ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹದಿನೆಂಟುಮತ್ತು...

ಬೆಳಗಿನ ಆಫೀಸಿಗೆ ಹೋಗುವ ಗಡಿಬಿಡಿಯಲ್ಲಿದ್ದ ಸುರೆಶ್ ಹೆಂಡತಿಯ ಮೇಲೆ ಸಿಡಿ ಮಿಡಿಗುಟ್ಟುತ್ತಿದ್ದ
ಯಾಕ್ರಿ ನನ್ನಮೇಲೆ ಕೋಪ ಮಾಡ್ಕೊಂಡಿದ್ದೀರಿ? ಮುಗ್ದವಾಗಿ ಕೇಳಿದಳು ರೂಪ ಗಂಡನನ್ನು
ಮತ್ತಿನ್ನೇನೆ ನೆನ್ನೆ ರಾತ್ರಿ ಪಾರ್ಟಿಗೆ ಹೋಗಿದ್ದೆವಲ್ಲಾ ಎಲ್ಲರೂ ನನ್ನನ್ನು ನೋಡಿ ಮುಸಿಮುಸಿ ನಗುತ್ತಿದ್ದರು

ನೀವು ಮನೋಹರ ಗ್ರಂಥಮಾಲೆಯ ಚಂದಾದಾರರೇ?

   

ಖ್ಯಾತ ನಾಟಕಕಾರ ಜಿ.ಬಿ.ಜೋಶಿ ("ಜಡಭರತ") ಯವರು ಸ್ಥಾಪಿಸಿದ, ಮನೋಹರ ಗ್ರಂಥಮಾಲೆ ಕನ್ನಡದ ಅತಿ ಹಳೆಯ ಪುಸ್ತಕ ಪ್ರಕಾಶನ ಸಂಸ್ಥೆಗಳಲ್ಲಿ ಒಂದು. ಕಳೆದ ವರ್ಷ ಇದಕ್ಕೆ ಅಮೃತ ಮಹೋತ್ಸವದ ಸಂಭ್ರಮ.

 

ಶಾಲ್ಮಲೆಯ ತಟದ ಛೋಟಾ ಮಹಾಬಳೇಶ್ವರದಲ್ಲಿ ಹಸಿರು ಉಸಿರಾದದ್ದು..

ವಿಶ್ವ ವಿದ್ಯಾಲಯಗಳ ಪಠ್ಯಕ್ರಮ, ಅಲ್ಲಿನ ಪರೀಕ್ಷೆಗಳು, ಫಲಿತಾಂಶ, ಪ್ರಮಾಣಪತ್ರಗಳು, ಸಂಶೋಧನೆ, ಪ್ರಾಧ್ಯಾಪಕರು, ಹಾಗೆಯೇ ಪಿ.ಎಚ್.ಡಿ ಪದವಿ, ಕ್ಯಾಂಪಸ್ ಪಾವಿತ್ರ್ಯತೆ ಇವುಗಳ ಮೌಲ್ಯ, ಭ್ರಷ್ಟತೆ, ಸಮಸ್ಯೆ, ಪರಿಹಾರಗಳ ಬಗ್ಗೆ ಜನ ‘ವಿಶ್ವ ವಿದ್ಯಾಲಯ ತಮಗೆ ಸಂಬಂಧಿಸಿದ್ದಲ್ಲ’ ಎನ್ನುವ ಧೋರಣೆಯಿಂದ ಮಾತನಾಡುತ್ತಾರೆ. ಮಾತಿನಲ್ಲಿಯೇ ಕ್ಷಣದಲ್ಲಿ ಮೌಲ್ಯ ಕಟ್ಟುತ್ತಾರೆ.

ದಾರಿಹೋಕ...

ಹಾದಿಯಲಿ ಒಂದಿಷ್ಟು ಸಿಗುತ್ತದೆ
ಸಾಕಷ್ಟು ಹೋಗುತ್ತದೆ
ತುಲನೆ ಮಾಡಿ ನೋಡಿದರೆ
ಹೋದಷ್ಟೇ ನೋವು,
ಸಿಕ್ಕಷ್ಟೂ ಸಂಭ್ರಮ...

ಜನರು ಹೇಳುವರು
ತಲುಪಲಾಗದು
ಗುರಿಯೆಂಬುದು ಬಹಳ ದೂರ...
ಅರಿವಿದೆಯೆನಗೆ
ಯಾರೂ ಹೋಗರು ಸೋತು
ಕೇಳಿ ಹೃದಯದ ಮಾತು..

ಡೇರೆ ಹಾಕಿ ಮಲಗಿದವರು
ಹೊಟ್ಟೆಕಿಚ್ಚಿನಿಂದ ಸುಡುವವರು
ಸಾಗಲಾರೆ ಎಂದು ಹಂಗಿಸುವವರು
ದಾರಿ ತುಂಬಾ ಸಿಗುವರು

ರೇಡಿಯೋ ಪುರಾಣ ಕಾಮೆಂಟ್ರಿ ಇತ್ಯಾದಿ----ಭಾಗ-೧

-ರೇಡಿಯೋ ಜತೆ ನನ್ನ ಒಡನಾಟ ಶುರು ಅಗಿದ್ದು ಸುಮಾರು ೧೯೭೦-೭೧ ನೇ ಇಸವಿಯಿಂದ .ನನಗೆ ಇನ್ನೂ ನೆನಪಿದೆ
ನಮ್ಮ ಮನೆಯಲ್ಲಿ ಆಗ ಹಳದಿ ಬಣ್ಣದ ಕರೆಂಟಿನ ರೇಡಿಯೋ ಇತ್ತು. ಆಶಕ್ಕ ಸಂಜೆ ಕಾಲೇಜು ಮುಗಿಸಿ ಬಂದು ಹೆರಳು
ಹಾಕಿ ಕೊಳ್ಳುತ್ತ ಹಾಡು ಕೇಳಿಸಿಕೊಳ್ಳುತ್ತಿದ್ದಳು. ಆಗ ಸಂಜೆ ೪ ರಿಂದ ಐದೂವರೆ ವರೆಗೆ ವಿವಿಧ ಭಾರತಿಯಲ್ಲಿ

ಎಡಬಲಗಳ ಕುಱಿತು ಒಂದು ವಿವೇಚನೆ

ಎಡ, ಬಲ ಇದನ್ನು ಬೇಱೆ ಬೇಱೆ ಭಾಷೆಗಳಲ್ಲಿ ಬೇಱೆ ಬೇಱೆ ಪದಗಳಿಂದ ಕರೆದರೂ ಭಾವವೊಂದೇ ಆಗಿರುವುದು ಕಂಡು ಬರುತ್ತದೆ. ಕೆೞಗಿನ ಕೋಷ್ಟಕದಲ್ಲಿ ವಿವೇಚನೆಗೆ ಮುಂಚೆ ಏನು ಶಬ್ದಗಳೆಂದು ನೋಡೋಣ.

ಮೌನದಮಾತು

ಮೌನಮೌನ ->:(

ಮೌನವೆಂಬುದೇ ಹಾಗೆ ಮುರಿಯಲಾರದೇ

ಮನಕ್ಕೆ ಕದವಿಕ್ಕಿ ಕೂತರೆ

ಹಸಿವಿನ ಪರಿವೆಯಿಲ್ಲ

ನಿದಿರೆಯ ಹಂಗಿಲ್ಲ

ಹನಿ ಹನಿಯಲ್ಲೂ ಅದೇ ಗಾಂಭೀರ್ಯ

ನೋಡಲಾಗದ ನೋಡದೇ ಇರಲಾಗದ ಸೌಂದರ್ಯ

ಮೌನವೆಂಬುದೇ ಹಾಗೆ
ಮರೆಯಲಾರದೇ

ನಗುವನ್ನು ಅಣಕಿಸುವ

ಮೊದಲಿನಂತಿಲ್ಲ........

ಹೀಗೇ ಇದೊಂದು ಕವನ ...... ..

ಮೊದಲಿನಂತಿಲ್ಲ ಎಲ್ಲವೂ ಈಗ
ಪಾಚಿ ಕಟ್ಟಿದೆ ಗೆಳೆಯ
ಸಂಬಂಧಗಳ ನಡುವೆ
ಮನ ಮನೆಯ ಮಧ್ಯದಲಿ
ನಿಂತಿಹುದು ಕಲ್ಲಿನ ಮಹಾಗೋಡೆ
ಬಂಧಿಸಲಾಗಿದೆ ಭಾವನೆಗಳನು
ಅಹಮ್ಮಿನ ಕೋಟೆಯಲಿ
ಹತ್ತಿರಾದರೂ ಜಗವು
ದೂರವಾಗಿದೆ ಮನವು
ಕಟ್ಟಿ ಹಾಕಿದೆ ಹಣವು
ಅನುಬಂಧ ಸೆಳೆತವನು
ಮೊದಲಿನಂತಿಲ್ಲ ಎಲ್ಲವೂ ಈಗ
ಹದಿನಾರಂಕಣದ ಮನೆಯೀಗ

’ಹಳ್ಳ ಬಂತು ಹಳ್ಳ’: ಇತಿಹಾಸದ ಹಿಂದಿನ ಕಥನ

’ಹಳ್ಳ ಬಂತು ಹಳ್ಳ’: ಇತಿಹಾಸದ ಹಿಂದಿನ ಕಥನ ಒಂದು ಕಾಲದ ಇತಿಹಾಸವನ್ನು ತಿಳಿಯಲು ಆ ಕಾಲಕ್ಕೆ ಸಂಬಂಧಿಸಿದ ಇತಿಹಾಸ ಪುಸ್ತಕಗಳನ್ನಷ್ಟೇ ಓದಿದರೆ ಸಾಲದು. ಆ ತಿಳುವಳಿಕೆ ಅಪೂರ್ಣ ಮತ್ತು ಸೀಮಿತವಾದುದಾಗಿರುತ್ತದೆ. ಆ ಕಾಲದಲ್ಲಿ ಆಳಿದ್ದವರ ಮತ್ತು ಹೆಚ್ಚೆಂದರೆ, ಅವರ ವಿರುದ್ಧ ಪಾಳೆಯದವರ ದೃಷ್ಟಿಕೋನಗಳ ಮೂಲಕ ಅಥವಾ ಅವೆರಡರ ನಡುವಿನ ಸಂಘರ್ಷದಲ್ಲಿ ಮೂಡುವ ಬದುಕಿನ ಸ್ಥೂಲ ಚಿತ್ರವಷ್ಟೇ ಅಲ್ಲಿ ದೊರಕಬಹುದು. ಈಚಿನ ದಿನಗಳಲ್ಲಿ ಇತಿಹಾಸವೆಂಬುದು ಸಾಹಿತ್ಯ, ಸಂಸ್ಕೃತಿ, ಸಮಾಜಶಾಸ್ತ್ರ ಇತ್ಯಾದಿ ನೆಲೆಗಳ ಒಂದು ಬಹುಶಿಸ್ತೀಯ ಅಧ್ಯಯನವಾಗಿ ಬೆಳೆಯುತ್ತಿರುವುದಾದರೂ, ಅದಕ್ಕಿನ್ನೂ ತಾನು ದಾಖಲಿಸುವ ಕಾಲಾವಧಿಯ ಮಾನವ ಸ್ಪಂದನೆಯ ಜೀವಂತ ಚಿತ್ರವನ್ನು ಕೊಡುವ ಶಕ್ತಿ ಸಂಪನ್ನವಾಗಿಲ್ಲ. ಬಹುಶಃ ಅದು ಅದರ ಉದ್ದೇಶವೂ ಆಗಿರಲಿಕ್ಕಿಲ್ಲ.