ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗುಜರಾತಿನಲ್ಲಿ ಬಾನಿಗೇರಲು ಗಜರಾಜನಾದ ಗಣೇಶ

ಗಾಳಿಪಟ ಹಾರಿಸುವ ಮಂಗಳೂರಿನ ಹವ್ಯಾಸಿ ತಂಡದವರು ಗಣೇಶನ ರೂಪದಲ್ಲಿ ಸುಂದರವಾದ ಗಾಳಿಪಟವನ್ನು ತಯಾರಿಸಿದ್ದು, 'ಒಂದು ಧರ್ಮಕ್ಕೆ ಸೇರಿದವರೆಲ್ಲರ ಭಾವನೆಗಳಿಗೆ ಧಕ್ಕೆಯಾಗುವುದರಿಂದ ಅದನ್ನು ಹಾರಿಸಬಾರದೆಂದು' ಕೇವಲ ಬೆರಳೆಣಿಕೆಯಷ್ಟಿರುವ ಕೆಲವು 'ಸ್ವಯಂಘೋಷಿತ ಧರ್ಮ ಸಂರಕ್ಷಕರು' ಬೆದರಿಕೆಯನ್ನೊಡ್ಡಿದ್ದರಿಂದ ಅದನ್ನು ಮಂಗಳೂರಿನ ಕಡಲತೀರದಲ್ಲಿ ಬಾನಿಗೇರಿಸಲಾಗ

ಕತ್ತೆಯ ಮೇಲೊಂದು ಕಂಬಾರರ ಹಾಡು

ಸಲಾಮಲೇಕುಂ ಡಿಂಗ್ ಡಾಂಗ್ ಸಾಹೇಬರ
ಬಲೆ ಮೋಜುದಾರ
ಯಾರಿಲ್ಲ ಎದುರಿಗೆ ನಿಲ್ಲವರ
ನಿಮ ಸಮಾನರ್ಯಾರ || ಪಲ್ಲವಿ||
ಈ ನಾಡನ್ನಾಳೋ ರಾಜ
ಹುಲಿ ಅಲ್ಲ ಚಿರತೆ ಖೋಜ
ಅವನಿಗಿಂತ ನೀವೇ ಉತ್ತಮರ ! ಓ ಸಾಹೇಬರ ||ಅನು ಪಲ್ಲವಿ ||

ಮುಂಗಾಲಿಂದ ನಡೆಯುತ್ತೀರಿ
ಹಿಂಗಾಲಿಂದ ಒದೆಯುತ್ತೀರಿ
ಎರಡೆರಡು ನಾಲ್ಕರಿಂದ
ಒದ್ದೂ ನಡೆದೂ ಕುಣಿಯುತ್ತೀರಿ ||
ಈ ನಾಡನ್ನಾಳೋ ರಾಜ

Theatre jam

ಸಂಪದ ಮಿತ್ರರೇ ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ ಸಮಯದ ಅಭಾವದಿಂದ ಇಂಗ್ಲೀಷ್ ನಲ್ಲಿಯೇ ಹಾಕುತ್ತಿದ್ದೇನೆ

ದೇವ ದರುಶನವ ತೋರೆಯಾ!!

ಹಿಂದೆ ದ್ರೌಪದಿಯ ಮಾನವನ್ನುಳಿಸಲು ಅವತರಿಸಿದಂತೆ
ವಿಚಾರವಾದಿಗಳೆಂದು ಬೀಗುತ್ತಿರುವ, ಆಷಾಡಭೂತಿತನದಿಂದ
ಮೆರೆಯುತ್ತಿರುವ ಗಂಡಸರಿಂದ ನಮ್ಮನ್ನು ರಕ್ಷಿಸು!

ನಮ್ಮ ಸ್ವಾತಂತ್ರ್ಯದಿಂದ ದೇಶ ಹಾಳಾಯಿತೆಂದು
ಕೂಗಾಡುತ್ತಿರುವ ಬಾಯಿಗಳಿಂದ ನಮ್ಮನ್ನು ರಕ್ಷಿಸು!

ಮತ್ತೆ ನಮ್ಮನ್ನು ಗುಲಾಮರನ್ನಾಗಿ ಮಾಡಬೇಕೆಂದು
ಆಶಯ ಹೊಂದಿರುವ ಹಸ್ತಗಳಿಂದ ರಕ್ಷಿಸು!

ಚಿಣ್ಣರ ಲೋಕಕ್ಕೆ ಬಣ್ಣದ ಬುಗರಿ- ಬೇಬ್ಲೇಡ್

"3...2...1...LET IT RIP"
ಆಧುನಿಕ ಯುಗದಲ್ಲಿ ಮಕ್ಕಳ ಮೆದುಳಿಗೆ ಕಸರತ್ತು ನೀಡಲು ಅದೆಷ್ಟೋ ಆಟಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಆಟಿಕೆಗಳು ಮತ್ತು ಅದರಿಂದ ಆಡುವ ಆಟಗಳು ಪುರಾತನ ಕಾಲದಲ್ಲಿಯೇ ಭಾರತದಲ್ಲಿದ್ದವೆಂದು ನಮ್ಮ ಪುರಾಣಗಳಿಂದ ತಿಳಿದು ಬರುತ್ತದೆ. ಪಗಡೆಯಾಟ, ಬಿಲ್ಲು ಬಾಣ, ಬುಗರಿಯಾಟ ಮುಂತಾದವುಗಳನ್ನು ನಾವು ಬಹಳ ಹಿಂದಿನಿಂದಲೆ ಬಲ್ಲವರಾಗಿದ್ದೇವೆ. ಇಂತಹ ಆಟಗಳು ಇಂದಿನ ಮಕ್ಕಳನ್ನೂ ಆಕರ್ಷಿಸುತ್ತಿವೆ ಎನ್ನುವುದಕ್ಕೆ ಉದಾಹರಣೆಗಳನ್ನು ನೀಡಬಹುದು. ಟಿ.ವಿ.ಯಲ್ಲಿ ರಾಮಾಯಣ ಧಾರಾವಾಹಿ ಆರಂಭವಾದಾಗ ಅದರಲ್ಲಿನ ಬಿಲ್ಲು ಬಾಣಗಳನ್ನು ನೋಡಿ ಮಕ್ಕಳು ಅಂತಹ ಆಟಿಕೆಗಳಿಗೆ ಆಕರ್ಷಿತರಾಗಿದ್ದರು.

ಟಿ.ವಿ. ಮಾಧ್ಯಮವು ಮಕ್ಕಳನ್ನು ಹೆಚ್ಚು ಆಕರ್ಷಿಸಲು ಮುಖ್ಯ ಕಾರಣ ಫ್ಯಾಂಟಸಿ ತುಂಬಿರುವ ಕಾರ್ಟೂನ್ ಚಿತ್ರಗಳು. ಟಾಮ್ ಅಂಡ್ ಜೆರಿ, ವಾಲ್ಟ್ ಡಿಸ್ನೆ, ಡೂಫಿ ಡಕ್‍ಗಳಂತಹ ಅನಿಮೆಟೆಡ್ ಕಾರ್ಟೂನ್ ಚಿತ್ರಗಳು ಬಹು ಬೇಗನೆ ಮಕ್ಕಳ ಮನಸ್ಸನ್ನು ಸೆಳೆಯುವಲ್ಲಿ ಸಫಲವಾಗಿವೆ. ಈಗ ಕಾರ್ಟೂನ್ ಲೋಕಕ್ಕೆ ಹೊಸ ಸೇರ್ಪಡೆಯೆಂದರೆ ಪೋಕೆಮಾನ್ Pokemon. ಯಾವುದೇ ಒಂದು ಪ್ರಾಣಿ ಅಥವಾ ಪಕ್ಷಿಗಳ ಪ್ರತಿರೂಪದಂತಿರುವ ಈ ಹೊಸ ತಳಿಯ ಕಾರ್ಟೂನ್‍ಗಳು ರೂಪಕ್ಕೆ ತಕ್ಕಂತೆ ಆಯಾ ಪ್ರಾಣಿ ಅಥವಾ ಪಕ್ಷಿಯ ಹೆಸರನ್ನು ಹೊಂದಿರುತ್ತವೆ. ಈ ಪೋಕೆಮಾನ್ ಕಾರ್ಟೂನ್‍ಗಳಲ್ಲಿ ನೈಜತೆ ಇರುವುದರಿಂದ ಮಕ್ಕಳು ಮನಸೋತಿರುವುದು ಸಹಜ.

ಅದೆ೦ದಿಗೂ ಸಾಧ್ಯವಿಲ್ಲ!

ರೋಮ್ ನ ಪ್ರಖ್ಯಾತ ಶಿಲ್ಪಿ ಮೈಕೇಲ್ ಅ೦ಜೆಲೋ ತನ್ನ ೮೮ ನೆಯ ವಯಸ್ಸಿನಲ್ಲಿ ಇದ್ದಾಗ ಅವನ ಅರೋಗ್ಯ ಪ್ರಕೃತಿ ಕೆಡತೊಡಗಿತು. ರೋಗವು ಹಿಡಿತ ಮೀರುವಷ್ಟರ ಮಟ್ಟಿಗೆ ಬಲವಾಗತೊಡಗಿತು. ಆಗ ಅವನ ಸಮೀಪದ ಮಿತ್ರರು ಸ೦ತಾಪದ ಹಾಗೂ ದುಃಖದ ಧ್ವನಿಯಲ್ಲಿ ನುಡಿದರು-'ಮೈಕೇಲ್, ರೋಮ್ ನಿಮ್ಮನ್ನು ಬಿಟ್ಟು ಹೇಗೆ ಇರಬೇಕು ಎ೦ಬುದು ತಿಳಿಯದ ಹಾಗಾಗಿದೆ.'

ಸರ್ವರೊಳಗೊಂದಾದ ಮಂಕುತಿಮ್ಮ.

ತಿಮ್ಮ ಸೀದಾ ಸಾದಾ ಹುಡುಗ. ಚಿಕ್ಕಂದಿನಲ್ಲಿ ಆಟ-ಪಾಠ ಎಲ್ಲದರಲ್ಲೂ ಮುಂದು. ವ್ಯವಹಾರ ಜ್ಞಾನ ಸ್ವಲ್ಪ ಕಡಿಮೆ ಅನ್ನೋದು ಬಿಟ್ಟರೆ ಎಲ್ಲದರಲ್ಲೂ ಎತ್ತಿದ ಕೈ. ಅವನು ಭಾಗವಹಿಸದ ಸ್ಪರ್ಧೆಯೇ ಇರುತ್ತಿರಲಿಲ್ಲ. ಬಹುಮಾನ ವಿತರಣೆಯಲ್ಲಿ ಎಲ್ಲರ ಬಾಯಲ್ಲೂ ಒಕ್ಕೊರಲಿನಿಂದ ಬರುತ್ತಿದ್ದ ಹೆಸರು "ತಿಮ್ಮ"...

"ಕರ್ತವ್ಯಂ ದೈವಮಾಹ್ನಿಕಂ !!!!"

ನಾನು ಆರೊ ಏಳನೆಯದೊ ತರಗತಿಯಲ್ಲಿ ಇದ್ದೆ. ಭಾನುವಾರ ಪ್ರಜಾವಾಣಿಯ ಪುರವಣಿಯಲ್ಲಿ ಪ್ರೊ. ಜಿ. ವೆಂಕಟಸುಬ್ಬಯ್ಯನವರ ’ಇಗೊ ಕನ್ನಡ’ ಪ್ರಕಟವಾಗುತ್ತಿತ್ತು. ಒಂದು ಭಾನುವಾರ ಪೇಪರ್ ಓದುತ್ತಿದ್ದ ಅಪ್ಪ ನನ್ನನ್ನು ಕರೆದು ತೋರಿಸಿದರು. ತಂದೆಯ ಮುಖದಲ್ಲಿದ್ದ ತುಂಟನಗೆಯನ್ನು ನೋಡಿ ನನ್ನನ್ನು ಪರೀಕ್ಷಿಸುವುದರಲ್ಲಿದ್ದಾರೆ ಎಂಬುದು ನನಗೆ ಹೊಳೆಯಿತು.

ಮಂಗಳೂರಿನಲ್ಲಿ ನಡೆದ ಘಟನೆ-ನನ್ನ ಅನಿಸಿಕೆ.

ಮನಸ್ಸು ಎಷ್ಟೆ ವಿರೋಧ ಮಾಡಿದರೂ ಪೂರ್ವಗ್ರಹ ಪೀಡಿತವಾದ ಈ ಲೇಖನವನ್ನು ಓದಿ ಬಂದ ಕೋಪವನ್ನು ಹತ್ತಿಕ್ಕಿ ಈ ಲೇಖನವನ್ನು ಬರೆಯುತ್ತಿದ್ದೇನೆ. ಯಾರಿಗೂ ನೋವು ಮಾಡುವ ಇರಾದೆಯಿಲ್ಲ. ಯಾರಿಗಾದರೂ ಇದರಿಂದ ನೋವಾದರೆ ದಯವಿಟ್ಟು ತಿಳಿಸಿ. ಮುಕ್ತವಾಗಿ ಚರ್ಚಿಸೋಣ.

ಸಂಪದಿಗ ಉದಯ್ ಇಟಗಿ ಅವರ ಬ್ಲಾಗ್ ಕನ್ನಡಪ್ರಭದಲ್ಲಿ...

ಇಂದಿನ ಕನ್ನಡಪ್ರಭದ ಬ್ಲಾಗಾಯಣ ಅಂಕಣದಲ್ಲಿ ಸಂಪದಿಗ ಉದಯ್ ಇಟಗಿ ಅವರ "ಇಲ್ಲಿ ಎಲ್ಲವೂ ’ಒಬಾಮ’ಮಯವಾಗುತ್ತಿದೆ" ಲೇಖನ ಪ್ರಕಟವಾಗಿದೆ.

ಅಭಿನಂದನೆಗಳು ಉದಯ್.

-ಅನಿಲ್.