ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

"That was a good speech, perfect." -ಒಬಾಮರವರ ಮುದ್ದಿನ ಮಗಳು, ಸಾಶಾ ಉದ್ಗರಿಸಿದ್ದು ಹೀಗೆ !

ಅಮೆರಿಕದ ಅಧ್ಯಕ್ಷರ ಕನಸಿನ ಮನೆಯಾದ, ಶ್ವೇತ ಭವನವನ್ನು ತನ್ನ ಅಪಾರ ಜನಪ್ರಿಯತೆ, ಹಾಗೂ ಮಾತಿನಮೋಡಿ ಹಾಗೂ ಸವಿನಯ ನಡವಳಿಕೆಗಳಿಂದ ಮುಂದಿನ ೪ ವರ್ಷಗಳಕಾಲ, ಪ್ರೀತಿಯ ಮನೆಯನ್ನಾಗಿಸಿಕೊಂಡ ಶ್ಲಾಮಲಸುಂದರನ ಚೊಚ್ಚಲ ಭಾಷಣವನ್ನು, ವಿಶ್ವದ ಜನತೆ ಎವೆಯಕ್ಕದ ಕಣ್ಣುಗಳಿಂದ ವೀಕ್ಷಿಸುತ್ತಿದ್ದ ದೃಷ್ಯ ಹೃದಯಂಗಮವಾಗಿತ್ತು. ’ಒಹ್ ನೀರಿನಂತೆ ಹರಿಯುವ ವಾಗ್ಝರಿ ’ !

ವೇದದಲ್ಲಿ ಬೆಳಕಿನ ವೇಗ!

ಬೆಳಕಿನ ವೇಗ ಪ್ರತಿ ಸೆಕಂಡಿಗೆ ೧೮೬ ಸಾವಿರ ಮೈಲುಗಳಂತೆ. ರೋಮರ್ ಎಂಬಾತ ೧೬೭೫ರಲ್ಲಿ ಇದನ್ನು ಕಂಡು ಹಿಡಿದ.

ಆದರೆ ನಮ್ಮ (ವಿಜಯನಗರ ಸಾಮ್ರಾಜ್ಯದ) ಬುಕ್ಕರಾಯನ ಆಸ್ತಾನದಲ್ಲಿ ಇದ್ದಂತ ಸಾಯನ ( c. 1315-1387) , ತನ್ನ ಋಗ್ವೇದ ಭಾಷ್ಯದಲ್ಲಿ ಬೆಳಕಿನ ವೇಗದ ಬಗ್ಗೆ ಬರೆದಿದ್ದಾನೆ ಅಂತ ಓದಿದೆ.

तरणिर्विश्वदर्शतो ज्योतिष्कृदसि सूर्य । विश्वमा भासिरोचनम् ॥

ಹೀಗೊಂದು ವೇದ-ವಚನ

ಸವಿತಾ ಪಶ್ಚಾತ್ತಾತ್ ಸವಿತಾ ಪುರಸ್ತಾತ್
ಸವಿತೋತ್ತರಾತ್ತಾತ್ ಸವಿತಾ ಧರಾತ್ತಾತ್
ಸವಿತಾ ನಃ ಸುವತು ಸರ್ವರಾತಿಂ ಸವಿತಾ ನೋ ರಾಸತಾಂ ದೀರ್ಘಮಾಯುಃ!

ಇವತ್ತು ಲೈಬ್ರರಿನಲ್ಲಿ ಋಗ್ವೇದದ ಒಂದು ಪುಸ್ತಕ ಗಮನ ಸೆಳೀತು. ಅದೊರಳಗೆ ಈ ವಚನ ( ಅಲ್ಲಿನ ಹಲವು ಮಂತ್ರಗಳಿಗೆ / ಋಕ್ಕುಗಳಿಗೆ ಲೇಖಕರೆ ಈ ಪದ ಬಳಸಿದ್ದಾರೆ! ) ಕಾಣ್ತು.

ನೆನಪಿರಲಿ ಅಂತ ಇಲ್ಲಿ ಹಾಕ್ತಾ ಇದ್ದೀನಿ.

ದೊಡ್ಡಕಳ್ಳ - ಚಿಕ್ಕ ಕಳ್ಳ

ಇವತ್ತು ಟಿ.ವಿ. ನ್ಯೂಸ್ ನಲ್ಲಿ ಹೇಳುತ್ತಿದ್ದರು ’ಸತ್ಯಂ ನ ಮಾಜಿ ನಿರ್ದೇಶಕ ರಾಮಲಿಂಗಾರಾಜು ಅವರ ಪೋಲೀಸು ಕಸ್ಟಡಿಯನ್ನು ಇನ್ನೆರಡು ದಿನ ವಿಸ್ತರಿಸಲಾಗಿದೆ’ ಎಂದು. ಅದೇ ರೀತಿ ಒಬ್ಬ ಜೇಬುಗಳ್ಳನೊಬ್ಬನನ್ನು ಹಿಡಿದಿದ್ದರೆ

Lal Baag Flower Show

Lal Baag Flower Show (ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನ)

ಇವತ್ತು ಅಣ್ಣ ಹೋಗಿದ್ದ ಲಾಲ್ ಬಾಗ್ ಗೆ. ಪ್ರತಿ ವರುಷದಂತೆ ಈ ಬಾರಿಯೂ ಚನ್ನಾಗಿದೆ ಪ್ರದರ್ಶನ.

ವರುಷಕ್ಕೆ ೨ ಬಾರಿ ಪ್ರದರ್ಶನ ನಡೆಯುತ್ತದೆ. Jan 26 ಆಸುಪಾಸು ಮತ್ತೆ Aug 15 ಆಸುಪಾಸು.

ನೀವೂ ಹೋಗುವ ವಿಚಾರ ಏನಾದರೂ ಇದೆನಾ?

ಗಣರಾಜ್ಯೋತ್ಸವದ ಹೃತ್ಪೂರ್ವಕ ಶುಭಾಷಯಗಳು.

ಕನ್ನಡದ ಕಂಪನ್ನು ವಿಶ್ವದೆಲ್ಲೆಡೆ ಹರಡುವಲ್ಲಿ ನಿರತರಾಗಿರುವ, ಸಂಪದ ಬಳಗ ಮತ್ತು ಸದಸ್ಯರೆಲ್ಲರಿಗೂ ಗಣರಾಜ್ಯೋತ್ಸವದ ಹೃತ್ಪೂರ್ವಕ ಶುಭಾಷಯಗಳು. ಸುಂದರ ಫೋಟೋದೊಂದಿಗೆ!

ಶಬ್ಧವಿರದ ಘಳಿಗೆ

ಬಂದ ಮಾತು ಬಂದ ಹಾಗೆ ಕರಗುತಿರಲು
ಮೌನದಲ್ಲೂ ಸೇಡಿನ ಕೀಡಿಯಾಡುತಿರಲು
ಮನ ಬಯಸಿತು ಶಬ್ಧವಿರದ ಘಳಿಗೆಯೊಂದನ್ನು
ದೇಹ ಬಯಸಿತು ಕೊನೆಯಿರದ ನಿದ್ದೆಯೊಂದನ್ನು

ಬೆಳಕಾಗದ ಕತ್ತಲಲ್ಲಿ
ದೂರದಲ್ಲೋ ದ್ವೇಷದ ಕಿಡಿಯೊಂದು
ನೋಡು ನೋಡುತಿದ್ದ ಹಾಗೆ
ಹತ್ತಿಯುರಿದು ಮನೆಯ ಮುರಿದು
ರಕ್ತದೊಕುಳಿಯನು ಹರಿಸುತಿರಲು
ಮನ ಬಯಸಿತು ಶಬ್ಧವಿರದ ಘಳಿಗೆಯೊಂದನ್ನು