಕ್ಕಾಲು ಸೌಟಿನಲ್ಲೇ
ದೋಸೆ ತಿರುವಿ ನೇವರಿಸಿಯಾಗಿದೆ. ಇನ್ನೂ ಮೆಚ್ಚಿಸಲು ತುಪ್ಪ ಕಡಿಮೆ ಹಾಕಿ ದೋಸೆ
ರುಚಿಕೆಟ್ಟು ಅಪಮಾನವಾದೀತೋ ಎಂಬ ಭಯದಿಂದಲೋ ಅಥವಾ ಗಿರಾಕಿಗಳಿಗೆ ತೋರಿಸಿಕೊಳ್ಳಲೋ
ಎಂಬಂತೆ, 'ಲೋ, ತುಪ್ಪ ಜಾಸ್ತಿ ಹಾಕೋ ರಾಯರಿಗೆ' ಅನ್ನುತ್ತಾ ಗಿರಾಕಿಗಳಿಗೆ ಬೆಣ್ಣೆ
ಹಚ್ಚಿದ್ದಾನೆ.

ಪಾಪ ಪ್ರಧಾನಮಂತ್ರಿಗಳಿಗೆ ಹೀಗಾಗಬಾರದಿತ್ತು!

ನಿನ್ನೆ ದಿಲ್ಲಿಯಿಂದ ಚೆನ್ನೈಗೆ ಹೊರಟಿದ್ದೆ. ಅಲ್ಲಿ ಏಷಿಯನ್ ಏಜ್ ಪೇಪರ್ ಓದಿದ ಸುದ್ದಿ ನಿಜಕ್ಕೂ ತಲೆ ಸುತ್ತುವಂತೆ ಮಾಡಿತು. ಏಷಿಯನ್ ಏಜ್ ಪ್ರಕಾರ ಪ್ರಧಾನ ಮಂತ್ರಿಗಳು ಇಂದು ಬಿಡುಗಡೆ ಹೊಂದಬಹುದು (ಆಸ್ಪತ್ರೆಯಿಂದ!)

ನನಗೆ ಗೊತ್ತಿರುವಹಾಗೆ ಅವರು ಹೃದಯದ ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದರು. ಅದನ್ನು "ಮನೆಗೆ ಮರಳುತ್ತಾರೆ" ( Discharge ) ಎನ್ನುತ್ತಾರೆಯೇ ವಿನಃ ಬಿಡುಗಡೆ (Release) ಎನ್ನುವುದಿಲ್ಲ!!!

ಬಹುಶಃ ಏಮ್ಸ್ ಗೆ ಸೇರಿದ ಬಹಳ ದೊಡ್ಡ ಗಣ್ಯರು ಅಲ್ಲಿಂದಲೇ (ಲೋಕದಿಂದ) ಬಿಡುಗಡೆಯಾಗಿರುವುದೇನೋ ನಿಜ! ಈ ರೀತಿಯ ವರದಿಗಳನ್ನು ಕೊಡುವ ಬೇಜವಾಬ್ದಾರಿ ಪತ್ರಿಕೆಗಳನ್ನು ಓದಲೇ ಬೇಸರವಾಗುತ್ತದೆ.

ನಿಜ ಹೇಳಬೇಕೆಂದರೆ ಪ್ರಧಾನಿಯವರೂ ಬಹಳ ಸಾರಿ ಬಿಡುಗಡೆಗೆ ಪ್ರಯತ್ನಿಸಿದ್ದಂತೂ ನಿಜ. ರಾಜಕೀಯ ಜಂಜಾಟದಿಂದ (ಜವಾಬ್ದಾರಿ ಹೊರಲಾರದೇ) ರಾಜೀನಾಮೆ ಕೊಡಲು ಮೇಡಂಮುಂದೆ ಬಹಳಸಾರಿ ನಿಂತಿದ್ದರು. ಅಂದಹಾಗೆ ನರಸಿಂಹರಾಯರು ಪ್ರಧಾನಿಯಾಗಿದ್ದಾಗ ಮನಮೋಹನರಿಗೆ "ನೀವು ರಾಜೀನಾಮೆ ನೀಡುವುದಕ್ಕೆ ನನ್ನ ಬಳಿಗೆ ಬರಲೇಕೂಡದು" ಎಂದು ತಾಕೀತು ಮಾಡಿದ್ದರು.

ಪರಿಪೂರ್ಣ ಮಹಿಳೆ.

ಪರಿಪೂರ್ಣ ಮಹಿಳೆ. ಕೂಗುತಿದೆ ಕಹಳೆ.

ಹೆಣ್ಣು ಅಂದರೆ ಹೀಗಿರಬೇಕು,
ರಸಪೂರಿ ಮಾವಿನಹಣ್ಣಿನಂತಿರಬೇಕು
ಮಗಳೆಂದರೆ ಹೀಗಿರಬೇಕು,
ಜನಕನ ಪುತ್ರಿ ಸೀತೆಯಂತಿರಬೇಕು.
ಸೊಸೆಯೆಂದರೆ ಹೀಗಿರಬೇಕು,
ಸದ್ಗುಣಿ ಮಲ್ಲಮ್ಮನಂತಿರಬೇಕು
ಹೆಂಡತಿಯಾಗಿ ಹೀಗಿರಬೇಕು,
ಸತಿ ಅನುಸೂಯಳಂತಿರಬೇಕು.
ಅಮ್ಮ ಅಂದರೆ ಹೀಗಿರಬೇಕು,
ನಮ್ಮ ಪಂಡರಿಬಾಯಿಯಂತಿರಬೇಕು.