ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹನ್ನೆರಡು ಜ್ಯೋತಿರ್ಲಿಂಗಗಳು - ೨ [ಶ್ರೀಶೈಲದ ಮಲ್ಲಿಕಾರ್ಜುನ].

೨. ಶ್ರೀಶೈಲದ ಮಲ್ಲಿಕಾರ್ಜುನ.

ಮಲ್ಲಿಕಾರ್ಜುನ ದೇವಾಲಯ

ಎಲ್ಲಿದೆ?
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿದೆ.
ಕೃಷ್ಣ ನದಿ ತೀರದಲ್ಲಿರುವ ಇದು ಕದಲಿ, ಬಿಲ್ವವೃಕ್ಷಗಳಿಂದ ಕೂಡಿದ ಮನೋಹರವಾದ ಪರ್ವತಶ್ರೇಣಿಯಲ್ಲಿದೆ.
ಪುರಾಣ ಕಾಲದಲ್ಲಿ ಶಿವ-ಪಾರ್ವತಿಯರು ತಮ್ಮ ಮಗನಾದ ಕುಮಾರಸ್ವಾಮಿಯನ್ನು ಅರಸುತ್ತಾ ಇಲ್ಲಿಗೆ ಬಂದರು ಎಂದು ಪ್ರತೀತಿ.
ಒಂದು ಐತಿಹ್ಯದಂತೆ ಶಿವನ ಮಕ್ಕಳು ಕೈಲಾಸ ಪರ್ವತವನ್ನು ತೊರೆದು ಶ್ರೀಶೈಲದಲ್ಲಿ ವಿಹರಿಸುತ್ತಿರಲು, ಬಹುದಿನಗಳ ನಂತರ ಮಕ್ಕಳನ್ನು ನೋಡುವಾಸೆಯಿಂದ ಕೈಲಾಸಪತಿಯು ಪತ್ನಿ ಸಮೇತ ಇಲ್ಲೇ ಬಂದು ನೆಲೆನಿಂತನು.

ಸಂಕ್ರಾಂತಿ ಹಬ್ಬದ ಶುಭಾಶಯಗಳು

ಎಳ್ಳು ಬೆಲ್ಲದ ರೀತಿ
ಕಲೆಯೋಣ ಹೊಸ ನೀತಿ
ಮರೆಯೋಣ ಕಹಿಯನು ಮಾಗಿಯ ಮಂಜಿನಂತೆ
ಬೆರೆಯೋಣ ಹಾಲು ಸಕ್ಕರೆಯಂತೆ

ಎಲ್ಲರೊಳಗೊಂದಾಗಿ
ಕಲ್ಲುಸಕ್ಕರೆಯಾಗಿ
ಹಾಲುಜೇನಾಗಿ
ಸವಿತುಂಬಿದ ಕಬ್ಬಾಗಿ
ಮುಗಿಲುಮುಟ್ಟಿದ ಬೆಳೆಯಾಗಿ
ಸ್ವಾಗತಿಸೋಣ ಉತ್ತರಾಯಣವನಿಂದು
ದಕ್ಷಿಣಾಯನದ ಹೊಸ್ತಿಲಲಿ ನಿಂತು
ಹಾರೈಸೋಣ ಹೊಸ ಸೂರ್ಯನ ಹೊಸ ಕಿರಣಗಳು
ಮನದ ಮನೆಯ ನಂದಾದೀಪ ಬೆಳಗಲಿ ಎಂದು

"ನಮ್ಮ ಅಪ್ಪಾಜಿ ಅಂದ್ರೆ ನನಗಿಷ್ಟ"

ಬರಹಗಾರ ವಸುಧೇಂದ್ರ ಅವರು ಬರೆದ "ನಮ್ಮ ಅಮ್ಮ ಅಂದ್ರೆ ನನಗಿಷ್ಟ" ಅನ್ನುವ ಪುಸ್ತಕವನ್ನು ಓದುವ ಅವಕಾಶ ಈಗ್ಗೆ ಕೆಲವು ದಿನಗಳ ಹಿಂದೆ ನನಗೆ ಒದಗಿಬಂದಿತ್ತು. ವಸುಧೇಂದ್ರ ಅವರು ತಮ್ಮ ಪೂಜ್ಯ ತಾಯಿಯವರು ಬಾಳಿ, ಬದುಕಿ ಹೋದ ಪರಿಯನ್ನು ಬಹಳ ಚಂದವಾಗಿ ವರ್ಣಿಸಿ ಬರೆದ ಪುಸ್ತಕವದು.

ಮಸ್ತಕದಲ್ಲೊಂದು ಸಂಕ್ರಮಣ

ಮಕರ ಸಂಕ್ರಾಂತಿಗೆ ಮುನ್ನಾದಿನವಾದ ಇಂದು ಸಂಪದದ ನನ್ನ ಮಿತ್ರರಿಗೆ ಶುಭಕೋರಬೇಕೆನ್ನುವ ಆಲೋಚನೆ ಬಂದಾಗ ಮಸ್ತಕದಲ್ಲೊಂದು ಸಂಕ್ರಮಣ ನಡೆದಿದೆ. ಕಾಟಾಚಾರಕ್ಕೆ ಶುಭ ಕೋರುವುದೇ?

ಓ, ಪ್ರಿಯೆ

ಓ, ಪ್ರಿಯೆ
ನನ್ನ ಬದುಕಿನ ಕತ್ತಲಲ್ಲಿ ಮಿನುಗುವ ನಕ್ಷತ್ರ ನೀನು
ನನ್ನ ಬೆಳಗಿನ ಬಾಗಿಲು ಸರಿಸಿ ನಗುವ ಬೆಳ್ಳಿಚುಕ್ಕಿ ನೀನು
ನನ್ನ ಸಾಗರದಲ್ಲಿನ ಭೋರ್ಗರೆವ ಅಲೆಗಳು ನೀನು
ನನ್ನ ದಾರಿಗೆ ಬೆಳಕ ತೋರುವ ದಾರಿ ದೀಪ ನೀನು
ನನ್ನ ಕಂಗಳಲ್ಲಿನ ಹೊಳೆಯುವ ಕಾಂತಿ ನೀನು
ನನ್ನ ಮುಂಗುರುಳಲ್ಲಿ ಸರಿದಾಡುವ ತಂಗಾಳಿ ನೀನು
ನನ್ನ ಹೃದಯದ ಏರಿಳಿತಗಳ ಬಡಿತ ನೀನು

ಸಂತತಿ

ನನ್ನ ಅಜ್ಜಿಯರು ಸದೃಡವಾಗಿದ್ದರು................
ಹೊಲದಲ್ಲಿ ಉಳುತ್ತಾ ಗೇಯುತ್ತಾ ಮೈ ಬಗ್ಗಿಸಿ ದುಡಿದರು
ಉತ್ತುತ್ತಾ ಬಿತ್ತುತ್ತಾ ಹೊಲದ ತುಂಬೆಲ್ಲಾ ಓಡಾಡಿದರು
ನೆಲವನ್ನು ಮೀಟಿ ಹೊನ್ನ ಬೆಳೆಯನ್ನು ಬೆಳೆದರು
ಗಟ್ಟಿಮುಟ್ಟಾಗಿದ್ದರು ಖುಶಿಯಾಗಿದ್ದರು ಹಾಡ ಹಾಡಿದರು.

ನನ್ನ ಅಜ್ಜಿಯರು ನನ್ನ ನೆನಪಲ್ಲಿ ಸದಾ ಹಸಿರಾಗಿರುತ್ತಾರೆ

ಜೀವನದಿ...

ಹುಚ್ಚು ನದಿಗಳಿವು
ಓಡಿಯೇ ಓಡುತ್ತವೆ
ಸಾಗರದೆಡೆಗೆ!
ಇಳುಕಲಂತೆ ಓಟವಂತೆ
ಮೋಡಿಯಂತೆ ಮಿಲನ
ಸಾರ್ಥಕತೆಯಂತೆ!
ಎಂಥಾ ನಿಯತ್ತಂತೀರಿ
ಇವುಗಳ ಗಮ್ಯ ಕೇವಲ
ಸಾಗರ ಮಾತ್ರ
ಜುಳುಜುಳು ಜುಳುಜುಳು
ಜುಳುಜುಳು..
ಮಾರ್ಗಮಧ್ಯ
ಲಕ್ಷ್ಯ ಲಕ್ಷ
ಜೀವಿಗಳ ಉದ್ಧಾರ
ಲಕ್ಷ ಲಕ್ಷ
ಜೀವಿಗಳಿಗೆ ಒಡಲಾಧಾರ
ಹುಚ್ಚು ನದಿಗಳು!
ಒಂಟಿಯಾಗಿದ್ದಾಗ ಇದ್ದ
ಅಮೃತಸ್ವಾದ

ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ

’ಬ್ಲಾಗ್‌ನಲ್ಲಿ ಬರೆಯುವವರು ಬರಹಗಾರರೇನಲ್ಲ’ ಅಂದ ನನ್ನ ಪತ್ರಕರ್ತ ಮಿತ್ರನೊಬ್ಬ.

ಹಾಗಾದರೆ, ಬರಹಗಾರರೆಂದರೆ ಯಾರು? ಅಂದೆ. 

ದೇವಿಂದರ್ ಶರ್ಮಾ ಅವರೊಂದಿಗೆ ಒಂದಿಷ್ಟು ಹೊತ್ತು..

ಅಂದು ಶನಿವಾರ, ಸಂಜೆ ನಾಲ್ಕು ಘಂಟೆಗೆ ದೇವಿಂದರ್ ಶರ್ಮಾರ (ದೇವಿಂದರ್ ಶರ್ಮಾ- ಕೃಷಿವಿಜ್ಞಾನಿ, ಸರಕಾರಗಳ ಆಹಾರ ಮತ್ತು ವ್ಯಾಪಾರ ನೀತಿಗಳ ವಿಶ್ಲೇಷಕರು, ಉತ್ತಮ ವಾಗ್ಮಿ ಹಾಗೂ ಬರಹಗಾರ)) ಭಾಷಣವಿದೆಯೆಂದು ಇಮೇಲಲ್ಲಿ ಆಹ್ವಾನ ಬಂದಾಗ ಇದ್ದಬಿದ್ದ ಕೆಲಸಗಳನ್ನೆಲ್ಲ ಬಿಟ್ಟು ಛಂಗೆಂದು ಹೊರಟೆ. ಜಾಗತಿಕ ಬಡತನ ಮತ್ತು ಆಹಾರ ಪರಿಸ್ಥಿತಿಯನ್ನು, ಬಹುರಾಷ್ಟ್ರೀಯ ಕಂಪನಿಗಳ ಆಟಾಟೋಪಗಳನ್ನು ನಮ್ಮೆದುರು ಬಿಚ್ಚಿಡುವ ಶರ್ಮಾರ ಮಾತೆಂದರೆ ನನಗೆ ಬಹಳ ಇಷ್ಟ. ಶರ್ಮಾರದ್ದು ಅಂಕಿ-ಅಂಶಗಳನ್ನು ಪಟಪಟನೆ ಉದುರಿಸುವ ನಿರರ್ಗಳ ವೈಖರಿ. ಆಗಾಗ ಅವರ ಭಾಷಣ ಕೇಳುತ್ತಿದ್ದವರಿಗೆ ಕೆಲವಿಷಯಗಳು ಪುನರಾವರ್ತನೆಗೊಂಡಿವೆಯೆಂದು ಅನಿಸಿದರೂ ವಾಸ್ತವಾಂಶಗಳ ಮೂಲಕ ನಮ್ಮ ಭಾವನೆಗಳನ್ನು ಕೆಣಕುವ ಮಾತುಗಳು ಅವು ಎಂಬುದು ಸುಳ್ಳಲ್ಲ.

ಹಾಗೆ ನೋಡಿದರೆ ಮೆಲುನುಡಿಯ ಶರ್ಮಾರ ಮಾತು ಅಂಥಹ ಆಕರ್ಷಣೀಯವೇನಲ್ಲ, ಆದರೆ ಹುಷಾರ್! ಭಾಷಣದ ನಡುವೆ ನಿಮ್ಮ ಗಮನ ಸ್ವಲ್ಪ ಆಚೀಚೆ ಸರಿಯಿತೋ ಒಂದಿಷ್ಟು ಪ್ರಮುಖವಾದ ಮಾಹಿತಿಯನ್ನು ಕಳಕೊಂಡಂತೆಯೇ. ಹಿಂದೊಮ್ಮೆ ಸಮಾರಂಭವೊಂದರಲ್ಲಿ ದಕ್ಷಿಣಕನ್ನಡದ ಜಿಲ್ಲಾಧಿಕಾರಿ ಹಾಗೂ ಶರ್ಮಾ ಅವರಿಬ್ಬರೂ ಒಂದೇ ವೇದಿಕೆಯಲ್ಲಿದ್ದರು. ಅಂದು ಸೌಮ್ಯಮಾತಿನ ಶರ್ಮಾರಿಗಿಂತ ಗಟ್ಟಿ ಹಾಗೂ ಸ್ಟೈಲಾಗಿ ಆಂಗ್ಲ ಮಾತನ್ನುದುರಿಸುವ ಮಹೇಶ್ವರರಾವ್ ಅವರೇ ಹೆಚ್ಚು ಜನರನ್ನು ಸೆಳೆದಿದ್ದರು.