ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಾಸದ ನೆನಪು...

ಮರೆಯಬೇಕೆಂಬ
ಕಹಿ ನೆನಪೊಂದ,
ಮರೆಯಲೇಬೇಕೆಂದು
ಹಟ ಹಿಡಿದು,
ಮರು ನೆನೆದು
ನೆನೆ ನೆನೆದು, ಆ
ಕರಿ ನೆನಪು ಸದಾ
ಮನದಲ್ಲೇ ಮಾಸದೆ
ನೆಲೆ ನಿಲ್ಲುವಂತೆ
ಹೆಪ್ಪುಗಟ್ಟಿಸಿದೆನಲ್ಲ... :(

--ಶ್ರೀ
(೩೦-ಜನವರಿ-೨೦೦೯)

ಪಬ್‌ ದಾಳಿ ಎಂಬ ರಸಕವಳ

ಕೊನೆಗೂ ನಮ್ಮ ವಿಚಾರವಾದಿಗಳಿಗೆ, ಬುದ್ಧಿಜೀವಿಗಳಿಗೆ ಜಗಿಯಲು ಸಮೃದ್ಧ ರಸಕವಳ ಸಿಕ್ಕಿದೆ- ಪಬ್‌ನ ಮೂಲಕ.

ಮಂಗಳೂರಿನ ಅಮ್ನೇಶಿಯಾ ಪಬ್‌ನಲ್ಲಿ ಶ್ರೀರಾಮಸೇನೆಯ ಕಾರ್ಯಕರ್ತರು ಮಾಡಿದ್ದು ನಿಜಕ್ಕೂ ಹೀನಾಯ ಕೆಲಸ. ಮಹಿಳೆಯರು ಹೀಗೆಯೇ ಬದುಕಬೇಕು ಎಂದು ನಿರ್ಬಂಧಿಸುವ ಸಂಪ್ರದಾಯ ಮುಸ್ಲಿಂ ಸಮುದಾಯದಲ್ಲಿದೆ. ಇತರ ಧರ್ಮಗಳಲ್ಲಿ ಅದರ ತೀವ್ರತೆ ಕಡಿಮೆ. ಆದರೆ, ಪಬ್‌ ಮೇಲೆ ದಾಳಿ ನಡೆಸುವ ಮೂಲಕ ತಮ್ಮಲ್ಲೂ ಅಂಥ ಮನಸ್ಥಿತಿ ಇದೆ ಎಂಬುದನ್ನು ಶ್ರೀರಾಮಸೇನೆಯ ಕಾರ್ಯಕರ್ತರು ಪ್ರದರ್ಶಿಸಿದ್ದಾರೆ.

ಮಹಿಳೆಯರು ಪಬ್‌ಗಳಿಗೆ ಹೋಗಬಾರದು ಎಂದು ನಿರ್ದೇಶಿಸುವ, ನಿರ್ಬಂಧಿಸುವ ಹಕ್ಕು ಯಾರಿಗೂ ಇಲ್ಲ. ಯಾವ ಧರ್ಮದವರಿಗೂ ಇಲ್ಲ. ಅದು ಮಹಿಳೆಯರಿಗೆ ಸಂಬಂಧಿಸಿದ, ಅವರೇ ನಿರ್ಧಾರ ತೆಗೆದುಕೊಳ್ಳಬೇಕಾದ ವಿಷಯ. ಭಾರತೀಯ ಸಂಸ್ಕೃತಿಯ ಹೆಸರಿನಲ್ಲಿ ಇಲ್ಲದ ಆಚರಣೆಗಳನ್ನು, ನಿರ್ಬಂಧಗಳನ್ನು ಹೇರುವ ಹಕ್ಕು ಯಾರಿಗೂ ಇಲ್ಲ. ತನಗೆ ಅಂಥ ಹಕ್ಕಿದೆ ಎಂದು ಶ್ರೀರಾಮಸೇನೆಯಾಗಲಿ, ಇಸ್ಲಾಮಿ ಸಂಘಟನೆಗಳಾಗಲಿ ಭಾವಿಸಿದ್ದರೆ ಅದು ಅವರ ಮೂರ್ಖತನವೇ ಹೊರತು ಬೇರೇನೂ ಅಲ್ಲ.

ಮನೆ ಸಾಮನು

ಮನೆ ಬಾಗಿಲು ಬೀಗ ಹಾಕಿ ಹೊರಗೆ ಹೊರಟ ಮೇಲೆ ಮನೆಯಲ್ಲಿ ಏನು ನೆಡೆಯುತ್ತದೆ ನಿಮಗೆ ಗೊತ್ತೇ? ನಿಮಗೆ ಗೊತ್ತಿಲ್ಲ ಅಂದರೆ ಮೊದಲು ಓದಿ !!

ಹೀಗೊಂದೆಡೆ ಮನೆಯವರೆಲ್ಲ ಎಲ್ಲೋ ಹೊರಗೆ ಹೋಗಿದ್ದರು. ಅವರೆಲ್ಲ ಹೋದ ಮೇಲೆ, ಮನೆಯಲ್ಲಿರುವ ಸಾಮನುಗಳಿಗೇನು ಕೆಲಸ. ಸ್ವಲ್ಪ ಹೊತ್ತು ಮಾತು ಕಥೆಯಾಡುತ್ತಿದ್ದಂತೆ, ಎಲ್ಲರೂ ರಸಮಂಜರಿ ಕಾರ್ಯಕ್ರಮ ಮಾಡೋಣ ಎಂದು ನಿರ್ಧರಿಸಿದರು. ಕಾರ್ಯಕ್ರಮದ ನಿರ್ವಹಣೆ ಗೋಡೆಗಂಟಿದ್ದ ಧ್ವನಿವರ್ಧಕದ್ದಾಗಿತ್ತು. ಎಲ್ಲರನ್ನೂ ಕಾರ್ಯಕ್ರಮಕ್ಕೆ ಸ್ವಾಗತಿಸಿ, ಒಬ್ಬರು ಹಾಡಿದ್ದನ್ನು ಮತ್ತೊಬ್ಬರು ಹಾಡುವ ಹಾಗಿಲ್ಲ ಎಂಬ ಸಾಮಾನ್ಯ ಕಟ್ಟಳೆಗಳನ್ನು ಎಲ್ಲರಿಗೂ ವಿವರಿಸಿ, ತಾನು ಹಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿತು:

{ ಹಾಡಿನ ಒಂದು ಸಾಲನ್ನು ಮಾತ್ರ ಹಾಕಿದ್ದೇನೆ}

ಧ್ವನಿವರ್ಧಕ: "ನಾ ಹಾಡಬೇಕೇ, ನೀ ಕೇಳಬೇಕೇ, ತಾಳ ಹಾಕಿದರೆ ನಾ ಹಾಡುವೆ"

ಚೆಂಬೆಳಗಿನಲ್ಲೊಂದು ಸ್ವಗತ

( ಹರಿಪ್ರಸಾದ್ ನಾಡಿಗರ ಆಮಂತ್ರಣಕ್ಕೆ ಮಾರುತ್ತರವಾಗಿ:)

ಎಲ್ಲರೂ ಹೇಳುವರು
ಬರುತಲಿದೆ ಪ್ರತಿದಿನವು
ರವಿಯ ಉದಯದ ಒಡನೆ
ಭರವಸೆಯ ಮುಂಜಾವು.

ನಂಬಬಹುದೇ? ಇದನು?
ಓ ಗೆಳೆಯ*?
ಬಾನಿನಲಿ ಅನುದಿನವು
ಸುತ್ತಿಯೂ ಸುತ್ತುತಿಹೆ?
ದಿನವೂ ನನ್ನ ಮೊಗ
ನೋಡಿಯೂ ನೋಡದೆಲೆ
ಮುಂದೆ ಸರಿಯುವ ನಿನಗೆ
ಮುಗುಳು ನಗೆ ಈಗೇಕೆ?

ಆಮಂತ್ರಣ

ನಾನು ಈ ಹಿಂದೆ ಬರೆದ ಒಂದು ಪುಟ್ಟ ಬ್ಲಾಗ್ ಪುಟಕ್ಕೆ ಪ್ರತಿಕ್ರಿಯೆ ಬರೆದು ನಿಮ್ಮ ಅನಿಸಿಕೆ ತಿಳಿಸಿದ್ದೀರಿ. ಆ ಪ್ರತಿಕ್ರಿಯೆಗಳನ್ನು ಓದುವಾಗ ಆದ ಖುಷಿ, ತದನಂತರ ಅದಕ್ಕೆ ಪ್ರತಿಕ್ರಿಯೆ ಬರೆಯಲು ಸಮಯ ಮಾಡಿಕೊಳ್ಳಲಾಗಲಿಲ್ಲ ಎಂಬ ಅಳುಕಿನ ನಡುವೆ ಕೆಲವರು ಮುಂದಿಟ್ಟ ವಿಚಾರಗಳನ್ನು ಓದುವಾಗ, ಕೇಳುವಾಗ - "ಹೌದಲ್ವ, ಈ ಬಗ್ಗೆ ಯೋಚನೆ ಕೂಡ ಮಾಡಲಿಲ್ವಲ್ಲ" ಅನಿಸಿದ್ದುಂಟು.

ಅದರಲ್ಲಿ ಒಂದು ವಿಚಾರ - ಒಬ್ಬರು ಫೋನಿನಲ್ಲಿ ತಿಳಿಸಿದ್ದು, "ಎಂಥ ಒಳ್ಳೆಯ ಚಿತ್ರ ಹರಿ. ಎಷ್ಟು ಚೆನ್ನಾಗಿ ಏನೆಲ್ಲ ಬರೆಯಬಹುದಿತ್ತು" ಎಂಬುದು. ಚಿತ್ರ ಅಷ್ಟು ಚೆನ್ನಾಗಿದೆ ಎಂದು ನನಗನಿಸಲಿಲ್ಲವಾದರೂ ಬೇರೆ ರೀತಿಯಲ್ಲಿ ಬರೆಯಬಹುದಿತ್ತು ಎನ್ನುವ ಮಾತು ಹೌದೆನಿಸಿತು. ನನಗೆ ಮಾತ್ರ ಆ ಸಮಯ ಬೇರೆ ರೀತಿ ಬರೆಯುವುದಕ್ಕೆ ಆಗುತ್ತಿರಲಿಲ್ಲ. ಈಗಲೂ ಬಹುಶಃ ಆಗಲಿಕ್ಕಿಲ್ಲ. ಆದರೆ ನಾನಲ್ಲದಿದ್ದರೂ ಬೇರೆ ಯಾರಾದರೂ ಬೇರೆ ರೀತಿ ಬರೆಯಬಹುದು ಎನಿಸಿತು.

ಅಮ್ಮ ಫೋನೂ- ಬೋಂಡಾ ಜಾಮೂನೂ!!!

ಆಫೀಸಿಗೆ ಹೊರಡುತ್ತಿದ್ದವಳು, ಅಮ್ಮ ಫೋನಿನಲ್ಲಿ ಮಾತಾಡುತ್ತಿದ್ದದ್ದು ಕೇಳಿ ಬೆಚ್ಚಿ ಬಿದ್ದು ಅಲ್ಲೇ ನಿಂತೆ! ನಮ್ಮಮ್ಮ ಯಾವತ್ತು ಫೋನಿನಲ್ಲಿ ಮಾತಾಡಲ್ವೆ ಅದ್ರಲ್ಲೇನು ವಿಶೇಷ ಅನ್ಕೊಂಡ್ರಾ, ಇತ್ತು ಅವತ್ತು ವಿಶೇಷವಿತ್ತು, 'ನಮ್ಮುಡುಗೀನು ತುಂಬಾ ಕೆಲಸ ಮಾಡ್ತಾಳ್ರೀ, ಆಫೀಸಿಗೋಗ್ತಾಳೆ! ಕಾಲೇಜಿಗೆ ಹೋಗ್ತಾಳೇ! ಮನೇಲು ಅದು ಇದು ಕೆಲ್ಸ ಮಾಡ್ತಾಳೆ! ನಿನ್ನೆ ರಾತ್ರಿ ಪಾತ್ರೆನೆಲ್ಲ ಅವ್ಳೇ ತೊಳೆದಿದ್ದು!' ಅಮ್ಮ ಯಾರ ಜೊತೇನೋ ಅತ್ಯುತ್ಸಾಹದಲ್ಲಿ ಹೇಳಿಕೊಳ್ಳುತ್ತಿದ್ದರು. ಆಹಾ! ಅಷ್ಟೊಂದು ಕೆಲಸ ಮಾಡ್ಬಿಟ್ನಾ ನಾನು, ಇದ್ದಿದ್ದು ನಾಲ್ಕು ಲೋಟ ಮೂರು ತಟ್ಟೆ ಅದನ್ನ ತೊಳೆದಿದ್ದಕ್ಕೆ ಇಷ್ಟೊಂದು ಹೊಗಳ್ತಿದ್ದಾರೆ! (ಅದು ತಿಂಗಳಲ್ಲಿ ಒಂದು ಸಲ)? ಯೋಚಿಸುತ್ತಿದ್ದ ನನಗೆ, ಭಾನುವಾರ ಎಲ್ಲೂ ಹೋಗಬೇಡ ಮನೇಲಿರು ಎಂದು ಅಪ್ಪಣೆ ಮಾಡಿದರು ಅಮ್ಮ! ಸಂಜೆ ಮನೆಗೆ ಬರುತ್ತಿದ್ದ ಹಾಗೆ ಅದರ ಹಿಂದಿದ್ದ ರಹಸ್ಯ ತಿಳಿದು ನಿಜಕ್ಕೂ ದಿಗಿಲಾಯಿತು.