ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂಪದ ಸದಸ್ಯರ ಗಮನಕ್ಕೆ: ಪ್ರತಿಕ್ರಿಯೆಗಳ ಸುತ್ತ

ಸಂಪದದಲ್ಲಿ ದಿನಕ್ಕೆ ೨೦೦ - ೩೦೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಕ್ರಿಯೆಗಳು ದಾಖಲಾಗುತ್ತಿರುವುದರಿಂದ ನಿರ್ವಹಣೆ ದಿನ ಕಳೆದಂತೆ ಕ್ಲಿಷ್ಟಕರವಾಗುತ್ತಿದೆ. ಆರು ಜನ ನಿರ್ವಹಾಕರಿದ್ದರೂ ಎಲ್ಲ ನಿರ್ವಾಹಕರಿಗೂ ತಮ್ಮದೇ ಆದ ಕೆಲಸಗಳ ನಡುವೆ ಸಮಯ ಹೊಂದಿಸಬೇಕಾಗಿರುವುದರಿಂದ ಕೆಲವೊಂದು ಪ್ರತಿಕ್ರಿಯೆಗಳು ಗಮನಕ್ಕೆ ಬರದೆ ಹೋಗುವ ಸಾಧ್ಯತೆಗಳು ಉಂಟು. ಹೀಗಾಗಿ ಸಮುದಾಯದ ಸದಸ್ಯರಲ್ಲಿ ಒಂದು ಕೋರಿಕೆ:

  • ಸಮುದಾಯದ ಅಭಿರುಚಿಗೆ ವಿರುದ್ಧವಾದ, ಸಮಂಜಸವಲ್ಲದ ಪ್ರತಿಕ್ರಿಯೆಗಳನ್ನು ನಿರ್ವಾಹಕರ ಗಮನಕ್ಕೆ ತನ್ನಿ, ಪ್ರತಿಯೊಂದು ಪ್ರತಿಕ್ರಿಯೆಯ ಜೊತೆಗೂ "ನಿರ್ವಾಹಕರ ಗಮನಕ್ಕೆ ತನ್ನಿ" ಎಂಬ ಲಿಂಕ್ ಇರುವುದನ್ನು ಗಮನಿಸಬಹುದು.
  • ಅಲ್ಲದೆ, ಲೇಖನ ಅಥವ ಬ್ಲಾಗ್ ನಿಮ್ಮದೇ ಆದಲ್ಲಿ, ಅದಕ್ಕೆ ಬಂದಿರುವ ಯಾವುದೇ ಪ್ರತಿಕ್ರಿಯೆಯನ್ನಾದರೂ ನೀವು ಪ್ರಕಟಣೆಯಿಂದ ತೆಗೆಯುವಂತೆ ಕೋರಿಕೆ ಸಲ್ಲಿಸಬಹುದು.
  • ಸಮುದಾಯದ ಅಭಿರುಚಿ, ಸಮುದಾಯದ ದಿಶೆ ಇದರಲ್ಲಿ ಭಾಗಿಯಾದವರಿಂದ ರೂಪುಗೊಳ್ಳುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಚರ್ಚೆಯಲ್ಲಿ ಪಾಲ್ಗೊಳ್ಳುವಾಗ ಪಬ್ಲಿಕ್ ಆಗಿ ಈ ಚರ್ಚೆ ನಡೆಯುತ್ತಿದೆ ಎಂಬುದನ್ನು ಅರಿತು ಜವಾಬ್ದಾರಿಯಿಂದ ನಡೆದುಕೊಂಡರೆ ಉತ್ತಮ, ಹಾಗೂ ಚರ್ಚೆ ವೈಯುಕ್ತಿಕ ಚಹರೆ ಪಡೆಯದೇ ಇರುವಂತೆ ನೋಡಿಕೊಂಡರೆ ಉತ್ತಮ.

ನಿರ್ವಾಹಕರ ಗಮನಕ್ಕೆ ತಂದ ಯಾವುದೇ ಪ್ರತಿಕ್ರಿಯೆ ವೈಯಕ್ತಿಕವಾಗಿದ್ದರೆ ಅಂತಹ ಪ್ರತಿಕ್ರಿಯೆ ನಿರ್ದಾಕ್ಷಿಣ್ಯವಾಗಿ ಕಿತ್ತುಹಾಕಲ್ಪಡುವುದು. ವೈಯಕ್ತಿಕವಾಗಿ ಉದ್ದೇಶಿಸಿ ಕೂಡ ಬರೆಯುವುದನ್ನು ಸಾಧ್ಯವಾದಷ್ಟೂ avoid ಮಾಡಿ. ಯಾವುದೇ ಸದಸ್ಯರ ಹೆಚ್ಚಿನ ಪ್ರತಿಕ್ರಿಯೆಗಳು ಈ ರೀತಿ ಪ್ರಕಟಣೆಯಿಂದ ತೆಗೆದುಹಾಕಲ್ಪಟ್ಟಲ್ಲಿ ಆ ಸದ್ಯಸ್ಯರ ಪ್ರೊಫೈಲ್ ಕೂಡ ಬ್ಲಾಕ್ ಮಾಡಲ್ಪಡುವುದು.

ಸಂಪದದ ಉದ್ದೇಶ ಕನ್ನಡದಲ್ಲಿ ಸಂವಹನ ನಡೆಸುವಲ್ಲಿ ಪ್ರೋತ್ಸಾಹಿಸುವುದು. ಆದರೆ ಇಲ್ಲಿ ಕಲ್ಪಿಸಿರುವ ಉತ್ತಮ ವೇದಿಕೆ, ಸ್ವಾತಂತ್ರ್ಯದ ದುರ್ಬಳಕೆಯಾಗದಂತೆ ನೋಡಿಕೊಳ್ಳೋಣ. 

ಹನಿ ಪದ್ಯಗಳ ಮಾಲೆ... ಬಾಲಿವುಡ್‌ ಬಾಲೆಯರ ಮ್ಯಾಲೆ...

ನರ್ಗೀಸ್‌

ರಾಜ್‌ಕಪೂರ್‌-ನರ್ಗೀಸ್‌
ಜನಪ್ರಿಯ ಜೋಡಿ ಎಂಬುದು
ಎಲ್ಲರಿಗೂ ಗೊತ್ತು !
ಅವಳು ಮೆಚ್ಚಿದ್ದು
ರಾಜಕಾರಣಿಯಾದ
ನಟ ಸುನಿಲ್‌ ದತ್ತು !!

*

ಸಾಯಿರಾಬಾನು

ಪಡೋಸನ್‌ ಚಿತ್ರದ
ಪಕ್ಕದ ಮನೆಯ
ಬೆಡಗಿ ಸಾಯಿರಾಬಾನು!
ಅವಳು ಮೆಚ್ಚಿದ್ದು
ದಿಲೀಪ್‌ಕುಮಾರ್‌ ಉರುಫ್‌
ಯೂಸುಫ್‌ ಖಾನು!!

*

ಶರ್ಮಿಳಾ ಟ್ಯಾಗೋರ್‌

ರೂಪ್‌ತೇರಾ ಮಸ್ತಾನಾ
ಹಾಡಿನ ಮಾದಕತೆಯ

ಶನಿಚಂದ್ರಯುತಿ

ಮಕರಸಂಕ್ರಮಣದ ಮಾಱನೆಯ ರಾತ್ರಿ ೧೧ ಗಂಟೆಯಿಂದ ಬೆಳಿಗ್ಗೆ ಚಂದ್ರ ಪಶ್ಚಿಮದಲ್ಲಿ ಮುೞುಗುವವರೆಗೆ ಸೂರ್ಯೋದಯಕ್ಕೆ ಮುನ್ನ ಶನಿಗ್ರಹದೊಡನೆ ಇರುವುದನ್ನು ನೋಡಿ.

ಸ್ಮಶಾನದತ್ತ...

ಅಲ್ಲೊಬ್ಬ ಮುದುಕ. ವಯಸ್ಸು ಸುಮಾರು ಎಪ್ಪತ್ತೈದು ದಾಟಿದೆ. ನಾಲ್ಕು ಜನ ಮಕ್ಕಳು, ಈ ನಾಲ್ವರಲ್ಲಿ ಒಬ್ಬಳೇ ಮುದ್ದಿನ ಮಗಳು ಪ್ರೀತಿ. ಮದುವೆಯಾಗಿದೆ. ಅಳಿಯನಿಗೆ ಗಲ್ಫ್‌ನಲ್ಲಿ ಉದ್ಯೋಗ, ಸುಖೀ ಕುಟುಂಬ. ಬಾಕಿ ಉಳಿದ ಮೂವರು ಗಂಡು ಮಕ್ಕಳು ಉದ್ಯೋಗ ಗಿಟ್ಟಿಸಿಕೊಂಡು ಮಡದಿ ಮಕ್ಕಳೊಂದಿಗೆ ಸುಖವಾಗಿದ್ದಾರೆ.

ಇಂತಿರುವಾಗ ಒಂದು ದಿನ ಈ ಮುದುಕ ಅಸ್ವಸ್ಥನಾಗುತ್ತಾನೆ. ಮನೆಯಲ್ಲಿ ಕಿರಿಯ ಮಗ ಸೊಸೆ ಮೊಮ್ಮಕ್ಕಳಿಗೆ ಗಾಬರಿ. ಅಂತೂ, ಈ ಅಜ್ಜ ಬಡವ ಅಂತಾ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ತನ್ನ ಯೌವನದಲ್ಲಿ ಮಣ್ಣಲ್ಲಿ ಚೆನ್ನಾಗಿ ದುಡಿದು ಹೊನ್ನಿನ ಬೆಳೆ ಪಡೆದವ ಈತ. ಎಕ್ರೆಗಳಲ್ಲಿ ತೆಂಗು ಕಂಗಿನ ತೋಟ, ತರಕಾರಿ, ಬಾಳೆ, ಮರಗೆಣಸು ಹೀಗೆ ಎಲ್ಲಾ ರೀತಿಯ ಕೃಷಿಗಳನ್ನು ಮಾಡಿ ಲಾಭ ಪಡೆದವ. ಹತ್ತು ವರ್ಷಗಳ ಹಿಂದೆಯೇ ತನ್ನ ಕೈ ಹಿಡಿದವಳು ತೀರಿ ಹೋಗಿದ್ದರಿಂದ ಈ ಅಜ್ಜ ಎಲ್ಲದಕ್ಕೂ ಮಕ್ಕಳನ್ನು ಆಶ್ರಯಿಸಬೇಕಾದ ಸ್ಥಿತಿ ಬಂದೊದಗಿತ್ತು.

ಪ್ರೀತಿ ಸಂಕ್ರಾಂತಿ

ಪ್ರೀತಿ ಸಂಕ್ರಾಂತಿ

ಆಯನಾಯನಗಳಾಚೆ
ಮನಸು ಹಾರಿದೆ ಇಂದು
ದೂರ ದೃಷ್ಟಿಯಲೊಂದು
ಹೊಸತು ಕ್ರಾಂತಿ,
ಆ ನಯನಗಳಾಚೆ
ಕನಸು ಸರಿದಿದೆ ಇಂದು
ಮನದ ಸೃಷ್ಟಿಯೊಳಿಂದು
ಪ್ರೀತಿ ಸಂಕ್ರಾಂತಿ.

ಶ್ರಾವಣದ ಅಂಗಳದಿ
ಕೋಗಿಲೆಯ ಕರೆತಂದು
ಚೈತ್ರದನುರಣನೆಯನು
ಆಶಿಸುವ ಪ್ರೀತಿ,
ಬಾಡಿರುವ ಹೂವೊಂದು
ಭ್ರಾಮರದ ಜೊತೆ ನಿಂದು
ಮತ್ತೆ ಅರಳುವ ಬಯಕೆ
ತಂದಂಥ ಪ್ರಿತಿ.

ನನ್ನ ಗ್ರಾಮ

ನಿತ್ಯ ಹಚ್ಚ ಹಸುರಾಗಿ
ಕಂಗೊಳಿಸುವುದೀ ನನ್ನೂರು
ತೆನೆ ತುಂಬಿ ನಿಂತ ಗದ್ದೆ,
ಬಾಳೆ ತೆಂಗು ಕಂಗಿನ ತೋಟ
ಇಕ್ಕೆಲಗಳಲಿ,
ಸುತ್ತಲೂ ಹಬ್ಬಿದ ಬೇಲಿ ಹೂಗಳು..
ಇದು ನನ್ನ ಗ್ರಾಮ...ಆಗಿತ್ತು!

ದುಡಿದ ರೈತನಿಗೆ ಬೆಳೆಯು ದಕ್ಕದಿರಲು
ಹಚ್ಚ ಹೊಲದಲ್ಲಿ ಕೆಂಬಾವುಟ
ಹಾರಿಸಿದ್ದರಂತೆ ನಮ್ಮ ಹಿರಿಯರು,
ಅಮ್ಮ ಹೇಳಿದ ನನ್ನೂರಿನ ವಿಪ್ಲವದ ನೆನಪು...
ಹೋರಾಟ ಮುಂದುವರಿಯಲು ಹೀಗೆ

ಶಾಯರಿ ಜುಗಲಬಂದಿ

(ಒಂದೇ ಕಡೆ ಇರಲಿ ಅಂತ)

ನನ್ನ ಹೆಂಡತಿಗೆ ಬೇಕು ವಾರಕ್ಕೆ ಮೂರು ಹೊಸ ಸ್ಯಾರಿ
ನನ್ನ ಹೆಂಡತಿಗೆ ಬೇಕು ವಾರಕ್ಕೆ ಮೂರು ಹೊಸ ಸ್ಯಾರಿ
ಒಂದೇ ವಾರದಲ್ಲಿ ಕರಗಿತು ನನ್ನ ಪೂರ್ತಿ ಸ್ಯಾಲರಿ !!
- Vರ ( Venkatesha ರಂಗಯ್ಯ )

ಆರಿಸಿ ಸೋತಿರಾ ನೀವು "ಸ್ಯಾರಿ" ತೊಡುವ ಗೌರಿಯನ್ನು?
ಆರಿಸಿ ಸೋತಿರಾ ನೀವು "ಸ್ಯಾರಿ" ತೊಡುವ ಗೌರಿಯನ್ನು?