ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೋರಾಟಗಳಿಗೆ ಮಾತ್ರವಲ್ಲ ಹಾರಾಟಗಳಿಗೂ ಮಾಧ್ಯಮ ಈಗ ಧ್ವನಿಯಾಗುತ್ತಿದೆ!

A friend said to an University student, "what do you go to the master for? will he help you earn living?"
student replied- "No, but thanks to him I will know what to do with the living when I earn"

ಪದವಿ ಪಡೆದಿರುವ ಕೆಲವರಿಗೆ ಈ ಸೂಕ್ಷ್ಮತೆಗಳು ಅರ್ಥವಾಗಬೇಕಿದೆ. ಕಾರಣ ಇತ್ತೀಚೆಗೆ ಶೋಷಣೆ ಹೆಚ್ಚಾಗಿರುವುದು ಕಲಿತವರಿಂದಲೇ. ಅದೂ ಕಲಿಯದವರ ಮೇಲೆ ಎಂಬುವದು ಚಿಂತನಾರ್ಹ.

ನಿನ್ನ ನೆನಪೆ ಧವನ

ಕನಸ ಹಾಸಿಗೆಯಲ್ಲಿ ನೀನು
ಬೆಚ್ಚನೆಯ ಹೊದಿಕೆ
ಹುದುಗಿಸಿಯೆ ಬಿಟ್ಟಿರುವೆ
ಎದೆಯ ಪದತಲಕೆ

ಬದುಕು ಬಣ್ಣದ ತೇರು
ನಿನ್ನ ನೆನಪೆ ಧವನ
ನೆನಪು ಮಾಸುವ ಮುನ್ನ
ಬರಲಿ ಬಿಡು ಮರಣ

ಮುಚ್ಚದಿರು ಎದೆ ಕದವ
ದೂಡದಿರು ಒಲವೆ
ನನ್ನ ಉಸಿರಿನ ತಾಣ
ನೀನೆ ನಿಜ ನಲವೆ

ನೀನು ತೊರೆದಾ ದಿನವೆ
ಬಿರಿಯಲಿದು ಬುವಿಯು
ಕಾವ್ಯವೇ ನೀನೊಲಿದೆ
ನಾನಾದೆ ಕವಿಯು

ಆಧುನಿಕ ಬೇತಾಳನೂ ವಿಕ್ರಮಾದಿತ್ಯನೂ

ಯಥಾ ಪ್ರಕಾರ ಹಠಬಿಡದೇ ಸೆಪ್ಟೆಂಬರ್ ಮಾರ್ಚ್ ಸೆಪ್ಟೆಂಬರ್ ಎಕ್ಸಮ್ ಬರೆಯೋ ರಿಪಿಟರ್ ವಿದ್ಯಾರ್ಥಿ ಥರಾ ವಿಕ್ರಮ ರಾಜನು ಮರದಲ್ಲಿದ್ದ ಬೇತಾಳವನ್ನು ಪ್ರೈಮರಿ ಶಾಲೆಯ ಮಕ್ಕಳ ಮಣ ಭಾರದ ಪುಸ್ತಕದ ಚೀಲದಂತೆ ಹೆಗಲಿಗೇರಿಸಿ ನಡೆಯುತ್ತಿದ್ದನು. ವಶೀಲಿ ಗೊತ್ತಿಲ್ಲದ ಸರ್ಕಾರಿ ನೌಕರನಂತೆ ದುಡಿಯುವುದನ್ನು ನೋಡಿ ಬೇತಾಳನಿಗೆ ಅಯ್ಯೋ ಪಾಪ ಎನಿಸಿ ' ವಿಕ್ರಮ ಮಹಾರಾಜ ನಿನ್ನ ಕರ್ತವ್ಯ ಪ್ರಜ್ಞೆ ಮೆಚ್ಚಿದ್ದೇನೆ. ದಾರಿಸಾಗಲು ಕಥೆಯೊಂದನ್ನು ಹೇಳುತ್ತೇನೆ. ಮೊಬೈಲ್ ಅಲ್ಲಿ ಮಾತಾಡುತ್ತಾ ಸಾಗೋ ಪ್ರೇಮಿಯ ಹಾಗೆ ನಿನಗೆ ದಾರಿ ಸಾಗಿದ್ದೇ ಗೊತ್ತಾಗುವುದಿಲ್ಲ' ಎಂದಿತು. ವ್ರತ ನಿಷ್ಠನಾದ ವಿಕ್ರಮ ಮಾತಾಡದೇ ಇದ್ದರೂ ಹುಡುಗಿಯರ ಮೌನವನ್ನೇ ಒಪ್ಪಿಗೆ ಎಂದು ಭಾವಿಸುವ ಪ್ರಿಯಕರನಂತೆ ತನ್ನ ಪಾಡಿಗೆ ತಾನು ಕಥೆ ಹೇಳಲು ಪ್ರಾರಂಭಿಸಿತು.

ಪುಣ್ಯ ಭರತ ಭೂಮಿಯಲ್ಲಿ ಕನ್ನಡನಾಡು ಎಂಬ ರಾಜ್ಯ. ಅಂತಿಪ್ಪ ರಾಜ್ಯದಲ್ಲಿ ತಂಗಳೂರು ವಿಶ್ವವಿದ್ಯಾನಿಲಯವೆಂಬ ವಿದ್ಯಾದೇಗುಲವಿತ್ತು. ಅಲ್ಲಿ ಉತ್ತಮ ದರ್ಜೆಯ ವಿದ್ಯಾಭ್ಯಾಸ ಸಿಗುತ್ತಿದ್ದ ಕಾರ್‍ಅಣ ಇಡೀ ದೇಶದಲ್ಲಿಯೇ ಪ್ರಸಿದ್ಧವಾಗಿತ್ತು. ಅಂಥ ವಿ ವಿ ಗೆ ಸುಭಗನೆಂಬ ವಿದ್ಯಾರ್ಥಿ ಕಲಿಯಲು ಸೇರಿದನು. ಕ್ರೀಡೆ, ಸಾಹಿತ್ಯ, ವಿಷಯಗಳಲ್ಲಿ ಒಳ್ಳೆಯ ಆಸಕ್ತಿ ಇತ್ತು. ಉತ್ತಮ ವಿದ್ಯಾರ್ಥಿಯಾದ ಈತನು ಬೇರೆ ವಿದ್ಯಾರ್ಥಿಗಳಿಗೆ ಅಸೂಯೆ ಮೂಡಿಸುವಷ್ಟು ಮಟ್ಟಿಗೆ ಬೆಳೆದನು. ವಿಭಾಗದಲ್ಲಿಯೂ ತೀವ್ರ ಚಟುವಟಿಕೆಯಿಂದ ಕೂಡಿದ್ದ ಇತನಿಗೆ ತನ್ನ ಸಮಾಜದ ಕೊಳಕುತನಗಳನ್ನು ಕಿತ್ತುಹಾಕಬೇಕೆಂಬ ತುಡಿತ. ಎಳೆ ವಯಸ್ಸು ಹುರಿಗಟ್ಟಿದ ದೇಹ, ಕನಸು ಬಿತ್ತುವ ಉಪನ್ಯಾಸಕರು ಇನ್ನೇನೂ ಬೇಕು ಸ್ವರ್ಗಕ್ಕೆ ಕಿಚ್ಚು ಹಚ್ಚಲು.

ಕನವರಿಕೆ...

ಸನ್ನೆ ಮಾಡುತಿಹಳು ಕಣ್ಣ ನೋಟದಲ್ಲಿ
ನನ್ನೆ ಕೆಣಕುತಿಹಳು ಕಣ್ಣಂಚಿನ ಕುಡಿಯಲ್ಲಿ
ಕನ್ನ ಹಾಕುತಿಹಳು ನನ್ನೆದೆಯ ಕನಸಿನಲ್ಲಿ….

ಇದು ಯಾವ ಕಲೆಗಾರ ಕಲಿಸಿ ಕೊಟ್ಟ ಕಲೆಯೊ
ತಿಳಿಯದು ಕೊಲ್ಲು ತಿಹಳು ನೋಟದ ಸೆಳತದಲ್ಲಿ
ಕನಸುಗಳು ಕೊಚ್ಚಿ ಹೋಗುವ ಸೂಚನೆ ಸಿಕ್ಕೆದೆ ಎನಗೆ...

ಅಗುರ ಹೃದಯದಲ್ಲಿ ಬಾರವ ಹೊತ್ತು
ನೆಡೆಯುತ್ತಿದೆ ಪ್ರೀತಿಯ ತೇರು

ಮಿಥ್ಯ ಬಸಿರು

ಕಾವೇರಿ ಮಗುವನ್ನೇ ದಿಟ್ಟಿಸಿ ನೋಡುತ್ತಿದ್ದಳು. ಅವಳ ಕಣ್ಣಾಲಿಗಳು ತುಂಬಿ ಬಂದವು. ಹೀಗೊಂದು ಪರಿಸ್ಥಿತಿ ತನಗೆ ಒದಗಿ ಬರಬಹುದೆಂದು ಅವಳು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ಮಗುವಿನ ಮುದ್ದಾದ ಮುಖ ನೋಡಿ ಇನ್ನಷ್ಟು ಸಂಕಟ ಹೆಚ್ಚಾಯಿತು.

ಸ್ಪರ್ಧೆ: ಗ್ನು/ಲಿನಕ್ಸ್ ಹಬ್ಬದ ಆಪರೇಟಿಂಗ್ ಸಿಸ್ಟಂ ಸಿ.ಡಿ ಗೆ ಹೆಸರಿಡಿ

ಗ್ನು/ಲಿನಕ್ಸ್ ಹಬ್ಬ ತಂಡ ಪ್ರತಿ ಹಬ್ಬದಲ್ಲೂ, ಬಳಕೆದಾರನಿಗೆ ಕನ್ನಡ ಓದಲು, ಬರೆಯಲು ಮತ್ತು  ಪ್ರತಿನಿತ್ಯದ ಕೆಲಸಗಳನ್ನ  ಇನ್ಯಾವುದೇ ಪ್ರೊಪ್ರೈಟರಿ ಆಪರೇಟಿಂಗ್ ಸಿಸ್ಟಂಗಳಂತೆ ಮಾಡಲಿಕ್ಕೆ ಸಾಧ್ಯವಾಗುವಂತಹ ತಂತ್ರಾಂಶಗಳನ್ನ ಒಳಗೊಂಡ ಗ್ನು/ಲಿನಕ್ಸ್ ಸಿ.ಡಿ ಯೊಂದನ್ನ ಭಾಗವಹಿಸುವ ಎಲ್ಲರಿಗೆ ನೀಡುತ್ತಾ ಬಂದಿದೆ.

ಮಾಯಾಚೌಕವನ್ನು ರಚಿಸುವ ಎರಡು ವಿಧಾನಗಳು

ªÀiÁAiÀiÁZËPÀ: ªÀiÁAiÀiÁZËPÀªÉAzÀgÉ ZËPÁPÁgÀzÀ°è ¸ÀASÉåUÀ¼À£ÀÄß GzÀݪÁV PÀÆrzÀgÀÆ, CqÀتÁV PÀÆrzÀgÀÆ ºÁUÀÆ JgÀqÀÆ PÀtðUÀ¼À ¢QÌ£À°è PÀÆrzÀgÀÆ MAzÉà ªÉÆvÀÛ §gÀĪÀAvÉ 1¾ôAzÀ ªÀiÁAiÀiÁZËPÀzÀ DPÁgÀzÀ ªÀUÀðzÀªÀgÉV£À ¸ÀASÉåUÀ¼À£ÀÄß eÉÆÃr¸ÀĪÀÅzÀÄ. ¸ÀªÀÄ DPÁgÀzÀ ªÀiÁAiÀiÁZËPÀPÉÌ C£Àé¬Ä¸ÀĪÀ ¸ÁªÀiÁ£Àå ¤AiÀĪÀÄ«®è. DzÀgÉ ¨É¸À DPÁgÀPÉÌ ¸ÁªÀiÁ£Àå ¤AiÀĪÀÄ gÀƦ¸À§ºÀÄzÀÄ.

ದೇವರ ನೈವೇದ್ಯಕ್ಕೆ ಬಾಳೆಹಣ್ಣು ಮತ್ತು ತೆಂಗಿನಕಾಯಿಯನ್ನೇ ಏಕೆ ಇಡುತ್ತಾರೆ?

ಸಾಮಾನ್ಯವಾಗಿ ದೇವರ ನೈವೇದ್ಯಕ್ಕೆ ಬಾಳೆಹಣ್ಣು ಮತ್ತು ತೆಂಗಿನಕಾಯಿಯನ್ನೇ ಇಡುತ್ತಾರೆ ಏಕೆಂದರೆ ಪ್ರಾಣಿ ಪಕ್ಷಿಗಳ ಮೂಲಕ ಪ್ರಸಾರವಾಗುವ ಫಲಗಳು ಎಂಜಲು ಫಲಗಳಾಗಿರುತ್ತವೆ ಆದರೆ ಬಾಳೆಹಣ್ಣಿನ ಸಸಿ ಅದರ ಮುಖ್ಯ ಬೇರಿನಿಂದಲೇ ಬರುತ್ತದೆ ಮತ್ತು ತೆಂಗಿನ ಸಸಿ ನೆಡಲು ಪೂರ್ಣ ತೆಂಗಿನಕಾಯಿಯನ್ನೇ ನೆಡಬೇಕಾಗುತ್ತದೆ ಆದ್ದರಿಂದ ಈ ಫಲಗಳು ಎಂಜಲು ಫಲಗಳಾಗುವುದಿಲ್ಲ ಈ ಕಾ

ಜೀವಾಮೃತ...ಜೀವಾಮೃತ... (ರೈತರೇ ಬದುಕಲು ಕಲಿಯಿರಿ-೧೧)

ರೈತ ಬಾಂಧವರೇ,

ನಿಮ್ಮನ್ನು ಕಾಡುತ್ತಿರುವ ಮುಖ್ಯ ಸಮಸ್ಯೆಗೆ ಈ ಅಧ್ಯಾಯದಲ್ಲಿ ಪೂರ್ತಿ ಪರಿಹಾರವಿದೆ. 

ಸುಮಾರು ಐದು ಸಾವಿರ ವರ್ಷಗಳಿಂದ ನಮ್ಮ ದೇಶದಲ್ಲಿ ನಡೆಸಿಕೊಂಡು ಬಂದಿದ್ದ ಹಾಗೂ ಕಳೆದ ಐವತ್ತು ವರ್ಷಗಳಲ್ಲಿ ಮರೆತಿರುವ ಅಪರೂಪದ ಕೃಷಿ ಜ್ಞಾನ ಸಂಪತ್ತನ್ನು ಸುಭಾಷ ಪಾಳೇಕರ ಅವರು ವೈಜ್ಞಾನಿಕ ಹಿನ್ನೆಲೆಯಲ್ಲಿ ಮತ್ತೆ ನಮ್ಮ ಮುಂದೆ ತಂದಿದ್ದಾರೆ. ಇದನ್ನು ಸರಿಯಾಗಿ ಆಚರಿಸಿದಲ್ಲಿ ನಮ್ಮ ಭೂಮಿ ಮತ್ತೆ ಸಮೃದ್ಧವಾಗುತ್ತದೆ. ನಮ್ಮ ಬದುಕಿನಲ್ಲಿ ಮತ್ತೆ ಆನಂದ ತುಂಬುತ್ತದೆ.

ಸಗಣಿಯಿಂದ ಸಮೃದ್ಧಿ

ಸುಭಾಷ ಪಾಳೇಕರ ಪ್ರಕಾರ ನಿಸರ್ಗ ಕೃಷಿಯನ್ನು ರಥಕ್ಕೆ ಹೋಲಿಸಿದರೆ ಅದರ ನಾಲ್ಕು ಮುಖ್ಯ ಚಕ್ರಗಳೆಂದರೆ ಬೀಜಾಮೃತ, ಜೀವಾಮೃತ, ಹೊದಿಕೆ ಮತ್ತು ಆರ್ದ್ರತೆ (ತೇವ). ಇವುಗಳ ಪೈಕಿ ಹೊದಿಕೆ ಮತ್ತು ಆರ್ದ್ರತೆಯ ಬಗ್ಗೆ ಹಿಂದಿನ ಅಧ್ಯಾಯಗಳಲ್ಲಿ ಓದಿರುವಿರಿ. ಈಗ ಬಹುಮುಖ್ಯ ಅಂಶವಾದ ಜೀವಾಮೃತದ ಬಗ್ಗೆ ಇಲ್ಲಿ ವಿಸ್ತಾರವಾದ ಮಾಹಿತಿಯಿದೆ.