ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪೇಚು ಮತ್ತು ಪ್ರಭಾವ

ಪೇಚು

ಒಂದು ದಿನ ಹೆಣ್ಣನ್ನು

ಮದುವೆಯಾಗುವುದು ಸುಲಭ

ಆದರೆ ಜೀವನವಿಡೀ ಅರ್ಥಮಾಡಿ

ಕೊಳ್ಳುವುದು ತುಂಬಾ ಕಷ್ಟ

ಮದುವೆ

ಪ್ರಭಾವ

ನಿನ್ನ ಸವಿನೆನಪುಗಳ

ಗಮ್ಮತ್ತಿನಲ್ಲಿ,

ನೀನುಲಿದ ಮಧುರ ಮಾತುಗಳ

ಮುತ್ತಿನಲ್ಲಿ,

ಮುಳುಗಿ ಮೇಲೆದ್ದಾಗ

ಬಂದು ಸಾರಥಿಯಾಗಿ ಮುನ್ನಡೆಸಲಿ ನನ್ನ ಮನೋರಥ!

ಒಂಟಿ ಜೀವ ನಾನು ಜೊತೆ ಇಲ್ಲ ಯಾರೂ
ನನ್ನವರಿದ್ದರೂ ಈಗ ನನ್ನವರಲ್ಲ ಯಾರೂ

ಯಾಕಿದೆ ಸತತ ನಿರೀಕ್ಷೆ ನನ್ನ ಈ ಮನದಿ
ಯಾರದೆಂದು ನಿರ್ದಿಷ್ಟ ಹೇಳಲಾಗದ ತೆರದಿ

ಪ್ರಕೃತಿಯ ಪ್ರತಿಯೊಂದು ದೃಶ್ಯ ನೋಡುವಾಗ
ಕಾಣುವುದು ಆ ಅಸ್ಪಷ್ಟ ಮುಖವೆನಗೆ ಈಗೀಗ

ಕೂತಲ್ಲಿ ಕೂರಲಾಗದಂತಹ ಅವ್ಯಕ್ತ ಚಡಪಡಿಕೆ
ನಿಂತು ಹೋದಂತಿದೆ ಈಗ ನನ್ನೆಲ್ಲ ಚಟುವಟಿಕೆ

ಕಾದಿರುವೆ ಸ್ಪರ್ಶಕ್ಕಾಗಿ!

ಕಾದಿರುವೆ ಪರಾಗ ಸ್ಪರ್ಶಕ್ಕಾಗಿ ಕಾಯಿ ಬಿಡೋ ಆ ಹರುಷಕ್ಕಾಗಿ!!! (ಇದೀಗ ಅಪರಾಹ್ನದ ಊಟ ಮುಗಿಸಿ ಒಂದು ಸುತ್ತು ನಡೆದು ಹೊರಟಾಗ, ನಮ್ಮ ಕಣ್ಣಿಗೆ ಬಿದ್ದ, ಮೂಲೆಯಲ್ಲಿನ ಗಿಡವೊಂದರಲ್ಲಿ ಅರಳಿದ್ದ ಹೂವು)

ಮತ್ತೆ ಅರಳಿತು ಮನವು

ಹರಿಪ್ರಸಾದ್ ನಾಡಿಗ್‍ರವರ ಚಿತ್ರಕ್ಕೆ ನನ್ನದೊಂದು ಕವನ?
ಬದುಕಿತ್ತು ಚಿಂತೆಗಳ ನಡುವೆ
ಜನಜಂಗುಳಿಯ ಸಂತೆಗಳ ನಡುವೆ
ಬಳಲಿತ್ತು ಜಂಜಾಟಗಳ ಮಡುವಿನಲಿ
ಹೋರಾಟದ ಬದುಕನೆದುರಿಸುವಲ್ಲಿ
ಬೇಕಿತ್ತು ಚೇತನಕೆ ಅರೆಗಳಿಗೆ ವಿಶ್ರಾಂತಿ
ಪ್ರಶಾಂತತೆಯನೀವ ಏಕಾಂತದಂಗಳ
ಆಗೆನಗೆ ಆಸರೆ ನೀಡಿದ ಮರದಡಿಯಲ್ಲಿ
ತಂಪು ಗಾಳಿಯ ವಾತ್ಸಲ್ಯದಲ್ಲಿ

ಹೂ ಗಿಡಗಳೊಂದಿಗೆ

ಪಾಲಚಂದ್ರರ ಪುಸ್ತಕದ ಹಾಳೆಯೊಂದನ್ನು ಹಾರಿಸುತ್ತ, ಇದೋ ಕೆಲವು ಫೋಟೋಗಳು. ಕಳೆದ ತಿಂಗಳ ಕೊನೆಯಲ್ಲಿ ಮಂಗಳೂರಿಗೆ ಭೇಟಿ ನೀಡಿದಾಗ ತೆಗೆದದ್ದು:

ಕೆಂಪು ಬಣ್ಣದ ಹೂಗಳು

ಪ್ರೀತಿಸುವ ಸಮಯ

ಬನ್ನಿ ನನ್ನೆದೆಗೆ ಇದು ಪ್ರೀತಿಸುವ ಸಮಯ

ನಿನ್ನೆ ನಾಳೆಗಳನ್ನೆಸೆದು ಬನ್ನಿ

ಕೊಡಲಿ, ಕು೦ಚ ಮಡಕೆ ಹಿಡಿದು ಹಾಗೇ ಬನ್ನಿ

ಸಾವಿರ ಆಣೆಗಳ ನೀವು ಮುರಿದಿರಬಹುದು

ಕನಸುಗಳಲ್ಲಿ ಪಾಪದ ಹೊಳೆ ಹರಿದಿರಬಹುದು

ಇರಲಿ ಬನ್ನಿ ಪರವಾಗಿಲ್ಲ…

ಇದು ಪ್ರೀತಿಸುವ ಸಮಯ…

ಅಹಾ ಬೋಂಡಾ, ಜಾಮೂನೇ

ಆಹಾ ಬೋಂಡಾ, ಜಾಮೂನೇ
ಏನು ನಿನ್ನ ರುಚಿಯ ಮೋಡಿ

ನಿನ್ನ ತಿನ್ನೋ ಆಸೆಗೆ ಬಿದ್ದರೆಲ್ಲಾ ಗೆಳೆಯರು ಓಡಿ
ದುಃಖವಾಯಿತು ನಾಗರಾಜಗೆ ನೋಡಿ (ನಮ್ಮ ನಾಗರಾಜರವರು)
ಖಾಲಿ ಬಿದ್ದಿತು ಅ.ಭಾ.ವಿ.ಸಂ. ನೋಡಿ

(ಭಟ್ಟರ ಕ್ಷಮೆ ಕೋರಿ)

ಗೊತ್ತಿದ್ದು ಮಾಡೊ ಸಣ್ಣ ಸಣ್ಣ ತಪ್ಪುಗಳು........................

ಹೌದು ನಮ್ಮ ಜೀವನದಲ್ಲಿ ಗೊತ್ತಿದ್ದು ಮಾಡುವ ಸಣ್ಣ ಸಣ್ಣ ತಪ್ಪುಗಳು ,ಈ ತಪ್ಪುಗಳು ಕೆಲವರಿಗೆ ದೊಡ್ಡದಾಗಿ ಕಾಣಿಸಬಹುದು ಮತ್ತೆ ಕೆಲವರಿಗೆ ಕಾಣಿಸದೆ ಇರಬಹುದು, ಅವುಗಳಲ್ಲಿ ಕೆಲವು ಕೆಳಗಿನಂತಿವೆ ,ಇದನ್ನು ಸುಮ್ಮನೆ ಓದಿ ಹಾಗೆ ಇರಬ್ಯಾಡಿ ನನಗೆ ಗೊತ್ತು ನೀವೂ ಭಾರಿ ಬುದ್ದಿವಂತರಂತ ನಿಮಗೆನೂ ಹೇಳಬೇಕಾಗಿಲ್ಲ ಅಲ್ಲವೆ …................