ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ನೇಹ

ಒಳ್ಳೆಯ ಪುಸ್ತಕವು ಕಷ್ಟ ಕಾಲದಲ್ಲಿ ಸ್ನೇಹಿತನಾಗುತ್ತದೆ. ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಏಕಾಕಿತನ ಕಡಿಮೆ ಮಾಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಆಳವಾದ ದುಃಖವನ್ನು ಮರೆಯಲು ಸಹಾಯ ಮಾಡುತ್ತದೆ. (ಸಂಗ್ರಹ : ಸುಧಾ)

ನನಗೆ ಸಂಪದ ಓದುವಾಗ ಇದೇ ಅನುಭವವಾಗುತ್ತದೆ. ಸಂಪದಿಗರೇ ವಂದನೆಗಳು.

ನಮನ-೦೫: ನೀವೂ ಇದ್ದೀರಾ?

ನೀವೂ ಇದ್ದೀರಾ.. ಅನ್ನೋದು ಹೆಂಗಳೆಯರು ಬಳಸುವ ಟಾಪ್ ಟೆನ್ ವಾಕ್ಯಗಳಲ್ಲಿ ಒಂದು ಅಂತ ನನ್ನ ಅಭಿಪ್ರಾಯ.
ನಮ್ಮ ಮನೆಯಲ್ಲೂ ಅದೇ ಕತೆ..

ಒಂದು ಸಾರಿ - ನನ್ನಾಕೆ ಹೇಳಿದರು: "ನೀವೂ ಇದ್ದೀರಾ... ಷಹಜಹಾನ್ ನೋಡಿ .. ಹೆಂಡತಿಗಾಗಿ ತಾಜ್ ಮಹಲ್ಲೇ ಕಟ್ಟಿಸಿದ್ದಾನೆ."
ನನ್ನ ಉತ್ತರ ..."ಅದನ್ನು ಯಾವಾಗ ಕಟ್ಟಿಸಿದ ಅಂತ ಗೊತ್ತಾ? ಹೆಂಡತಿ ತೀರಿಕೊಂಡ ಮೇಲೆ!"

ಕೊರೆವ ಚಳಿ ಉರಿವ ಬಿಸಿಲಿನ ಮಾಗಿಕಾಲ

ಮಾಗಿಕಾಲದಲ್ಲಿ ಹಗಲು ಕಡಿಮೆ, ರಾತ್ರಿ ಸುಧೀರ್ಘ. ಸಂಜೆ ಐದುಮುಕ್ಕಾಲಿಗೆಲ್ಲಾ ಹೊತ್ತು ಮುಣುಗಿ ಮಕ್ಕತ್ತಲಾದರೆ ಬೆಳಿಗ್ಗೆ ಆರು ಗಂಟೆ ದಾಟಿದರೂ ಸಹ ಬೆಳಕರಿಯುವುದಿಲ್ಲ. ಮಾಗಿ ಕಾಲದ ಮತ್ತೊಂದು ಲಕ್ಷಣವೆಂದರೆ ಚಳಿ ಮತ್ತು ತೀಕ್ಷ್ಣ ಬಿಸಿಲು. ಸಂಜೆ, ರಾತ್ರಿ ಮತ್ತು ಬೆಳಗಿನ ೯ ಗಂಟೆಯವರೆಗೂ ಮೈಕೊರೆಯುವ ಚಳಿ ಇದ್ದರೆ ನಡು ಹಗಲಲ್ಲಿ ಚುರು-ಚುರು ಬಿಸಿಲು. ನೆತ್ತಿ ಮೇಲಿನ ಸೂರ್ಯ ಹೆಚ್ಚು ಪ್ರಖರವಾಗಿರುತ್ತಾನೆ. ಬೆಳಿಗ್ಗೆ ಆಫೀಸಿಗೆ ಅಥವಾ ಹೊರಗೆ ಹೋಗುವಾಗ ಸ್ವೆಟರ್ ಹಾಕಿಕೊಳ್ಳಬೇಕೆನಿಸಿದರೆ ಹನ್ನೊಂದು ಗಂಟೆಗೆಲ್ಲಾ ತೆಗೆದು ಹಾಕಬೇಕೆನಿಸುತ್ತದೆ.

ಬಿಡುವು ಮಾಡಿಕೊಂಡು ವ್ಯವಧಾನದಿಂದ ಸುತ್ತಲಿನ ನಿಸರ್ಗವನ್ನು ಗಮನಿಸುವವರಿಗೆ ಈ ಕಾಲದಲ್ಲಾಗುವ ಬದಲಾವಣೆಗಳು ಸ್ಪಷ್ಟವಾಗಿ ಅನುಭವಕ್ಕೆ ಬರುತ್ತವೆ. ಹಳ್ಳಿಗರು, ಒಕ್ಕಲು ಮಕ್ಕಳು ಈ ಪಲ್ಲಟವನ್ನು ಗುರುತಿಸುತ್ತಾರೆ ಮತ್ತು ಅನುಭವಿಸುತ್ತಾರೆ.ಮಾಗಿ ಹೊತ್ತು ಕಣ್ಣಗ್ ಬೆಳಕಿದ್ದಂಗೆ ಕೆಲ್ಸ ಮುಗ್ಸಿ ಮನೆ ಸೇರ್ಕಳಿ ಎಂದು ಎಚ್ಚರಿಸುವ ಮಾತುಗಳನ್ನು ಪದೇ-ಪದೇ ಹೇಳುತ್ತಿರುತ್ತಾರೆ. ಆದರೆ ನಗರವಾಸಿಗಳಿಗೆ, ಒತ್ತಡದಲ್ಲಿ ಕೆಲಸ ಮಾಡುವವರಿಗೆ, ಶಿಫ್ಟ್ ಗಳಲ್ಲಿ ದುಡಿಯುವವರಿಗೆ ಮಾಗಿ ಋತುವಿನಲ್ಲಾಗುವ ಸೂಕ್ಷ್ಮ ಏರು-ಪೇರುಗಳು ಅರಿವಾಗುವುದಿಲ್ಲ, ಈ ಸುಂದರ ಅನುಭೂತಿಯಿಂದ ಅವರು ವಂಚಿತರಾಗುತ್ತಾರೆ.

ಉತ್ತರ ಕನ್ನಡದ ಪದಗಳು

ವಿವೇಕ
ಶಾನಭಾಗರ "ಒಂದು ಬದಿ ಕಡಲು" ಓದುವಾಗ ಈ ಕೆಳಗಿನ ಪದಗಳು ಸಿಕ್ಕವು,
ಹಂಚಿಕೊಳ್ಳುತ್ತಿದ್ದೇನೆ. ಕೆಲವಕ್ಕೆ ನನಗೆ ಸರಿಯಾದ ಅರ್ಥಗೊತ್ತಿಲ್ಲ ಅಥವಾ ಪದಮೂಲ
ಗೊತ್ತಿಲ್ಲ (ಅವನ್ನು ದಪ್ಪಾಗಿಸಿದ್ದೇನೆ), ಗೊತ್ತಿದ್ದವರು ತಿಳಿಸಿ, ಧನ್ಯವಾದಗಳು.

ಬೊಗಸೆಗಣ್ಣಿನ ಬಯಕೆಯ ಹೆಣ್ಣು... (ಬೇಂದ್ರೆ-೧)

ಬೆಳ್ಳಂಬೆಳಿಗ್ಗೆ ಬೇಂದ್ರೆ ಗಂಟು ಬಿದ್ದಿದ್ದಾರೆ.

ನಸುಕಿನ ಬೆಂಗಳೂರಲ್ಲಿ ಈಗ ಚಳಿ ಕಡಿಮೆ. ನಕ್ಷತ್ರಗಳು ಸ್ವಚ್ಛವಾಗಿ ಮುಗುಳ್ನಗುತ್ತಿವೆ. ನಸುಕಿನಲ್ಲಿ ಚಳಿಯಾದೀತು ಎಂದು ಕಾಲಡಿ ಹಾಕಿಕೊಂಡಿದ್ದ ರಗ್‌ಗಳು ಹಾಗೇ ಇವೆ. ಸಣ್ಣಗೇ ತಿರುಗುವ ಫ್ಯಾನ್‌ ಕೂಡಾ ಚಳಿ ಹುಟ್ಟಿಸುತ್ತಿಲ್ಲ.

ಓದಿದ್ದು ಕೇಳಿದ್ದು ನೋಡಿದ್ದು -155 ತಾಳಿಬಾನ್ ಸಂಸ್ಕೃತಿ!

ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಎನ್‌. ವಿನಯ ಹೆಗ್ಡೆಯವರಿಗೆ ಗೌರವ ಡಾಕ್ಟರೇಟ್‌

daijiworld

(Daijiworld)

-------------------------------

ಸೌತೆಕಾಯಿ ಹೋಳು : ಹೃದಯದಾಕಾರದಲ್ಲಿದೆಯೆಲ್ಲ... ಅರೆರೆ.

ಕೋಸಂಬರಿಯಲ್ಲಿ ಬಳಸಲಾಗುವ ತರಕಾರಿ ಎಳೆ ಸೌತೆ. ಅಡ್ಡಲಾಗಿ ಕತ್ತರಿಸಿ ವೃತ್ತಾಕಾರದ ಹೋಳುಗಳನ್ನಾಗಿ ಕತ್ತರಿಸಿದ ಬಳಿಕ ಉಪ್ಪು ನಿಂಬೇಹಣ್ಣಿನ ರಸ ಹಸಿಮೆಣಸು ಕಲಸಿ ಬಾಯಿಗಿಟ್ಟರೆ.. ಆಹಾ ಅದರ ಮಜಾನೇ ಬೇರೆ. ಅಂಬಲಿ ಊಟವೇ ಆಗಲಿ, ಬಿರಿಯಾನಿಯಂತಹ ಭಾರೀ ಊಟವೇ ಆಗಲಿ, ಸೌತೆಕಾಯಿ ಹೋಳು ಪಕ್ಕದಲ್ಲಿದ್ದರೆ ಊಟಕ್ಕೊಂದು ಕಳೆ.

ಗೆಳೆಯ

ನೀ ತಮಾಷೆಗೆ ಬರೆದೆಯೋ, ನನ್ನಲ್ಲಿ ನಿಜವಾಗಲೂ ಆಸಕ್ತಿ ಮೂಡಿತ್ತೋ, ಈಗಲೂ ನನಗೆ ಗೊತ್ತಿಲ್ಲ. ಆದರೆ ಗೆಳೆಯರಿಲ್ಲದ ಒಂಟಿಯಾಗಿದ್ದ, ಮಾತೇ ಬರದ ಮೌನಿಯಾಗಿದ್ದ ನನಗೆ ನೀನು ಬರೆದ ಒಂದೇ ಒಂದ ಕಾಗದ ನನ್ನ ಜೀವನವನ್ನೆ ಬದಲಾಯಿಸಿತು. ನನಗೆ ಅರಿವಾಗದಂತೆ ನಾನು ನಿನ್ನ ಪ್ರೀತಿಯಲ್ಲಿ ಸಿಲುಕಿದೆ.

Bengaluru Decoded

ಬೆಂಗಳೂರಿನಲ್ಲಿ ಹಲವಾರು Areaಗಳಿವೆ.. ಅವುಗಳಿಗೆ ಯಾಕೆ ಆ ಹೆಸರು ಬಂತು, ಆ Area ವಿಶೇಷತೆ ಏನು? ಗೊತ್ತಾ ನಿಮಗೆ? ನನಗೂ ಗೊತ್ತಿಲ್ಲಾ.. ಕಳೆದವಾರ ಒಂದು mail ಬಂತು ಅದರಲ್ಲಿ ಅಲ್ಪ ಮಾಗಿತಿ ಇತ್ತು.. ಹಾಗೆಯೇ ಅದನ್ನು ಭಾಷಾಂತರ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ... ಯಾವುದಾದರೂ ಮಾಹಿತಿ ತಪ್ಪಿದ್ದರೆ ತಿಳಿಸಿ.

ಮಾರತಹಳ್ಳಿ: