ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದೀಕ್ಷಿತರ ಕೀರ್ತನೆಗಳ ಸಂಗ್ರಹ

ಮುತ್ತುಸ್ವಾಮಿ ದೀಕ್ಷಿತರ ಕೀರ್ತನೆಗಳ ಸಂಗ್ರಹ ಈ ಕೊಂಡಿಯಲ್ಲಿದೆ (http://tributes.sangeethapriya.org/dikshithar/downloads/krithis.html). ಅನೇಕ ಸಂಗೀತ ವಿದ್ವಾಂಸರು ಹಾಡಿದ್ದಾರೆ. ಕೆಲವು ಕೊಂಡಿಗಳು ಕೆಲಸ ಮಾಡುವುದಿಲ್ಲ ಅನ್ನಿಸುತ್ತದೆ. ಒಟ್ಟಾರೆ ಸಂಗ್ರಹ ತುಂಬಾ ಚೆನ್ನಾಗಿದೆ. ಎಲ್ಲ ಹಾಡುಗಳನ್ನು ಇಳಿಸಿಕೊಂಡು DVD ಮಾಡಿದರೆ ಇನ್ನು ಉತ್ತಮ.

ಸರಣಿ ೨ - ಡಾ!! ಎಚ್. ನರಸಿಂಹಯ್ಯ - ವಿಜ್ನಾನ ಮತ್ತು ಸಮಾಜದಲ್ಲಿನ ಪಾತ್ರ

ವಿಜ್ಞಾನದ ಯಾವುದೇ ವಿಭಾಗವೂ ಸಮಾಜದ ಒಳಿತಿಗಾಗಿ ಉಪಯೋಗಕ್ಕೆ ಬರಬಲ್ಲದು. ಅನೇಕ ಕ್ಷೇತ್ರಗಳಲ್ಲಿ ರಸಾಯನಶಾಸ್ತ್ರದ ಬಳಕೆ ಕಂಡು ಬರುತ್ತದೆ. ರಾಸಾಯನಿಕ ಕ್ರಿಯೆ ಇಲ್ಲದ ಕಾರ್‍ಯಗಳು ಅಪರೂಪ. ಜೀವನವೇ ಬಹುಪಾಲು ರಸಾಯನಶಾಸ್ತ್ರವಾಗಿ ಕಂಡುಬರುತ್ತದೆ.

home computing services ಎಂಬ ಬಿ.ಎಸ್.ಎನ್.ಎಲ್‌ನ ಜಾಹೀರಾತಿನ ಪ್ರಹಸನ

ಇವತ್ತು TOI ನ ಎರೆಡನೇ ಪೇಜಿನಲ್ಲಿ
ಬಿ.ಎಸ್.ಎನ್.ಎಲ್ ನಿಂದ ಒಂದು ಜಾಹೀರಾತು
ಕೇವಲ 2999ಗೆ ಬುಕ್ ಮಾಡಿ ಎಂಬುದು
ಕುತೂಹಲಗೊಂಡು ಅವರು ಕೊಟ್ಟಿರುವ ಕಸ್ಟಮರ್ ಸರ್ವೀಸ್ ನಂಬರ್‌ಗೆ ಫೋನ್ ಮಾಡಿದರೆ
ನಮಗೇನು ವಿಷಯ ಗೊತ್ತಿಲ್ಲ ಎಂಬ ಉತ್ತರ . ಹಾಗೆ ಮೂರು ಕಡೆಗೆ ಫೋನ್ ಮಾಡಿದರೂ ಅದೇಉತ್ತರ
ಕೊನೆಗೆ ವೆಬ್ಸಟ್ ತೆರೆದರೆ ಅಲ್ಲೂ ಅದರ ಬಗ್ಗೆ ಯಾವುದೇ ಚಕಾರವಿಲ್ಲ

ಮರೆ, ಮಱೆ

ಮರೆ (ನಾಮಪದ)= ಒಂದು ಜಾತಿಯ ಜಿಂಕೆ. ಮರೆ=ನಂಕು, ನ್ಯಂಕು ಅಂದರೆ ಒಂದು ಜಾತಿಯ ಜಿಂಕೆಯೆನ್ನುತ್ತದೆ ಹಲಾಯುಧನ ಅಭಿಧಾನರತ್ನಮಾಲಾ. ಶಬರಶಂಕರವಿಳಾಸದಲ್ಲಿ ಕಾೞ್ಮರೆ=ಕಾಡ್+ಮರೆ=ಕಾಡು ಜಿಂಕೆ. ಮರೆಯಡಗು=ಮರೆಯ=ಜಿಂಕೆಯ + ಅಡಗು= ಮಾಂಸ. ಹಿರಿದಹ ಮರೇಮೃಗ. ಇತ್ಯಾದಿ ಶಬ್ದಗಳು ದೊರೆಯುತ್ತವೆ.

ಚಾಕ್-ಓ-ಬಾಮಾ - ಹೊಸ ಅಧ್ಯಕ್ಷರ ಮುಖವಿರುವ ಹೊಸ ಚಾಕಲೇಟು

ನಿಯೋಪಾಲಿಟನ್ ಪ್ರಿಂಟಿಂಗ್ ಅಂಡ್ ಕಂಪನಿ - ಹೆಸರು ಕೇಳಿದರೆ ಏನೆನ್ನಿಸುತ್ತದೆ? ಯಾವುದೋ ಒಂದು ಮುದ್ರಣ ಅಥವಾ ಪ್ರಕಾಶನ ಸಂಸ್ಥೆ ಇರಬಹುದೆಂದೆನ್ನಿಸುತ್ತದೆ ಅಲ್ಲವೇ. ಸರಿ, ಅಮೇರಿಕಾದ ಕ್ಯಾಲಿಫೋರ್ನಿಯಾದ ನೆವಾರ್ಕ್ ನಗರದಲ್ಲಿರುವ ಈ ಸಂಸ್ಥೆ ವಿಶೇಷ ಚಾಕಲೇಟುಗಳನ್ನು ತಯಾರಿಸಿ ನೀಡುವ ಕೆಲಸವನ್ನೂ ಮಾಡುತ್ತದೆ.

ಗ್ರಹಣ ಹಿಡಿದಿದೆ ಎನ್ನ ....flexible ಭಜನೆ!

ಗ್ರಹಣ ಹಿಡಿದಿದೆ ಎನ್ನ | ಮನಕೆ |
ಗ್ರಹಣ ಹಿಡಿದಿದೆ || ಪ||

ಶಾಲೆಕಾಲೇಜೆಂಬ ಗ್ರಹಣ , ನೌ-
ಕರಿಚಾಕರಿಯ ಗ್ರಹಣ
ಗಳಿಕೆಉಳಿಕೆಯ ಗ್ರಹಣ ||೧||

ಪ್ರೀತಿಪ್ರೇಮವೆಂಬೊ ಗ್ರಹಣ ,ಮ-
ಡದಿಮಕ್ಕಳೆಂಬೊ ಗ್ರಹಣ
ಬಂಧುಬಳಗವೆಂಬೊ ಗ್ರಹಣ ||೨||

ಟೀವಿಕಂಪ್ಯೂಟರ್ರೆಂಬೋ ಗ್ರಹಣ ,ಮೊ-
ಬೈಲು ಇಂಟರ್ನೆಟ್ಟ ಗ್ರಹಣ
ಸಿನಿಮಾ ಸಂಗೀತೆಂಬೋ ಗ್ರಹಣ ||೩||

ನಾನೆ ಜಾಣನೆಂಬ ಗ್ರಹಣ, ಅವ-

ವಿಚಾರ ಮಂಟಪ: ಬರೆದ ನಾಲ್ವರಿಗೂ ಬಹುಮಾನಗಳು!

ವರ್ಷದ ಮೊದಲ ದಿನ ಬಂದ ಆಲೋಚನೆಯನ್ನು ಅಂದೇ ವಿಚಾರ ಮಂಟಪದಲ್ಲಿ ಮತ್ತು ನನ್ನ ಬ್ಲಾಗುಗಳಲ್ಲಿ ಪ್ರಕಟಿಸಿ, ಎರಡು ವಿಷಯಗಳಿಗೆ ಲೇಖಕರಿಂದ ಲೇಖನಗಳನ್ನು ಆಹ್ವಾನಿಸಿದ್ದೆ. ಇದಕ್ಕೆ ಸಾಕಷ್ಟು ಪ್ರಚಾರ ಸಿಗಲಿ ಎಂದು ಒಂದೆರಡು ಗ್ರೂಪ್‌ಗಳಿಗೆ, ಸಮುದಾಯ ಬ್ಲಾಗ್‌ಗಳಿಗೆ ಮತ್ತು ಪೋರ್ಟಲ್‌ಗಳಿಗೆ ಕಳುಹಿಸಿದ್ದೆ.

ಬಾ ಬಾರೋ ಚಂದ್ರಮಾ!!!!!

ಬಾ ಬಾರೋ ಚಂದ್ರಮಾ!!!

ಇರುಳಲ್ಲಿ ಬೆಳಕು ಚೆಲ್ಲಿ
ನೀಲಿಯಾಗಸದಲ್ಲಿ ಬೆಳ್ಳಿ ತಳ್ಳಿ
ಶಾಂತತೆಯ ಹುಣ್ಣಿಮೆ ರಾತ್ರಿಯಲ್ಲಿ
ಬಾ ಬಾರೋ ಚಂದ್ರಮಾ ಬಾನಿನಲ್ಲಿ...........೧

ನೋಡುತಿರೆ ನಿನ್ನ, ನನ್ನದಾಗುವುದು ಚೇತನಾ
ನಲಿವಿನ ನಯನಾ, ಗೆಲುವಿನ ಗಮನಾ
ಸುಂದರ ಕವನಾ, ಸುಮಧುರ ಗಾಯನಾ
ಬಾ ಬಾರೋ ಚಂದ್ರಮಾ ಚಂದನಾ...........೨

ಬರಡೆಂಬ ಬಿಸಿಲಿಂದ ಬಳಲಿದ
ಬಾಳಿಗೆ ಬಾರದೇ?, ನೀ ಬಿಳಿಯಾದ

ಬೆಳಗಾವಿ ನಮ್ಮದು ಅನ್ನೋಕೆ ಇನ್ನೊಂದು ಪ್ರೂಫ್ !

ಬೆಳಗಾವಿ ನಮ್ಮದು ಅನ್ನೋಕೆ ಇತಿಹಾಸದ ದಿನದಿಂದ ಹಿಡಿದು ಇವತ್ತಿನವರೆಗೆ ಅಸಂಖ್ಯ ಸಾಕ್ಷಿ ಸಿಕ್ಕುತ್ತೆ. ಅಂತರ್ಜಾಲದಲ್ಲಿ ಸುಮ್ಮನೆ ಈ ವಿವಾದದ ಬಗ್ಗೆ ನೋಡೋವಾಗ ಈ ಲಿಂಕ್ ಸಿಕ್ಕಿತು.

ಗಣರಾಜ್ಯೋತ್ಸವದ ಶುಭಾಶಯಗಳು

ಪ್ರತಿ ಭಾರತೀಯನಿಗೆ ಸ್ವಾತಂತ್ತ್ಯದ ಸವಿಯನನುಭವಿಸಲು ಹಾಗೂ ಇಡೀ ವಿಶ್ವಕ್ಕೆೆ ನಮ್ಮ ವಿವಿಧತೆಯಲ್ಲೂ ಒಗ್ಗಟ್ಟಿನ ಶಕ್ತಿಯನ್ನು ತೋರಿಸಿರುವ ಆಡಳಿತದ ರೂವಾರಿಗಳಾಗಿ ಬಲಿದಾನ ಮಾಡಿದ ಹೋರಾಟಗಾರರಿಗೆ ಹಾಗೂ ನಾಯಕರಿಗೆ ನನ್ನ ನಮನ.