ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂಕ್ರಮಣ; ಕುರಿಗಳಿಗೆ ಸ್ನಾನ ಭಾಗ್ಯ ಒದಗಿಸುವ ಉತ್ತರಾಯಣ.

ಸಂಕ್ರಾಂತಿ!

ಅಬ್ಬಾ..ಮಕರ ಮಾಸ ಕಾಲಿಡುತ್ತಿದ್ದಂತೆಯೇ ಧನುರ್ಮಾಸದ ಮೈ ಕೊರೆಯುವ ಛಳಿಯಿಂದ ವಿನಾಯ್ತಿ. ಹಾಗೆಯೇ ದಕ್ಷಿಣಾಯಣ ಕಳೆದು ಉತ್ತರಾಯಣ ಪುಣ್ಯ ಪರ್ವ ಆರಂಭಗೊಳ್ಳುವ ಸಮಯ. ಕೃಷಿಕರ ಪಾಲಿಗಂತೂ ಇದು ವಿಶೇಷ ತಿಂಗಳು. ಗದ್ದೆಯ ಕೃಷಿ ಚಟುವಟಿಕೆಗಳೆಲ್ಲ ಮುಗಿದು, ಸುಗ್ಗಿಯ ಬೆಳೆ ಕಣ್ಣು ತುಂಬಿಸಿಕೊಳ್ಳುವ ತವಕದಲ್ಲಿ ರೈತಾಪಿ ಸಮೂಹ. ಭತ್ತದ ರಾಶಿ, ಗೋಮಾತೆ ಹಾಗು ಬಸವಣ್ಣ (ಎತ್ತುಗಳು) ನ್ನು ಪೂಜಿಸುತ್ತ "ಬೆಳಗಾಗ ಎದ್ದು ಯಾರ್ಯಾರ ನೆನೆಯಲಿ, ಎಳ್ಳು ಜೀರಿಗೆ ಬೆಳೆಯೋಳ, ಭೂಮಿ ತಾಯಿ ಎದ್ದೊಂದು ಘಳಿಗೆ ನೆನೆದೇನ" ಎನ್ನುತ್ತ ಅನಾಮಿಕ ಜಾನಪದ ಕವಿಯ ಮಾತನ್ನು ಸ್ಮರಿಸುವ ದಿನವದು.

ಅದಿರಲಿ..ಸಂಕ್ರಮಣ ಮುಗಿದು ಒಂದು ವಾರದ ಮೇಲೆ ಸಂಪದದಲ್ಲಿ ಈ ಹಬ್ಬದ ಪ್ರಸ್ತಾಪ! ಸಂಪದಿಗರು ಹುಬ್ಬೇರಿಸಬಹುದು.

ಆದರೆ, ಸಂಕ್ರಾಂತಿಯ ಆಚರಣೆಯ ಕುರಿತು ಇಲ್ಲೊಂದು ವಿಶೇಷ ಹೊತ್ತು ತಂದಿದ್ದೇನೆ. ಅದೇನೆಂದರೆ..‘ವಾಕಿಂಗ್ ಬ್ಯಾಂಕರ್ ’ ಗಳೆಂದೇ ಪ್ರಸಿದ್ಧಿ ಪಡೆದಿರುವ ಕುರಿಗಾರರಿಗೂ ಇದೊಂದು ವಿಶೇಷ ಹಬ್ಬ. ಸದಾ ನೂರಾರು ಕುರಿಗಳನ್ನು ಬೆನ್ನಿಗೆ ಕಟ್ಟಿಕೊಂಡು ಹುಲ್ಲು, ನೀರು ಹಾಗು ತಮ್ಮ ಬದುಕು ಹೀಗೆಯೇ ಮೂರನ್ನೂ ಅರಸುತ್ತ ಹೋಗುವ ಇವರಿಗೆ ಯಾವ ಹಬ್ಬ ಆಚರಿಸಲು ಪುರುಸೊತ್ತು ಸಿಕ್ಕೀತು? ಆದರೂ ಸಂಕ್ರಮಣ ಸಂದರ್ಭದಲ್ಲಿ ವಿಶೇಷ ಪುರುಸೊತ್ತು ಮಾಡಿಕೊಂಡು ಅವರು ಕರ್ನಾಟಕದ ಬಯಲು ಸೀಮೆಯ ರೀತ್ಯಾ ಹಬ್ಬ ಆಚರಿಸುತ್ತಾರೆ.

ನಿಮಗಾಗಿ ಒಂದು ಮೊಬೈಲ್ ಸಂದೇಶ

"ಗರ್ಲ್ ಪ್ರೆಂಡ್ ಬಿಸಿ ನೀರು ಇದ್ದಹಾಗೇ
ಪ್ರೇಯಸಿ ಮಿನರಲ್ ನೀರು ಇದ್ದ ಹಾಗೆ
ಹೆಂಡತಿ ಕಾರ್ಪೋರೇಷನ್ ನೀರು ಇದ್ದ ಹಾಗೆ
ಸಂಭಂದಿಗಳು ಕಾವೇರಿ ನೀರು ಇದ್ದ ಹಾಗೆ
ಆದ್ರೆ ಗೆಳೆತನ ಅನ್ನುವುದು ಪರ್ರಿಶುದ್ದವಾದ ಮಳೆನೀರು ಇದ್ದ ಹಾಗೆ......." :)

ಹೀಗೊಂದು ಅನುಭವ

ಎಂದಿನಂತೆ ಕಛೇರಿಯಿಂದ ಬಂದವನೆ ಮುಖ ತೊಳೆದು, ಆಡಲು ಹೊರಡುವ ಮುನ್ನ ಮಗನಿಗೆ ಆಟದಿಂದ ಬೇಗ ಬರುವಂತೆ ಸೂಚಿಸಿ ಅಮ್ಮ ಕೊಟ್ಟ ತಿಂಡಿಯನ್ನು ಮುಗಿಸಿ ಬೈಕೇರಿ ಹೊರಟೆ. ಇಂದೇಕೊ ಹೊಸ ಹುಮ್ಮಸ್ಸು ಕಾರಣ ನಿನ್ನೆ ಒಂದೂ ಆಟವನ್ನು ಗೆದ್ದಿರಲಿಲ್ಲ ನನ್ನೊಡನೆ ಜೊತೆಯಾಗಲು ಯಾರೂ ಇಷ್ಟಪಡುತ್ತಿರದಿದ್ದುದು ಕಾರಣವಿರಬಹುದು. ಸ್ವಲ್ಪ ವೇಗವಾಗಿಯೇ ಗಾಡಿ ಓಡಿಸುತ್ತಿದ್ದೆನೆನೋ?

ಹೊತ್ತಲ್ಲದ ಹೊತ್ತಿನಲ್ಲಿ ಹೊತ್ತಿಗೆ ತೆರೆದು...

ರಾತ್ರಿಯಾಗಿದೆ.

ಎಲೆಕ್ಟ್ರಾನಿಕ್‌ ಗಡಿಯಾರವಾದ್ದರಿಂದ ಟಿಕ್‌ ಟಿಕ್‌ ಸದ್ದಿಲ್ಲ. ಡಿಜಿಟಲ್‌ ಅಂಕೆಗಳಿರುವುದರಿಂದ ಮುಳ್ಳುಗಳು ಕಾಣುವುದಿಲ್ಲ. ಗಂಟೆಗೊಮ್ಮೆ ಸಂಗೀತ ಮೊಳಗಿಸಿ, ಗಂಟೆಯ ಸದ್ದು ಹೊರಡಿಸುವುದನ್ನು ಬಿಟ್ಟರೆ ಗಡಿಯಾರ ತನ್ನ ಗಡಿ ದಾಟಿ ತೊಂದರೆ ಕೊಡುವುದಿಲ್ಲ.

ಮಕ್ಕಳು ಮಲಗಿರುತ್ತವೆ. ಮಡದಿಗೂ ಗಾಢ ನಿದ್ರೆ. ಕಚೇರಿಯ ಉದ್ವೇಗವನ್ನು ಇಳಿಸಿಕೊಳ್ಳಲು ಮೌನವಾಗಿ ಕೂತವನಿಗೆ ಕಂಪ್ಯೂಟರ್‌ ತೆರೆಯುವುದು ಏಕೋ ಬೇಸರ.

ಸ್ವಲ್ಪ ಹೊತ್ತು ಸುಮ್ಮನೇ ಕೂಡುತ್ತೇನೆ. ಸಾವಿರ ನೆನಪುಗಳು ಮುಕುರಿಕೊಳ್ಳುತ್ತವೆ. ಬಾಲ್ಯ, ಹರೆಯ, ಓದಿನ ಗುಂಗು, ಬಡತನ, ಹಳ್ಳಿ, ಬೀಸುವ ಗಾಳಿ, ಕೆಟ್ಟ ಬಿಸಿಲು, ಹಸಿವು ನೆನಪಾಗುತ್ತವೆ. ಗದಗ ಜಿಲ್ಲೆ, ರೋಣ ತಾಲ್ಲೂಕಿನ ಕೋಡಿಕೊಪ್ಪ ಎಂಬ ಹಳ್ಳಿಯಲ್ಲಿ ಕಳೆದ ಮೂರು ವರ್ಷಗಳು ಕಣ್ಮುಂದೆ ಸುಳಿಯುತ್ತವೆ. ನನ್ನ ಬದುಕು ಯಾವತ್ತೂ ಬದಲಾಗುವುದಿಲ್ಲ ಬಿಡು ಅಂತ ಅದೆಷ್ಟು ಸಾವಿರ ಸಲ ಹೇಳಿಕೊಂಡಿದ್ದೆನೋ ಅಲ್ಲಿ. ಆದರೆ, ನೋಡನೋಡುತ್ತ ಬದುಕು ಬದಲಾಗುತ್ತಲೇ ಹೋಯಿತು. ಹೌದು: Things fall apart. ಏಕೆಂದರೆ, centre can not hold.

ಪುಸ್ತಕಗಳು ಸೆಳೆಯುತ್ತವೆ. ಇದ್ದ ಷೆಲ್ಫ್‌ ತುಂಬಿದ್ದರಿಂದ, ಡಬ್ಬದಲ್ಲಿರುವ ಪುಸ್ತಕಗಳನ್ನು ಹೊರತೆಗೆಯಲೇ ಆಗಿಲ್ಲ. ಬೇಂದ್ರೆಯವರ ಬಹುತೇಕ ಕವನ ಸಂಕಲನಗಳು ಒಂದೆಡೆ ಕೂತಿವೆ. ಬೇಂದ್ರೆ ಓದುತ್ತಿದ್ದರೆ ಮನಸ್ಸು ಹರಿಯುವ ನೀರಾಗುತ್ತದೆ. ಅಲ್ಲಮಪ್ರಭು ಹೇಳಿದ್ದಾರಲ್ಲ: ಹರಿವ ನೀರಿಗೆ ಮೈಯೆಲ್ಲಾ ಕೈಕಾಲು. ಎಂಥ ಉದಾತ್ತ ವಿಚಾರ!

ಪೆದ್ದುಗುಂಡನ ರಗಳೆ - ೪

ಹೂಂಕರಿಸಿ ಘೀಳಿಟ್ಟು ತಮಸ ಹೊರಗಟ್ಟು
ಹಣತೆ ಹೊನ್ನ ಬೆಳಗಿಸಿ ಸತ್ತ್ವ ಬರಮಾಡು
ದೀಪದ ಬೆಳಕಲ್ಲಿ ಮಿಂದ ಮನೆಯೊಳಗೆ
ಸಿರಿದೇವಿ ಬರುವಳು - ಪೆದ್ದುಗುಂಡ

ಮೂರ್ಖರೊಂದಿಗಿನ ಸಂವಾದ!

ಉಚಿತವಲ್ಲ ನಿಜ ಮೂರ್ಖರೊಂದಿಗಿನ ಸಂವಾದ
ಉಚಿತವಲ್ಲ ನಿಜ ಮೂರ್ಖರೊಂದಿಗಿನ ಸಂವಾದ
ಒಳಿತಿಲ್ಲ ಇನಿತೂ ಖಂಡಿತ ಕೆಡಿತೆ ನಮಗದರಿಂದ

ಆದರವರನು ಮೂರ್ಖರೆಂದು ಅರಿವ ಪರಿಯೆಂತು
ಆದರವರನು ಮೂರ್ಖರೆಂದು ಅರಿವ ಪರಿಯೆಂತು
ಅದಕ್ಕೇ ಸಂವಾದ ನಡೆಸಿ ಉಗಿಸಿಕೊಳ್ಳಬೇಕಿಂತು

ತಪ್ಪು ಅವರದ್ದೂ ಅಲ್ಲ ನಿಜಕೂ ಇತ್ತ ನಮ್ಮದ್ದೂ ಅಲ್ಲ

ವೃತ್ತದೊಳಗಿನ ಬದುಕು

ಬದುಕು ವಿಸ್ತಾರವಾದುದು. ಅದಕ್ಕೆ ಚೌಕಟ್ಟನ್ನು ಕಟ್ಟಿದಷ್ಟೂ ದೃಷ್ಟಿಗೆ ಮಿತಿ ಬರುತ್ತದೆ. ಮಿತಿಗಳಾಚೆಯೇ ಇರುವ ಬದುಕು ಸುಲಭಕ್ಕೆ ದಕ್ಕುವುದಿಲ್ಲ. ಮಿತಿಯೊಳಗೇ ನಾವು ಬದುಕಿದರೆ, ಚಿಂತಿಸಿದರೆ ನಮ್ಮಾಚೆಗೂ ಇರುವ ಬದುಕ ಮಜಲು ನಮಗೆ ಅರ್ಥವೇ ಆಗುವುದಿಲ್ಲ. ಹೀಗೆಲ್ಲ ಮಾತಿಗೆ ಹೇಳಬಹುದಾದರೂ ಮೂಲತಃ ನಾವೆಲ್ಲ ನಮ್ಮ ನಮ್ಮ ಮಿತಿಯೊಳಗೇ ಬದುಕ ಕಡಲನ್ನು ಈಜುವ ಅಭ್ಯಾಸ ಮಾಡಿಕೊಂಡಿರುತ್ತೇವೆ. ಹಳ್ಳ, ಕೆರೆ, ಬಾವಿಗಳಲ್ಲಿ ಸುಲಭವಾಗಿ ಈಜುವವರು ಸಮುದ್ರಕ್ಕೆ ಹೆದರಬಹುದು. ಆಳ ಅಗಲಗಳ ಪರಿವೆಯಿಲ್ಲದೇ ಸಿಕ್ಕ ಸಿಕ್ಕ ನೀರಿಗೆ ಧುಮುಕುವುದೂ ಅಪಾಯದ ಮಾತೇ. ಹಾಗಾಗಿಯೇ ನಾವೆಲ್ಲ ನಮಗೆ ಗೊತ್ತಿರುವ ದೇಶ ಮತ್ತು ಭಾಷೆಗಳಲ್ಲಿ ಬದುಕಲು ಇಚ್ಛಿಸುತ್ತೇವೆ. ಗೊತ್ತಿದ್ದೂ ನಾಲ್ಕು ಗೋಡೆಗಳ ಬಂಧನದಲ್ಲಿ, ಕಿಟಕಿ, ಬಾಗಿಲು, ಪರದೆಗಳ ಹಂಗಿನಲ್ಲೇ ಇರಲು ಇಚ್ಛಿಸುತ್ತೇವೆ.

ಪೂಜೆಗೆ ಬೇಕಾಗುವ ೮ ಹೂವುಗಳು

ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಮಿನ್ದ್ರಿಯ ನಿಗ್ರಹಃ|

ಸರ್ವಭೂತದಯಾಪುಷ್ಪಂ ಸತ್ಯಪುಷ್ಪಂ ವಿಶೇಷತಃ||

ಜ್ಝಾನಪುಷ್ಪಂ ತಪಃಪುಷ್ಪಂ ಕ್ರಿಯಾಪುಷ್ಪಂ ತಥೈವ ಚ|

ಧ್ಯಾನಂಚೈವಾಷ್ಟಮಂ ಪುಷ್ಪಂ ಏಭಿಸ್ತುಷ್ಯತಿ ಕೇಶವಃ||

೧. ಅಹಿಂಸೆ -ಯಾರನ್ನೂ ಹಿಂಸಿಸದಿರುವುದು.
೨. ಇಂದ್ರಿಯ ನಿಗ್ರಹ - ಎಲ್ಲವನ್ನು ಬಯಸುವ ಇಂದ್ರಿಯಗಳಿಗೆ ಸೂಕ್ತ ಕಡಿವಾಣ.

ಬರೀ ಸ್ವಗತ

ನನಗೆ ಮದುವೆಯಾಗಿ, ಅಪ್ಪನ ಮನೆಯಿಂದ ಗಂಡನಮನೆಗೆ ಬಂದು ನಾಕು ತಿಂಗಳಾಯ್ತು.ಇನ್ನೂ ಈ ಮನಯನ್ನ ನನ್ನ ಮನೆ ಅಂತ ತಕ್ಷಣಕ್ಕೆ ಒಪ್ಪಿಕೊಳ್ಳಕ್ಕೆ ಆಗ್ತಾ ಇಲ್ಲ.ಆದ್ರೂ ಒಪ್ಪ್ಕೊಂಡ ಹಾಗೆ ನಾಟಕ ಆಡಬೇಕು (ಇದು ಸ್ವಲ್ಪ ದಿನ ಮಾತ್ರ ಅಂತ ಗೊತ್ತು).ಇಲ್ಲಿರೋರು ನನ್ನವರೇ ಅಂತ ಗೊತ್ತು ಆದ್ರೂ ಹೆದರಿಕೆ ಇದೆ.ನನ್ನ ಮನೇಲಿ ನಾನು ಕೆಲಸಾನ ತೋಚಿಕೊಂಡು ಮಾಡಿದ ಹಾಗೆ ಇಲ್ಲಿ ಮಾಡೋಕೆ ಸ್

ಸೂರ್ಯಗ್ರಹಣ ನಂಬಿಕೆ Vs ಮೂಢನಂಬಿಕೆ

ಇದೇ ತಿಂಗಳ ೨೬ನೇ ಜನವರಿ ೨೦೦೯ ನಮ್ಮ ದೇಶದಲ್ಲೆಲ್ಲರೂ ಗಣರಾಜ್ಯೋತ್ಸವವನ್ನು ಆಚರಿಸುತ್ತಾರೆ, ಆದರೆ ಬಾನಿನಲ್ಲಿ ಸೂರ್ಯಗ್ರಹಣ ಅದೇ ದಿನ ಬೆಳಿಗ್ಗೆ ಬಹುಶಃ ೭.೦೭ ನಿಮಿಶದಿಂದ ೯.೪೬ ನಿಮಿಶದವರೆಗೆ ಇರುತ್ತದೆ ಎಂದು ನಾಸಾ ಅಭಿಪ್ರಾಯಪಟ್ಟಿದ್ದಾರೆ.