ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೊಸಾ ಸಮೋಸ

"ನಿಮ್ಮ ಪ್ರೇಯಸಿಯಿಂದ ತುಂಬ ಒಳ್ಳೊಳ್ಳೆಯ ಸಂದೇಶಗಳು ಬಂದರೆ ಸುಮ್ಮನೆ ಖುಷಿಪಡಬೇಡಿ.
ಮೊದಲು ಆಕೆಗೆ ಆ ಸಂದೇಶಗಳನ್ನು ಯಾರು ಕಳುಹಿಸುತ್ತಾ ಇದ್ದಾರೆ ಅನ್ನುವುದನ್ನು ಪತ್ತೆ ಹಚ್ಚಿ. ಅಲ್ಲಿರುತ್ತೇ ನೋಡಿ ಸೆಂಟಿಮೆಂಟ್"
-ಆಸು ಹೆಗ್ಡೆ
(ಸಮೋಸ-ಸರಳ ಮೋಬೈಲ್ ಸಂದೇಶ)

ಗೆಳೆಯನ ನೋವೇನು

ನೀನು ನನಗೆ ಬೆನ್ನು ಹಾಕಿ ಕುಳಿತ ಕೂಡಲೆ
ನನಗೆ ನಿನ್ನ ಕಣ್ಣಂಚಿನ ಕಂಬನಿ ಕಾಣದೆಂದು ಮಾಡಿದೆಯಾ?

ನನ್ನಲ್ಲಿ ಹೇಳಲಾರದಂತಹ ನಿನ್ನ ಆ ನೋವೇನು?
ನಾ ನೋಡಲಾರೆ ಗೆಳೆಯ ನಿನ್ನ ಈ ಹತಾಷೆಯನು
ಕಳೆದುಕೊಳ್ಳಬೇಡ ಜೀವನದಲ್ಲಿ ಆಸಕ್ತಿಯನು
ನೋಡು ಬಾನಂಚಿನಲ್ಲಿ ಬೆಳ್ಳಿಯ ಕಿರಣ ಬರುವುದನು

ಮುಂಜಾವಿನ ಬೆಳಗಿನಲಿ ಹಕ್ಕಿಗಳ ನಗುವಿನಲಿ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

ಸಂಪದ ಮಿತ್ರರೇ ಗಮನಿಸಿ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ,

ಆದ್ದರಿಂದ ಎಲ್ಲೂ ಸಹ ತ್ಯಾಜ್ಯ ವಸ್ತುಗಳನ್ನು ಬಿಸಾಡದಿರಿ,

ಪ್ಲಾಸ್ಟಿಕನ್ನು ಬಳಸದಿರಿ,

ಮರುಬಳಕೆ ಮಾಡುವಂತಹ ವಸ್ತುಗಳನ್ನು ಹೆಚ್ಚಾಗಿ ಬಳಸಿ,

ಪರಿಸರ ರಕ್ಷಿಸಿ...........

 

ಇದು ಯಾಕೆ ಈ ತರ ಬರಿದಿದ್ದೇನೆ ಅಂತ ಭಾವಿಸ್ತಾ ಇದ್ದೀರಾ....

ಹೂಮಾಲೆಯೋ....ಕಾಮಾಲೆಯೋ (ಶಾಯರಿ)

ಅವಳ ಕಣ್ಣಿನ ನೋಟಗಳು ಚೆಂಡುಹೂವಿನ ಮಾಲೆ
ಅವಳ ಕಣ್ಣಿನ ನೋಟಗಳು ಚೆಂಡುಹೂವಿನ ಮಾಲೆ
ಆಮೇಲೆ ಗೊತ್ತಾಯಿತು ಅವಳಿಗಿದೆಯೆಂದು ಕಾಮಾಲೆ!!

- Vರ ( Venkatesha ರಂಗಯ್ಯ )

note : ಚೆಂಡು ಹೂವಿನ ಬಣ್ಣ ಹಳದಿ

ಸರಣಿ ೩ - ಎಚ್. ನರಸಿಂಹಯ್ಯ - ಧರ್ಮ ಮತ್ತು ವ್ಯೆಚಾರಿಕ ಮನೋಭಾವ

ಶ್ರೀ ಸತ್ಯಸಾಯಿಬಾಬಾ ಅವರು ಹೊಂದಿರುವ ಪವಾಡ ಶಕ್ತಿಗಳನ್ನು ಕುರಿತು ದೇಶದಾದ್ಯಂತ ವಿಪುಲವಾದ ಚರ್ಚೆ ನಡೆಯುತ್ತಿತ್ತು. ಇದು ಆಗ ರಾಷ್ಟ್ರೀಯ ವಿವಾದದ ವಿಷಯವಾಗಿದೆ. ಅನೇಕ ದಿನಪತ್ರಿಕೆಗಳು ಮತ್ತು ನಿಯತಕಾಲಿಕಗಳು ಸಾಕಷ್ಟು ಪುಟಗಳನ್ನು ಈ ವಿಷಯದ ಚರ್ಚೆಗೆ ವಿನಿಯೋಗಿಸಿವೆ. ಹೆಚ್ಚು ಕಮ್ಮಿ ಇದು ಮನೆ ಮಾತಾಗಿತ್ತು.

ಬೆಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ರಚಿತವಾದ ಪವಾಡಗಳು ಮತ್ತು ಮೂಢನಂಬಿಕೆಗಳು ಕುರಿತು ವೈಜ್ಞಾನಿಕವಾಗಿ ತನಿಖೆ ಮಾಡಲು ರಚಿತವಾದ ಸಮಿತಿಯ ಪ್ರಯತ್ನಗಳು ಈ ವಿವಾದಕ್ಕೆ ಅವಕಾಶ ಮಾಡಿಕೊಟ್ಟಿರುವುದು ನಮಗೆ ತಿಳಿದಿರುವ ಸಂಗತಿ. ನಮ್ಮ ಸಮಾಜದಲ್ಲಿ ಬಹಳ ಪ್ರಮಾಣದಲ್ಲಿ ಮೂಢನಂಬಿಕೆಗಳು ಇವೆಯಲ್ಲವೆ, ಅವು ಸಮಾಜಕ್ಕೆ ಅನೇಕ ರೀತಿಯಲ್ಲಿ ಹಾನಿಯನ್ನು ಉಂಟು ಮಾಡಿವೆ. ಮತ್ತೆ ಕೆಲವು ವ್ಯಕ್ತಿಗಳು ತಮಗೆ ಸಾಮಾನ್ಯ ವ್ಯಕ್ತಿಗಳಿಂದ ಆಗದಂತಹ ಕಾರ್ಯಗಳನ್ನು ಮಾಡುವ ಸಾಮರ್ಥ್ಯ ಇದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಸಮಾಜದ ಹಿತದೃಷ್ಟಿಯಿಂದ ಈ ಸಮಸ್ಯೆಗಳನ್ನು ವಿಶ್ವವಿದ್ಯಾಲಯವು ಪರಿಶೀಲಿಸುವುದು ಅವಶ್ಯಕ ಮತ್ತು ಉಚಿತ ಎನ್ನಿಸಿತು. ೧೯೭೬ರ ಮಾರ್ಚ್ ತಿಂಗಳಲ್ಲಿ ವಿಶ್ವವಿದ್ಯಾಲಯವು ತನ್ನ ಆಯವ್ಯಯವನ್ನು ರೂಪಿಸುವ ಸಂದರ್ಭದಲ್ಲಿ ಈ ಉದ್ದೇಶಕ್ಕಾಗಿ ಇಪ್ಪತೈದು ಸಾವಿರ ರೂಪಾಯಿಗಳನ್ನು ತೆಗೆದಿಡಲಾಯಿತು. ಏಪ್ರಿಲ್ ಮೊದಲ ವಾರದಲ್ಲಿ ಉಪ ಕುಲಪತಿಯವರ ಅಧ್ಯಕ್ಷತೆಯಲ್ಲಿ, ಬೇರೆ ಬೇರೆ ಕ್ಷೇತ್ರಕ್ಕೆ ಸೇರಿದ ಹನ್ನೊಂದು ಜನರ ಸಮಿತಿಯನ್ನು ರಚಿಸಲಾಯಿತು.

ಮತ್ತದೇ ಸಂಜೆ ಮತ್ತದೇ ಬೇಸರ?!

ಮತ್ತದೇ ಸಂಜೆ ಮತ್ತದೇ ಬೇಸರ
ಮನಸು ಅರಸುತಿದೆ ನೆನಪಿನಾದರ
ಹುದುಗಿದೆ ಮಾತುಗಳು ನೂರು- ನೂರು
ಹೊರಡದು ಏನಂದರೂ ಚೂರು- ಪಾರು..........

ಮೌನವನು ಮೆರೆಸಿತ್ತು
ತಾನವನು ತಣಿಸಿತ್ತು
ಲಹರಿಯನು ಹರಿಸಿತ್ತು
ನಿನ್ನನು ನೆನೆಸಿತ್ತು..........

ಪೋಷಿಸಿದ ಆ ನೆನಪು ಬಿಚ್ಚಿಕೊಳ್ಳುತ್ತಾ
ಪದರ-ಪದರಗಳು ಅರಳುತ್ತಾ
ಪ್ರಣಯದ ಪರಾಗವನು ಪಸರಿಸುತ್ತಾ

ಸಿಡಿಜಾತ್ರೆ -ಒಂದು ಜಾನಪದ ಹಬ್ಬ

ಮಾರ್ಚ್ ೨೧ ಕ್ಕೆ ನಮ್ಮೂರಿನಲ್ಲಿ ಸಿಡಿ ಜಾತ್ರೆ. ಹಾಸನ ಜಿಲ್ಲೆಯ ಹೊಳೇನರಸೀಪುರ ದ ಸಮೀಪ ಹರಿಹರಪುರ ನನ್ನ ಊರು. ಸಿಡಿ ಚಿತ್ರವನ್ನು ನೋಡಿದ ಮೇಲೆ ಅದರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳ ಬೇಕೆಂಬ ಕುತೂಹಲ ಯಾರಿಗಾದರೂ ಇದ್ದೀತು. ಅದಕ್ಕಾಗಿ ಒಂದಿಷ್ಟು ಮಾಹಿತಿ ಇಲ್ಲಿದೆ.
ದಂತಕಥೆ:

ಮನಃಶಕ್ತಿಯಿಂದ ವಸ್ತುಗಳನ್ನೆತ್ತಬಲ್ಲ ಮಿರೋಸ್ಲಾವ್ ಮಗೋಲಾ

ಮನಃಶಕ್ತಿ, ಅಥವಾ ಮನಸ್ಸಿನ ಶಕ್ತಿಯಿಂದ ವಸ್ತುಗಳನ್ನು ಚಲಿಸಲು ಸಾಧ್ಯವೇ? ಪುರಾಣಗಳಲ್ಲಿ ಮಾತ್ರ ಕೇಳಿದ್ದ ಈ ವಿದ್ಯಮಾನ ಈಗ ಪೋಲ್ಯಾಂಡಿನ ಮಿರೋಸ್ಲಾವ್ ಮಗೋಲಾ ಎಂಬುವವರಿಗೆ ಸಿದ್ದಿಸಿದೆ.