ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇ೦ದು ನೇತಾಜಿ ಸುಭಾಷ್ ಚ೦ದ್ರ ಬೋಸ್ ನ ಜನ್ಮ ದಿನ - ಸುಭಾಷ್ ನೆನಪಿನಲ್ಲಿ ಒ೦ದೆರಡು ಮಾತು

Subhas Chandra Bose ಅದ್ಯಾಕೋ ನಮ್ಮ ದೇಶದಲ್ಲಿ ಮಹಾತ್ಮ ಗಾ೦ಧೀ ಬಿಟ್ಟೂ ಬೇರೆ ಯಾರು ದೊಡ್ಡ ನಾಯಕರು ಹುಟ್ಟೇ ಇಲ್ಲಾ ಅನ್ನುವ ವಾತಾವರಣ ಸೃಷ್ಟಿಯಾಗಿದೆ. ಯಾರಿಗಾದರೂ "ಸುಭಾಷ್ ಚ೦ದ್ರ" ರ ಜನ್ಮ ದಿನ ಯಾವುದು ? ಅ೦ದರೆ ಗೊತ್ತಿಲ್ಲಾ ಅ೦ತಾರೆ.

ಚತುರ್ಗ್ರಹಯುತಿ

೨೩ ಫೆಬ್ರುವರಿ ೨೦೦೯ಱ ಬೆಳಿಗ್ಗೆ ೬.೦೦ಱಿಂದ ೬.೨೦ಱವರೆಗೆ ಪೂರ್ವದಿಗಂತದಲ್ಲಿ ಮಂಗಳ(ಕುಜ), ಬುಧ, ಗುರುಗಳೊಡನೆ ಚಂದ್ರ ಒಟ್ಟು ನಾಲ್ಕುಗ್ರಹಗಳಕೂಟ ನೋಡಿ.

ನಿಲ್ಲಿಸು ವನಮಾಲೀ, ನಿನ್ನ ಮುರಳಿಯಾ,

ನಿಲ್ಲಿಸು ವನಮಾಲೀ, ನಿನ್ನ ಮುರಳಿಯಾ,

ಕೊಳಲ ಉಲಿಯ ಕೇಳಿದರೆ-
ಎದೆಯದುರಿ ದ್ರವಿಸುವುದು,
ವಿರಹದುರಿ ಲೌಕಿಕವ
ಚಣಕಾಲ ಮರೆಸುವುದು,
ಲೋಕ ನಿಂದೆಗೆ ಹೆದರಿ
ಹುದುಗಿದ್ದ ನೆನಪುಗಳೆಲ್ಲ
ಅಲೆಯಂತೆ ಅಪ್ಪಳಿಸಿ
ನಿನ್ನ ನೆನಪಲ್ಲೇ ನೆನೆಯುವವು,
ಮಿಲನೋತ್ಸವದ ಮತ್ತಲ್ಲಿ
ಚಿತ್ತ ಉನ್ಮತ್ತವಾಗುವುದು.

ನಿಲ್ಲಿಸು ವನಮಾಲೀ, ನಿನ್ನ ಮುರಳಿಯಾ, , ,

ಭಾವರಾಗದ ಬಯಕೆ

ಸದ್ಗುರು ಮತ್ತು ಕಳ್ಳ - ಓಶೋ ಹೇಳಿದ್ದು

ಒಮ್ಮೆ ಕಳ್ಳನೊಬ್ಬ ಸದ್ಗುರುವಿನ ಕೋಣೆಯನ್ನು ಹೊಕ್ಕ. ಬೆಳದಿ೦ಗಳ ರಾತ್ರಿ. ಕಳ್ಳ ತಿಳಿಯದೆ ಆ ಕೊಣೆಯನ್ನು ಹೊಕ್ಕ. ಯಾಕೆ೦ದರೆ ಸದ್ಗುರುವಿನ ಕೋಣೆಯಲ್ಲಿ ಕಳ್ಳನಿಗೇನು ಸಿಗುವುದು? ಕಳ್ಳ ಸುತ್ತಲೂ ಹುಡುಕಿ ನೋಡಿದ. ಏನೇನೂ ಇಲ್ಲದಿರುವುದನ್ನು ಕ೦ಡು ಅಚ್ಚರಿಗೊ೦ಡ. ಆಗ, ಕೈಯಲ್ಲಿ ಮೋ೦ಬತ್ತಿಯನ್ನು ಹಿಡಿದು ಸದ್ಗುರು ಕೋಣೆಯೊಳಗೆ ಬ೦ದರು.

ಹಳೆಯ ತುಣುಕುಗಳು !

ಗಾಂಧೀ ಸಹೋದರರು!

ಆತ,
ರಾಜಕೀಯದಲ್ಲಿದ್ದವನು
ವಿಮಾನವೇರಿ ಸತ್ತ;
ಈತ,
ವಿಮಾನದಲ್ಲಿದ್ದವನು
ರಾಜಕೀಯಕ್ಕಿಳಿದು .. .. ?!
*-*-*-*-*-*--*-*-*
೧೩ ಆಗಷ್ಟ್ ೧೯೮೧

(ಈ ಅಪೂರ್ಣ ಚುಟುಕ ೨೧ ಮೇ ೧೯೯೧ ರಂದು (ಅ)ನಿರೀಕ್ಷಿತವಾಗಿ ಪೂರ್ಣಗೊಂಡಿತು)

ಸ್ವಾರ್ಥಿ - ನಿಸ್ವಾರ್ಥಿ !

ನನ್ನಮ್ಮ ನನಗೆ ಕಲಿಸಿದ
ಮೊದಲಕ್ಷರ ಅ (ಮ್ಮ),
ನಮ್ಮ ಮೇಡಂ ಕಲಿಸಿದ
ಮೊದಲಕ್ಷರವೂ ಅ,
ಅಲ್ಲಾ, ನಮ್ಮಮ್ಮ

ಬಾಲ್ಯಕಾಲದನೆನಪು

ನೆನಪಿದೆಯೇನಮ್ಮಾ....
ಹಬ್ಬಕೆಂದು ಹೊಸಬಟ್ಟೆತಂದು
ಇದುಹರಿಯುವವರೆಗೂ
ಬೇರೆ ಬಟ್ಟೆ ಕೊಡಿಸುವುದಿಲ್ಲವೆಂದಾಗ
ಸಾಯಂಕಾಲದಹೊತ್ತಿಗೇ
ಕಲ್ಲಿನಲ್ಲಿ ಕುಟ್ಟಿ ಹರಿದುತಂದು
ಈಗ ಹೊಸಬಟ್ಟೆ ಕೊಡಿಸೆಂದಾಗ
ನೀನು ಅವಾಕ್ಕಾದದ್ದು

ನೆನಪಿದೆಯೇನಮ್ಮಾ....
ಮನೆಯಾಟವಡಲು ಹೋಗಿ
ಅಡಿಗೆ ಮಾಡಲು ಮೂರುಕಲ್ಲಿಟ್ಟು
ಪುಳ್ಳೆಯಿಟ್ಟಾಗ ನಿಜವಾಗಲೂ ಅದು

ನಿಟ್ಟೆಯಲ್ಲಿ ಗ್ನು/ಲಿನಕ್ಸ್ ಹಬ್ಬ - ೩

ಕನ್ನಡಿಗರಿಗೆ ಗ್ನು/ಲಿನಕ್ಸ್ ಹತ್ತಿರ ಆಗಬೇಕು, ಅವರು ಸ್ವತಂತ್ರ ತಂತ್ರಾಂಶಗಳನ್ನ ಬಳಸೋದು ಕಲೀಬೇಕು, ತಂತ್ರಾಂಶ ಸ್ವಾವಲಂಬನೆಯನ್ನ ಹೇಗೆ ಸಾಧ್ಯವಾಗಿಸ್ಕೋಬೇಕು ಅಂತ ತಿಳೀಬೇಕು, ಪೈರಸಿಗೆ ಮೊರೆ ಹೋಗದೆ ಇತರರಿಗೂ ಗ್ನು/ಲಿನಕ್ಸ್ ಸ್ವಾತಂತ್ರ್ಯದ ಕಂಪನ್ನು ಹರಿಸಲಿಕ್ಕೆ  ಎಲ್ಲರೂ ಕೈಜೋಡಿಸ್ಬೇಕು. ಈ ಉದ್ದೇಶಗಳನ್ನ ಇಟ್ಟುಕೊಂಡು ಶುರುವಾದ ಗ್ನು/ಲಿನಕ್ಸ್ ಹಬ್ಬ ಮತ್ತೆ ನಿಮ್ಮನ್ನೆಲ್ಲ ಮತ್ತೊಂದು ತಂತ್ರಜ್ಞಾನ ಔತಣಕೂಟಕ್ಕೆ  ಆಹ್ವಾನಿಸ್ತಿದೆ. ಈ ಬಾರಿ ಮಂಗಳೂರಿನಿಂದ ೬೦ ಕಿ.ಮೀ ದೂರದ ನಿಟ್ಟೆಯಲ್ಲಿ  ನಮ್ಮೆಲ್ಲರ ಭೇಟಿ.

ಬೆಂಗಳೂರು, ಮೈಸೂರು ಈ ಎರಡು ನಗರಗಳಲ್ಲಿ ನೆಡೆದ ಗ್ನು/ಲಿನಕ್ಸ್ ಹಬ್ಬದಲ್ಲಿ ನೀವು ತೋರಿದಉತ್ಸಾಹ, ನಮಗೆ ಸ್ಪೂರ್ತಿಯಾಗಿದ್ದು, ಪಶ್ಚಿಮ ಘಟ್ಟಗಳು, ದೇವಸ್ಥಾನಗಳು, ಕಾರ್ಕಳದ ಗೊಮ್ಮಟೇಶ್ವರ, ಕರಾವಳಿಯ ಕಡಲತೀರ, ಬಂದರು, ಕೈಗಾರಿಕೆಗಳಿಂದ ಕರ್ನಾಟಕದ ಸಮೃದ್ದಿಯನ್ನ ಪ್ರತಿಬಿಂಬಿಸುವ ಈ ಭಾಗಕ್ಕೆ  NMAM Inst of Tech, ನಿಟ್ಟೆ ರವರು ನಮ್ಮನ್ನೆಲ್ಲ ಆಹ್ವಾನಿಸಿದ್ದಾರೆ. ಐ.ಟಿ ಯಲ್ಲೂ ಈ ಪ್ರದೇಶ ಹಿಂದೇನೂ ಉಳಿದಿಲ್ಲ. ಇನ್ಪೋಸಿಸ್ ಆಗಲೇ ಇಲ್ಲಿ ತನ್ನ ಶಾಖೆಯನ್ನ ಹೊಂದಿದೆ. ಈ ಬಾರಿಯ ಗ್ನು/ಲಿನಕ್ಸ್ ಹಬ್ಬ ನೆಡೆಸಲು ನಮ್ಮೊಡನೆ ಕೈ ಜೋಡಿಸಿರುವ  ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ
ಮಹಾವಿದ್ಯಾಲಯ(ನಿಟ್ಟೆ) ಈಗಾಗಲೇ ಅನೇಕ ಅಂತರ್ ರಾಷ್ರ್ಟೀಯ ಸಮ್ಮೇಳನಗಳನ್ನ ಆಯೋಜಿಸಿಕೊಂಡು ಬಂದಿದೆ.

ಫೆಬ್ರವರಿ ೭ಶನಿವಾರ,  ನಿಟ್ಟೆಯಲ್ಲಿ ISE ವಿಭಾಗದವರು ಈ ಕಾರ್ಯಕ್ರಮವನ್ನು ನೆಡೆಸುವ ಹೊಣೆಯನ್ನ ಸಂಪದ ತಂಡದೊಂದಿಗೆ ಹಂಚಿಕೊಂಡಿದ್ದಾರೆ.  ಗ್ನು/ಲಿನಕ್ಸ್ ಬಗ್ಗೆ ತಿಳಿದವರು, ತಿಳಿಯದವರು, ಇದರ ಬಗ್ಗೆ ಹೆಚ್ಚಿನದನ್ನ ಕಲಿಯಲಿಕ್ಕೆ  ಆಸಕ್ತಿಯಿರುವವರು ನಮ್ಮೊಡನೆ ಮತ್ತೆ ಬೆರೆಯುತ್ತೀರಲ್ವಾ?

ವಿ.ಸೂ: (ಕಾರ್ಯಕ್ರಮಕ್ಕೆ ನೊಂದಾವಣೆಯನ್ನ ಸಂಪದದಲ್ಲಿ ಮತ್ತು habba.in ನಲ್ಲಿ ಅನುವು ಮಾಡಿಕೊಡಲಾಗುತ್ತದೆ ).

ನನ್ನ ಮೊದಲ ಬ್ಲಾಗ್ ಬರಹ

ನನ್ನ ಬ್ಲಾಗ್
ನಾನೂ ಬರೆಯಲು ಶುರು ಮಾಡೋಣ ಅಂತ ಅಂದ್ಕೊಂಡು ಬರೆಯಲು ಶುರು ಮಾಡಿದ್ದೀನಿ.
ಸಂಪದಿಗರೇ ನನ್ನ ಬರವಣಿಗೆಯ ಆಗು ಹೋಗುಗಳನ್ನು ತಿಳಿಸುವಿರಲ್ಲವೆ?.....
ಸಂಪದಿಗರ ಹೊಸ ಗೆಳತಿ
ಸೀತhttp://www.findyourfate.com/deathmeter/deathmtr.html

"Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!

ಕನ್ನಡದಲ್ಲಿ ಮೊದಲ ಬಾರಿಗೆ ಹಿಪ್ ಹಾಪ್ ಹಾಡು ಗಳನ್ನೂ (Urbanlads) ಮಾಡಿದ ನಮ್ಮ ಬೆಂಗಳೂರಿನ ಹುಡುಗರು ಈಗ "Bachelors" ಎಂಬ ಚಲನ ಚಿತ್ರ ಮಾಡಲು ಹೊರಟಿದ್ದಾರೆ. ಅವರಿಗೆ ಈ "Bachelors" ಅನ್ನುವ ಹೆಸರಿಗೆ ಬದಲು ಮತ್ತೊಂದು ಹೆಸರು ಬೇಕಂತೆ. ನಿಮ್ಮ ಪ್ರಕಾರ ಆ ಚಿತ್ರಕ್ಕೆ ಯಾವ ಹೆಸರನ್ನು ಕೊಡಬಹುದು?