ಭಾರತೀಯ ಯುವ ಶಕ್ತಿ

ಭಾರತೀಯ ಯುವ ಶಕ್ತಿ

ಬರಹ

"ಯುವ" ಎಂಬ ಪದವನ್ನೇ ಕೇಳಿದರೆ, ನಮ್ಮ ಮೈ ಜುಮ್ಮೆನ್ನುತ್ತದೆ. ಬೆಟ್ಟವನ್ನೇ ಕಡಿಯುವೇನು, ಕಲ್ಲನ್ನೇ ಜಿರ್ಣಿಸಿಕೊಳ್ಳುವೇನು ಎಂಬ ಹುಮ್ಮಸ್ಸು ಅಹಾ!!!...ಎಂಥಹ ಧೀ ಶಕ್ತಿ ಹೊರಹೊಮ್ಮುತ್ತದೆ. ನಮ್ಮ ಸಂತೋಷ, ನಮ್ಮ ಗೆಲುವು, ನಮಗೆ ಸಿಗುವ ಮರ್ಯಾದೆ ಮತ್ತು ಹೆಸರು "ಯುವ" ವಯಸ್ಸಿನ ಮೇಲೆ ನಿಂತಿಂದೆ. ಈ ಸಮಯದಲ್ಲಿ ನಮಗೆ ಕುಂಬಾರ ಮಾಡುವ ಮಡಿಕೆಯಂತೆ ಒಂದು ಒಳ್ಳೆ ಆಕಾರವನ್ನು ಕೊಟ್ಟರೆ, ಮುಂದಿನ ೫೦ ವರ್ಷಗಳಿಗೆ ನಮ್ಮನ್ನು ಹಿಡಿಯುವವರೇ ಇಲ್ಲ.

ಒಂದು ಮಹೋನ್ನತ ಕಾರ್ಯಕ್ಕೆ ದುಮುಕೊಣ, ಪ್ರಪಂಚ ನಮ್ಮ ಅಗಾಧವಾದ ನಂಭಿಕೆ ಇಟ್ಟಿದೆ, ನಮ್ಮ ಹಿರಿಯರು ನಮ್ಮಲ್ಲಿ ಆತ್ಮವಿಶ್ವಾಸವನ್ನು ಇಟ್ಟಿದ್ದಾರೆ. ಮುನ್ನುಗ್ಗೋಣ ನಮ್ಮ ತನದಲ್ಲಿ ನಂಬಿಕೆ ಇಡೋಣ, ನಮ್ಮ ಭವಿಷ್ಯಕ್ಕೆ ನಾವೇ ಶಿಲ್ಪಿಗಳು, ಒಂದು ಸುಂದರವಾದ ಪ್ರಪಂಚವನ್ನು ಕಟ್ಟೋಣ. ಒಂದು ಉದ್ದಾತ್ತ ಕಾರ್ಯಕ್ಕೆ ಇಳಿದಿರುವ ನಾವು, ನಾಯಕರ ಒಳ್ಳೆಗುಣಗಳ್ಳನು ಮೈಗೂಡಿಸಿ ಕಷ್ಟವೇ ಅಂಟದಂತೆ, ನಿರ್ಧಿಷ್ಟವಾದ ಚಿಂತನೆ, ಸ್ಪಷ್ಟ ಗುರಿಯೊಂದಿಗೆ ಸುಖಮಯವಾಗಿ ಗೆಲುವಿನ ದಾರಿಯಾತ್ತ ಪಯಣಿಸೋಣ.

ನಮ್ಮ ಭಾರತೀಯ ಯುವಶಕ್ತಿಗೆ ಸದ್ಯದ ಸಮಾಜದಲ್ಲಿ ಯಾವ ರೀತಿಯ ಅನುಕೂಲಗಳು ಮತ್ತು ಅನಾನುಕೂಲಗಳು ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet