ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇಲ್ಲಿ ಎಲ್ಲವೂ "ಒಬಾಮ"ಮಯವಾಗುತ್ತಿದೆ

ಅಮೆರಿಕದ ಅಧ್ಯಕ್ಷ ಬರಾಕ್ ಹುಸೇನ್ ಒಬಾಮನ ಬಗ್ಗೆ ಕಳೆದೆರಡು ತಿಂಗಳಿಂದ ಬರೆಯದ ಪತ್ರಿಕೆಗಳಿಲ್ಲ, ಸುದ್ದಿ ಬಿತ್ತರಿಸದ ಟೀವೀ ಚಾನಲ್‍ಗಳಿಲ್ಲ. ಅವನೊಬ್ಬ ಕರಿಯನಾಗಿದ್ದುಕೊಂಡು ಏನೆಲ್ಲ ಸಾಧನೆಯನ್ನು ಮಾಡಿದ! ಹಿಂದೊಮ್ಮೆ ಕರಿಯರನ್ನು ಅಸ್ಪೃಶ್ಯರಂತೆ ನಡೆಸಿಕೊಡ ದೇಶಕ್ಕೆ ಈಗ ಅವನೇ ಅಧಿಪತಿ!

ಮಂಗಳೂರು ಪಬ್ ದಾಳಿ ಮತ್ತು ಮಾಧ್ಯಮ

ಮಂಗಳೂರಿನ ಪಬ್ ಮೇಲೆ ದಾಳಿ, ಯುವತಿಯರ ಮೇಲೆ ಥಳಿತ ಎಲ್ಲ ಖಂಡನೀಯ. ಆದರೆ ಮಾಧ್ಯಮಗಳು ಅದಕ್ಕೆ ಕೊಟ್ಟ ಪ್ರಾಮುಖ್ಯತೆ ಮಾತ್ರ ಅತಿಯಾಯಿತೆಂದು ಅನ್ನಿಸುವುದಿಲ್ಲವೇ?

ಪ್ರೀತಿ ನೀನಿಲ್ಲದೆ

ಯಾಕೋ ಬೇಜಾರು, ಹೇಳಿಕೊಳ್ಳಲಾಗದ ಅಸಹನೆ,
ಮನಸ್ಸು ತುಂಬಾ ನೊಂದಿದೆ.

ನನ್ನ ತಪ್ಪು ಏನೆಂದು ನೀನು ಹೇಳಬೇಕಿತ್ತು.
ನಿನ್ನ ಮೌನವೇ ನನ್ನನ್ನು ತುಂಬಾ ಚುಚ್ಚುತ್ತಿದೆ.

ಒಂದೇ ಒಂದು ಅವಕಾಶ ಕೊಡು ಗೆಳೆಯ,
ನನ್ನ ತಪ್ಪುಗಳನ್ನು ತಿದ್ದಿಕೊಳ್ಳಲು.

ಮನಸು

ಕನಿನ ಮತ್ತು ಹ್ರಿದಯಕೆ ತಿಳಿಯುವುದೇ
ಹೃದಯದ ಮತ್ತು ಅವರಿಗೆ ತಿಳಿಯುವುದೇ,
ಈ ಮನಸಿನ ತಳಮಳ ಹೇಗೆ ಹೇಳಲೇ,
ಕನಿನ ನೋಟ ಹೇಗೆ ತಿಳಿಸಲೀ,
ಮೌನದ ರೂಪವೇ ಪ್ರೇಮ,
ಪ್ರೇಮದ ರೂಪವೇ ಶ್ರಿಷ್ಟಿ,
ಶ್ರಿಹ್ತಿಯ ರೂಪವೇ ಬಕ್ತಿ.

ಮೌನದಿಂದ ಹೃದಯದ ಮಾತು
ಮಾತಿನಿಂದ ನಿನ ನೋಟ
ನೋಟದಿಂದ ಪ್ರೇಮದ ಸ್ವರ
ಪ್ರೇಮದ ಸ್ವರದಿಂದ ಸಂಗೀತ.

ಕನ್ನಡತಮಿೞ್ಗಳ ಪುಂಸೂಚಕ ನಕಾರಕ್ಕೆ ಡಕಾರಂ ತೆಲುಗಿನೊಳ್

ಕನ್ನಡ ಮತ್ತು ತಮಿೞಿನ ಪುಲ್ಲಿಂಗ ಸೂಚಕವಾದ ನ್/ನು ಗೆ ತೆಲುಗಿನಲ್ಲಿ ಡ್ ಬಂದು ಸಾಮಾನ್ಯವಾಗಿ ತೆಲುಗು ಹೊಸಗನ್ನಡದಲ್ಲಿ ಕೊನೆಯ ಎಲ್ಲಾ ವ್ಯಂಜನಾಂತಗಳಿಗೆ ಉಕಾರ ಸೇರಿಸುವುದಱಿಂದ ಡ್->ಡು ಆಗುತ್ತದೆ.

ಉದಾಹರಣೆಗೆ: ಕನ್ನಡ ಹಾಗೂ ತಮಿೞಿನ ರಾಮನ್(ನು) ತೆಲುಗಿನಲ್ಲಿ ರಾಮುಡು.
ಹಾಗೆಯೇ ಅವನ್(ನು) ವಾಡು. ಇವನ್(ನು) ವೀಡು ಇತ್ಯಾದಿ.

ಶಬ್ದದ ಮೊದಲ ಸ್ವರಕ್ಕೆ ಮುನ್ನೂಂಕುಂ ದೀರ್ಘಮುಂ ತೆಲುಗಿನೊಳ್

ಕನ್ನಡದಲ್ಲಿರುವ ಹಲವು ಶಬ್ದಗಳಿಗೆ ತೆಲುಗಿನಲ್ಲಿ ಆ ಶಬ್ದಗಳ ಮೊದಲ ಸ್ವರಗಳು ಮುಂದೂಡಲ್ಪಟ್ಟು ದೀರ್ಘವಾಗುವುದು ಒಂದು ವಿಶೇಷ. ಉದಾಹರಣೆಗೆ ಅವನ್(ನು) ಇಲ್ಲಿಯ ಅಕಾರ(ಮೊದಲ ಸ್ವರ) ವಕಾರದ ಮುಂದೆ ದೂಡಲ್ಪಟು ವಾ ಆಗಿ ಕೊನೆಯ ನ್‍ಗೆ ಡು ಆದೇಶ ಬಂದು ವಾಡು ರೂಪವಾಗುತ್ತದೆ ಇದೇ ತೆಱನಾಗಿ ಇವನು=ವೀಡು, ಅವರ್=ವಾರು, ಇವರ್=ವೀರು ಇತ್ಯಾದಿ.

ಗಳಿನ ಗಕಾರಲೋಪಂ ತೆಲುಗಿನೊಳ್

ಕನ್ನಡದ ಬಹುವಚನರೂಪದ ’ಗಳ್/ಗಳು’ ಗೆ ತೆಲುಗಿನಲ್ಲಿ ಗ ಲೋಪವಾಗಿ ಳಕಾರಕ್ಕೆ ಲಕಾರ ಬಂದು ’ಲು’ ಉೞಿಯುತ್ತದೆ.

ಉದಾಹರಣೆ: ಪಿಳ್ಳೆ=ಪಿಲ್ಲ(ತೆಲುಗು). ಪಿಳ್ಳೆಗಳು=ಪಿಲ್ಲಲು(ತೆಲುಗು)