ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸೋಂಬೇರಿ ಜಗತ್ತು

ನೋಡಿ ಜೀವನದಲ್ಲಿ ನಮ್ಮದೇ ಅದ ಪರಿಪಾಟಗಲಿರುತ್ತೆ ಅಂದ್ರೆ ನಮ್ಮ ಜೀವನವನ್ನು ಮತ್ತಷ್ಟು ಸುಲಭ ಮಾಡ್ಕೊಳಕೆ ಏನೇನೋ ಹೊಸ ಅವಿಷ್ಕಾರಗಳು ಆಗ್ತಾ ಇದೆ, ಅದೆಲ್ಲ ಏನುಕ್ಕೆ ಗೊತ್ತ...ನಮ್ಮಂಥ ಸೋಮ್ಬೇರಿಗಳು ಇನ್ನು ಸುಲಭ ಆಗಲಿ ಅಂತ...ನಾವು ತಿಳ್ಕೊಬೇಕು ಪ್ರಪಂಚ ಉದ್ದಾರ ಆಗ್ತಿರೋದು ಬುದ್ದಿವಂತರಿಂದ ಅಲ್ಲ ನಮ್ಮಂಥ ಸೋಮ್ಬೇರಿಗಳಿಂದ, ನಮ್ ತನನ ನಾವೇ ಕಾಪೋಡ್ಕ ಬೇಕು....ಮುನ್

ಕಾಲೇಜು ಮತ್ತು ವಿವಿಗಳನ್ನು ಜ್ಞಾನಕೇಂದ್ರಗಳಾಗಿಸುವಲ್ಲಿ ಬ್ಲಾಗುಗಳ ಬಳಕೆ

ವಿವಿಗಳು ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವೆ ಸಂವಹನ ಹೆಚ್ಚಿಸಲು ಬ್ಲಾಗ್ ಮತ್ತು ಅಂತರ್ಜಾಲ ಮೊದಲಾದ ತಂತ್ರಜ್ಞಾನಗಳ ಸದ್ಬಳಕೆ ಆಗಬೇಕು ಎನ್ನುವ ವಾದಸರಣಿಯ ಬರಹವೊಂದು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ.
ಈ ಬಗ್ಗೆ ನಿಮ್ಮ ಅನಿಸಿಕೆ ಏನು?

ಆರ್ ಕೆ ಶ್ರೀಕಂಠನ್ ಅವರೊಂದಿಗೊಂದು ಮಾತುಕತೆ - ತ್ಯಾಗರಾಜ ಆರಾಧನೆಯ ವಿಶೇಷ

(ಪರದೇಶಿಗಳಾಗಿರೋದ್ರಲ್ಲಿ, ಅಂದ್ರೆ ಹೊಟ್ಟೆಬಟ್ಟೆಗಾಗಿ ನಮ್ಮೂರಲ್ದೇ ಬೇರೆ ಊರಿನಲ್ಲಿ ನೆಲೆ ನಿಂತಾಗ ಅದರಿಂದ ಒಂದು ಒಳ್ಳೇ ಪರಿಣಾಮ ಕೂಡ ಇದೆ. ನಮ್ಮೂರಲ್ಲಿ ಖ್ಯಾತರಾದ ನಟರೋ, ಕಲಾವಿದರೋ, ಯಾರಾದರೂ ನಾವಿದ್ದಲ್ಲಿಗೆ ಬಂದಾಗ ಅವರನ್ನು ಸುಲಭವಾಗಿ ಭೇಟಿ ಮಾಡಬಹುದು. ಮಾತಾಡಬಹುದು. ನಮ್ಮೂರಲ್ಲೇ ಇದ್ದರೆ ಅದು, ಅಸಾಧ್ಯವಲ್ಲದಿದ್ದರೂ ಸ್ವಲ್ಪ ಕಷ್ಟವೇನೋ ಅನ್ನಿಸುತ್ತೆ. ಅದೇ ಕಾರಣಕ್ಕೋ ಏನೋ, ನನಗೂ ಎಷ್ಟೋ ಹೆಸರುವಾಸಿಯಾದವರನ್ನು ನೋಡಿ ಮಾತಾಡಿಸೋ, ಇನ್ನೂ ಹೆಚ್ಚು ಅಂದ್ರೆ ಅವರನ್ನೊಮ್ಮೆ ಮನೆಗೆ ಕರೆದು ಸತ್ಕರಿಸುವ ಭಾಗ್ಯವೂ ಕಳೆದ ಕೆಲವು ವರ್ಷಗಳಲ್ಲಿ ದಕ್ಕಿದೆ .

ಜನವರಿ ೧೫, ೨೦೦೯ ರಂದು ಪುಷ್ಯ ಬಹುಳ ಪಂಚಮಿ. ತ್ಯಾಗರಾಜರ ಆರಾಧನೆ. ಅವತ್ತಿಗೆ ಸರಿಯಾಗಿ, ತ್ಯಾಗರಾಜರ ನೇರ ಶಿಷ್ಯಪರಂಪರೆಗೆ ಸೇರಿದ, ಹಿರಿಯ ವಿದ್ವಾಂಸರಾದ ಸಂಗೀತ ಕಲಾನಿಧಿ ಡಾ.ಆರ್.ಕೆ. ಶ್ರೀಕಂಠನ್ ಮತ್ತು ಅವರ ಮಗ ಸಂಗೀತ ವಿದ್ವಾಂಸರಾದ ಆರ್.ಕೆ. ರಮಾಕಾಂತ್ ಅವರೊಡನೆ (ಮೇ ೨೦೦೮ ರಲ್ಲಿ ಅವರು ಕ್ಯಾಲಿಫೋರ್ನಿಯಾಗೆ ಭೇಟಿ ಕೊಟ್ಟಿದ್ದಾಗ) ನಾನು ಗೆಳೆಯರೊಬ್ಬರೊಡನೆ ಕೂಡಿ ನಡೆಸಿದ ಸಂದರ್ಶನದ ಸಾರಾಂಶವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಹಳಸಂತೋಷವಾಗುತ್ತಿದೆ.

'I am no lab rat' ಆಂದೋಲನ

ಕುಲಾಂತರಿ (ವಂಶವಾಹಿ ಪರಿವರ್ತಿತ) ಆಹಾರವನ್ನು ಸರ್ಕಾರ ಶೀಘ್ರವೇ
ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು, ನಾವೆಲ್ಲ ಅದರ ಪ್ರಯೋಗ
ಜೀವಿಗಳಾಗಲಿದ್ದೇವೆ!

'ಕುಲಾಂತರಿ ಮುಕ್ತ ಕರ್ನಾಟಕ' ನೇತೃತ್ವದಲ್ಲಿ
'I am no lab rat' ಆಂದೋಲನದ

ಎರಡನೇ ಹಂತದ ಉದ್ಘಾಟನಾ ಕಾರ್ಯಕ್ರಮ
ಕೋಡಿಹಳ್ಳಿ ಚಂದ್ರಶೇಖರ್, ಅಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ
ದಿವ್ಯ ರಘುನಾಥ್, ಸಂಚಾಲಕಿ, ಗ್ರೀನ್ಪೀಸ್
ಎನ್. ಆರ್. ಶೆಟ್ಟಿ, ಅಧ್ಯಕ್ಷರು, ಸಹಜ ಸಮೃದ್ಧ
ಕಾಂತಲಕ್ಷ್ಮಿ ಹಾಗೂ ಗೋಪಾಲ್, ನಾಟಿ ಬದನೆ ತಳಿಗಳ ಸಂರಕ್ಷಕರು
ಇವರೆಲ್ಲ ಪಾಲ್ಗೊಂಡು, ಆಂದೋಲನಕ್ಕೆ ಬೆಂಬಲ ಸೂಚಿಸಲಿದ್ದಾರೆ.
ದಿನಾಂಕ : 15ನೇ ಜನವರಿ, 2009, ಗುರುವಾರ
ಸಮಯ : ಮದ್ಯಾಹ್ನ 2 ಗಂಟೆಗೆ
ಸ್ಥಳ : ಪ್ರೆಸ್ ಕ್ಲಬ್ ಆಫ್ ಬೆಂಗಳೂರು
ಕಬ್ಬನ್ ಪಾರ್ಕ್, ಬೆಂಗಳೂರು-560 001

ಹೆಚ್ಚಿನ ಮಾಹಿತಿಗೆ :
ಜಿ. ಕೃಷ್ಣ ಪ್ರಸಾದ್, ಸಹಜ ಸಮೃದ್ಧ, ಪೋನ್ : 080-23655302 / 9880862058
ಮಂಜುನಾಥ್. ಎಚ್, ಸಂವಾದ, ಪೋನ್ : 9480330652
ಜಯಪ್ರಸಾದ್, ಭೂಮಿ, ಪೋನ್ : 9480172565

ಇಂಗ್ಲೀಷ್ ಕನ್ನಡ ಅನುವಾದ ತಂತ್ರಾಂಶ ಇದೆಯೇ?

ಇಂಗ್ಲೀಷ್ ಕನ್ನಡ ಅನುವಾದ ತಂತ್ರಾಂಶ ಏನಾದರೂ ಇದೆಯೇ? ನಿಮಗೇನಾದರೂ ಗೊತ್ತಿದ್ದರೆ ತಿಳಿಸಿ . ಅಂತಹದು ಏನಾದರೂ ಇದ್ದರೆ ಇಂಗ್ಲೀಷಿನಿಂದ ಎಲ್ಲಾ ತಿಳುವಳಿಕೆಯನ್ನ ಕನ್ನಡಕ್ಕೆ ತರಲು ನೆರವಾಗುತ್ತದೆ ಅಲ್ಲವೇ ?

ಯಾತ್ರೆ

ಜೀವನದ ಅರ್ಥವನ್ನರಸಿ
ಕವಲು ದಾರಿಯ ನಾಲ್ಕು ದಿನಗಳ
ಯಾತ್ರೆ ಮುಗಿದಾಗ ಸುಖದ
ಸೊನ್ನೆಯ ಜೊತೆಗೆ ಏಕಾಂಗಿ ನಾನು...

ಕಳೆದ ಬಾಲ್ಯದ ನೆನಪುಗಳು
ಮನದ ಕದ ತಟ್ಟುತಿರಲು
ಮರಳಿ ಬಾರದ ನಿನ್ನೆಗಳಿಗೆ
ವರ್ತಮಾನದೊಳು ಮರುಗಲೆಂತು?

ಯೌವ್ವನದ ಮೆಟ್ಟಿಲಲಿ ಹೆಜ್ಜೆಯಿತ್ತಾಗ
ಮಧು ಹೀರಿ ಹಾರುವ ದುಂಬಿಯಂತೆ
ಮನದೊಳಗೆ ಹೊಕ್ಕು, ಮುತ್ತನಿಟ್ಟವರು

ಅಚ್ಚರಿ ಅಚ್ಚರಿ

ಇದು ಮಲೆಯಾಳದಲ್ಲಿ ಅತ್ಯಂತ ಜನಪ್ರಿಯವಾಗಿರುವ ಒಂದು ಕ್ರೈಸ್ತ ಭಕ್ತಿಗೀತೆ. ಜಯನ್ ಎಂಬವರು ಇದನ್ನು ರಚಿಸಿದ್ದಾರೆ. ಎರಡು ಬಗೆಯ ಸಂಯೋಜನೆಗಳಲ್ಲಿ ಇದು ಪ್ರಚಾರದಲ್ಲಿದೆ. ಒನ್ದು ಚರ್ಚುಗಳಲ್ಲಿ ಹಾಡಲು ಅನುವಾಗುವ ಪಾಶ್ಚಾತ್ಯ ಶೈಲಿ ಮತ್ತು ಇನ್ನೊಂದು  ಶ್ರೀ ಯೇಸುದಾಸ್ ಕಚೇರಿಗಳಲ್ಲಿ ಹಾಡಲು ಬಳಸುವ ದೇಶಿ ಶೈಲಿ.

ಸಸ್ಯಗಳು ಹೇಗೆ ಬೆಳೆಯುತ್ತವೆ ಗೊತ್ತೇ? (ರೈತರೇ ಬದುಕಲು ಕಲಿಯಿರಿ-೭)

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ
ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ
ದಾರಿ ತೋರುವ ಕೈಪಿಡಿ)

ಸಸ್ಯಗಳು ಹೇಗೆ ಬೆಳೆಯುತ್ತವೆ?

ಕೃಷಿ ಮಾಡುತ್ತಿರುವ ಹಾಗೂ ಮಾಡಲು ಹೊರಟ ಎಲ್ಲರೂ ಮೊದಲು ಕೇಳಿಕೊಳ್ಳಬೇಕಾದ
ಪ್ರಶ್ನೆಯಿದು. ಇದಕ್ಕೆ ಸಾಮಾನ್ಯವಾಗಿ ದೊರೆಯುವ ಉತ್ತರ ಎಂದರೆ ’ಮಳೆ (ನೀರು), ಬಿಸಿಲು
ಹಾಗೂ ಗೊಬ್ಬರದ ಮೂಲಕ’.