ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಳಕಾರಕ್ಕೆ ಲಕಾರಂ ತುಳುತೆಲುಗುಗಳೊಳ್

ಕನ್ನಡದ ಳಕಾರವಿರುವ ಶಬ್ದಗಳಲ್ಲಿ ಅವಕ್ಕೆ ಸಂವಾದಿಯಾಗಿರುವ ತುಳು ತೆಲುಗು ಶಬ್ದಗಳಿಗೆ ಲಕಾರ ಬರುತ್ತದೆ.
ಉದಾಹರಣೆಗೆ ಅಳೆ=ಮಜ್ಜಿಗೆ(ಕನ್ನಡ) ಅಲೆ=ಮಜ್ಜಿಗೆ(ತುಳು)
ಗಾಳಿ(ಕನ್ನಡ)=ಗಾಲಿ(ತುಳು, ತೆಲುಗು)
ತಿಳಿ(ಕನ್ನಡ)=ತೆಲಿ(ತುಳು, ತೆಲುಗು)

ಮಾಯಾ ಲೆಕ್ಕ

ನಿಮ್ಮ ಜನ್ಮ ತಾರೀಖನ್ನು ೪ ರಿಂದ ಗುಣಿಸಿ ಬಂದ ಉತ್ತರಕ್ಕೆ ೧೩ ಅನ್ನು ಸೇರಿಸಿ ಈಗ ಬಂದ ಉತ್ತರಕ್ಕೆ ೨೫ ರಿಂದ ಗುಣಿಸಿ ಮತ್ತು ಬಂದ ಉತ್ತರದಲ್ಲಿ ೨೦೦ ಅನ್ನು ಕಳೆಯಿರಿ ಈಗ ಬಂದ ಉತ್ತರಕ್ಕೆ ನೀವು ಹುಟ್ಟಿದ ತಿಂಗಳನ್ನು ಸೇರಿಸಿ ಮತ್ತು ಬಂದ ಉತ್ತರವನ್ನು ೨ ರಿಂದ ಗುಣಿಸಿ ಈಗ ಬಂದ ಉತ್ತರದಲ್ಲಿ ೪೦ ಅನ್ನು ಕಳೆಯಿರಿ, ಈಗ ಬಂದ ಉತ್ತರಕ್ಕೆ ೫೦ ರಿಂದ ಗುಣಿಸಿ ಹಾಗು ಈಗ ಬಂದ ಉತ್

ಬಂದಿದೆ ಬಿದಿರಿನ ಕಾರು - ಬಿದಿರ್ಕಾರು

ವಾಹನ ಕ್ಷೇತ್ರದಲ್ಲಿ ಏನಾದರೂ ಹೊಸತನ್ನು ನೀಡುತ್ತಿರುವುದು ಜಪಾನ್ ವಿಶೇಷತೆ. ಇತ್ತೀಚೆಗೆ ಕೇವಲ ಬಿದಿರಿನಿಂದ ಮಾಡಿದ ಹೊರಕವಚವಿರುವ ಎಲೆಕ್ಟ್ರಿಕ್ ಕಾರೊಂದನ್ನು ಜಪಾನಿನ ಕ್ಯೋಟೋ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದೆ. ಕ್ಯೋಟೋ ವಿಶ್ವವಿದ್ಯಾಲಯದ ವೆಂಚರ್ ಬಿಸಿನೆಸ್ ಲ್ಯಾಬೋರೇಟರಿ ಪ್ರಸ್ತುತಪಡಿಸಿದ ಈ ಕಾರಿನ ಹೆಸರು ಬಾಂಬ್ಗೂ (Bambgoo).

ಕಲಿಯುಗದ ತಪಸ್ಸು --- ಖರೇನೇ ಭಾಳ ಕಠಿಣದ

ಪುರಾತನ ಕಾಲದಾಗ ಋಷಿ-ಮುನಿಗಳು, ರಾಕ್ಷಸರು, ಮತ್ತ್ಯಾರ್ಯಾರೋ ತಪಸ್ಸು ಮಾಡ್ತಿದ್ರು ಅಂತ ಹೇಳಿದ್ದು ನಾವೆಲ್ಲಾರೂ ಕೇಳಿವಿ. ತಪಸ್ಸು ಮಾಡಲಿಕ್ಕೇ ಎಷ್ಟು ಕಷ್ಟ ಪಡತಿದ್ರು ಅಂತನೂ ಕೇಳಿವಿ. ಕೆಲೊಬ್ರು ಸದಾಕಾಲ ದೇವರ ಧ್ಯಾನ ಮಾಡೀದ್ರ ಮತ್ತೊಬ್ರು ಈ ಸದ್ದ ದೇವರು ಇಲ್ಲಿ ಬರಬೇಕು ಅಂತ ಹೇಳಿ ವಾಮಾಚಾರಿ ಮಾಡ್ತಿದ್ರು.

ಗಾಳಿಪಟ.

ಏ ಹುಚ್ಚ ರಂಡೆ ಗಂಡ ಕಾನ್ವೆಂಟ್ ಕಲಿತಿದ್ದಿ ಈ ಹೊಲ್ಸು ಗೋಲಿ, ಬಗರಿ, ಲಗೋರಿ ಆಡೋದು, ಮರ ಹತ್ತಿ ನೆಲ್ಲಿಕಾಯಿ ತಿಂಬೋದು ಮತ್ತ ಆಶಾಡ ಬಂತು ಅಂದ್ರ ಗಾಜಿನ್ ಬಾಟ್ಲಿ ವಡ್ದು ಮಾಂಜ ಧಾರ ಮಾಡಿ ಗಾಳಿಪಟ ಹಾರ್ಸ್ಲಿಕ್ಕೆ ಬಯ್ಲಾಗ ಓಡ್ತಿ ನಾಚ್ಗಿ ಆಗಂಗಿಲ್ಲ ನಿಂಗ ಅಂತ ಅಮ್ಮ ಬಯ್ಯೋದು ಗ್ನಾಪಕ ಮಾಡ್ಕೊಂತ ಸೀನ ಅಹ್ಮದಾಬಾದ್ನಾಗಿರೊ ತನ್ನ ಫ಼್ಲ್ಯಾಟ್ನಾಗ ತಂದ ಮಾರಿ ಚಿತ್ರ ಇರೋ

ನನ್ನ 'ಸು' ಗೆ

ನನ್ನ 'ಸು' ಗೆ, ಹಿಂದಿನ ವರ್ಷ ಇದೇ ದಿನದಂದು ನೀನು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಎಳ್ಳು ಬೆಲ್ಲ ಹಂಚಲು ಬಂದಾಗ, ನಾಚದೇ ನಾನು ನಿನ್ನ ಬಟ್ಟಲಿನಿಂದ ಬಾಚಿದ್ದೆ, ನೆನಪಿದೆಯಾ..? ನೀನು ನನ್ನ ಮುಖವನ್ನೂ ನೋಡದೆ ನೀಲಿ ಜರೀ ಲಂಗವನ್ನು ಎತ್ತಿ ಓಡುವಾಗ ನಿನ್ನ ಗೆಜ್ಜೆಗಳನ್ನೇ ಕೇಳುತ್ತಾ ನಿಂತಿದ್ದೆ ನಾನು... ನಿನ್ನ ನಾ ಬಸ್ಸಲ್ಲೇ ನೋಡಿದ್ದೆ.. ಸುಮ್ಮನೆ ನೋಡುತ್ತಾ ನಿಂತಿರುತ್ತಿದ್ದೆ..ಕಂಡಕ್ಟರನ ಬಳಿ ಎರ್ಅಡು ರೂಪಾಯಿ ಚಿಲ್ಲರೆಗೆ ಜಗಳವಾಡುವಾಗ, ಚಪ್ಪಲಿ ಮೆಟ್ಟಿ ನಿನ್ನ ಹಿಂದೆ ನಿಂತ ದಪ್ಪ ಹೆಂಗಸು ಮೈಮೇಲೆ ಬಿದ್ದಾಗ ನೀನು ದಬಾಯಿಸುವಾಗ, ಪಕ್ಕದ ಸೀಟಿನಲ್ಲಿ ಕುಳಿತ ಹೆಂಗಸಿನ ಪುಟ್ಟ ಮಗು ನಿನ್ನ ಉದ್ದ ಜಡೆ ಎಳೆಯುವಾಗ ನಾನಲ್ಲೇ ಇರುತ್ತಿದ್ದೆ.. ನೀನು ನನ್ನ ನೋಡಲಿಲ್ಲವೋ, ನೋಡಿದರೂ ನೋಡದಂತೆ ನಟಿಸಿದೆಯೋ ನಾಕಾಣೆ..

ಗ್ರಹಗಳ ವಕ್ರಗತಿ

ಸೂರ್ಯ ಚಂದ್ರರನ್ನು ಬಿಟ್ಟು ಉೞಿದ ಗ್ರಹಗಳಿಗೆ ಮಾರ್ಗ(ನೇರ) ಮತ್ತು ವಕ್ರ (ಹಿಂದಾಗಿ ಚಲಿಸುವ) ಗತಿಗಳುಂಟು. ರಾಹು ಕೇತುಗಳಿಗೆ ಯಾವಾಗಲೂ ವಕ್ರಗತಿ. ಅವುಗಳಿಗೆ ಋಜುಗತಿಯಿಲ್ಲ. ಸಾಮಾನ್ಯವಾಗಿ ಬುಧ ಶುಕ್ರರಿಗೆ ಆಗಾಗ್ಗೆ ಮಾರ್ಗಿ (ಮುಂದು ಮುಂದೆ ಹೋಗುವ) ಆಗಾಗ್ಗೆ ವಕ್ರರೂ ಆಗುತ್ತಾರೆ. ಇದಕ್ಕೆ ಕಾರಣ ಬುಧ ಶುಕ್ರರಿಬ್ಬರೂ ಭೂಮಿಯ ಕಕ್ಷೆಯೊಳಗಿನ ಗ್ರಹಗಳು.

ನೊಣಕ್ಕೊಂದು ನೈಸರ್ಗಿಕ "ಟ್ರ್ಯಾಪ್"

ಹುಬ್ಬೇರಿಸದಿರಿ..!!!
ಬಯಲುಸೀಮೆಯ ಬಹುತೇಕ ಹಳ್ಳಿಗಾಡಿನ ಜಂತೆ ಮನೆಗಳಲ್ಲಿ "ಜಾಡು" ಎನ್ನುವ ಕೀಟಗಳ ಬಲೆಯೊಂದನ್ನು ನೇತುಹಾಕುತ್ತಿದ್ದುದನ್ನು ನನ್ನ ಬಾಲ್ಯದ ದಿನಗಳಲ್ಲಿ ಕಂಡಿದ್ದು ನೆನಪಿದೆ.ಕೆಲ ದಿನಗಳ ಹಿಂದೆ ಪಾವಗಡ ತಾಲ್ಲೂಕಿನ ಮಂಗಳವಾಡ ಗ್ರಾಮಕ್ಕೆ ಕೆರೆ ಕೆಲಸದ ನಿಮಿತ್ತ ಹೋದಾಗ ಈ ಜಾಡನ್ನು ಕಂಡಿದ್ದೇ ಈ ಲೇಖನದ ಉಗಮಕ್ಕೆ ಕಾರಣ.
ಏನಿದು ಜಾಡು??
ಕುರುಚಲು ಕಾಡಿನ ಊಲಿ, ಊಡುಗ,ನಾಯಿಬೇಲ,ಮುಂತಾದ ಮುಳ್ಲು ಗಿಡಗಳ ಮೇಲೆ ಬಿಳಿತೆನೆಯ ತರಹದ ನೂಲಿನ ಹಂದರವೊಂದನ್ನು ಕಾಣಬಹುದು.ಇದನ್ನು ಕೀಟಗಳ ಊಟದ ಬಟ್ಟಲು ಎಂದು ಮೇಲ್ನೋಟಕ್ಕೆ ಊಹಿಸಲು ಸಾಧ್ಯವಿಲ್ಲ.ಇಂತಹ ಜಾಡಿನ ಗೂಡಿನಲ್ಲಿ ಅಸಂಖ್ಯಾತ ಹುಳುಗಳು ಇರುತ್ತವೆ.(ಈ ಹುಳುಗಳು ಯಾವ ಜಾತಿ/ಪ್ರಭೇದಕ್ಕೆ ಸೇರಿದವುಗಳು ಎನ್ನುವುದು ನನಗೆ ತಿಳಿದಿಲ್ಲ.ಮಾಹಿತಿಯಿದ್ದವರು ಸೇರಿಸಲು ಅಡ್ಡಿಯಿಲ್ಲ).ಸಾಮಾನ್ಯವಾಗಿ ಈ ಜಾಡನ್ನುಬೆರಳಿನಿಂದ ಮುಟ್ಟಿದರೆ ಅಂಟಿಕೊಳ್ಲುವ ಸ್ವಭಾವ ಇರುತ್ತದೆ.ಹಾಗಾಗಿ ಬಯಲು ಪ್ರದೇಶದಲ್ಲಿನ ಹಸಿರು ನೊಣ ,ಸಣ್ಣ ಸಣ್ಣ ಚಿಟ್ಟೆಗಳು,ದುಂಬಿಗಳು ಮತ್ತಿತರ ಕ್ರಿಮಿಕೀಟಗಳು ಈ ಬಲೆಯ ಸಂಪರ್ಕಕ್ಕೆ ಬಂದರೆ ಅಲ್ಲಿಯೇ ಅಂಟಿಕೊಳ್ಳುತ್ತವೆ.ಕ್ಷಣಾರ್ಧದಲ್ಲಿ ಬಲೆಯೊಳಗಿನ ಭಕ್ಷಕ ಹುಳುಗಳಿಗೆ ಭೂರಿ ಭೋಜನವಾಗುತ್ತವೆ.
ಜಾಡು-ಜಾದು...

ಆಡುಮಾತಿನಲ್ಲಿ ಎರಡನೆಯ ಅಕ್ಷರದ ಲೋಪ

ಮೂಱು ಅಕ್ಷರಗಳಿರುವ ಪದಗಳಲ್ಲಿ ಎರಡನೆಯ ಅಕ್ಷರ ಶಿಷ್ಟರೂಪದಲ್ಲಿ ದ್, ರ್, ಲ್, ಳ್, ೞ್ ಇದ್ದರೆ ಈ ಅಕ್ಷರಗಳು ಲೋಪವಾಗಿ ಮುಂದಿನ ವ್ಯಂಜನ ಒತ್ತಾಗಿ ಬರುವುದು ಕನ್ನಡದ ಆಡುಮಾತಿನಲ್ಲಿ ಕಾಣುವ ವಿಶೇಷ. ಬೇಱೆ ಭಾಷೆಗಳಲ್ಲೂ ಇರಬಹುದು. ಕನ್ನಡದಲ್ಲಿ ಬೇಕಾದಷ್ಟು ಪದಗಳು ದೊರೆಯುತ್ತವೆ. ಈ ಕೆೞಗಿನ ಕೋಷ್ಟಕ ನೋಡಿರಿ.