ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕ್ಯಾಲಿಗ್ರಫಿ ಕಲಿಯಲೊಂದು ಪ್ರಯತ್ನ

"ಕಾರ್ಟೂನು ಬರೆಯೋದೇ ನಿಲ್ಲಿಸಿಬಿಟ್ಟಿದ್ದೀರಲ್ಲ" ಅಂತ ಆ ಕಡೆ ಪರಿಚಿತರೊಬ್ಬರು ಫೋನಿನಲ್ಲಿ ಹೇಳಿದ್ದು ಕೇಳಿ ನನಗೆ "ಹೌದಲ್ಲ" ಅನಿಸಿತು. ಎದುರಿಗೇ ಟ್ಯಾಬ್ಲೆಟ್ ಇಟ್ಟೂಕೊಂಡು ಏನಾದರೂ ಗೀಚಬಹುದಿತ್ತಲ್ಲ ಅನಿಸಿತು.

ರಾಜು ಅನಂತಸ್ವಾಮಿ ಇನ್ನಿಲ್ಲ

ತಮ್ಮ ಮಧುರ ಕಂಠದಿಂದ ಎದೆ ತುಂಬಿ ಹಾಡಿದ್ದ ಗಾಯಕ ರಾಜು ಅನಂತಸ್ವಾಮಿ ಇಂದು ಮಧ್ಯಾಹ್ನ 12.15ಕ್ಕೆ ಅನಂತದಲ್ಲಿ ಲೀನವಾದರು. ಇನ್ನೂರೈವತ್ತಕ್ಕೂ ಹೆಚ್ಚು ಭಾವಗೀತೆಗಳಿಗೆ ರಾಗ ಸಂಯೋಜಿಸಿ ಹಾಡಿದ್ದ ರಾಜು, ಸುಮಾರು ಸಿನಿಮಾ-ಟಿವಿ ಧಾರಾವಾಹಿಗಳಲ್ಲಿ ಅಭಿನಯವನ್ನೂ ಮಾಡಿದ್ದರು. ಅನೇಕ ಕ್ಯಾಸೆಟ್-ಸಿಡಿಗಳನ್ನು ಹೊರ ತಂದಿದ್ದ ಇವರು ಸುಗಮ ಸಂಗೀತ ಲೋಕದ ದಿಗ್ಗಜ ಮೈಸೂರು ಅನಂತಸ್ವಾಮಿಯವರ ಮಗ. ದೇಶ-ವಿದೇಶಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದ ಇವರು ಕನ್ನಡ ಜನಮಾನಸದಲ್ಲಿ ಮರೆಯದ ಹೆಸರು. ಮೈಸೂರು ಮತ್ತು ಬೆಂಗಳೂರಿನಲ್ಲಿ ಸಂಗೀತದ ಶಾಲೆ ನಡೆಸುತ್ತಿದ್ದ ರಾಜು ಅವರಿಗೆ, ಅನೇಕ ಶಿಷ್ಯಂದಿರು ಇದ್ದರು. ತೀವ್ರ ಕುಡಿತದ ಚಟ ಈ ಗಾಯಕನ ಅಕಾಲ ಮರಣಕ್ಕೆ ಕಾರಣವಾಯಿತು.

ನೀನಿದ್ದೆ- ನೀನಿಲ್ಲ

ಗೆಳೆಯ ನನ್ನ ಕಣ್ರೆಪ್ಪೆ ಮುಚ್ಚುವ ಮುಂಚಿನ ಕ್ಷಣದಿ
ನೀನಿದ್ದೆ , ಕಣ್ತೆರೆದಾಗ ನಾ ಕಾಣಲಿಲ್ಲ ನಿನ್ನ

ತೀರದ ಎಡರುಗಳು ಬಂದೆರೆಗಿದಾಗ ರಕ್ಷ್ತೆಯಂತೆ
ನೀನಿದ್ದೆ, ಎಡರು ಮುಗಿದಾಗ ನೀ ಕಾಣಲಿಲ್ಲ

ಜಗವೆಲ್ಲ ಶತೃವಾಗಿ ಬೇಡೆನಿಸಿದಾಗ ಮಿತ್ರನಂತೆ
ನೀನಿದ್ದೆ, ಜಗದೆಲ್ಲರೂ ಮಿತ್ರರಾದಾಗ ನೀ ಹೋದೆ ಎಲ್ಲಿ

ಬಾಳೆಲ್ಲಾ ಕತ್ತಲ್ಲೆಯಾಗಿ ಕಣ್ ಕಾಣದಾಗ ಬೆಳಕಂತೆ

ಅರಿವು ಮೂಡಿದಾಗ

ಈಚೆಗೆ ದಿನನಿತ್ಯವೂ ನೆಡೆಯುತ್ತಿರುವ ಹತ್ಯಾಕಾಂಡವನ್ನು ನೋಡುವಾಗ ಅಥವಾ ಅದರ ಬಗ್ಗೆ ಕೇಳಿದಾಗ ’ಜನರಲ್ಲಿ ಅರಿವು ಮೂಡುವುದೇ ಇಲ್ಲವೇ’ ಅನ್ನಿಸುತ್ತದೆ ಅಲ್ಲವೇ? ಈ ಪ್ರಶ್ನೆ ಮನದಲ್ಲಿ ಮೂಡುತ್ತಿದ್ದಂತೆ ಇತಿಹಾಸದ ಹಲವು ಪುಟಗಳನ್ನು ತೆರೆದೆ.

ಎಲ್ಲಿಂದಲೋ ಬಂದವರು

ಬೆಂಗಳೂರಿನ ಚಂದ್ರಾ ಲೇಔಟ್‌ ಬಡಾವಣೆಗೆ ಮನೆ ಬದಲಿಸಿದ ಪ್ರಾರಂಭದ ದಿನಗಳವು.

ಇಡೀ ದಿನ ಮನೆ ಸಾಮಾನುಗಳನ್ನು ಪ್ಯಾಕ್‌ ಮಾಡಿ, ಲಾರಿಗೆ ಹೇರಿಸಿ, ಇಳಿಸಿ, ಮತ್ತೆ ಜೋಡಿಸುವ ಕೆಲಸದಲ್ಲಿ ಹೈರಾಣಾಗಿದ್ದೆ. ಅದು ಕೇವಲ ದೈಹಿಕ ದಣಿವಲ್ಲ. ಪ್ರತಿಯೊಂದು ಸಲ ಮನೆ ಬದಲಿಸಿದಾಗಲೂ ಆಗುವ ಭಾವನಾತ್ಮಕ ತಾಕಲಾಟಗಳ ಸುಸ್ತದು.

ಓದಿದ್ದು ಕೇಳಿದ್ದು ನೋಡಿದ್ದು-144 ಬೈ ಬೈ ಬುಷ್!

ಹಣದುಬ್ಬರದಿಂದ ಕಂಗೆಟ್ಟಿರುವ ಜಿಂಬಾಬ್ವೆ : ಒಂದು ತುಂಡು ಬ್ರೆಡ್ಡಿಗೆ ಒಂದಟ್ಟಿ ನೋಟು!

jimbabve

(pic :internet)

-------------------------------------------------------------------------------------------------------------------

ಮೋದಿ ಮೋಡಿ!

asian age

ಮೈಲೇಜ್ ಹೆಚ್ಚಿಸಲು ಮತ್ತೊಮ್ಮೆ ನಿಸರ್ಗದ ಮೊರೆ - ನೆರವಿಗೆ ಬಂದ ಶಾರ್ಕ್

ಶಾರ್ಕ್ ಮೀನಿಗೂ ಮೈಲೇಜ್ ಹೆಚ್ಚಳಕ್ಕೂ ಯಾವ ಸಂಬಂಧ? ಇಮಾಂಸಾಬಿಗೂ ಗೋಕುಲಾಷ್ಟಮಿಗೆ ಇರುವಷ್ಟೇ ಸಂಬಂಧ ಎಂದು ಲೇವಡಿ ಮಾಡುವವರಿಗೆ ಒಂದು ಕುತೂಹಲಕಾರಿ ವಿಷಯ. ವಾಹನದ ಮೈಲೇಜ್ ಹೆಚ್ಚಿಸಲು ಶಾರ್ಕ್ ನಿಜಕ್ಕೂ ಪ್ರೇರಣೆ ನೀಡಿದೆ. ಕೆನಡಾದ ಸ್ಕಿನ್ಝ್ ರಾಪ್ಸ್ ಎನ್ನು ಸಂಸ್ಥೆ ವಾಹನದ ಮೇಲ್ಮೈಯನ್ನು ಶಾರ್ಕ್ ಮೀನಿಗಿರುವ ಮಾದರಿಯಲ್ಲಿ ನಿರ್ಮಿಸಿ ಮೈಲೇಜ್ ಹೆಚ್ಚಳವನ್ನು ಸಾಧಿಸಿ ತೋರಿಸಿದೆ.

ಶಾರ್ಕ್ ಮೀನು ಒಂದು ಅತಿವೇಗದಲ್ಲಿ ಸಾಗುವ ಜಲಚರ. ಆಹಾರದ ಬೇಟೆಯಾಡಲು ಅದಕ್ಕೆ ವೇಗ ಅತಿಮುಖ್ಯವಾಗಿದೆ. ನಿಜಕ್ಕೂ ಶಾರ್ಕ್ ಈಜುವುದಿಲ್ಲ, ವಿಮಾನ ಗಾಳಿಯಲ್ಲಿ ತೇಲುವಂತೆ ನೀರಿನಲ್ಲಿ ತೇಲುತ್ತದೆ. ವಿಮಾನಕ್ಕಿರುವ ರೆಕ್ಕೆಗಳಂತೆಯೇ ಇದಕ್ಕೂ ಎರೆಡು ರೆಕ್ಕೆಗಳಿದ್ದು ಬಾಲವನ್ನು ಅತ್ತಿತ್ತ ಆಡಿಸುವ ಮೂಲಕ ಚಾಲನೆ ಪಡೆಯುತ್ತದೆ. ಆದರೆ ನೀರೊಳಗಣ ಘರ್ಷಣೆ ಅದರ ವೇಗವನ್ನು ತಗ್ಗಿಸಬೇಕಲ್ಲವೇ, ಆದರೆ ಆಳದಲ್ಲಿಯೂ ಅದು ಸುಲಲಿತವಾಗಿ ವೇಗವಾಗಿ ಈಜುವುದು ಅದರ ಚರ್ಮದ ವಿಶೇಷ ರಚನೆ ಕಾರಣವಾಗಿದೆ. ಹತ್ತಿರದಿಂದ ಗಮನಿಸಿದರೆ ಅದರ ಚರ್ಮ ಚಿಕ್ಕ ಗೋಲಿಯೊಂದನ್ನು ಒಂದರ ಪಕ್ಕದಲ್ಲೊಂದು ಬರುವಂತೆ ಒತ್ತಿರುವ ಮಾದರಿಯಲ್ಲಿದೆ. ಗಾಲ್ಫ್ ಚೆಂಡಿನ ಮೇಲ್ಮೈ ಸಹಾ ಇದೇ ರೀತಿಯಲ್ಲಿದೆ.

ಈ ರಚನೆ ಹೊಂದಿದ ವಸ್ತು (ಅಥವಾ ಜೀವಿ) ನಯವಾದ ಮೇಲ್ಮೈ ಹೊಂದಿರುವ ವಸ್ತುವಿಗಿಂತ (ಅಥವಾ ಜೀವಿಗಿಂತ) ಕಡಿಮೆ ಘರ್ಷಣೆ ಪಡೆಯುತ್ತದೆ. ಪರಿಣಾಮವಾಗಿ ಹೆಚ್ಚಿನ ದೂರಕ್ಕೆ ಸಾಗಲು ಸಾಧ್ಯವಾಗುತ್ತದೆ.