ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಲಿಯಾಂಡರ್-ಭೂಪತಿ ಜುಗಲ್‌ಬಂದಿ

ನನಗೆ ಟೆನಿಸ್ ಬಗ್ಗೆ ಆಸಕ್ತಿ(ಆಡಲು ಅಲ್ಲ :) ) ಸುರುವಾಗಿದ್ದು, ಆನಂದ್ ಮತ್ತು ವಿಜಯ್ ಅಮೃತ್‌ರಾಜ್ ಕಾಲದಲ್ಲಿ. ಆಟ ಅರ್ಥವಾಗದಿದ್ದರೂ, ಪೇಪರ್‌ನಲ್ಲಿ ‘ಒಂದನೆಯ ಸುತ್ತಿನಲ್ಲಿ ಜಯ’ ‘ಎರಡನೆಯ ಸುತ್ತಿನಲ್ಲಿ ಸೋಲು,’ ನೋಡಿ ಅಷ್ಟಾದರೂ ಬಂದರಲ್ಲಾ ಎಂದು ಸಮಾಧಾನಿಸುತ್ತಿದ್ದೆ.

ನಂತರ ಟೆಲಿವಿಷನ್ ಬಂತು. ಆಟವೂ ಅರ್ಥವಾಗತೊಡಗಿತು.

"ನನ್ನ ಮದುವೆಯ ನಿಶ್ಚಿತಾರ್ಥ ಇಂಟರ್ನೆಟ್‌ ಮೂಲಕ ನಡೆಯಿತು..."

ಮುಂಜಾನೆ ಪೇಪರ್‌ ಹಾಕುವ ಹುಡುಗನ ಹಾದಿಯನ್ನೇ ಕಾಯುತ್ತಿದ್ದ ದಿನಗಳವು. ಮುಖಪುಟಕ್ಕಾಗಿ, ಸ್ಪೋರ್ಟ್ಸ್‌ ಪೇಜ್‌ಗಾಗಿ, ಸಿನಿಮಾ ಪುಟಕ್ಕಾಗಿ ಮನೆಯವರೆಲ್ಲಾ ಜಗ್ಗಾಟ-ಕೂಗಾಟ ಮಾಡುತ್ತಿದ್ದ ದಿನಗಳು. ಆ ದಿನಗಳನ್ನು ನಾನು ತುಂಬಾ ಮಿಸ್‌ ಮಾಡಿಕೊಳ್ಳುತ್ತೇನೆ. ಇಂಟರ್‌ನೆಟ್‌ ಇಲ್ಲದ್ದಿದ್ದರೆ ದೇಶಬಿಟ್ಟು ಬಂದಂಥ ನನ್ನಂತವರ ಸ್ಥಿತಿ ತುಂಬಾ ಕಷ್ಟವಾಗುತ್ತಿತ್ತೇನೋ!

ಸೊಳ್ಳೆ

ಸೊಳ್ಳೆ

  • ಕೀಟಗಳ ಪ್ರಭೇದಕ್ಕೆ ಸೇರಿದ ಸೊಳ್ಳೆಯ ಉದ್ದ ಸಾಮಾನ್ಯವಾಗಿ ೧೬ ಮಿ.ಮಿ.ಗಿಂತ ಕಡಿಮೆ ಹಾಗೂ ಇದರ ತೂಕ ೨.೫ ಮಿ.ಗ್ರಾಂ.ವರೆಗಿದೆ.
  • ಇದು ನಿರಂತರವಾಗಿ ೧ ರಿಂದ ೪ ಗಂಟೆಯವರೆಗೆ ಹಾರಬಲ್ಲದ್ದಾಗಿದ್ದು, ಗಂಟೆಗೆ ೧ರಿಂದ ೨ ಕಿ.ಮೀ.ನಂತೆ, ಒಂದೇ ಬಾರಿಗೆ ೧೦ಕಿ.ಮೀ.ವರೆಗೆ ಕ್ರಮಿಸಬಲ್ಲದು.

ಸ್ತ್ರೀ -ಎರಡು ದೃಷ್ಟಿಕೋನ

ಜಗತ್ತಿನಲ್ಲಿ ಬಹುಕಾಲದಿ೦ದ ಮಹಿಳೆಯ ಬಗ್ಗೆ ಎರಡು ರೀತಿಯ ದೃಷ್ಟಿಕೋನಗಳಿವೆ. ಅದರಲ್ಲೂ ಭಾರತೀಯ ಸ೦ಸ್ಕೃತಿಯಲ್ಲಿ ಸ್ತ್ರೀಗೆ ಮಹತ್ವದ ಸ್ಥಾನವೂ ಇದೆ. ಪೂಜ್ಯ ಸ್ಥಾನವೂ ಇದೆ. ಹಾಗೆಯೇ ಅವಳ ಶೋಷಣೆಯೂ ಆಗಿದೆ ಎ೦ಬುದು ಸಮಾನದ ಸತ್ಯವೂ ಹೌದು. ಹೆಣ್ಣಿನ ವಿಚಾರದಲ್ಲೇ ಈ ವಿರೋಧಾಭಾಸಗಳು ಕ೦ಡುಬರುವುದು ಒ೦ದು ವಿಪರ್ಯಾಸವೂ ಹೌದು.

ಭಾರತೀಯ ಯುವ ಶಕ್ತಿ

"ಯುವ" ಎಂಬ ಪದವನ್ನೇ ಕೇಳಿದರೆ, ನಮ್ಮ ಮೈ ಜುಮ್ಮೆನ್ನುತ್ತದೆ. ಬೆಟ್ಟವನ್ನೇ ಕಡಿಯುವೇನು, ಕಲ್ಲನ್ನೇ ಜಿರ್ಣಿಸಿಕೊಳ್ಳುವೇನು ಎಂಬ ಹುಮ್ಮಸ್ಸು ಅಹಾ!!!...ಎಂಥಹ ಧೀ ಶಕ್ತಿ ಹೊರಹೊಮ್ಮುತ್ತದೆ. ನಮ್ಮ ಸಂತೋಷ, ನಮ್ಮ ಗೆಲುವು, ನಮಗೆ ಸಿಗುವ ಮರ್ಯಾದೆ ಮತ್ತು ಹೆಸರು "ಯುವ" ವಯಸ್ಸಿನ ಮೇಲೆ ನಿಂತಿಂದೆ.

ಚುಟುಕುಗಳು

ಹೆ೦ಡತಿ
ನನ್ನ ಮುದ್ದು ಮಡದಿ
ಹೆಸರು ಸರಿತಾ.
ಅನ್ವರ್ಥಕ ನಾಮ ಅವಳಿಗೆ
ಏನೇ ಕೊಟ್ಟರೂ ಎನ್ನುತ್ತಾಳೆ
ಸರಿ, ತಾ !!!!!

ಅವತಾರ

ಕೃಷ್ಣನ ಲೀಲೆಗಳಿರುವುದು ಕೃಷ್ಣಾವತಾರ
ರಾಮನ ಲೀಲೆಗಳಿರುವುದು ರಾಮಾವತಾರ

ದೇವರು ನನಗೆ ಹೇಳಿದ ಸುಪ್ರಭಾತ

   ದೇವರು ಹೇಳಿದ ಸುಪ್ರಭಾತ

ಮುಂಜಾನೆ ನೀನೆದ್ದೆ - ನಾನು ಕಾದಿದ್ದೆ
ನಿನ್ನೆರಡು ಮಾತಿಗೆ, ಮುಗುಳ್ನಗೆಗೆ;
ನಿನಗೆ ಪುರುಸೊತ್ತಿಲ್ಲ !

 

ಗಡಿಬಿಡಿಯಲಿ ನೀ ನಿತ್ಯಕರ್ಮ ಮುಗಿಸಿದೆ
ನಿನ್ನ ನಿರೀಕ್ಷಣೆಯಲ್ಲೇ ನಾನಿದ್ದೆ;
ಯಾವ ಬಟ್ಟೆ ಧರಿಸಲಿ
ಎಂಬ ಗುಂಗಿನಲ್ಲಿ ನೀನಿದ್ದೆ;
ನಿನಗೆ ಸಮಯವಿಲ್ಲ !

 

ತಿಂಡಿ ತಿನ್ನುವಾಗೊಮ್ಮೆಯಾದರೂ
ನೀ ನೋಡುವಿಯೆಂದುಕೊಂಡಿದ್ದೆ;
ಇಂದೇನು ಮಾಡಬೇಕೆಂಬ
ಚಿಂತೆಯಲಿ ನೀನಿದ್ದೆ;
ನಿನಗೆ ಸಮಯವಿಲ್ಲ !