ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂಗೀತ ನೃತ್ಯೋತ್ಸವ

ಸಾಂಸ್ಕೃತಿಕ ನಗರ ಮತ್ತು ಉದ್ಯಾನನಗರಗಳ ಮಧ್ಯೆ ಇರುವ ಮಂಡ್ಯ ಹೇಳಿಕೇಳಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಸರುವಾಸಿ. ಸಂಕ್ರಾಂತಿಯಲ್ಲಿ ಬೆಳೆದ ಬೆಳೆಗಳ ಜೊತೆಗೆ ಸುಗ್ಗಿಯ ಸಂಭ್ರಮವನ್ನು ಅನುಭವಿಸಿದ್ದ ಬೆನ್ನಲ್ಲೇ ಅನೇಕ ಕಾರ್ಯಕ್ರಮಗಳು ಮಂಡ್ಯದಲ್ಲಿ ಜರುಗುತ್ತಿವೆ.

ಬಾಳಿನ ದಾರಿಯಲ್ಲಿ

ಅದೇನಾಯ್ತೋ ಗೊತ್ತಿಲ್ಲ ನಾನು ರಸ್ತೆಯ ಮಧ್ಯದಲ್ಲಿ ಬಿದ್ದು ಬಿಟ್ಟಿದ್ದೆ. ನನ್ನ ಕೈಯಲ್ಲಿದ್ದ ಬ್ಯಾಗ್ ಖಾಲಿಯಾಗಿತ್ತು. ರಸ್ತೆಯ ತುಂಬೆಲ್ಲ ಸಾಮಾನುಗಳು ಚಲ್ಲಾಪಿಲ್ಲಿಯಾಗಿದ್ದವು. ರಸ್ತೆಯ ತುಂಬೆಲ್ಲ ಹರಡಿದ ವಸ್ತುಗಳಲ್ಲಿ ಹೊಳೆಯುವ ನಕ್ಷತ್ರದಂತಹ ಬಿಲ್ಲೆಗಳಿದ್ದವು, ಅದೆಂತದೋ ಬಂಗಾರದ ಬಣ್ಣದ ಪೆಟ್ಟಿಗೆ, ಬೆಳ್ಳಿಯದೊ ಬಂಗಾರದ್ದೋ ನಾಣ್ಯಗಳಿದ್ದವು (ಸ್ಪಷ್ಟವಾಗಿ ನೆನಪಿಲ್ಲ). ಆಗ ತಾನೇ ಮುದ್ರಣಗೊಂಡಂತಹ ಗರಿಗರಿಯಾದ ನೋಟುಗಳಿದ್ದವು. ಬೆಲೆ ಬಾಳಬಹುದಾದಂತಹ ಒಡವೆಗಳಿದ್ದವು. ಅಸಲಿಗೆ ಅವೆಲ್ಲಾ ನನ್ನವಾ? ಗೊತ್ತಿಲ್ಲಾ.

ನನ್ನ ಸುತ್ತಲಿದ್ದ ಜನ ಅದ್ಯಾವುದೋ ಗೊತ್ತಿಲ್ಲದ ಭಾಷೆಯಲ್ಲಿ ಮಾತಾಡಿಕೊಂಡು ನನ್ನತ್ತ ನೋಡಿ ಗಹಗಹಿಸಿ ನಗುತ್ತಲಿದ್ದರು. ಅದರಲ್ಲೊಬ್ಬ ಸಿಗರೇಟ್ ಸೇದಿ ದಪ್ಪ ಹೋಗೆ ಬಿಡುತ್ತಲಿದ್ದ. ನಾನು ಮಾತ್ರ ರಸ್ತೆಯಲ್ಲಿ ಬಿದ್ದಿದ್ದ ವಸ್ತುಗಳನ್ನು ನನ್ನ ಚೀಲದಲ್ಲಿ ತುಂಬುತಲಿದ್ದೆ. ಸ್ವಲ್ಪ ದೂರದಲ್ಲಿ ಒಂದಷ್ಟು ಜನ ಬಿಕ್ಕಿ ಬಿಕ್ಕಿ ಅಳುತ್ತಲಿದ್ದರು. ಅವರ ಆಕ್ರಂದನ ಮುಗಿಲು ಮುಟ್ಟುತಲಿತ್ತು. ಅದರಲ್ಲೊಬ್ಬ ಮಹಿಳೆ ನನ್ನತ್ತ ಕೈ ಮಾಡಿ ಕರೆದಂತಿತ್ತು. ನಾನು ಮಾತ್ರ ಅದ್ಯಾವುದರ ಪರಿವಿಲ್ಲದಂತೆ ರಸ್ತೆಯಲ್ಲಿ ಬಿದ್ದಿದ್ದ ಸಾಮಾನುಗಳನ್ನ ಚೀಲದಲ್ಲಿ ತುಂಬುತ್ತಲೇ ಇದ್ದೆ. ಇನ್ನೊಂದೆಡೆ ಒಂದು ಗುಂಪು ಒಬ್ಬ ಅಮಾಯಕನನ್ನ ಬೆನ್ನಟ್ಟಿ ಹೊರಟಿತ್ತು. ಅವರ ಕೈಯಲ್ಲಿ ಮಿರಿ ಮಿರಿ ಮಿಂಚುತ್ತಿದ್ದ ಮಚ್ಚುಗಳಿದ್ದವು. ನೋಡು ನೋಡುತ್ತಲೇ ಅವನು ಅವರ ಕೈಗೆ ಸಿಕ್ಕಿಬಿಟ್ಟ. ಅವರು ಅವನ ಕೈಯನ್ನ ತುಂಡರಿಸಿ ಬಿಟ್ಟರು. ಅವನ ಬಿಸಿ ರಕ್ತ ನಾನು ಆಯುತಲಿದ್ದ ನೋಟುಗಳ ಮೇಲು ಸಿಡಿದಿತ್ತು ಆದರು ಅದನ್ನ ನನ್ನ ಬಟ್ಟೆಗೆ ಒರಿಸಿಕೊಂಡು ನನ್ನ ಚೀಲದಲ್ಲಿ ಹಾಕಿಕೊಳ್ಳೊದನ್ನ ಮಾತ್ರ ನಾನು ಮರೆತಂತಿರಲಿಲ್ಲ.

ಪುರುಷ ಪ್ರಧಾನ..!?

[ಹೀಗೊಂದು ಸಮೋಸ (ಸರಳ ಮೋಬಾಯಿಲ್ ಸಂದೇಶ) ಬಂದಿತ್ತು ನಿನ್ನೆ ನನಗೆ]

ಒಂದು ಹೆಣ್ಣು ಅತ್ತರೆ ಎಲ್ಲರೂ ಸಂತೈಸಲು ಬರುತ್ತಾರೆ.
ಒಂದು ಗಂಡು ಅತ್ತರೆ "ಯಾಕೋ ಹೆಣ್ಣಿನ ತರಾ ಅಳ್ತೀಯಾ...?" ಅಂತ ಗದರಿಸುತ್ತಾರೆ.
ಹೆಣ್ಣು ಗಂಡಿಗೆ ಹೊಡೆದರೆ, "ಆ ಗಂಡು ಏನೋ ತಪ್ಪು ಮಾಡಿರಬೇಕು" ಅಂತಾರೆ.
ಗಂಡು ಹೆಣ್ಣಿಗೆ ಹೊಡೆದರೆ, "ಮೂರ್ಖ, ಹೆಮ್ಮಕ್ಕಳಿಗೆ ಗೌರವ ಕೊಡೋದನ್ನು ಕಲಿತುಕೋ" ಅಂತಾರೆ.

ನೆನಪುಗಳೇ ಹೀಗೆ

ನೆನಪುಗಳೇ ಹೀಗೆ
ಹುಣಸೆ ಚಿಗುರಿನ ಹಾಗೆ
ಹುಳಿಯಾದರೂ ರುಚಿ
ಬಿಡಲಾದೀತೆ ಅಭಿರುಚಿ
ಎಳೆಯ ದಿನಗಳು
ಮಳೆಯ ಹನಿಗಳು
ಮಣ್ಣ ವಾಸನೆ
ಮರಳಿನರಮನೆ
ನೆನಪಾಯಿತೇ ಗೆಳತಿ

ನೆನಪುಗಳೇ ಹೀಗೆ
ಹುಣಸೆ ಹೂವಿನ ಹಾಗೆ
ಚಿಕ್ಕದಾದರೂ , ಚೆಂದ
ಮರೆಯಾದೀತೇ ಕಣ್ಣಿಂದ
ಸೋಲು ಗೆಲುವುಗಳು
ನೋವು ನಲಿವುಗಳು
ಬಣ್ಣ ಭಾವನೆ
ಕಣ್ಣ ಸೂಚನೆ
ನೆನಪಾಯಿತೇ ಗೆಳತಿ

ರಸಗೊಬ್ಬರ ಎಂಬ ಮೋಸದ ಜಾಲ (ರೈತರೇ ಬದುಕಲು ಕಲಿಯಿರಿ-೧೦)

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)

ರಂಜಕ (ಸೂಪರ್ ಫಾಸ್ಫೇಟ್)

ಸಾರಜನಕದಂತೆ ರಂಜಕವನ್ನು ಕೂಡ ನಮ್ಮ ಬೆಳೆಗಳು ನೇರವಾಗಿ ಹೀರಿಕೊಳ್ಳಲಾರವು. ಆದರೆ ಬೆಳೆಗಳಿಗೆ ಬೇಕಾದ ಪ್ರಮಾಣದ ರಂಜಕ ನಮ್ಮ ಭೂಮಿಯಲ್ಲಿ ಹೇರಳವಾಗಿರುತ್ತದೆ. ಇದನ್ನು ವಿಭಜಿಸಿ, ಸಸ್ಯಗಳ ಬೇರುಗಳು ಹೀರಿಕೊಳ್ಳುವಂತೆ ಮಾಡುವ ಕೆಲಸ ಪಿ.ಎಸ್.ಬಿ. (ಫಾಸ್ಫೇಟ್ ಸಲ್ಯೂಬಲಿಂಗ್ ಬ್ಯಾಕ್ಟೀರಿಯಾ- ಅಂದರೆ ಫಾಸ್ಫೇಟ್ ಅನ್ನು ಕರಗಿಸುವ ಬ್ಯಾಕ್ಟೀರಿಯಾ) ಜೀವಾಣುಗಳದು. ದೇಸಿ ಆಕಳ ಸಗಣಿಯಲ್ಲಿ ಈ ಪಿ.ಎಸ್.ಬಿ. ಜೀವಾಣುಗಳು ಯಥೇಚ್ಛವಾಗಿರುತ್ತವೆ.

ಸಸ್ಯಗಳ ಬೆಳವಣಿಗೆಗೆ ಬೇಕಾದ ರಂಜಕ ಭೂಮಿಯಲ್ಲಿ ಮೂರು ವಿವಿಧ ಸ್ವರೂಪದಲ್ಲಿರುತ್ತದೆ. ಏಕದಳ ರಂಜಕ, ದ್ವಿದಳ ರಂಜಕ ಹಾಗೂ ತ್ರಿದಳ ರಂಜಕ. ಭೂಮಿಯಲ್ಲಿರುವ ಪಿ.ಎಸ್.ಬಿ. ಜೀವಾಣು ಇವನ್ನು ವಿಭಜಿಸಿ ಬೇರುಗಳಿಗೆ ಒದಗಿಸುತ್ತದೆ.

ಪೂಜೆಗೆ ಬೇಕಾಗುವ ೮ ಹೂವುಗಳು

ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಮಿನ್ದ್ರಿಯ ನಿಗ್ರಹಃ|

ಸರ್ವಭೂತದಯಾಪುಷ್ಪಂ ಸತ್ಯಪುಷ್ಪಂ ವಿಶೇಷತಃ||

ಜ್ಞಾನಪುಷ್ಪಂ ತಪಃಪುಷ್ಪಂ ಕ್ರಿಯಾಪುಷ್ಪಂ ತಥೈವ ಚ|

ಧ್ಯಾನಂಚೈವಾಷ್ಟಮಂ ಪುಷ್ಪಂ ಏಭಿಸ್ತುಷ್ಯತಿ ಕೇಶವಃ||

೧. ಅಹಿಂಸೆ -ಯಾರನ್ನೂ ಹಿಂಸಿಸದಿರುವುದು.

೨. ಇಂದ್ರಿಯ ನಿಗ್ರಹ - ಎಲ್ಲವನ್ನು ಬಯಸುವ ಇಂದ್ರಿಯಗಳಿಗೆ ಸೂಕ್ತ ಕಡಿವಾಣ.

೩. ಸರ್ವಭೂತದಯೆ - ಎಲ್ಲಾ ಜೀವಿಗಳಲ್ಲಿ ದಯೆ.

೪. ಸತ್ಯ - ಸತ್ಯವನ್ನೇ ನುಡಿಯುವುದು.

೫. ಜ್ಞಾನ - ಒಳ್ಳೆಯ ತಿಳುವಳಿಕೆ.

೬. ತಪಸ್ಸು - ಉತ್ತಮ ಚಿಂತನೆ.

೭. ಕ್ರಿಯೆ - ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳುವುದು, ಉತ್ತಮ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವುದು.

ಬೆಳಕಿನ ವಕ್ರೀಭವನ

ಬೆಳಕಿನ ವಕ್ರೀಭವನ ಎಂದರೇನು? ಉದಾಹರಣೆ ಸಹಿತ ವಿವರಿಸಿ.
MEMORY

ಮೇಜಿನ ಮೇಲೆ ಪಾರಿವಾಳದ ಪುಕ್ಕವನಿರಿಸಿ
ಪುಕ್ಕದ ಮೇಲೊಂದ್ನೀರ್ತೊಟ್ಟನಿಟ್ಟು
ಆ ನೀರ್ಹನಿಗೆ ಸಮಾನವಾಗಿ
ಛಾಯಾಪೆಟ್ಟಿಗೆಯ ಪಿಡಿದು
ಚಿತ್ರ ತೆಗೆದು ನೋಡಿದೊಡೆ

ಡಾ. ಅಗರ್ವಾಲರ ಆಮರಣಾಂತ ಉಪವಾಸ

"ಗಂಗೆ ಅಂತರ್ಧಾನಳಾದಾಳೇ?" ಎನ್ನುತ್ತ 'ಸುಗ್ಗಿ'ಯವರು ಈ ಹಿಂದೆ ವಾಟರ್ ಪೋರ್ಟಲ್ಲಿನಲ್ಲಿ ಲೇಖನ ಬರೆದಿದ್ದರು. ಎಷ್ಟು ಜನ ಆ ಸುದ್ದಿಯನ್ನು ಫಾಲೋ ಮಾಡಿದಿರೋ ಗೊತ್ತಿಲ್ಲ, ಅಂದು ಸರಕಾರ ಭಾಗೀರಥಿ ನದಿಗೇ ಕುತ್ತು ತಂದಿಡಬಹುದಾದ ಈ ಜಲವಿದ್ಯುತ್ ಯೋಜನೆಯನ್ನು ನಿಲ್ಲಿಸುವೆವು ಎಂದು ಬರಹ ರೂಪದಲ್ಲಿ ಆಶ್ವಾಸನೆ ನೀಡಿದಾಗ ಡಾ. ಅಗರ್ವಾಲರ ಉಪವಾಸ ಅಂತ್ಯ ಕಂಡಿತ್ತು.

ಆದರೆ ಸರಕಾರ ಏನೂ ಮಾಡಿಲ್ಲ. ಬದಲಿಗೆ ಜಲವಿದ್ಯುತ್ ಯೋಜನೆಯ ಕಾಮಗಾರಿ ಮುಂದುವರೆದಿದೆಯಂತೆ!

ಡಾ. ಅಗರ್ವಾಲರು ಮತ್ತೊಮ್ಮೆ ಉಪವಾಸಕ್ಕೆ ಕುಳಿತಿದ್ದಾರೆ, ಆಮರಣಾಂತ. ಇವತ್ತಿಗೆ ಎಂಟನೇ ದಿನ.

ಗಂಗಾನದಿ ಗಂಗೋತ್ರಿ ಹಾಗೂ ಉತ್ತರಕಾಶಿ ನಡುವೆ ಇರುವ ೧೨೫ ಕಿ. ಮೀ. ವಿಸ್ತಾರದಲ್ಲಿ ಮಾತ್ರ ಮುಂಚಿನಂತೆ ಉಳಿದಿರುವಳು. ಈ ಅಳಿದುಳಿದಿರುವ ವಿಸ್ತಾರವನ್ನು ಕೂಡ ಹಾಳುಗೆಡವಿದರೆ, ಗಂಗೆಯ ಹರಿವಿನ ದಿಶೆ ಬದಲಿಸಿದರೆ, ಭಾರತದಿಂದ ನಿಜವಾದ ಗಂಗೆಯೇ ಮಾಯವಾಗುವಳು!

ಇತ್ತೀಚೆಗೆ ನಮ್ಮೂರಿನ ಸುದ್ದಿಗಳನ್ನು ಮಾತ್ರ ತೋರಿಸುವ ಟಿವಿ ಚ್ಯಾನಲ್ಲುಗಳಿಗೆ ಈ ಸುದ್ದಿ ಬೇಕಿಲ್ಲ, ಸುಮಾರು ಪತ್ರಿಕೆಗಳಿಗೆ ಈ ವಿಷಯದ ಕುರಿತು ಸುದ್ದಿ ಪ್ರಕಟಿಸಲು ಜಾಗವಿಲ್ಲ. ಸರಕಾರಕ್ಕೆ ಸ್ಥಳೀಯ ವೋಟ್ ಬ್ಯಾಂ‌ಕು, ಒಂದು ಬೃಹತ್ ಯೋಜನೆ - ಇಷ್ಟೇ ಲೆಕ್ಕಕ್ಕೆ ಬರುತ್ತಿರುವಂತಿದೆ.
ಮತ್ತೊಂದೆಡೆ ಇದಕ್ಕೆ ರಾಜಕೀಯ, ದರ್ಮದ ಬಣ್ಣ ಮೆತ್ತುಕೊಂಡರೆ ಪರಿಸರಕ್ಕಾಗಲಿರುವ ನಿಜವಾದ ಅಪಾಯದೆಡೆ ಜನ ಆಲೋಚಿಸದೇ ಇದ್ದುಬಿಟ್ಟಾರು!