ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬಣ್ಣನೆ

ಪದಗಳಿಲ್ಲ ಭಾಷೆಯಲಿ ನಿನ್ನ ವರ್ಣಿಸಲು,
ಸ್ವರಗಲಿಲ್ಲ ಸಂಗೀತದಲಿ ನಿನ್ನ ಬಣ್ಣಿಸಲು .

ಹಗಲು ಇರುಳಾಯ್ತು...ಇರುಳು ಹಗಲಾಯ್ತು,
ಊಟ ನಿದ್ದೆ ಎಲ್ಲಾ ಮರೆತೋಯ್ತು .

ಹೇಗೆ ಮಾಡಬೇಕೋ ಗೊತ್ತಿಲ್ಲ ನಿನ್ನ ಗುಣಗಾನ,
ನನಗಂತೂ ಸದಾ ನಿನ್ನದೇ ಧ್ಯಾನ ...

ನಿನ್ನನ್ನು ಕಾಣದೆ ನಾನದೇ ಮೌನ

---ಗಣೇಶ

ಎಲ್ಲರಂತಲ್ಲ ನನ್ನ ಗೆಳತಿ

ಎಲ್ಲರಂತಲ್ಲ ನನ್ನ ಗೆಳತಿ,
ಅವಳೇ ನನ್ನ ಹೃದಯದ ಒಡತಿ ...

ಅವಳ ನೋಡಿ ಚಂದ್ರ ನಾಚುವನು,
ಅವಳಿಗಾಗಿ ಸೂರ್ಯ ಸದಾ ಕಯುವನು..

ಎಲ್ಲರಂತಲ್ಲ ನನ್ನ ಗೆಳತಿ,
ಅವಳೇ ನನ್ನ ಹೃದಯದ ಒಡತಿ ...

ಅವಳು ನುಡಿದರೆ.. ಕೋಗಿಲೆ ಹಾಡಿದಂತೆ,
ಅವಳ ನಡಿಗೆ..ಜಿಂಕೆಯ ಮರಿಯಂತೆ

--ಗಣೇಶ

ಕೋಳಿ ಮೂಗಿಗೆ ಪುಕ್ಕದ ಮೂಗುತಿ

“ಇದ್ಯಾವ ಸೀಮೆ ಯಾಟೆನೋ ... ಮೊನ್ನೆ ಎಲ್ಲಾ ಗುಡ್ಡಿಗೆ ಬಂದಿತ್ತು... ತಿರ್ಗಾ ಇವಾಗ ಹುಂಜನ ಜೊತೇಲಿ ಆಡಿ ಮತ್ತೆ ಗುಡ್ಡಿಕ್ತಾಯ್ತೆ... ಅಗ್ಲಾಗ್ಲ ಹಿಂಗೆ ಗುಡ್ಡಿಕ್ಕಿ ಕಾವಿಗೆ ಕೂಕಂಡ್ರೆ ಕೋಳೀನು ಬೆಳೆಯಲ್ಲ್ಲ, ಮರಿಗಳ್ನು ಸಾಕಲ್ಲ“ ಮಿಡಿಗೇಶಿಯ ಹಿರಿಯಜ್ಜಿ ತಿಮ್ಮಕ್ಕ ಮೊಮ್ಮಕ್ಕಳಿಗೆ ಹೇಳುತ್ತಿದ್ದರು. ಅಜ್ಜಿಯ ಮಾತಿಗೆ ಉತ್ತರ ನೀಡಿದ ಮೊಮ್ಮಗ “ಊನಜ್ಜಿ ಇದುನ್ನ ಹಿಂಗೆ ಬಿಟ್ರೆ ತಿರಗ ಕಾವಿಗೆ ಬೀಳ್ತೈತೆ, ಹಿಡ್ಕಂಡು ಅದರ ಮೂಗಿಗೆ ಪುಕ್ಕ ಕುಚ್ತಿನಿ” ಎಂದು ಹೇಳಿ ಮೂಲೆಯಲ್ಲಿ ಕೂತಿದ್ದ ಕೋಳಿಯನ್ನು ಹಿಡಿದ.

ಇದೇನಿದು ಕೋಳಿ ಕಾವಿಗೆ ಬರುವುದಕ್ಕೂ, ಅದರ ಮೂಗಿಗೆ ಪುಕ್ಕ ಚುಚ್ಚುವುದಕ್ಕೂ ಏನು ಸಂಬಂಧ ಎನ್ನುವಿರಾ? ಕೋಳಿಯು ಅಪ್ರಾಪ್ತ ವಯಸ್ಸಿನಲ್ಲಿ ಮೊಟ್ಟೆ ಇಡುವುದನ್ನು ತಪ್ಪಿಸಲು, ಪದೇ-ಪದೇ ಗರ್ಭ ಧರಿಸುವುದನ್ನು ತಡೆಯಲು, ಹಾಗೂ ಮೊಟ್ಟೆ ಇಟ್ಟು ಬಲಹೀನವಾದ ಕೋಳಿಯು ದಷ್ಟ-ಪುಷ್ಟವಾಗಿ ಬೆಳೆಯಲು ಬಳಸುವ ದೇಸೀ ಜ್ಞಾನ. ಮನೆಯಲ್ಲಿ ಈಗಾಗಲೇ ಒಂದೆರಡು ಕೋಳಿಗಳು ಕಾವಿನಲ್ಲಿ ಕುಳಿತಿದ್ದರೆ ಉಳಿದ ಕೋಳಿಗಳನ್ನು ಸ್ವಲ್ಪ ತಡವಾಗಿ ಕಾವಿಗೆ ಬರುವಂತೆ (ಮರಿ ಮಾಡಲು ಸಿದ್ಧವಿರುವ) ಮಾಡಲೂ ಸಹ ಈ ತಂತ್ರ ಬಳಸುತ್ತಾರೆ. ಎಲ್ಲಾ ಕೋಳಿಗಳೂ ಒಂದೇ ಸಲ ಕಾವಿಗೆ ಕುಳಿತರೆ ಮನೆಯಲ್ಲಿ ಸ್ಥಳದ ಅಭಾವ. ಜೊತೆಗೆ ಕಾವಿಗೆ ಕುಳಿತ ಕೋಳಿಗಳಿಗೆ ಹೇನಿನ ಕಾಟ ಹೆಚ್ಚಾಗಿರುವುದರಿಂದ ಅದನ್ನು ನಿವಾರಿಸುವ ಸಲುವಾಗಿಯೂ ಹೀಗೆ ಮಾಡುತ್ತಾರೆ. ಬಯಲು ಸೀಮೆಯ ಬಹುತೇಕ ಹಳ್ಳಿಗಳಲ್ಲಿ ಈ ಪದ್ಧತಿ ಹಿಂದಿನಿಂದಲೂ ಬೆಳೆದುಬಂದಿರುವುದಲ್ಲದೆ ಇಂದಿಗೂ ಸಹ ಅಲ್ಲಲ್ಲಿ ಕಂಡುಬರುತ್ತದೆ.

ಡಿರೈವೇಟಿವ್ಸ್ ಮತ್ತು ನಷ್ಟ ನಿರ್ವಹಣೆ

ಒಂದು ದಿನದ ಕಾರ್ಯಕ್ರಮವನ್ನು

ನಿಟ್ಟೆ ಜಸ್ಟೀಸ್ ಕೆ ಎಸ್ ಹೆಗ್ಡೆ ಸ್ಮಾರಕ ಮ್ಯಾನೇಜ್‍ಮೆಂಟ್ ಸಂಸ್ಥೆ ನಡೆಸಲಿದೆ್.

ಸಂಪನ್ಮೂಲ ವ್ಯಕ್ತಿ: ಪ್ರೊಫೆಸರ್ ರಾಧಾಕೃಷ್ಣ ಶರ್ಮಾ ಅವರು.

ಸ್ತಳ: JKSIM ಸಭಾಂಗಣ

ಆಮಂತ್ರಣ ಪತ್ರಿಕೆ

ಸಂಪರ್ಕ :  samriddhi_2000@yahoo.com

ನಾವಾಗಿದ್ರೆ......?

ನಮ್ಮ ಗೆಳೆಯನೊಬ್ಬನ ಬಗ್ಗೆ ನಮಗೆ ವಿಪರೀತ ಅಸಡ್ಡೆ. ಸದಾ ತಿಂಡಿಯದ್ದೇ ಜ್ಞಾನ. ಕಲಿಯುವುದರಲ್ಲಿ ಆರಕ್ಕೆರಲ್ಲ, ಮೂರಕ್ಕಿಳಿಯಲ್ಲ. ಅಪ್ಪನ ದುಡ್ಡಿನಿಂದ ಎಂಜಿನಿಯರಿಂಗ್ ಸೀಟ್ ಸಿಕ್ಕಿತು. ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು. ಯಾವಾಗಲು ಬೈಕ್ ಬಿಟ್ಟು ಇಳಿಯಲಾರ. ನಿಂತಲ್ಲಿ ನಿಲ್ಲಲಾರ. (ಅವನು ಹಾಗೆ ನಿಲ್ಲದೇ ಇರೋದಕ್ಕೆ ಪಾಪ ಬೇರೆಯದೇ ಕಾರಣ ಇದೆ.

ಪ್ರಾಂತ್ಯಭೇದ ಹಾಗೂ ಶಬ್ದಗಳು

ವಿಶಾಲ ಕರ್ಣಾಟಕದಲ್ಲಿ ಪ್ರಾಂತ್ಯಭೇದಗಳಿಂದ ಕೆಲವು ವಸ್ತು/ವ್ಯಕ್ತಿಗಳಿಗೆ ಬೇಱೆ ಬೇಱೆ ಶಬ್ದಗಳಿಂದ ಸೂಚಿಸುತ್ತಾರೆ. ಅಧಿಕೃತವಾಗಿ ನಿಘಂಟುವಿನಲ್ಲಿ ಪ್ರಾಂತ್ಯಭೇದವಿದ್ದಾಗ ಬೞಸುವ ಎಲ್ಲಾ ಪದಗಳನ್ನು ಸೇರಿಸುತ್ತಾರೆ.

ಬಿಸಿಲಿನಿಂದಲೇ ಬದುಕು (ರೈತರೇ ಬದುಕಲು ಕಲಿಯಿರಿ-೮)

ಸಸ್ಯಗಳ ಬೆಳವಣಿಗೆಗೆ ಏನು ಬೇಕು ಎಂಬುದು ಈಗ ಗೊತ್ತಾಯಿತು. ಆದರೆ ಇವನ್ನು, ಅಂದರೆ ನೀರು, ಗಾಳಿ, ಸೂರ್ಯನ ಬಿಸಿಲು ಮತ್ತು ಭೂಮಿಯ ಸತ್ವ ಬಳಸಿಕೊಂಡು ಸಸ್ಯಗಳು ಬೆಳೆಯುವುದು ಹೇಗೆ ಎಂಬುದನ್ನು ನೋಡೋಣ.

ಸಸ್ಯಗಳು ತಮ್ಮ ಚಟುವಟಿಕೆಗೆ ಪ್ರಮುಖವಾಗಿ ಅವಲಂಬಿಸುವುದು ಸೂರ್ಯನ ಬಿಸಿಲನ್ನು. ಯಾವ ಬಿಸಿಲನ್ನು ನಾವು ಶಪಿಸುತ್ತೇವೆಯೋ, ಯಾವ ಬಿಸಿಲು ಬರ ತರುತ್ತದೆ ಎಂದು ನಂಬಿದ್ದೇವೋ, ಆ ಸೂರ್ಯನ ಬಿಸಿಲೇ ಸಸ್ಯಗಳ ಜೀವನಕ್ಕೆ ಪ್ರಮುಖ ಆಧಾರ.

ಸಸ್ಯಗಳ ಎಲೆಗಳು ಸಾಮಾನ್ಯವಾಗಿ ಹಸಿರಾಗಿರುತ್ತವೆ. ಇದಕ್ಕೆ ಕಾರಣ ಅವುಗಳಲ್ಲಿರುವ ಪತ್ರ ಹರಿತ್ತು. ಅಂದರೆ ಕ್ಲೋರೋಫಿಲ್ ಎಂಬ ವಸ್ತು. ಈ ವಸ್ತುವಿನಿಂದಾಗಿ ಎಲೆಗಳು ಹಸಿರಾಗಿರುತ್ತವೆ.

ಮಂಗಲ ದ್ರವ್ಯಗಳ ಪಾವಿತ್ರ್ಯ

ನಮ್ಮಲ್ಲೆಲ್ಲಾ ಒಂದು ಸಂಪ್ರದಾಯ ಬೆಳೆದು ಬಂದಿದೆ. ಮನೆಗೆ ಮುತ್ತೈದೆ ಬಂದರೆ ಅವರಿಗೆ ಒಂದು ರವಿಕೆ ಪೀಸ್, ಹೂವು, ಅರಿಶಿನ-ಕುಂಕುಮದ ಒಂದು ಪ್ಯಾಕೆಟ್, ಕೆಂಪು ಅಥವಾ ಹಸಿರು ಬಣ್ಣದ ಗಾಜಿನ ಬಳೆಗಳನ್ನು ಕೊಡುವ ಪದ್ದತಿ.ಆದರೆ ತುಂಬಾ ಜನ ಮುತ್ತೈದೆಯರಿಗೆ ಇದು ವೇಸ್ಟ್. ಮನೆಗೆ ತೆಗೆದುಕೊಂಡು ಹೋಗಿ ಒಂದುಕಡೆ ಇಡದೆ ಗತ್ಯಂತರವಿಲ್ಲ. ಅದೇರೀತಿ ದೇವಾಲಯಗಳ ಪ್ರಸಾದದಗತಿ ಕೂಡ. ಯಾವುದನ್ನು ಅತ್ಯಂತ ಪವಿತ್ರವೆಂದು ನಾವು ಭಾವಿಸುತ್ತೇವೋ ಅದಕ್ಕೆ ನಾವು ಕೊಡುತ್ತಿರುವ ಮಹತ್ವ ವೆಷ್ಟು? ಈ ಬಗೆಗೆ ಒಂದು ಚಿಂತನೆ. ಮನೆಯಲ್ಲಿ ಎಲ್ಲೆಂದರಲ್ಲಿ ಅರಿಶಿನ ಕುಂಕುಮದ ಪ್ಯಾಕೆಟ್ ಗಳು, ಗಾಜಿನ ಬಳೆಗಳು, ರವಿಕೆಪೀಸ್ ಗಳು,ದೇವಾಲಯಗಳಿಂದ ತಂದ ಹೂವು-ಕುಂಕುಮ ಪ್ರಸಾದಗಳು ಎಲ್ಲೆಂದರಲ್ಲಿ ಚಲ್ಲಾಟ. ಯಾವುದಾದರೂ ಪುಣ್ಯಕ್ಷೇತ್ರಗಳಿಂದಲೋ ದೇವಾಲಯಗಳಿಂದಲೋ ಬಂದರೆ ತೆಂಗಿನಕಾಯಿಗಳ ಹೋಳುಗಳು, ಬಾಳೆಹಣ್ಣುಗಳು, ಧರ್ಮಸ್ಥಳ, ಹೊರನಾಡು ಗಳಿಗೆ ಹೋಗಿಬಂದರೆ ಸಾಕು, ಅಲ್ಲಿಯ ಪ್ರಸಾದಗಳು!! ಅಬ್ಭಾ!! ಯಾಕಾದರೂ ಇಷ್ಟೊಂದು ಪ್ರಸಾದ ಕೊಡುತ್ತಾರೆಯೋ!! ಇನ್ನು ನಮ್ಮ ಬಂಧುಗಳಲ್ಲಿ ಕಾಶಿಯಾತ್ರೆ ಮಾಡಿಬಂದರೆ ಸಾಕು ಅವರು ಯಾವುದಾದರೊಂದು ದೇವರ ವಿಗ್ರಹ ಕೊಡುವುದು ಗ್ಯಾರಂಟಿ. ಎಷ್ಟು ಅಂತಾ ದೇವರವಿಗ್ರಹ ಇಟ್ಟುಕೊಳ್ಳುವುದು? ಇನ್ನು ದೇವರ ಚಿತ್ರವಿರುವ ಪ್ಲಾಸ್ಟಿಕ್ ಕವರ್ ಗಳು, ಇನ್ವಿಟೇಶನ್ ಗಳು!!ಅಕ್ಕಿ ಚೀಲದ ಮೇಲೆ ಗಣಪತಿ, ದುರ್ಗಿ,ಓಂಕಾರ ಚಿತ್ರಗಳು.ಇವುಗಳ ವಿಲೇವಾರಿ ಮಾಡುವುದಾದರೂ ಹೇಗೆ? ನಮ್ಮ ಶ್ರದ್ಧೆಯ ಕೆಲವು ಅಂಶಗಳನ್ನು ಅವುಗಳ ಪಾವಿತ್ರ್ಯದ ಕಡೆ ಗಮನ ಹರಿಸದೆ ಎಲ್ಲೆಂದರಲ್ಲಿ ಕಂಡಾಗ ನನಗೆ ನಿಜವಾಗಿ ಮನಸ್ಸಿಗೆ ಖೇದ ಉಂಟಾಗುತ್ತದೆ.