ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

"Urbanlads" ಎದುರಿಗೆ ನಿಂತ "DSR" !!!!!!!!!!!

Urbanlads ಏನು ಅಂತ ನಿಮಗೆಲ್ಲರಿಗೂ ತಿಳಿದಿದೆ. ಇದು ಕಂಗ್ಲಿಷ್ ಹಿಪ್ ಹಾಪ್ ಹಾಡುಗಳನ್ನು ತಂದು ಕೊಟ್ಟ ಒಂದು ಆಲ್ಬಮ್. ಇಷ್ಟು ದಿನ ಇವರ ವೃತ್ತಿಗೆ ಯಾವ ಎದುರಾಳಿಗಳು ಇರಲಿಲ್ಲ. ಆದರೆ ಈಗ, ಹೊಸದಾಗಿ "DSR" ಬರುತ್ತಿದೆ. DSR ಎಂದರೆ "DOWN SOUTH RYTHMS". ಇದು ಕೂಡ ಕಂಗ್ಲಿಷ್ ಹಾಡುಗಳನ್ನು ತರುತ್ತಿರುವ ಕಾಲೇಜ್ ಹುಡುಗರ ಇನ್ನೊಂದು ಆಲ್ಬಮ್.

ತಪಸ್ಸೆಂಬ ತಾಪ

‘ತಪಸ್ಸು’ ಎಂಬ ಪದವನ್ನು ನಿತ್ಯದ ಮಾತುಗಳಲ್ಲಿ ನಾವೆಲ್ಲ ಬಳಸುತ್ತಲೇ ಇರುತ್ತೇವೆ. ತಪಸ್ಸು ಎಂಬ ಪದ ‘ತಪ್’ ಧಾತುವಿನಿಂದ ನಿಷ್ಪನ್ನವಾದ ಪದ. ಅಂದರೆ ಕಷ್ಟ ಪಡು ಎಂದರ್ಥ. ಒಂದು ಉದ್ದೇಶ ಸಾಧನೆಗಾಗಿ ದೈಹಿಕ ಕಾಮನೆಗಳನ್ನು, ಲೌಕಿಕದ ಸುಖಸವಲತ್ತುಗಳನ್ನು ಸ್ವಯಂಪ್ರೇರಣೆಯಿಂದ ಬಿಟ್ಟುಕೊಟ್ಟು ಕಷ್ಟಕ್ಕೆ ಒಡ್ಡಿಕೊಳ್ಳುವುದು ತಪಸ್ಸು. ಹಿಮಾಲಯದ ತಪ್ಪಲಿಗೋ, ಗುಹೆಯ ಏಕಾಂತಕ್ಕೋ ತೆರಳಿದ ಮಾತ್ರಕ್ಕೇ ತಾಪಕ್ಕೆ ಸಿಲುಕಿದವರೆಲ್ಲ ತಪಸ್ವಿಗಳಾಗುವುದಿಲ್ಲ. ಸಂಕಲ್ಪವನ್ನು ಸ್ವಶಕ್ತಿಯ ಮೂಲಕ ಸಿದ್ಧಿಯ ನೆಲೆಗೆ ಒಯ್ಯುವುದು ತಪಸ್ಸಿನ ಉದ್ದೇಶ. ಅದರ ಪರಿಕಲ್ಪನೆ ವೇದೋಪನಿಷತ್ತುಗಳ ಕಾಲದಿಂದಲೂ ಪರಂಪರೆ ನಮಗೆ ಕಲಿಸುತ್ತ ಬಂದಿದೆ. ಮನಸ್ಸು ಮತ್ತು ಇಂದ್ರಿಯಗಳ ಮೇಲಿನ ಅಪಾರ ಹಿಡಿತವೇ ತಪಸ್ಸಿನ ಮೂಲ. ಪಂಚೇದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮಗಳು ಲೌಕಿಕದ ವಿವಿಧ ಸಂವೇದನೆಗಳನ್ನು ಮೊಗೆಮೊಗೆದು ಮನಸ್ಸಿನ ಕಣಜದೊಳಗೆ ತುಂಬುತ್ತಲೇ ಇರುತ್ತವೆ. ಹಾಗೆ ಸಿಕ್ಕ ಸಂವೇದನೆಗಳನ್ನು ಅನುಭವಿಸುವಂತೆ ಮನಸ್ಸು ದೇಹವನ್ನು ಪ್ರಚೋದಿಸುತ್ತದೆ. ಪ್ರಲೋಭನೆಗೆ ಒಳಗಾದಾಗ ಸಹಜವಾಗಿ ಚಂಚಲವಾಗುವ ಮನಸ್ಸು ದೇಹದ ಮೇಲಿನ ಹಿಡಿತವನ್ನು ಕಳೆದುಕೊಳ್ಳುತ್ತದೆ. ಆಕರ್ಷಣೆಯ ಸುಳಿಗೆ ಸಿಕ್ಕ ದೇಹ ಉತ್ಕಂಠಿತತೆಯ ಮೋಹದಲ್ಲಿ ಪರಿವೆಯ ಇರವನ್ನೇ ಮರೆಮಾಚುತ್ತದೆ. ಸಿದ್ಧಿ ಮತ್ತು ಸಾಧನೆಯ ಉದ್ದೇಶವಿದ್ದವರು ಸಹಜವಾಗಿ ಲೌಕಿಕ ಒಡ್ಡುವ ಆಮಿಷಗಳಿಂದ ಹೊರಗಿರಲು ಪ್ರಯತ್ನಿಸುತ್ತಲೇ ಇರುತ್ತಾರೆ.

ಪ್ರೀತಿ ನೀನಿಲ್ಲದೆ

ಪ್ರೀತಿ ನೀನು ಹೇಗೆ ಶುರು ಆದೆಯೋ ಗೊತ್ತೇ ಆಗಲಿಲ್ಲ. ಹುಟ್ಟಿದ ದಿನದಿಂದ ತಂದೆಯ ಪ್ರೀತಿ ಸಿಗಲಿಲ್ಲ. ಅಮ್ಮನ ನೋವು, ಅಣ್ಣನ ನಿರಾಸಕ್ತಿ, ಬಡತನದಿಂದಾಗಿ ಸ್ನೇಹಿತರಿಲ್ಲದೆ ಬೆಳೆದ ನನಗೆ ಮರುಭೂಮಿಯಲ್ಲಿ ಓಯಸೀಸ್ ನಂತೆ ಬಂದೆ. ನನ್ನಲಿದ್ದ ಪ್ರತಿಭೆಯನ್ನು ಹೊರಗೆಳೆದೆ. ನನ್ನ ಶಕ್ತಿಯ ಮೂಲವಾದೆ. ನನ್ನೆಲ್ಲಾ ಯಶಸ್ಸಿಗೆ ಕಾರಣವಾದೆ.

ನಿಮೀಲನ

ಮುಕ್ಕಾಲು ಮುಚ್ಚಿವೆ ಕಾಲು ತೆರೆದಿವೆ
ಬೆಳಗಾನೆದ್ದ ಕನ್ನಡಿಯಲ್ಲಿನ ಕಣ್ಣುಗಳು
ಸ್ವಲ್ಪ ಮುಂಚೆ ಇದ್ದದ್ದು ನೆನಪೋ - ಕನಸೋ ?
ಅವಕ್ಕೇನು ಧಾಡಿ...!! ಬಚ್ಚಲಲ್ಲಿ ಬಿದ್ದಿರುವ
ಸೋಪಿನ ತುಂಡುಗಳು, ಶ್ಯಾಂಪು ಸ್ಯಾಷೆಗಳು,
ಬೆಂಡಾಗಿರುವ ಬ್ರಶ್ಶ್ಯುಗಳು.

ಸಿಂಕಿನಲ್ಲಿ ಬಿದ್ದಿರುವ ಪಾತ್ರೆಗಳು ಒಣಗಿವೆ
ಮತ್ಸರ, ಸಿಟ್ಟು, ಅಸಹನೆ ಜೀವರಕ್ತವಿಲ್ಲದೆ

ಕಳೆದ ಎರಡುವಾರಗಳಲ್ಲಿ ನಾನು ಓದಿದ ಪುಸ್ತಕಗಳು

೧) ಮಾಸ್ತಿ ವೆಂಕಟೇಶ ಅಯ್ಯಂಗಾರರು ಮಹಾಭಾರತದ ಪಾತ್ರಗಳು , ಕಥೆ , ಮತ್ತು ಸಂದೇಶದ ವಿಶ್ಲೇಷಣೆ ಮಾಡಿರುವ 'ಭಾರತತೀರ್ಥ ' ಎ೦ಬ ಪುಸ್ತಕವನ್ನು ಡಿಜಿಟಲ್ ಲೈಬ್ರರಿಯಿಂದ ಇಳಿಸಿಕೊಂಡು ಓದಿದೆ . ಇದು ಓದಲೇಬೇಕಾದ ಒಳ್ಳೇ ಪುಸ್ತಕ . ಇಲ್ಲಿ ಸುಮಾರು 350 ಪುಟಗಳಿವೆ. ಇಲ್ಲಿ ಧರ್ಮ ಮತ್ತು ನಾವು ಬಾಳಬೇಕಾದ ರೀತಿಯ ಬಗ್ಗೂ ಇದೆ.

ಮಿಸ್ಸಿಂಗ್ ಯೂ...

ನೀನಿಲ್ಲದೆಯೂ ಖುಷಿಯಾಗಿರಲು ಸಾಧ್ಯ
ಎಂಬ ಪಾಠವನು ಕಲಿಯಲಾಗದೇ
ಸುಮ್ಮನೆ ಹಟ ಮಾಡುತಿಹುದು
ಪುಂಡ ಹುಡುಗನಂತಹ ಸಂಜೆ…

ಯಾವಾಗಲೂ ತನ್ನನ್ನು
ನಿನ್ನ ಮುದ್ದು ಮೊಗಕೆ ಹೋಲಿಸಿ
ನಿರ್ಲಕ್ಷ್ಯ ಮಾಡುತ್ತೇನೆಂದು ನೊಂದು
ಮುನಿಸಿಕೊಂಡಿಹನು ಚಂದಿರ…

ನೀನೆಲ್ಲೋ ದೂರದಲ್ಲಿ
ನಾನೆಲ್ಲೋ ಈ ಮೂಲೆಯಲ್ಲಿ
ನಡುವಿನ ದೂರದಂತಷ್ಟಿರುವ
ಪ್ರೀತಿಯನು ಕಂಡು

ಇಂದಿನ ದಿನವೇ ಶುಭದಿನವು

ಇಂದಿನ ದಿನವೇ ಶುಭದಿನವು
ಇಂದಿನ ವಾರ ಶುಭವಾರ
ಇಂದಿನ ತಾರೆ ಶುಭತಾರೆ
ಇಂದಿನ ಯೋಗ ಶುಭಯೋಗ
ಇಂದಿನ ಕರಣ ಶುಭ ಕರಣ
ಇಂದು ಪುರಂದರ ವಿಟ್ಠಲ ರಾಯನ
ಸಂದರ್ಶನ ಫಲವೆಮಗಾಯಿತು!

ಈ ಉಗಾಭೋಗದಲ್ಲಿ ಪುರಂದರದಾಸರು ಹೇಳೋದು ನಿಜವೇ. ದೇವರನ್ನು ನೆನೆಯೋದಕ್ಕೆ ಪಂಚಾಂಗ ನೋಡ್ಬೇಕಿಲ್ಲ. ಯಾಕಂದ್ರೆ, ಎಂದು ನಾವು ಹರಿಯನ್ನು ನೆನ್ನೆಯುತ್ತೇವೋ ಅವತ್ತಿನ ದಿನ ಚೆನ್ನಾಗೇ ಆಗುತ್ತೆ ಅನ್ನೋದು ಪುರಂದರದಾಸರ ಅಭಿಪ್ರಾಯ. ಹಾಗೇ, ಪುರಂದರದಾಸರಂತಹ ಮಹನೀಯರನ್ನ ನೆನೆಯೋದಕ್ಕೆ ಕೂಡ, ಯಾವ ದಿನವಾದರೂ ಒಳ್ಳೇದೇ. ಆದರೂ, ಅಂಥವರನ್ನ ಅವರು ಹುಟ್ಟಿದ ದಿನದಂದೋ, ಅಥವಾ ಅವರ ಜೀವನದ ಯಾವುದಾದರೂ ಮಹತ್ವದ ಘಟನೆ ನಡೆದ ದಿನ ನೆನೆಸಿಕೊಳ್ಳೋದು ಸಂಪ್ರದಾಯವಾಗಿ ಬಂದಿದೆ. ಅಂತಹ ದಿನಗಳು ನಮಗೆ ಇಂಥಾ ಹಿರಿಯ ಜೀವಗಳು ತಮ್ಮ ಬಾಳಿನಲ್ಲಿ ನಡೆದು ತೋರಿದ ದಾರಿಯನ್ನೊಮ್ಮೆ ಮತ್ತೊಮ್ಮೆ ವಿವರವಾಗಿ ನೋಡೋದಕ್ಕೆ ಒಂದು ಅವಕಾಶ ಕೊಡುತ್ತವೆ. ಇವತ್ತು ಪುರಂದರ ದಾಸರ ಆರಾಧನೆ ( ಜನವರಿ ೨೫, ೨೦೦೯, ಪುಷ್ಯ ಬಹುಳ ಅಮಾವಾಸ್ಯೆ) ಆಗಿರೋದ್ರಿಂದ, ಅವರ ಕೆಲವು ಮಾತುಗಳನ್ನೋ ಓದೋದು, ಅಥವಾ ಕೇಳೋದು ಒಳ್ಳೇದು ಅಂತ ನನ್ನನಿಸಿಕೆ.

ಗುಂಡಿನ ಮತ್ತೇ ಗಮ್ಮತ್ತು - ಗುಂಡಿನೊಳಕ್ಕೇ ಹಾವಿದ್ದರೆ? ಆಪತ್ತು

ಮದ್ಯ ಒಂದು ರೀತಿಯ ವಿಷವೆನ್ನುವುದು ಎಲ್ಲರಿಗೂ ಗೊತ್ತು. ನಾಗರ ಹಾವು ಅತ್ಯಂತ ವಿಷಸರ್ಪವೆನ್ನುವುದೂ ಗೊತ್ತು. ಆದರೆ ಆ ಮದ್ಯದೊಳಕ್ಕೆ ನಾಗರಹಾವೊಂದು ಇದ್ದರೆ? ಅಬ್ಬಬ್ಬಾ, ನೆನೆಸಿಕೊಂಡರೇ ಮೈ ಜುಮ್ಮೆಂನ್ನುವ ಈ ಪರಿ ವಿಯೆಟ್ನಾಮಿನ ಜನಪ್ರಿಯ ಮಾದಕದ್ರವ್ಯ.