ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೀಗೊಂದು ಅಪರೂಪದ ಸಂಜೆ (ಸಂಪದಿಗರ ಸ್ನೇಹ ಮಿಲನ )

ಶನಿವಾರ ಮೈಲ್ ಓದುತ್ತಿದ್ದಂತೆ ಅಯ್ಯೋ ಸ್ನೇಹ ಮಿಲನದ ಸ್ಥಳ ಬೇರೆಯಾಯ್ತಲ್ಲ ಹೋಗೋದಾ ಬೇಡವಾ ಅಂತ ಯೋಚಿಸುತ್ತಿದ್ದೆ . ಜೊತೆಗೆ ಬರ್ತೀನಿ ಅಂದಿದ್ದ ನನ್ನಕ್ಕ ನೂ ಬರೋದಿಲ್ಲ ಎಂದು ಕೈಕೊಟ್ಟಳು
ಬಸವನಗುಡಿ ಒಂಥರಾ ನಮ್ಮ ಮನೆ ಇದ್ದ ಹಾಗೆ, ಕನ್ನಿಂಗ್ಹ್ಯಾಮ್ ಶಿವಾಜಿ ನಗರ ಯಾವುದೋ ಪರದೇಶ ಇದ್ದ ಹಾಗೆ
ಯೋಚಿಸಿ ಯೋಚಿಸಿ ಕೊನೆಗೆ ಹೊರಡುವ ನಿರ್ಧಾರ ಮಾಡಿದೆ.

ಯಾರೆ ನೀ ಚಲುವೆ..................

ಯಾರೆ ನೀ ಚಲುವೆ
ಕನಸಿನಲಿ ನೀ ಯಾಕೆ ಬಂದು ಕಾಡುವೆ
ಇಲ್ಲ ಸಲ್ಲದ ಆಸೆ ನೀ ಯಾಕೆ ಹುಟ್ಟಿಸುವೆ
ಹುಟ್ಟಿಸಿ ಸ್ವರ್ಗಕ್ಕೆ ನೀ ಕೊಂಡೊಯ್ಯುವೆ
ಕಣ್ಣು ಬಿಟ್ಟೊಡನೆ ನೀ ಯಾಕೆ ಮಾಯವಾಗುವೆ
ಯಾರೆ ನೀ ಚಲುವೆ …....................

ಯಾರೆ ನೀ ಚಲುವೆ
ಯಾರೂ ಕೊಡದಷ್ಟು ಪ್ರೀತಿ ನೀ ಕೊಡುವೆ
ಮನಸ್ಸು ಚಿಂತೆಗೀಡಾದಾಗ ಜೊತೆನಿಲ್ಲವೆ
ಕನಸಿನಲಿ ನನ್ನ ಜೊತೆ ಪಿಸು ಮಾತನಾಡುವೆ

ಸಂಪದದಲ್ಲಿ ಬರುವ ಬ್ಲಾಗ್ ಗಳ ಗುಣಮಟ್ಟ.....

ನೋಡಿ ಮೊದಲೇ ಹೇಳಿ ಬಿಡುವೆ ಯಾರೂ ಇದನ್ನು ವೈಯುಕ್ತಿಕವಾಗಿ ನೋಡಬೇಡಿ...
ಬಂದು ಮೂರು ತಿಂಗಳಾಗಿಲ್ಲ ಆಗಲೇ ಕಿತಾಪತಿ ಶುರುಆಯಿತು ಅಂತ ಅಂದುಕೊಂಡ್ರೆ ಅದು ನಿಮ್ಮ ಕರ್ಮ.
ಈ ಮೂರು ತಿಂಗಳಲ್ಲಿ ನಾ ಕಂಡ ಕೆಲವು ವಿಚಾರಗಳು ಹೀಗಿವೆ

೧) ಪ್ರತಿಕ್ರಿಯೆ ಕೆಲವೊಮ್ಮೆ ಆರೋಗ್ಯಕರ ಆಗಿರುತ್ತದೆ ಮತ್ತೆ ಕೆಲವೊಮ್ಮೆ ಹುಚ್ಚುತನದಿಂದ ಕೂಡಿರುತ್ತದೆ.

ನಿಸರ್ಗದಲ್ಲಿಯೇ ಸಿಗುವ ಪುಕ್ಕಟೆ ಗೊಬ್ಬರ (ರೈತರೇ ಬದುಕಲು ಕಲಿಯಿರಿ-೯)

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)


ಸಸ್ಯಗಳ ಬೆಳವಣಿಗೆಗೆ ಬೇಕಾದ ಗೊಬ್ಬರ ಅಥವಾ ಪೋಷಕಾಂಶಗಳು ನಿಸರ್ಗದಲ್ಲಿಯೇ ಹೇರಳವಾಗಿವೆ. ಅದು ಹೇಗೆ ಗೊತ್ತೆ?

ನಮ್ಮ ಶರೀರವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ನಮ್ಮ ಶರೀರದಲ್ಲಿ ವಿವಿಧ ಧಾತುಗಳು ವಿವಿಧ ಪ್ರಮಾಣದಲ್ಲಿವೆ. ಇದರಿಂದಾಗಿ ಶರೀರ ವ್ಯವಸ್ಥೆ ಸರಿಯಾಗಿ ನಡೆದುಕೊಂಡು ಬರುತ್ತಿದೆ. ರಕ್ತದಲ್ಲಿ ಕಬ್ಬಿಣದ ಅಂಶವಿದೆ. ಇನ್ನು ಜಲಜನಕ, ಆಮ್ಲಜನಕ, ಇಂಗಾಲ, ಸಾರಜನಕದಂತಹ ಧಾತುಗಳಂತೂ ಹೇರಳವಾಗಿವೆ. ಇವೆಲ್ಲ ಎಲ್ಲಿಂದ ಬಂದವು?

ನಿಸರ್ಗದಿಂದ.

ನಮ್ಮ ದೇಹದಲ್ಲಿರುವಂತೆ ಸಸ್ಯಗಳಲ್ಲಿಯೂ ವಿವಿಧ ಧಾತುಗಳಿವೆ. ಒಟ್ಟು ೧೦೮ ಧಾತುಗಳು ಸಸ್ಯಗಳ ಬೆಳವಣಿಗೆಯ ಹಿಂದಿವೆ. ಕೆಲವು ಪ್ರತ್ಯಕ್ಷವಾಗಿ, ಇನ್ನು ಕೆಲವು ಧಾತುಗಳು ಪರೋಕ್ಷವಾಗಿ ಸಸ್ಯಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ವಿಜ್ಞಾನಿಗಳು ಇವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದಾರೆ.

Android ಮತ್ತು ಕನ್ನಡ fonts

ಸಂಪದದ ಮೃದುಯಂತ್ರಿಗಳೇ,

ಕಳೆದ ಸಲ Androidನಲ್ಲಿ ಕನ್ನಡ fonts ಇಲ್ಲ, ದಯವಿಟ್ಟು application ಹುಟ್ಟುಹಾಕಿ ಎಂದು ಬರೆದಾಗ ಒಂದೆರೆಡು ಪ್ರತಿಕ್ರಿಯೆ ಬಂದವು.

ಜಾಲ ಜಾಲಾಡಿಸುವಾಗ android developers ನಲ್ಲಿ ಇದು ಸಿಕ್ಕಿತು, ಇದರಿಂದ ಏನಾದರೂ ಉಪಯೋಗವಾಗುತ್ತಾ?

http://code.google.com/android/reference/java/awt/font/NumericShaper.html#KANNADA

 

http://lwn.net/Articles/216683/

 

ಕೇಶವ

 

 

ಹೆಲಿಕಾಪ್ಟರು ನಡೆಸುವಾಗ ಎಸ್ಸೆಮ್ಮೆಸ್ ಕಳಿಸುವುದೇ? ಕೆರೆಯೇ ಗತಿ

ವಾಹನ ಚಲಾಯಿಸುವಾಗ ಮೊಬೈಲ್ ಫೋನು ಬಳಸಬೇಡಿ, ಎಸ್ಸೆಮ್ಮೆಸ್ ಕಳಿಸಬೇಡಿ, ನಿಮ್ಮ ಏಕಾಗ್ರತೆ ಭಂಗಗೊಂಡು ಅಪಘಾತಗಳಾಗುವ ಸಾಧ್ಯತೆಗಳಿವೆ, ಚಾಲಕನ ಏಕಾಗ್ರತೆಯನ್ನು ಕೆಡಿಸಬೇಡಿ, ವಾಹನ ಚಲಾಯಿಸುವಾಗ ಮೊಬೈಲು ಬಳಸಲೇಬೇಕಾದ ಸಂದರ್ಭ ಬಂದರೆ ವಾಹನ ನಿಲ್ಲಿಸಿ ಬಿಡಿ ಎಂದೆಲ್ಲಾ ಎಲ್ಲಾ ದೇಶಗಳ ಕಾನೂನುಗಳು ಸಾರಿ ಸಾರಿ ಹೇಳುತ್ತವೆ.

ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನ

ಉತ್ಸಾಹ ನನ್ನಲ್ಲಿ ಜಾಸ್ತೀನೋ ನಿನ್ನಲ್ಲಿ ಜಾಸ್ತೀನೋ ಅಂತಾ ಕಾರಂಜಿಗೆ ಸವಾಲು ಹಾಕೋ ಹುಡ್ಗಿ
DSC08271

ಹಾಪ್ ಕಾಮ್ಸ್, ತಾಜಾ ಹಣ್ಣಿನ ರಸ ಮಾರಾಟಕ್ಕೆ ತಯ್ಯಾರಾಗಿ
DSC08280

ಕೆಲಸದ ನಂತರ ಕೊಂಚ ವಿಶ್ರಾಂತಿ, ಮಾತುಕತೆ
DSC08285

ಸಂಗಾತಿ

"ಸೂರ್ಯ ಎಲ್ಲಾದರೂ ಸಂಚರಿಸಲಿ
ನಿನ್ನ ಮೇಲೆ ಕಳ್ಳ ಸೂರ್ಯನ ಕಣ್ಣು ಬೀಳದಿರಲಿ"

"ಚಂದ್ರ ಎಲ್ಲಾದರೂ ಬೆಳದಿಂಗಳು ಚೆಲ್ಲಲಿ
ನಿನ್ನ ಮೇಲೆ ಅವನು ಮೋಹ ಮೋಡಿ ಮಾಡದಿರಲಿ"

"ಬಾ ನನ್ನ ಸಂಗಾತಿ ನಿನ್ನ ರಕ್ಷಿಸುವೆ
ನನ್ನ ಕಣ್ಣ ರೆಪ್ಪೆಯ ಆಶ್ರಯದಲ್ಲಿ"